Drumstick Tea for Diabetes: ನುಗ್ಗೆ ಸೊಪ್ಪಿನ ಚಹಾ ಕುಡಿಯುವ ಮೂಲಕ ಮಧುಮೇಹಿಗಳು ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಬಹುದು!

ಔಷಧೀಯ ಸಸ್ಯಗಳಲ್ಲಿ ಒಂದಾಗಿದೆ ನುಗ್ಗೆ ಸೊಪ್ಪು. ಇದು ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣ ಮಾಡುವುದು ಮತ್ತು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಪ್ರಕೃತಿಯಲ್ಲಿ (Nature) ವಿವಿಧ ರೀತಿಯ ಸಸ್ಯಗಳಿವೆ (Trees). ಅವುಗಳನ್ನು ಆಹಾರ (Food) ಮತ್ತು ಪಾನೀಯಗಳಿಗೆ (Drink) ಮಾತ್ರವಲ್ಲದೆ ಅನೇಕ ಔಷಧಗಳಲ್ಲಿಯೂ (Medicine) ಬಳಸುತ್ತಾರೆ. ಕೆಲವು ಸಸ್ಯಗಳು ಔಷಧವಾಗಿ ಕೆಲಸ ಮಾಡುತ್ತವೆ. ಅವು ಮಾನವನ ಆರೋಗ್ಯಕ್ಕೆ (Health) ಸಾಕಷ್ಟು ರೀತಿಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಕೆಲವು ರೋಗಗಳಿಗೆ ನೈಸರ್ಗಿಕ ಮನೆ ಮದ್ದುಗಳೇ ಮದ್ದಾಗಿರುತ್ತವೆ. ಅನೇಕ ಸಸ್ಯಗಳಲ್ಲಿ ವಿವಿಧ ರೀತಿಯ ಔಷಧೀಯ ಗುಣಗಳು ಕಂಡು ಬರುತ್ತವೆ. ಹೀಗಾಗಿ ಅವುಗಳನ್ನು ವಿವಿಧ ರೋಗಗಳ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುತ್ತದೆ. ಅಂತಹ ಔಷಧೀಯ ಸಸ್ಯಗಳಲ್ಲಿ ಒಂದಾಗಿದೆ ನುಗ್ಗೆ ಸೊಪ್ಪು. ಇದು ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣ ಮಾಡುವುದು ಮತ್ತು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ.

    ನುಗ್ಗೆ ಸೊಪ್ಪು ಪ್ರಾಚೀನ ಕಾಲದಿಂದಲೂ ಔಷಧವಾಗಿ ಬಳಕೆ ಆಗುತ್ತಿದೆ. ಇದು ಪ್ರಸಿದ್ಧವಾದ ಸೂಪರ್ ಫುಡ್ ಆಗಿದೆ. ಹೆಚ್ಚಿನ ಜನರು ನುಗ್ಗೆ ಸೊಪ್ಪನ್ನು ತರಕಾರಿಯಾಗಿ ಬಳಸುತ್ತಾರೆ. ಆದಾಗ್ಯೂ, ಇದನ್ನು ಅನೇಕ ರೀತಿಯ ಭಕ್ಷ್ಯಗಳಲ್ಲಿ ಬಳಕೆ ಮಾಡಲಾಗುತ್ತದೆ. ನುಗ್ಗೆ ಸೊಪ್ಪು ನ್ನು ಪ್ರಾಚೀನ ಕಾಲದಲ್ಲಿ ಚರ್ಮ ರೋಗಗಳು ಮತ್ತು ಸೋಂಕುಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿತ್ತು ಎಂದು ಹೇಳಲಾಗಿದೆ.

    ಏಕೆಂದರೆ ನುಗ್ಗೆ ಸೊಪ್ಪು ಹಸಿರು ಎಲೆಗಳು ಆಂಟಿಫಂಗಲ್, ಆಂಟಿವೈರಲ್, ಖಿನ್ನತೆ-ಶಮನಕಾರಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿವೆ. ಎಲ್ಲಿ ಬೇಕಾದರೂ ನುಗ್ಗೆ ಸೊಪ್ಪು ಗಿಡಗಳನ್ನು ಕಾಣಬಹುದು.

    ಇದನ್ನೂ ಓದಿ: ಕೂದಲು ಉದುರಿ ನೆತ್ತಿ ಕಾಣುತ್ತಿದೆಯೇ ಹಾಗಿದ್ದರೆ ಇಂದಿನಿಂದಲೇ ಈ ಸಲಹೆ ಪಾಲಿಸಿ

    ಇದರ ಎಲೆಗಳಿಂದ ಮಾಡಿದ ಪುಡಿ ನಿಮಗೆ ಯಾವುದೇ ಅಂಗಡಿಯಲ್ಲಿ ಅಥವಾ ಆನ್‌ಲೈನ್‌ನಲ್ಲಿ ಸುಲಭವಾಗಿ ಲಭ್ಯವಿದೆ. ಮಾರುಕಟ್ಟೆಯ ಒಣ ಪುಡಿ ಬೇಡವೆನಿಸಿದರೆ, ಅದರ ಸಣ್ಣ ಹಸಿರು ಎಲೆಗಳನ್ನು ಬಳಸುವುದು ಉತ್ತಮ.

    ಡಯಾಬಿಟೀಸ್ ರೋಗಿಗಳಿಗೆ ನುಗ್ಗೆ ಸೊಪ್ಪು ವರದಾನ

    ನುಗ್ಗೆ ಸೊಪ್ಪು ನಲ್ಲಿರುವ ಅದ್ಭುತ ಗುಣಲಕ್ಷಣಗಳು ಇದನ್ನು ತೂಕ ನಷ್ಟಕ್ಕೆ ಮತ್ತು ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡಲು ಬಳಕೆ ಮಾಡುತ್ತಾರೆ. ಇದರ ಎಲೆಗಳನ್ನು ಜಗಿಯುವುದು, ಅದರ ತರಕಾರಿಗಳನ್ನು ತಿನ್ನುವುದು ಅಥವಾ

    ಅದರ ಎಲೆಗಳಿಂದ ಚಹಾ ಕುಡಿಯುವುದು ರಕ್ತದ ಸಕ್ಕರೆ ನಿಯಂತ್ರಿಸಲು ಸಹಾಯ ಮಾಡುತ್ತದೆ. ಜೊತೆಗೆ ಅನೇಕ ಗಂಭೀರ ಸಮಸ್ಯೆ ತಪ್ಪಿಸಲು ಸಹಾಯ ಮಾಡುತ್ತದೆ ಎಂದು ಅನೇಕ ಅಧ್ಯಯನಗಳಲ್ಲಿ ಹೇಳಲಾಗಿದೆ.

    ರಕ್ತದ ಸಕ್ಕರೆ ಪ್ರಮಾಣ ಕಡಿಮೆ ಮಾಡಲು ಹೀಗೆ ನುಗ್ಗೆ ಸೊಪ್ಪು ಟೀ ಮಾಡಿ

    ರಕ್ತದ ಸಕ್ಕರೆ ಮಟ್ಟ ಕಾಪಾಡಲು ನೀವು ಕೆಲವು ತಾಜಾ ನುಗ್ಗೆ ಸೊಪ್ಪು ಎಲೆಗಳನ್ನು ಬಿಸಿಲಿನಲ್ಲಿ ತೊಳೆದು ಒಣಗಿಸಿ ನಂತರ ಅವುಗಳನ್ನು ಪುಡಿ ಮಾಡಿಟ್ಟುಕೊಳ್ಳಿ. ಇದನ್ನು ಚಹಾ ಎಲೆಯಂತೆ ಬಳಸಬೇಕು. ಉದಾಹರಣೆಗೆ ನೀವು ಬೆಳಿಗ್ಗೆ ಚಹಾ ಮಾಡುವಾಗ ನೀವು ಚಹಾ ಎಲೆಗಳ ಬದಲಿಗೆ ನುಗ್ಗೆ ಸೊಪ್ಪು ಪುಡಿಯನ್ನು ಬಳಸಿ. ಪ್ರತಿದಿನ ಈ ಪುಡಿಯ ಚಹಾ ಸೇವನೆ ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.

    ನುಗ್ಗೆ ಸೊಪ್ಪು ರಕ್ತದ ಸಕ್ಕರೆ ಮಟ್ಟವನ್ನು ಹೇಗೆ ಕಡಿಮೆ ಮಾಡುತ್ತದೆ

    ಒಂದು ಅಧ್ಯಯನದ ಪ್ರಕಾರ ನುಗ್ಗೆ ಸೊಪ್ಪು ಎಲೆಗಳು ಉತ್ಕರ್ಷಣ ನಿರೋಧಕ ಕ್ಲೋರೊಜೆನಿಕ್ ಆಮ್ಲ ಹೊಂದಿವೆ. ಇದು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಕಾರಿ ಆಗಿದೆ. ನೀವು ಸಕ್ಕರೆ ರೋಗಿಗಳಾಗಿದ್ದರೆ, ಸಾಮಾನ್ಯ ಚಹಾದ ಬದಲಿಗೆ ನೀವು ನುಗ್ಗೆ ಸೊಪ್ಪು ಎಲೆಗಳಿಂದ ಮಾಡಿದ ಚಹಾ ಕುಡಿಯಲು ಪ್ರಾರಂಭಿಸಿ.

    ನುಗ್ಗೆ ಸೊಪ್ಪು ಎಲೆಗಳು ರಕ್ತದೊತ್ತಡ ಕಡಿಮೆ ಮಾಡುತ್ತದೆ

    ನುಗ್ಗೆ ಸೊಪ್ಪು ಹಸಿರು ಎಲೆಗಳ ಸಾರವು ಐಸೋಥಿಯೋಸೈನೇಟ್ ಮತ್ತು ನಿಯಾಜಿಮಿನ್ ಅನ್ನು ಹೊಂದಿರುತ್ತದೆ. ಇವುಗಳು ಅಪಧಮನಿಗಳ ದಪ್ಪ ಆಗುವುದನ್ನು ತಡೆಯಲು ಸಹಾಯ ಮಾಡುವ ಸಂಯುಕ್ತಗಳು ಆಗಿವೆ. ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.

    ಇದನ್ನೂ ಓದಿ: ಬೇಸಿಗೆಯಲ್ಲಿ ದೇಹದ ಕಾಳಜಿಗಾಗಿ ಅಡುಗೆ ಮನೆಯಲ್ಲೇ ಇವೆ ಅಗತ್ಯ ವಸ್ತುಗಳು

    ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ

    ನುಗ್ಗೆ ಸೊಪ್ಪು ಎಲೆಗಳು ವಿಟಮಿನ್ ಸಿ ಹೊಂದಿವೆ. ಇದು ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸಲು ಸಹಕಾರಿ. ಇದು ಉತ್ಕರ್ಷಣ ನಿರೋಧಕ ಹೊಂದಿದೆ. ದೇಹದಲ್ಲಿ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡದ ವಿರುದ್ಧ ಹೋರಾಡುವ ಮೂಲಕ ನಿಮ್ಮ ಚರ್ಮ ಮತ್ತು ಕೂದಲಿನ ಗುಣಮಟ್ಟ ಸುಧಾರಿಸುತ್ತದೆ.
    Published by:renukadariyannavar
    First published: