Hair Care: ಮಧುಮೇಹಿಗಳಲ್ಲಿ ಕೂದಲು ಉದುರೋ ಸಮಸ್ಯೆಗೆ ಈ ಹಣ್ಣು ಸೂಪರ್ ಮದ್ದು

ಮಧುಮೇಹ ರೋಗಿಗಳಿಗೆ ಸುರಕ್ಷಿತ ಆಹಾರಗಳಲ್ಲಿ ಆವಕಾಡೊ ಅಂದರೆ ಬೆಣ್ಣೆ ಹಣ್ಣು ಮುಖ್ಯವಾಗಿದೆ. ಈ ಬೆರ್ರಿ ಜಾತಿಯ ಹಣ್ಣು ಪೋಷಕಾಂಶಗಳಿಂದ ಕೂಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ದೇಹವು (Body) ಬಾಹ್ಯವಾಗಿ ಆರೋಗ್ಯ (Health) ವಾಗಿರುವುದಷ್ಟೇ ಅಲ್ಲ, ಒಳಗಿನಿಂದಲೂ ಆರೋಗ್ಯಕರವಾಗಿರಬೇಕು. ಅಂದಾಗ ಮಾತ್ರ ಅದರ ಒಳ್ಳೆಯ ಪರಿಣಾಮ (Effect) ಚರ್ಮ ಮತ್ತು ಕೂದಲಿನ (Skin and Hair) ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ. ಹಾಗಾದರೆ ನಮ್ಮ ದೇಹದ ಆಂತರಿಕ ಪೋಷಣೆಗೆ ನಾವು ಏನು ತಿನ್ನಬೇಕು (Eat) ಮತ್ತು ಏನು ತಿನ್ನಬಾರದು, ಏನು ಮಾಡಬಾರದು ಎಂಬುದರ ಬಗ್ಗೆ ಸೂಕ್ತ ಕಾಳಜಿ ವಹಿಸುವುದು ಸಹ ಮುಖ್ಯವಾಗಿದೆ. ವಿಶೇಷವಾಗಿ ಯಾರು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದಾರೋ, ಅವರು ತಮ್ಮ ಆಹಾರದ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು. ಏಕೆಂದರೆ ಮಧುಮೇಹಿಗಳು ಸ್ವಲ್ಪ ಅಜಾಗ್ರತೆ ವಹಿಸಿದರೂ ಸಹ ಅವರ ರಕ್ತದ ಸಕ್ಕರೆ ಮಟ್ಟ ಹೆಚ್ಚಾಗುವ ಮೂಲಕ ತೊಂದರೆ ಉಂಟು ಮಾಡುತ್ತದೆ.  

  ಮಧುಮೇಹಿಗಳ ರಕ್ತದ ಸಕ್ಕರೆ ಮಟ್ಟ ಹೆಚ್ಚಾದರೆ ಅಪಾಯಕಾರಿ ಪರಿಣಾಮ ಉಂಟು ಮಾಡುತ್ತದೆ. ವೈದ್ಯರು ಮತ್ತು ತಜ್ಞರು ಆಹಾರಕ್ಕೆ ಸಂಬಂಧಿಸಿದ ವಿಷಯದಲ್ಲಿ ಮಧುಮೇಹಿಗಳು ಯಾವ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಬೇಕು. ಏನು ತಿನ್ನಬಾರದು ಎಂಬುದನ್ನು ವಿಂಗಡಿಸಿದ್ದಾರೆ.

  ಮಧುಮೇಹ ರೋಗಿಗಳಿಗೆ ಸುರಕ್ಷಿತ ಆಹಾರ

  ಮಧುಮೇಹ ರೋಗಿಗಳಿಗೆ ಸುರಕ್ಷಿತ ಆಹಾರಗಳಲ್ಲಿ ಆವಕಾಡೊ ಅಂದರೆ ಬೆಣ್ಣೆ ಹಣ್ಣು ಮುಖ್ಯವಾಗಿದೆ.  ಈ ಬೆರ್ರಿ ಜಾತಿಯ ಹಣ್ಣು ಪೋಷಕಾಂಶಗಳಿಂದ ಕೂಡಿದೆ. ವಿಟಮಿನ್ ಸಿ,

  ಇ, ಕೆ ಮತ್ತು ಬಿ 16, ಫೋಲೇಟ್, ಪ್ಯಾಂಟೊಥೆನಿಕ್ ಆಮ್ಲ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಹೊಂದಿದೆ. ಇದು ಲುಟೀನ್, ಬೀಟಾ ಕ್ಯಾರೋಟಿನ್, ಒಮೆಗಾ -3 ಕೊಬ್ಬಿನಾಮ್ಲಗಳ ಸಮೃದ್ಧವಾಗಿದೆ.

  ಇದನ್ನೂ ಓದಿ: ಚಿಕನ್, ಫಿಶ್ ತಿನ್ನಲ್ವಾ? ಹಾಗಿದ್ದರೆ ಪ್ರೋಟೀನ್​​ಗಾಗಿ ಈ ಕೆಲವು ಆಹಾರ ಮಿಸ್ ಮಾಡಲೇಬೇಡಿ

  ಬೆಣ್ಣೆ ಹಣ್ಣು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ

  2019 ರಲ್ಲಿ ಇಲಿಗಳ ಮೇಲೆ ನಡೆಸಿದ ಅಧ್ಯಯನವು ಆವಕಾಡೊದಲ್ಲಿ ಕಂಡು ಬರುವ ಕೊಬ್ಬಿನ ಅಣುವಾದ ಅವೊಕಾಟಿನ್ ಬಿ (AvoB) ಅಸ್ಥಿಪಂಜರದ ಸ್ನಾಯುಗಳು ಮತ್ತು ಮೇದೋಜ್ಜೀರಕ ಗ್ರಂಥಿಯಲ್ಲಿ ಅಪೂರ್ಣ ಆಕ್ಸಿಡೀಕರಣ ಉಂಟಾಗುವುದನ್ನು ತಡೆಯುತ್ತದೆ ಎಂದು ಹೇಳಿದೆ.

  ಆವಕಾಡೋ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಇದು ಕೇವಲ ಒಂದು ಗ್ರಾಂ ಸಕ್ಕರೆಯನ್ನು ಹೊಂದಿರುತ್ತದೆ. ಇದು ಒಟ್ಟಾರೆ ಆಹಾರದ ಗುಣಮಟ್ಟ ಸುಧಾರಿಸುತ್ತದೆ. ಆವಕಾಡೋದ ಗುಣ ಲಕ್ಷಣಗಳು ಮತ್ತು ಪ್ರಯೋಜನಗಳು ಮಧುಮೇಹ ರೋಗಿಗಳಿಗೆ ಸುರಕ್ಷಿತವಾಗಿದೆ.

  ಆದರೆ ಈ ಆರೋಗ್ಯಕರ ಹಣ್ಣನ್ನು ಆಹಾರಕ್ಕಾಗಿ ಮಾತ್ರವಲ್ಲದೆ ಚರ್ಮ ಮತ್ತು ಕೂದಲಿನ ಆರೈಕೆಗೂ  ಬಳಸಬಹುದು ಎಂಬುದನ್ನು ತಿಳಿಯೋಣ. ಆವಕಾಡೋವನ್ನು ಕೂದಲಿನ ಆರೈಕೆಗೆ ಬಳಸುವ 4 ಸುಲಭ ಮಾರ್ಗಗಳು ಹೀಗಿವೆ.

  ಕೂದಲಿಗೆ ಬೆಣ್ಣೆ ಹಣ್ಣಿನ ಪ್ಯಾಕ್

  - ಬೆಣ್ಣೆ ಹಣ್ಣನ್ನು ತೆಗೆದುಕೊಂಡು ಅರ್ಧದಷ್ಟು ಕತ್ತರಿಸಿ, ನಂತರ ಸಿಪ್ಪೆ ತೆಗೆದು ಹಾಕಿ.

  - ಸಿಪ್ಪೆ ತೆಗೆದ ಭಾಗವನ್ನು ಒಂದು ಪಾತ್ರೆಯಲ್ಲಿ ಹಾಕಿ ಮ್ಯಾಶ್ ಮಾಡಿ.

  - ಬೆಣ್ಣೆ ಹಣ್ಣ ಮ್ಯಾಶ್ ಗೆ ಒಂದು ಮೊಟ್ಟೆಯ ಹಳದಿ ಲೋಳೆ ಮತ್ತು ಒಂದು ಚಮಚ ಜೇನುತುಪ್ಪ ಸೇರಿಸಿ.

  - ಈ ಮಿಶ್ರಣವನ್ನು ಸ್ವಲ್ಪ ಒದ್ದೆಯಾದ ಕೂದಲಿಗೆ ಹಚ್ಚಿ ಮತ್ತು 30 ನಿಮಿಷಗಳ ಕಾಲ ಬಿಡಿ.

  - ಮೊದಲು ಸರಳ ನೀರಿನಿಂದ ಕೂದಲನ್ನು ತೊಳೆಯಿರಿ. ನಂತರ ಮೃದು ಶಾಂಪೂ ಬಳಸಿ ನೆತ್ತಿಯನ್ನು ಸ್ವಚ್ಛಗೊಳಿಸಿ.

  ಒಣ ಕೂದಲಿಗೆ ಬೆಣ್ಣೆ ಹಣ್ಣಿನ ಪ್ಯಾಕ್

  - ನೀವು ತುಂಬಾ ಒಣ ಕೂದಲು ಹೊಂದಿದ್ದರೆ, ಆವಕಾಡೊವನ್ನು ಒಂದು ಬಟ್ಟಲಿನಲ್ಲಿ ಮ್ಯಾಶ್ ಮಾಡಿ. ಅದರಲ್ಲಿ ಯಾವುದೇ ಉಂಡೆಗಳನ್ನೂ ಬಿಡಬೇಡಿ.

  ಇದನ್ನೂ ಓದಿ: ಮದುವೆ ಸಮಾರಂಭಕ್ಕೆ ಹೋಗುವ ಮೊದಲು ಗ್ಲಾಸಿ ಮೇಕಪ್ ಮತ್ತು ಗೋಲ್ಡನ್ ಮೇಕಪ್ ಹೀಗೆ ಮಾಡಿಕೊಳ್ಳಿ

  - ಇದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ.

  - ಒಂದು ಚಮಚ ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆ ಸೇರಿಸಿ.

  - ಮಿಶ್ರಣವನ್ನು ನೆತ್ತಿಯಿಂದ ಬೇರುಗಳಿಗೆ ಅನ್ವಯಿಸಿ.

  - ಶವರ್ ಕ್ಯಾಪ್ ಹಾಕಿ 30 ನಿಮಿಷಗಳ ಕಾಲ ಬಿಡಿ.

  - ಈಗ ಕೂದಲನ್ನು ಚೆನ್ನಾಗಿ ತೊಳೆದು ಒಣಗಲು ಬಿಡಿ.
  Published by:renukadariyannavar
  First published: