ಸ್ನಾಯುಗಳ ಬೆಳವಣಿಗೆಗೆ (Muscle Growth) ಪ್ರೋಟೀನ್ (Protein) ಅತ್ಯಂತ ಮುಖ್ಯವಾಗಿ ಬೇಕು. ಜೊತೆಗೆ ಜೀರ್ಣಾಂಗ ವ್ಯವಸ್ಥೆ (Digestive System), ಮುಖ ಅಥವಾ ಚರ್ಮದ ಮೇಲೆ ಯಾವುದೇ ರೀತಿಯ ಊತ ಉಂಟಾದರೆ ಅದು ನಿಮ್ಮ ದೇಹದಲ್ಲಿ ಪ್ರೋಟೀನ್ ಕೊರತೆಯನ್ನು ಸೂಚಿಸುತ್ತಿರಬಹುದು. ಶಕ್ತಿಯ (Energy) ಕೊರತೆ ಭಾವನೆ ಈ ನಿರ್ದಿಷ್ಟ ಪೋಷಕಾಂಶದ ಕೊರತೆ ಕಾರಣದಿಂದ ಉಂಟಾಗಿರಬಹುದು. ಚಳಿಗಾಲದ ದಿನಗಳಲ್ಲಿ ದೇಹವನ್ನು ಬೆಚ್ಚಗಿಡಲು ಹೆಚ್ಚಿನ ಪ್ರೋಟೀನ್ ಆಹಾರ ಸೇವನೆ ಮಾಡುವ ಅಗತ್ಯವಿದೆ. ಆಹಾರದಲ್ಲಿ ಪ್ರೋಟೀನ್ ಭರಿತ ಕಾಳು ಸೇರಿಸಿ. ಹಾಗೆಯೇ ನಿಯಮಿತವಾಗಿ ಬೇಳೆ, ಉದ್ದಿನಬೇಳೆ, ಹೆಸರುಕಾಳು ಸೇರಿದಂತೆ ಹುರುಳಿ ಕಾಳು ಮತ್ತು ಅವುಗಳಿಂದ ತಯಾರಿಸಿದ ಖಾದ್ಯಗಳ ಸೇವನೆ ಮಾಡಬೇಕು.
ಪೌಷ್ಟಿಕ ಆಹಾರ ಪದಾರ್ಥವಾಗಿದೆ ಹುರುಳಿ ಕಾಳು
ಹುರುಳಿ ಕಾಳುಗಳು ತುಂಬಾ ಪೌಷ್ಟಿಕ ಆಹಾರ ಪದಾರ್ಥವಾಗಿದೆ. ಇದನ್ನು ಆರೋಗ್ಯಕರ ರೀತಿಯಲ್ಲಿ ತಯಾರಿಸಿದರೆ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತದೆ. ಹುರುಳಿ ಕಾಳುಗಳು ಬಿಹಾರ, ಜಾರ್ಖಂಡ್, ಬಂಗಾಳ ಮತ್ತು ಒಡಿಶಾದಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಮೂತ್ರ ಸಂಬಂಧಿ ಸಮಸ್ಯೆ ನಿವಾರಿಸಲು ಆಯುರ್ವೇದದಲ್ಲಿ ಹುರುಳಿ ಕಾಳುಗಳು ನೀರನ್ನು ಬಳಸಲಾಗುತ್ತದೆ.
ಇದು ಅನೇಕ ಪ್ರಯೋಜನ ನೀಡುತ್ತದೆ. ಹುರುಳಿ ಕಾಳುಗಳು ಪ್ರಯೋಜನಗಳ ಕುರಿತು ಖ್ಯಾತ ಕ್ಲಿನಿಕಲ್ ಪೌಷ್ಟಿಕತಜ್ಞ ಅನ್ಶುಲ್ ಪೋಸ್ಟ್ ಅನ್ನು ಇನ್ ಸ್ಟಾದಲ್ಲಿ ಶೇರ್ ಮಾಡಿದ್ಆರೆ. ಹುರುಳಿ ಕಾಳುಗಳು ಕೊಬ್ಬಿನ ಶೇಖರಣೆಯನ್ನು ಕಡಿಮೆ ಮಾಡುತ್ತವೆ. ತೂಕ ನಷ್ಟದಲ್ಲಿ ಪ್ರಯೋಜನಕಾರಿ ಎಂದು ಹೇಳಿದ್ದಾರೆ.
ಹುರುಳಿ ಕಾಳುಗಳು ಪ್ರೋಟೀನ್, ಕಬ್ಬಿಣ, ಕ್ಯಾಲ್ಸಿಯಂ, ಸತು, ಕಾರ್ಬೋಹೈಡ್ರೇಟ್, ಜೀವಸತ್ವಗಳು, ಉತ್ಕರ್ಷಣ ನಿರೋಧಕ ಮತ್ತು ಕರಗುವ ಫೈಬರ್ ನಲ್ಲಿ ಸಮೃದ್ಧವಾಗಿದೆ. ಇದು ಕೊಲೆಸ್ಟ್ರಾಲ್, ರಕ್ತದ ಸಕ್ಕರೆ ಕಡಿಮೆ ಮಾಡುತ್ತದೆ. ಸೂಪ್ ರೂಪದಲ್ಲಿ ಸೇವಿಸಿದರೆ ಮೂತ್ರದ ಸಮಸ್ಯೆ ನಿವಾರಿಸುತ್ತದೆ. ಇದು ಹೃದಯದ ಆರೋಗ್ಯಕ್ಕೂ ಉತ್ತಮ ಲಾಭಕಾರಿ. ತೂಕ ಇಳಿಸುವ ಯೋಜನೆಗೆ ಸಾಕಷ್ಟು ಸಹಕಾರಿಯಾಗಿದೆ. ಹುರುಳಿ ಕಾಳು ದಾಲ್ ಸೇವನೆ ಸಾಕಷ್ಟು ಆರೋಗ್ಯ ವರ್ಧಕವಾಗಿದೆ.
ಹುರುಳಿ ಕಾಳುಗಳು ಪ್ರಯೋಜನಗಳು
ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ
ಹುರುಳಿ ಕಾಳುಗಳು ಕಡಿಮೆ ಗ್ಲೈಸೆಮಿಕ್ ಸೂಚಿ ಹೊಂದಿದೆ. ಇದು ಮಧುಮೇಹ ರೋಗಿಗಳಿಗೆ ಉಪಯುಕ್ತವಾಗಿದೆ. ಇದು ಆಲ್ಫಾ-ಅಮೈಲೇಸ್ ಇನ್ಹಿಬಿಟರ್ ಹೊಂದಿದೆ. ಇದು ಸೀರಮ್ ಗ್ಲೂಕೋಸ್ ಮಟ್ಟ ಕಡಿಮೆ ಮಾಡುತ್ತದೆ. ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ.
ಆಕ್ಸಿಡೇಟಿವ್ ಒತ್ತಡ ಸುಧಾರಿಸುತ್ತದೆ
ಹುರುಳಿ ಕಾಳುಗಳು ಹೆಚ್ಚಿನ ಕೊಬ್ಬಿನಿಂದ ಉಂಟಾಗುವ ಆಕ್ಸಿಡೇಟಿವ್ ಒತ್ತಡವನ್ನು ಸುಧಾರಿಸುತ್ತದೆ. ಗ್ಲುಟಾಥಿಯೋನ್ ಸಾಂದ್ರತೆ ಹೆಚ್ಚಿಸುತ್ತದೆ. ಉತ್ಕರ್ಷಣ ನಿರೋಧಕ ಕಿಣ್ವಗಳ ಚಟುವಟಿಕೆ ಸುಧಾರಿಸಬಹುದು.
ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ
ಹುರುಳಿ ಕಾಳುಗಳು ಫೀನಾಲಿಕ್ ಸಂಯುಕ್ತಗಳಿವೆ. ಮಲದಲ್ಲಿನ ಕೊಲೆಸ್ಟ್ರಾಲ್ ವಿಸರ್ಜನೆ ಹೆಚ್ಚಿಸುತ್ತದೆ. ಇದು ಹೈಪೋಲಿಪಿಡೆಮಿಕ್ ಚಟುವಟಿಕೆ ಹೊಂದಿರಬಹುದು. ಪಿತ್ತರಸದ ರಚನೆ ಕಡಿಮೆ ಮಾಡುತ್ತದೆ. ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ. ಪಿತ್ತರಸದಲ್ಲಿ ಕೊಲೆಸ್ಟ್ರಾಲ್ ಸ್ರವಿಸುವಿಕೆ ಕಡಿಮೆ ಮಾಡುತ್ತದೆ. ಯಕೃತ್ತಿನ ಕೊಬ್ಬನ್ನು ಕಡಿಮೆ ಮಾಡುತ್ತದೆ.
ಮಧುಮೇಹಿಗಳಿಗೆ ಹುರುಳಿ ಕಾಳು ಸೇವಿಸುವ ವಿಧಾನ ಹೀಗಿದೆ
ಹುರುಳಿ ಕಾಳು ಸಲಾಡ್
ಇಡೀ ಹುರುಳಿ ಕಾಳುಗಳು ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿರು ಮೆಣಸಿನಕಾಯಿ, ಉಪ್ಪು, ನಿಂಬೆ ಮತ್ತು ಕೊತ್ತಂಬರಿ ಸೊಪ್ಪಿನ ಜೊತೆಗೆ ಬೇಯಿಸಿ ತಿನ್ನಬಹುದು.
ಹುರುಳಿ ಕಾಳುಗಳು ಮೊಳಕೆ
ಹುರುಳಿ ಕಾಳುಗಳನ್ನು ನೀರಿನಲ್ಲಿ ನೆನೆಸಿ ಮೊಳಕೆಯೊಡೆಸಿ. ಸಣ್ಣದಾಗಿ ಕೊಚ್ಚಿದ ಈರುಳ್ಳಿ, ಹಸಿರು ಮೆಣಸಿನಕಾಯಿ, ಉಪ್ಪು, ನಿಂಬೆ ಮತ್ತು ಕೊತ್ತಂಬರಿ ಸೊಪ್ಪಿನ ಜೊತೆ ತಿನ್ನಿರಿ.
ಇದನ್ನೂ ಓದಿ: ಚಳಿಗಾಲದಲ್ಲಿ ಒಣ ಕೂದಲ ಸಮಸ್ಯೆಯೇ? ನಿಮ್ಮ ಕೇಶ ರಕ್ಷಣೆಗಾಗಿ ಹೀಗೆ ಮಾಡಿ
ಹುರುಳಿ ಕಾಳುಗಳು ದಾಲ್
ಹುರುಳಿ ಕಾಳುಗಳು ಉಪ್ಪು ಮತ್ತು ಅರಿಶಿನದೊಂದಿಗೆ ಬೇಯಿಸಿ. ಇದಕ್ಕೆ ಸಾಸಿವೆ ಎಣ್ಣೆ, ಇಂಗು, ಜೀರಿಗೆ ಹಾಕಿ ಸೇವಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ