Diabetes: ಡಯಾಬಿಟಿಕ್ ರೆಟಿನೋಪಥಿಯಲ್ಲಿ ಚಯಾಪಚಯ ನಿಯಂತ್ರಣ – ನಿಮ್ಮ ಆರೋಗ್ಯದ ಕಾಳಜಿ ವಹಿಸಿ

Diabetic Retinopathy: 2021 ರಲ್ಲಿ Novartis ಸಹಯೋಗದೊಂದಿಗೆ Network18, 'Netra Suraksha' - ಡಯಾಬಿಟೀಸ್ ವಿರುದ್ಧ ಭಾರತ ಉಪಕ್ರಮವನ್ನು ಪ್ರಾರಂಭಿಸುವುದರ ಹಿಂದಿರುವ ಪ್ರೇರಣೆ ಇದೇ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ವಯಸ್ಸಾಗುತ್ತಿರುವುದರ ಒಂದು ಸಾಮಾನ್ಯ ಸೈಡ್ ಎಫೆಕ್ಟ್ ಎಂದರೆ ದೃಷ್ಟಿ ಸಂಬಂಧಿ ಸಮಸ್ಯೆಗಳು, ಆದರೆ, ನೀವು ಡಯಾಬಿಟೀಸ್ ಇರುವವರಾಗಿದ್ದರೆ ಅದು ಇತರ ಸಮಸ್ಯೆಗಳನ್ನು ಸೂಚಿಸಬಹುದು. ಡಯಾಬಿಟೀಸ್‌ನ ಸಮಸ್ಯೆಗಳಲ್ಲಿ ಅತಿ ಕಡಿಮೆ ತಿಳಿದಿರುವ ಸಂಗತಿಗಳಲ್ಲಿ ಒಂದು ಎಂದರೆ ಅದು ಡಯಾಬಿಟಿಕ್ ರೆಟಿನೋಪಥಿ (DR) – ಡಯಾಬಿಟಿಸ್‌ನಿಂದ ಉಂಟಾಗುವ ರೆಟಿನಾದ ಎಲ್ಲಾ ತೊಂದರೆಗಳಿಗೆ ಒಂದೇ ನುಡಿಗಟ್ಟು ಇದು ಎನ್ನಬಹುದು. ನಿಯಂತ್ರಿಸದೇ ಹಾಗೆಯೇ ಬಿಟ್ಟರೆ ಅದು ದೃಷ್ಟಿಹೀನತೆಗೂ ಕಾರಣವಾಗಬಹುದು1.

  ಸಾಕಷ್ಟು ಲಕ್ಷಣಗಳು ವಯೋಸಂಬಂಧಿ ಜೀವಕೋಶಗಳ ಅವನತಿಯಂತೆ ಕಂಡುಬರುವುದರಿಂದಾಗಿ ಡಯಾಬಿಟಿಕ್ ರೆಟಿನೋಪಥಿಯ ರೋಗನಿರ್ಣಯ ಮಾಡುವುದು ಕಷ್ಟ, ಹಾಗಿದ್ದರೂ, ಇದಕ್ಕೆ ಸಂಬಂಧಿಸಿದ ನಿರ್ದಿಷ್ಟ ಲಕ್ಷಣಗಳು ಇದ್ದು, ಡಯಾಬಿಟೀಸ್ ಇರುವವರು ಮತ್ತು ಅವರ ಕಾಳಜಿ ವಹಿಸುವವರು ಆ ಬಗ್ಗೆ ಎಚ್ಚರವಹಿಸಬೇಕಿದೆ. ನೀವು ಅಥವಾ ನಿಮ್ಮ ಪ್ರೀತಿಪಾತ್ರರಲ್ಲಿ ಈ ಲಕ್ಷಣಗಳು ಕಂಡುಬಂದರೆ ಆಗ ನೀವು ವೈದ್ಯರನ್ನು ಕಾಣಬೇಕು1.

  ಒಮ್ಮೆ ನೀವು DR ರೋಗನಿರ್ಣಯಕ್ಕೆ ಒಳಗಾಗಿದ್ದರೂ, ಕಾಯಿಲೆಯು ಮತ್ತಷ್ಟು ವೃದ್ಧಿಸದೇ ಇರಲು ನೀವು ಮಾಡಬಹುದಾದದ್ದು ಬಹಳಷ್ಟು ಇದೆ. ದೇಹವನ್ನು ಸಂಪೂರ್ಣವಾಗಿ ಪರಿಗಣಿಸಿದರೆ, ಅದರಲ್ಲಿರುವ ಹಲವಾರು ವ್ಯವಸ್ಥೆಗಳು ಒಂದು ಮತ್ತೊಂದರೊಂದಿಗೆ ಸಂಪರ್ಕ ಹೊಂದಿರುತ್ತವೆ. ಈ ಸಂಬಂಧವನ್ನು ನೀವು ನೋಡದೇ ಇದ್ದರೂ ಸಹ ನಿಮ್ಮ ಕಿಡ್ನಿಯಲ್ಲಿ ಏನಾಗುತ್ತದೆ ಎಂಬುದು ನಿಮ್ಮ ರೆಟಿನಾದಲ್ಲಿ ಏನಾಗುತ್ತದೆ ಎಂಬುದಕ್ಕೆ ಮುಖ್ಯವಾಗುತ್ತದೆ. ಕಳೆದ ಹಲವು ವರ್ಷಗಳಿಂದ, DR ಬಗೆಗಿನ ಸಂಶೋಧನೆಯು ರೋಗ ವೃದ್ದಿ ಮತ್ತು ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟೆರಾಲ್, ಡಯಾಬಿಟಿಕ್ ಕಿಡ್ನಿ ಕಾಯಿಲೆ, ರಕ್ತದ ಅಧಿಕ ಸಕ್ಕರೆ ಪ್ರಮಾಣ, ವಿಟಮಿನ್ ಹಾಗೂ ಖನಿಜಾಂಶಗಳ ಕೊರತೆ, ಜತೆಗೆ ವ್ಯಾವಾಯಮ ಇವುಗಳ ನಡುವಿನ ಹಲವಾರು ಸಂಬಂಧಗಳನ್ನು ತೆರೆದಿಟ್ಟಿದೆ2

  ಸಕ್ಕರೆ ಪ್ರಮಾಣದ ಏರಿಳಿತದ ನಿಯಂತ್ರಣ

  ಡಯಾಬಿಟೀಸ್ ಇರುವವರು ಸಾಮಾನ್ಯವಾಗಿ ಸಕ್ಕರೆ ಪ್ರಮಾಣದ ಏರಿಳಿತವನ್ನು ನಿಯಂತ್ರಿಸುವ ಕೆಲಸ ಮಾಡುತ್ತಾರೆ. ಸಂತಸದ ಸಂಗತಿ ಏನೆಂದರೆ, ಇದು DR ವೃದ್ಧಿಸುವ ಮತ್ತು ಅದರ ಬೆಳವಣಿಗೆಯ ಅಪಾಯವನ್ನು ಸಹ ತಗ್ಗಿಸಲು ಸಹಾಯ ಮಾಡುತ್ತದೆ. 1% ರಷ್ಟು HbA1c ಕಡಿಮೆಯಾದರೂ ಸಹ ಅದು DR ವೃದ್ಧಿಸುವಿಕೆಯನ್ನು 35% ರಷ್ಟು, ಕಾಯಿಲೆಯ ಉಲ್ಬಣಿಸುವಿಕೆಯನ್ನು 15–25% ರಷ್ಟು, ದೃಷ್ಟಿಹೀನತೆಯನ್ನು 25% ರಷ್ಟು ಮತ್ತು ಕುರುಡುತನ ಉಂಟಾಗುವುದನ್ನು 15% ರಷ್ಟು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ3.

  ಸಕ್ಕರೆ ಪ್ರಮಾಣವು ಬದಲಾಗುವುದರಿಂದಾಗಿ ದಿನದಲ್ಲಿ ಹಲವಾರು ಬಾರಿ ಸಕ್ಕರೆ ಪ್ರಮಾಣದ ಪರೀಕ್ಷೆ ಮಾಡಬೇಕು ಎಂದು NHS UK ಶಿಫಾರಸು ಮಾಡಿದೆ. ಒಂದು ವೇಳೆ ನೀವು ಮನೆಯಲ್ಲಿ ರಕ್ತದ ಸಕ್ಕರೆ ಪ್ರಮಾಣವನ್ನು ಪರೀಕ್ಷಿಸುವುದಾದರೆ, ಅದು 4 ರಿಂದ 7mmol/l ಇರಬೇಕು. ಡಯಾಬಿಟೀಸ್ ಇರುವವರಾದರೆ, ನಿಮ್ಮ ಸರಾಸರಿ ರಕ್ತದ ಸಕ್ಕರೆ ಪ್ರಮಾಣ ಅಥವಾ HbA1c, 48mmol/mol ಅಥವಾ 6.5% ಇರಬೇಕು4.

  ರಕ್ತದೊತ್ತಡ ನಿಯಂತ್ರಣ

  ನಿಮಗೆ ಡಯಾಬಿಟಿಸ್ ಇದ್ದರೆ, ನಿಮ್ಮ ರಕ್ತದೊತ್ತಡದ ರೀಡಿಂಗ್ 140/80mmHg ಗಿಂತ ಹೆಚ್ಚು ಇರದಂತೆ ನೋಡಿಕೊಳ್ಳಿ ಅಥವಾ ನೀವು ಕಣ್ಣಿನ ಹಾನಿಯಂತಹ ಡಯಾಬಿಟಿಸ್ ಸಮಸ್ಯೆಗಳನ್ನು ಹೊಂದಿದ್ದರೆ ಆಗ 130/80mmHg ಗಿಂತ ಕಡಿಮೆ ಇರಬೇಕು ಎಂದು NHS ಶಿಫಾರಸು ಮಾಡಿದೆ4. BP 180/100 mmHg ಮತ್ತು BP 150/85 mmHg ಇರುವ ರೋಗಿಗಳ ನಡುವಿನ ಹೋಲಿಕೆಯಲ್ಲಿ ಎರಡನೇ ಗುಂಪಿನವರಲ್ಲಿ DR ಬೆಳವಣಿಗೆಯು 33% ರಷ್ಟು ಮತ್ತು ದೃಷ್ಟಿ ನಷ್ಟದಲ್ಲಿ 50% ರಷ್ಟು ಇಳಿಕೆ ಕಂಡುಬಂದಿದೆ3

  ರಕ್ತದಲ್ಲಿ ಲಿಪಿಡ್‌ಗಳ ಪ್ರಮಾಣ ನಿಯಂತ್ರಣ

  ನಾವು ಲಿಪಿಡ್‌ಗಳ ಬಗ್ಗೆ ಮಾತನಾಡುವುದಾದರೆ, ಕೊಲೆಸ್ಟೆರಾಲ್ ಪ್ರಮಾಣ, ಲೈಪೊಪ್ರೊಟೀನ್‌ಗಳು, ಕೈಲೊಮೈಕ್ರಾನ್‌ಗಳು, VLDL, LDL, ಅಪೊಲೈಪೊಪ್ರೊಟೀನ್‌ಗಳು ಮತ್ತು HDL ಕುರಿತು ವಿಶೇಷವಾಗಿ ಒಳಗೊಳ್ಳಬೇಕಾಗುತ್ತದೆ3. ಆರೋಗ್ಯಯುತ ಒಟ್ಟಾರೆ ಕೊಲೆಸ್ಟೆರಾಲ್ ಪ್ರಮಾಣವು 4mmol/l ಗಿಂತ ಕಡಿಮೆ ಇರಬೇಕು ಎಂದು NHS ಶಿಫಾರಸು ಮಾಡುತ್ತದೆ4

  ಹೆಚ್ಚಳವಾದ ಸೀರಮ್ ಲಿಪಿಡ್ ಪ್ರಮಾಣಗಳು ‘ಹಾರ್ಡ್ ಎಕ್ಸುಡೇಟ್ಸ್‌ (hard exudates)’ ಎಂದು ಕರೆಯಲಾಗುವ DR ಸಮಸ್ಯೆಯ ನಿರ್ದಿಷ್ಟ ಅಪಾಯಕ್ಕೆ ಸಂಬಂಧಿಸಿವೆ. ಅಧಿಕ ಸೀರಮ್ ಲಿಪಿಡ್ ಪ್ರಮಾಣಗಳನ್ನು ಕಡಿಮೆ ಮಾಡಿಕೊಳ್ಳುವುದರಿಂದ ಡಯಾಬಿಟಿಕ್ ರೆಟಿನೋಪಥಿ ಇರುವವರಲ್ಲಿ ಈ ಹಾರ್ಡ್ ಎಕ್ಸುಡೇಟ್ಸ್‌ನ ಅಪಾಯ ಕಡಿಮೆ ಇರುತ್ತದೆ ಎಂದು ಕಂಡುಬಂದಿದೆ5. ಹಾಗಾಗಿ, ಒಂದು ವೇಳೆ ನಿಮ್ಮ ಸೀರಮ್ ಲಿಪಿಡ್‌ಗಳು ಈಗ ಹೆಚ್ಚು ಇದ್ದರೆ, ಇಂದೇ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ನಿಮ್ಮ ದೃಷ್ಟಿಗೆ ಬದಲಾವಣೆ ಉಂಟು ಮಾಡಬಹುದು. 

  ಬೊಜ್ಜು, ದೈಹಿಕ ಚಟುವಟಿಕೆ ಹಾಗೂ DR

  ಬೊಜ್ಜು ಮತ್ತು ಡಯಾಬಿಟೀಸ್ ಒಂದಕ್ಕೊಂದು ಬೆಸೆದುಕೊಂಡಿರುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಈಗ, ಇದನ್ನು ಈಗ ವಿಜ್ಞಾನವೂ ಬೆಂಬಲಿಸಿದೆ. ಟೈಪ್ 2 ಡಯಾಬಿಟೀಸ್ ಇರುವವರಲ್ಲಿ ಇರುವ ಬೊಜ್ಜು DR ಉಂಟಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಮೆಟಾ ವಿಶ್ಲೇಷಣೆಯು ತೋರಿಸಿದೆ3.

  ಖುಷಿಯ ವಿಷಯ ಏನೆಂದರೆ ದೈಹಿಕ ಚಟುವಟಿಕೆಲ್ಲಿನ ಹೆಚ್ಚಳವು DR ವೃದ್ಧಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ! ಟೈಪ್ 2 ಡಯಾಬಿಟೀಸ್ ಇರುವವರಲ್ಲಿ ಬರೀ ಹೆಚ್ಚಿನ ಪ್ರಮಾಣದ ದೈಹಿಕ ಚಟುವಟಿಕೆಯು DR ಉಂಟಾಗುವುದನ್ನು ಕಡಿಮೆ ಮಾಡಲು ಸ್ವತಂತ್ರವಾಗಿ ಸಂಯೋಜಿಸುವುದಿಲ್ಲ, ಬದಲಾಗಿ ವಾರದ ಐದು ದಿನಗಳು ಪ್ರತಿ ದಿನ ಕಡಿಮೆ ಎಂದರೂ 30 ನಿಮಿಷಗಳ ದೈಹಿಕ ಚಟುವಟಿಕೆಯು DR ವೃದ್ಧಿಸುವಿಕೆಯ ಅಪಾಯವನ್ನು 40% ರಷ್ಟು ಕಡಿಮೆ ಮಾಡಬಹುದು3.

  DR ನಿಯಂತ್ರಿಸಲು ಸಹಾಯ ಮಾಡುವ ಡಯಟ್ ಮತ್ತು ಆಹಾರ

  ತಮ್ಮ ಆಹಾರ ಪದ್ಧತಿಯಲ್ಲಿನ ಸುಧಾರಣೆಗಳ ಮೂಲಕ DR ವಿರುದ್ಧ ಹೋರಾಡಲು ಬಯಸುವವರಿಗೆ ಸಾಕಷ್ಟು ಆಯ್ಕೆಗಳಿವೆ. ಹಣ್ಣುಗಳು, ತರಕಾರಿಗಳು, ಡೈರಿ ಉತ್ಪನ್ನಗಳು, ಬೇಳೆಕಾಳು ಮತ್ತು ಇತರ ಆಹಾರ ಪದಾರ್ಥಗಳ ಮಿಶ್ರಣವನ್ನು ನಾವೆಲ್ಲರೂ ಪ್ರಯತ್ನಿಸುತ್ತೇವೆ, ಆದರೆ ಹಾಗೂ ಇತರ ದೀರ್ಘಾವಧಿ ಕಾಯಿಲೆಗಳ ವಿರುದ್ಧ ಹೋರಾಡಲು ಪರಿಣಾಮಕಾರಿ ಎಂದು ತೋರಿಸಿರುವ ಕೆಲವು ನಿರ್ದಿಷ್ಟ ಡಯಟ್‌ಗಳು ಜತೆಗೆ ಕೆಲವು ಆಹಾರ ಪದಾರ್ಥಗಳು ಇವೆ.

  1. ಎಕ್ಸ್‌ಟ್ರಾ ವರ್ಜಿನ್ ಆಲಿವ್ ಆಯಿಲ್‌ನಿಂದ ತಯಾರಿಸಲಾದ ಮೆಡಿಟರೇನಿಯನ್ ಡಯಟ್ ಅಥವಾ ಕಡಿಮೆ-ಕೊಬ್ಬಿನಂಶ ಇರುವ ಬೀಜಗಳು (ನಟ್ಸ್) ರೆಟಿನೋಪಥಿಯ ಅಪಾಯವನ್ನು 40% ರಷ್ಟು ಕಡಿಮೆ ಮಾಡುತ್ತವೆ! 3

  2. ವಾರಕ್ಕೆ ಕನಿಷ್ಠ ಎರಡು ಬಾರಿ ಆಯ್ಲಿ ಫಿಶ್ (oily fish) ಸೇವಿಸುವುದರಿಂದ ರೆಟಿನೋಪಥಿಯ ಅಪಾಯವು ಸುಮಾರು 60% ರಷ್ಟು ಕಡಿಮೆ ಆಗುತ್ತದೆ3.

  3. ಹಲವಾರು ತರಕಾರಿಗಳು, ಹಣ್ಣುಗಳು ಮತ್ತು ಬೀಜಗಳು ಖನಿಜಾಂಶಗಳು, ಪಾಲಿಫಿನಾಲ್ಸ್ ಮತ್ತು ಇತರ ಫೈಟೊಕೆಮಿಕಲ್‌ಗಳನ್ನು ಒಳಗೊಂಡಿದ್ದು ಅವು ಆಕ್ಸಿಡೇಟಿವ್ ಸ್ಟ್ರೆಸ್ (oxidative stress), ಉರಿಯೂತ ಮತ್ತು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತವೆ. ವಾಸ್ತವವಾಗಿ, ಫ್ಲೇವನಾಯ್ಡ್‌ಗಳು ಹೆಚ್ಚಾಗಿ ಇರುವ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ಡಯಾಬಿಟಿಕ್ ರೆಟಿನೋಪಥಿ ಉಂಟಾಗುವ ಅಪಾಯವನ್ನು ಕಡಿಮೆ ಮಾಡಬಹುದು3.


  ವಿಟಮಿನ್ ಮತ್ತು ಖನಿಜಾಂಶದ ಕೊರತೆ

  ನಾವೆಲ್ಲರೂ ಚೆನ್ನಾಗಿ ತಿನ್ನಲು ಪ್ರಯತ್ನಿಸುತ್ತೇವೆ. ಅಡುಗೆ ಮಾಡಬೇಕು ಎನ್ನು ದೈನಂದಿನ ಒತ್ತಡ ಹಾಗೂ ಹೊರಗಿನ ಆಹಾರ ಆರ್ಡರ್ ಮಾಡುವುದು, ನಮ್ಮ ನಗರಗಳಲ್ಲಿ ದೊರೆಯುವ ಆಹಾರದ ಗುಣಮಟ್ಟ, ಕೆಲವು ಆಹಾರ ಪದಾರ್ಥಗಳ ಬಗೆಗಿನ ನಮ್ಮ ಇಷ್ಟ ಕಷ್ಟಗಳು ಕೆಲವು ಕೊರತೆಗಳನ್ನು ಉಂಟು ಮಾಡಬಹುದು. ನಿಯಮಿತ ರಕ್ತ ಪರೀಕ್ಷೆ ಹಾಗೂ ವೈದ್ಯರ ಭೇಟಿಯು ಇ ಕೊರತೆಗಳನ್ನು ತುಂಬಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ ಹಾಗೂ ನಿಮ್ಮ ದೃಷ್ಟಿಯನ್ನಷ್ಟೇ ಅಲ್ಲದೆ, ದೇಹದ ಇತರ ಹಲವಾರು ಅಂಗಾಂಗ ವ್ಯವಸ್ಥೆಗಳನ್ನೂ ಸುರಕ್ಷಿತವಾಗಿರಿಸುತ್ತದೆ.

  ವಿಟಮಿನ್ B1 (ಥಯಮಿನ್): ಹೆಚ್ಚಿನ ಡೋಸ್‌ಗಳ (50–100 mg/day) ಥಯಮಿನ್ ಪೂರಕಗಳು ಸುರಕ್ಷಿತ ಹಾಗೂ ನರಗಳ ರಕ್ಷಣೆ, DR ಮತ್ತು ಡಯಾಬಿಟಿಕ್ ನೆಫ್ರೊಪಥಿಯೂ ಸೇರಿದಂತೆ ಪ್ರಮುಖ-ಅಂಗಗಳ ಗಾಯಗಳ ಚಿಕಿತ್ಸೆ ಮತ್ತು ತಡೆಗಟ್ಟುವಿಕೆಯಲ್ಲಿ ಉಪಯುಕ್ತವಾಗಿವೆ3.

  ವಿಟಮಿನ್ D: ಉತ್ತಮ ಪ್ರಮಾಣದ ವಿಟಮಿನ್ D ಅನ್ನು ನಿರ್ವಹಿಸುವುದು DR ನ ಅಪಾಯ ಹಾಗೂ ತೀವ್ರತೆಯನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದಷ್ಟೇ ಅಲ್ಲ, ಮೇದೋಜೀರಕ ಗ್ರಂಥಿಯ (pancreas) ಸಮರ್ಪಕ ಕಾರ್ಯನಿರ್ವಹಣೆಗೂ ಸಹಾಯ ಮಾಡುತ್ತದೆ ಹಾಗೂ ಅಥೆರೊಸ್ಕ್ಲೀರೋಸಿಸ್ (atherosclerosis), ಕಾರ್ಡಿಯೊವ್ಯಾಸ್ಕ್ಯುಲಾರ್ ಕಾಯಿಲೆ, ಟೈಪ್ 2 ಡಯಾಬಿಟೀಸ್ ಮತ್ತು ಅಧಿಕ ರಕ್ತದೊತ್ತಡದ ನಿಯಂತ್ರಣಕ್ಕೂ ಸಹಾಯ ಮಾಡುತ್ತದೆ3.

  ವಿಟಮಿನ್ E: ದಿನನಿತ್ಯ 1800 IU ಡೋಸ್‌ ವಿಟಮಿನ್ E ಪೂರಕವನ್ನು ಪೂರೈಸುವುದರಿಂದ ರೆಟಿನಾದಲ್ಲಿ ರಕ್ತ ಸಂಚಾರವು ಸುಧಾರಿಸುತ್ತದೆ ಎಂದು ಟೈಪ್ 1 ಡಯಾಬಿಟೀಸ್ ಇರುವವರಲ್ಲಿ 10 ವರ್ಷಗಳ ಕಾಲ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. DR ನಲ್ಲಿ ಹೆಚ್ಚಾಗಿ ಕಂಡು ಬರುವ ಆಕ್ಸಿಡೇಟಿವ್ ಸ್ಟ್ರೆಸ್ ಅನ್ನು ಸಹ ಇದು ಕಡಿಮೆ ಮಾಡುತ್ತದೆ3

  ಸತು (ಝಿಂಕ್): ಮೆಟಬಾಲಿಕ್ ಸಿಂಡ್ರೋಮ್, ಡಯಾಬಿಟೀಸ್, ಡಯಾಬಿಟಿಕ್ ಮೈಕ್ರೊವ್ಯಾಸ್ಕ್ಯುಲಾರ್ ಸಮಸ್ಯೆಗಳು ಹಾಗೂ DR ನಂತಹ ದೀರ್ಘಾವಧಿ ರೋಗಸ್ಥಿತಿಗಳು ಉಂಟಾಗುವುದಕ್ಕೆ ಸತು ಸಂಬಂಧಿಸಿದೆ3.

  ದೃಷ್ಟಿಹೀನತೆಯ ವಿರುದ್ಧ ಅತ್ಯಂತ ಪ್ರಬಲ ರಕ್ಷಣೆ: ನಿಯಮಿತ ತಪಾಸಣೆ

  ನಿರ್ದಿಷ್ಟವಾಗಿ ಡಯಾಬಿಟೀಸ್ ಮತ್ತು DR ವಿಷಯ ಬಂದಾಗ, ಉತ್ತಮ ಆರೋಗ್ಯ ನಿರ್ವಹಣೆಯು ಸರಿಯಾದ  ರೋಗನಿರ್ಣಯದೊಂದಿಗೆ ಆರಂಭವಾಗುತ್ತದೆ. ಅಲ್ಲದೆ, ಇನ್ಸುಲಿನ್ ಅಥವಾ ರಕ್ತದ ಅಧಿಕ ಸಕ್ಕರೆ ಪ್ರಮಾಣಕ್ಕೆ ಯಾವ ರೀತಿಯಲ್ಲಿಯೂ ಸಂಬಂಧವಿಲ್ಲವೇನೋ ಎನಿಸುವ ಸಮಸ್ಯೆಗಳನ್ನು ಡಯಾಬಿಟೀಸ್ ಉಂಟು ಮಾಡುತ್ತದೆ. ದೇಹದ ಹಲವಾರು ಅಂಗಾಂಗ ವ್ಯವಸ್ಥೆಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುವುದರಿಂದ ಹೀಗಾಗುತ್ತದೆ; ಏನು ತಪ್ಪಾಗಿದೆ ಎಂದು ಅರ್ಥಮಾಡಿಕೊಳ್ಳುವುದೇ ಸೂಕ್ತ ಕ್ರಮ ಕೈಗೊಳ್ಳಲು ಇರುವ ಮೊದಲ ಹೆಜ್ಜೆಯಾಗಿದೆ.   

  ರೋಗ ಉಲ್ಬಣಿಸಿದಾಗ ಮಾತ್ರವೇ DR ಲಕ್ಷಣಗಳು ಕಂಡುಬರುವುದರಿಂದ, DR ಅನ್ನು ತಡೆಗಟ್ಟುವ ಮುಂಜಾಗ್ರತೆ ಹಾಗೂ ನಿಯಮಿತ ತಪಾಸಣೆಯು ಮುಖ್ಯವಾಗುತ್ತದೆ. ವಿಶ್ವದಾದ್ಯಂತ 1980 ಮತ್ತು 2008 ರ ಅವಧಿಯಲ್ಲಿ ನಡೆಸಿದ 35 ಅಧ್ಯಯನಗಳ ವಿಶ್ಲೇಷಣೆಯನ್ನು ಆಧರಿಸಿ ಹೇಳುವುದಾರೆ, ರೆಟಿನಲ್ ಇಮೇಜ್‌ಗಳನ್ನು ಬಳಸಿ ಅಂದಾಜು ಮಾಡಿದಂತೆ ಡಯಾಬಿಟೀಸ್ ಇರುವವರಲ್ಲಿ 12% ರಷ್ಟು ದೃಷ್ಟಿಗೆ ತೊಂದರೆ ಮಾಡುವ DR ಇರುವುದೂ ಒಳಗೊಂಡಂತೆ DR ಸಂಭಾವ್ಯತೆಯು 35% ರಷ್ಟು ಇದೆ6. ಭಾರತದಲ್ಲಿ, 2045 ರ ವೇಳೆಗೆ ಡಯಾಬಿಟೀಸ್ ಇರುವವರ ಸಂಖ್ಯೆಯು 134 ಮಿಲಿಯನ್‌ಗೆ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದ್ದು, DR ಅನ್ನು ಸಾರ್ವಜನಿಕ ಆರೋಗ್ಯದ ಪ್ರಮುಖ ಸವಾಲನ್ನಾಗಿ ಮಾಡಿದೆ. 

  ಹಾಗಿದ್ದರೂ, ಒಮ್ಮೆ ಅನ್ನು ಪತ್ತೆಹಚ್ಚಿದರೆ, ನಿಮ್ಮ ಆರೋಗ್ಯವನ್ನು ನಿರ್ವಹಿಸಲು ಹಾಗೂ ನಿಮ್ಮ ದೃಷ್ಟಿಗೆ ಆಗುವ ಇನ್ನಷ್ಟು ಹಾನಿಯನ್ನು ತಡೆಯಲು ನೀವು ಮತ್ತು ನಿಮ್ಮ ವೈದ್ಯರು ಸ್ಪಷ್ಟ ಯೋಜನೆಯನ್ನು ರೂಪಿಸಬಹುದು. ಇದೆಲ್ಲವನ್ನೂ ಮಾಡಲು DR ಅಸ್ತಿತ್ವದಲ್ಲಿದೆ ಎಂಬುದರ ಅರಿವು ಅತ್ಯಗತ್ಯವಾಗಿದೆ ಹಾಗೂ ಅದಕ್ಕಾಗಿ ಪ್ರತಿಯೊಬ್ಬರೂ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು1.

  2021 ರಲ್ಲಿ Novartis ಸಹಯೋಗದೊಂದಿಗೆ Network18, 'Netra Suraksha' - ಡಯಾಬಿಟೀಸ್ ವಿರುದ್ಧ ಭಾರತ ಉಪಕ್ರಮವನ್ನು ಪ್ರಾರಂಭಿಸುವುದರ ಹಿಂದಿರುವ ಪ್ರೇರಣೆ ಇದೇ ಆಗಿದೆ. ಮೊದಲ ಸೀಸನ್‌ನಲ್ಲಿ, DR ಬಗ್ಗೆ ಜಾಗೃತಿ ಮೂಡಿಸಲು ವೈದ್ಯಕೀಯ ಕ್ಷೇತ್ರ, ನೀತಿ ನಿರೂಪಕರು ಮತ್ತು ಚಿಂತಕರಲ್ಲಿ ಅತ್ಯುತ್ತಮರನ್ನು ಜೊತೆಗೂಡಿಸಿತ್ತು. ಈ ವರ್ಷ, ದೇಶದಾದ್ಯಂತ ವ್ಯಕ್ತಿಗತ ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಮೂಲಕ ಈ ಉಪಕ್ರಮವು ಇನ್ನಷ್ಟು ಮುಂದಡಿ ಇಟ್ಟಿದೆ. 

  ಆರೋಗ್ಯ ಶಿಬಿರಗಳು ಯಾವಾಗ ಮತ್ತು ಎಲ್ಲಿ ನಡೆಯುತ್ತವೆ ಎಂಬ ಇತ್ತೀಚಿನ ಮಾಹಿತಿಯೊಂದಿಗೆ ಸೀಸನ್ 1 ರ ಜ್ಞಾನಭರಿತ ಲೇಖನಗಳು, ವಿವರಣಾತ್ಮಕ ವೀಡಿಯೊಗಳು ಮತ್ತು ಪ್ಯಾನೆಲ್ ಚರ್ಚೆಗಳನ್ನು Netra Suraksha ವೆಬ್‌ಸೈಟ್‌ನಲ್ಲಿ ( https://www.news18.com/netrasuraksha/ ) ಪಡೆಯಬಹುದು. ಡಯಾಬಿಟೀಸ್ ಇರುವ ಇತರರೊಂದಿಗೆ ಈ ಎಲ್ಲ ಮಾಹಿತಿಯನ್ನು ಹಂಚಿಕೊಳ್ಳಲು ನಮ್ಮೊಂದಿಗೆ ಕೈಜೋಡಿಸಿ ಹಾಗೂ ನೀವು ಸಹ ಸೂಕ್ತ ಜ್ಞಾನದೊಂದಿಗೆ ಸಿದ್ಧರಾಗಿರಿ. 

  ನೆನಪಿಡಿ, DR ನಿಂದ ಉಂಟಾಗುವ ದೃಷ್ಟಿ ನಷ್ಟವನ್ನು ಆರಂಭದಲ್ಲೇ ತೊಡೆದುಹಾಕಬಹುದು. ನಿಮ್ಮ ಆರೋಗ್ಯದ ಬಗ್ಗೆ ಏನಾದರೂ ಕಾಳಜಿ ವಹಿಸುವುದಿದ್ದರೆ, ನಿಮ್ಮ ವೈದ್ಯರೊಂದಿಗಿನ ಸಮಾಲೋಚನೆಯ ನಂತರ ನಿಮ್ಮ ಆಹಾರ, ವ್ಯಾಯಾಮದ ಅಭ್ಯಾಸ ಮತ್ತು ಜೀವನಶೈಲಿಯಲ್ಲಿ ಎಲ್ಲಾ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಿ. ನಿಧಾನ ಮತ್ತು ನಿರಂತರತೆಯೇ ಜಯ ತಂದುಕೊಡುತ್ತದೆ ಅಲ್ಲವೇ!

  ಉಲ್ಲೇಖ:

  1. Diabetic Retinopathy. Available [online] at URL: https://www.nei.nih.gov/learn-about-eye-health/eye-conditions-and-diseases/diabetic-retinopathy. Accessed on August 3rd 2022.

  2. Saini DC, Kochar A, Poonia R. Clinical correlation of diabetic retinopathy with nephropathy and neuropathy. Indian J Ophthalmol 2021;69:3364-8. 

  3. Bryl A, Mrugacz M, Falkowski M, Zorena K. The Effect of Diet and Lifestyle on the Course of Diabetic Retinopathy-A Review of the Literature. Nutrients. 2022 Mar 16;14(6):1252.

  4. Diabetic Retinopathy Prevention. Available [online] at URL: https://www.nhs.uk/conditions/diabetic-retinopathy/prevention/. Accessed on August 3rd 2022.

  5. Chew EY, Klein ML, Ferris FL, et al. Association of Elevated Serum Lipid Levels With Retinal Hard Exudate in Diabetic Retinopathy: Early Treatment Diabetic Retinopathy Study (ETDRS) Report 22Arch Ophthalmol.1996;114(9):1079–1084.

  6. Yau JW, et al. Meta-Analysis for Eye Disease (META-EYE) Study Group. Global prevalence and major risk factors of diabetic retinopathy. Diabetes Care. 2012 Mar;35(3):556-64.

  7. Nanditha A, et al. Secular TRends in DiabEtes in India (STRiDE–I): Change in Prevalence in 10 Years Among Urban and Rural Populations in Tamil Nadu.Diabetes Care 2019;42:476–485

  Published by:Sandhya M
  First published: