Fruits: ಮಧುಮೇಹಿಗಳು ತಿನ್ನಬಹುದಾದ ಹತ್ತು ಹಣ್ಣುಗಳ ಪಟ್ಟಿ ಇಲ್ಲಿದೆ..!

ಕೆಲವೊಂದು ಹಣ್ಣುಗಳಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುವ ಕಾರಣಕ್ಕೆ ಆ ಹಣ್ಣುಗಳನ್ನು ಮಧುಮೇಹಿಗಳು ಸೇವಿಸಬಾರದು ಎನ್ನಲಾಗುತ್ತದೆ. ಹಾಗಾದರೆ ಮಧುಮೇಹಿಗಳು ಸೇವಿಸಬಹುದಾದ ಹಣ್ಣುಗಳ ಕುರಿತಾದ ಮಾಹಿತಿ ಇಲ್ಲಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಧುಮೇಹಿಗಳು ಹಣ್ಣನ್ನು ತಿನ್ನುವುದರ ಬಗ್ಗೆ ಸಾಕಷ್ಟು ಅಧ್ಯಯನಗಳು ಮತ್ತು ಸಂಶೋಧನೆಗಳು ನಡೆದಿದ್ದರೂ, ಹಣ್ಣಿನ ಸೇವನೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟದ ಜೊತೆ ಅದರ ಸಂಬಂಧದ ಕುರಿತು ಊಹಾಪೋಹಗಳಿವೆ. ಆದರೆ, ಆಯಾ ಋತುವಿನಲ್ಲಿ ಸಿಗುವ ಮತ್ತು ಸ್ಥಳೀಯ ಹಣ್ಣುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಲಾಭಗಳಿವೆ. ಈ ಕೆಳಗೆ ಪಟ್ಟಿ ಮಾಡಲಾದ ಹಣ್ಣುಗಳು, ಕೇವಲ ಮಧುಮೇಹ ಸ್ನೇಹಿ ಮಾತ್ರವಲ್ಲ, ಬದಲಿಗೆ ಫೈಬರ್ ಮತ್ತು ನೀರಿನ ಅಂಶವನ್ನು ಹೇರಳವಾಗಿ ಹೊಂದಿದ್ದು, ಸಕ್ಕರೆಯ ಹೀರಿಕೊಳ್ಳುವಿಕೆಯ ಪ್ರಮಾಣ ಕಡಿಮೆ ಮಾಡುತ್ತವೆ.

ಕೆಲವೊಂದು ಹಣ್ಣುಗಳಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುವ ಕಾರಣಕ್ಕೆ ಆ ಹಣ್ಣುಗಳನ್ನು ಮಧುಮೇಹಿಗಳು ಸೇವಿಸಬಾರದು ಎನ್ನಲಾಗುತ್ತದೆ. ಹಾಗಾದರೆ ಮಧುಮೇಹಿಗಳು ಸೇವಿಸಬಹುದಾದ ಹಣ್ಣುಗಳ ಕುರಿತಾದ ಮಾಹಿತಿ ಇಲ್ಲಿದೆ.

Explained: Why should certain fruits be eaten with their skin here is the health benefits and other reasons experts say
ಪ್ರಾತಿನಿಧಿಕ ಚಿತ್ರ


1. ಸೇಬು: ಇದು ಕೇವಲ ಪೌಷ್ಟಿಕಾಂಶವುಳ್ಳ ಹಣ್ಣು ಮಾತ್ರವಲ್ಲ, ಮಿತವಾಗಿ ಸೇವಿಸಿದಿರಿ ಎಂದಾದಲ್ಲಿ, ಅದು ಟೈಪ್ 2 ಡಯಾಬಿಟೀಸ್‍ನ  ಕಡಿಮೆ ಅಪಾಯದ ಜೊತೆಯೂ ಸಂಬಂಧ ಹೊಂದಿದೆ. ದಿನಕ್ಕೊಂದು ಸೇಬು ತಿನ್ನುವುದರಿಂದ ವೈದ್ಯರಿಂದ ದೂರ ಇರಬಹುದು ಎಂಬ ಹಳೆಯ ನುಡಿಗಟ್ಟಿನಲ್ಲಿ ಖಂಡಿತ ಸತ್ಯವಿದೆ.

2. ಅವಕಾಡೋ: ಈ ಹಣ್ಣುಗಳು ಆರೋಗ್ಯಕರ ಕೊಬ್ಬುಗಳು ಮತ್ತು 20ಕ್ಕೂ ಹೆಚ್ಚು ವಿಟಮಿನ್ ಮತ್ತು ಮಿನರಲ್‍ಗಳ ಆಗರ. ಅವುಗಳಲ್ಲಿ ಫೈಬರ್ ಕೂಡ ಅಧಿಕ ಮಟ್ಟದಲ್ಲಿದ್ದು, ಮಧುಮೇಹದ ಅಪಾಯವನ್ನು ಕಡಿಮೆ ಮಾಡುವುದಕ್ಕೂ ಸಹಕಾರಿ ಎನ್ನಲಾಗುತ್ತದೆ.

ಇದನ್ನೂ ಓದಿ: ನಿಮ್ಮ ಮಧುಮೇಹ ನಿಯಂತ್ರಣಕ್ಕೆ ಸಿಗುತ್ತಿಲ್ಲವೇ: ಈ ಪದಾರ್ಥಗಳನ್ನು ನಿಮ್ಮ ಆಹಾರಕ್ಕೆ ಸೇರಿಸಿಕೊಳ್ಳಿ

3. ಬೆರ್ರಿಗಳು:  ಮಧುಮೇಹ -ಸ್ನೇಹಿ ಆಹಾರಕ್ರಮದಲ್ಲಿ ಬೆರ್ರಿಗಳನ್ನು ಕೂಡ ಸೇರಿಸಿಕೊಳ್ಳುವುದು ಉತ್ತಮ ಕ್ರಮ. ನೀವು ಬ್ಲಾಕ್ ಬೆರ್ರಿ, ಬ್ಲೂಬೆರ್ರಿ ಮತ್ತು ಸ್ಟ್ರಾಬೆರ್ರಿಗಳಲ್ಲಿ ಯಾವುದನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದು ಏಕೆಂದರೆ ಆ ಎಲ್ಲಾ ಹಣ್ಣುಗಳಲ್ಲಿಯೂ ಆ್ಯಂಟಿಆಕ್ಸಿಡೆಂಟ್, ವಿಟಮಿನ್ ಮತ್ತು ಫೈಬರ್‌ಗಳು ಯಥೇಚ್ಚವಾಗಿವೆ.

4. ಪಪ್ಪಾಯ: ನೈಸರ್ಗಿಕ ಆ್ಯಂಟಿ ಆ್ಯಕ್ಸಿಡೆಂಟ್‍ಗಳನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವ ಈ ಹಣ್ಣು ಮಧುಮೇಹಿಗಳಿಗೆ ಉತ್ತಮ ಆಯ್ಕೆ. ಅದು ಭವಿಷ್ಯದಲ್ಲಿ ಕೋಶಗಳಿಗೆ ಆಗುವ ಹಾನಿಯನ್ನು ಕಡಿಮೆ ಮಾಡುತ್ತದೆ.

5. ಸ್ಟಾರ್ ಫುಟ್: ಹುಳಿ ಮತ್ತು ಸಿಹಿ ರುಚಿಯುಳ್ಳ ಈ ಹಣ್ಣು ಅತ್ಯಧಿಕ ಡಯೆಟರಿ ಫೈಬರ್ ಮತ್ತು ವಿಟಮಿನ್ ಸಿ ಹೊಂದಿದೆ. ಅದು ಉರಿಯೂತದ ಪ್ರಕ್ರಿಯೆಗಳ ಮೇಲೆ ಧನಾತ್ಮಕ ಪರಿಣಾಮಗಳನ್ನು ಬೀರುತ್ತದೆ ಮತ್ತು ಜೀವಕೋಶಗಳ ಹಾನಿ ಸರಿಪಡಿಸಲು ಸಹಾಯ ಮಾಡುತ್ತದೆ ಹಾಗೂ ಇದು ಹಣ್ಣಿನ ಸಕ್ಕರೆಯನ್ನು ಕನಿಷ್ಟ ಪ್ರಮಾಣದಲ್ಲಿ ಹೊಂದಿರುತ್ತದೆ.

6. ಕಿವಿ ಹಣ್ಣು: ಕಿವಿ ಹಣ್ಣು ವಿಟಮಿನ್ ಇ, ಕೆ ಮತ್ತು ಪೊಟ್ಯಾಶಿಯಂನ ಅತ್ಯುತ್ತಮ ಮೂಲ. ಅದರಲ್ಲಿ ಹಣ್ಣಿನ ಸಕ್ಕರೆ ಪ್ರಮಾಣವು ಕಡಿಮೆ ಇರುವುದರಿಂದ ಮಧುಮೇಹಿಗಳಿಗೆ ಸೂಕ್ತ ಹಣ್ಣು.

7. ಕರ್ಬೂಜ ಮತ್ತು ಕಲ್ಲಂಗಡಿ ಹಣ್ಣು: ಮಧುಮೇಹಿಗಳಿಗೆ ಸೂಕ್ತವಾದ ಹಣ್ಣುಗಳಿವು. ಅವುಗಳಲ್ಲಿರುವ ಫೈಬರ್ , ಪೋಟಾಶಿಯಂ, ಮ್ಯಾಂಗನೀಸ್ , ವಿಟಮಿನ್ ಬಿ ಮತ್ತು ಸಿ ಯ ಲಾಭ ಪಡೆಯಬೇಕೆಂದರೆ ಮಿತವಾಗಿ ತಿನ್ನಿ.

ಇದನ್ನೂ ಓದಿ: Health Tips: ಮಧುಮೇಹಿಗಳು ಈ ತಪ್ಪುಗಳನ್ನು ಮಾಡಲೇಬೇಡಿ: ಮಾಡಿದರೆ ಅಪಾಯ ತಪ್ಪಿದ್ದಲ್ಲ..!

8. ಡ್ರ್ಯಾಗನ್ ಹಣ್ಣು: ಡಯೆಟರಿ ಫೈಬರ್, ಪ್ರಮುಖ ವಿಟಮಿನ್‍ಗಳು, ಮಿನರಲ್‍ಗಳು ಮತ್ತು ಆ್ಯಂಟಿ ಆಕ್ಸಿಡೆಂಟ್‍ಗಳ ಖಜಾನೆ ಈ ಹಣ್ಣು.

9. ಪಿಯರ್ಸ್ : ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ ಹಣ್ಣು, ಉರಿಯೂತದ ವಿರುದ್ಧ ಹೋರಾಡುತ್ತದೆ ಮತ್ತು ಜೀರ್ಣಕ್ರಿಯೆ ಸುಧಾರಿಸುತ್ತದೆ. ಆರೋಗ್ಯಕರ ಆಹಾರದ ಜೊತೆಗೆ ಈ ಹಣ್ಣನ್ನು ಸೇವಿಸುವುದರಿಂದ ಟೈಪ್ 2 ಮಧುಮೇಹದ ಅಪಾಯ ಕಡಿಮೆ ಆಗುತ್ತದೆ ಎನ್ನುತ್ತವೆ ಅಧ್ಯಯನಗಳು.

10. ಕಿತ್ತಳೆ ಹಣ್ಣು: ಈ ಹಣ್ಣಿನಲ್ಲಿ ಅಧಿಕ ಫೈಬರ್ ಇದ್ದು , ರಕ್ತದಲ್ಲಿ ಸಕ್ಕರೆಯ ಹೀರುವಿಕೆಯನ್ನು ನಿಧಾನಗೊಳಿಸುತ್ತದೆ ಮತ್ತು ಅದರಲ್ಲಿ ವಿಟಮಿನ್ ಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
Published by:Anitha E
First published: