ಮಧುಮೇಹ ರೋಗಿಗಳು (Diabetes Patients) ತಮ್ಮ ಆಹಾರ ಮತ್ತು ಜೀವನಶೈಲಿ (Food And Lifestyle) ಬಗ್ಗೆ ಹೆಚ್ಚು ವಿಶೇಷ ಕಾಳಜಿ (Special Care) ತೆಗೆದುಕೊಳ್ಳಬೇಕಾಗುತ್ತದೆ. ಮಧುಮೇಹಿಗಳು ತಾವು ತಿನ್ನುವ ಮತ್ತು ಕುಡಿಯುವ ಪದಾರ್ಥಗಳ ಬಗ್ಗೆ ತಿಳಿದಿರಬೇಕು. ಯಾಕಂದ್ರೆ ಆಹಾರದಲ್ಲಿ ಮಾಡುವ ಚಿಕ್ಕ ತಪ್ಪು ಸಹ ಮಾರಕವಾಗಿ ಪರಿಣಮಿಸುತ್ತದೆ. ಹಾಗಾಗಿ ಮಧುಮೇಹಿಗಳು ಆರೋಗ್ಯಕರ ಜೀವನ ನಡೆಸೋಕೆ ತಾವು ತಿನ್ನುವ ಮತ್ತು ಕುಡಿಯುವ ವಿಚಾರದಲ್ಲಿ ಎಷ್ಟು ಕಾಳಜಿ ತೆಗೆದುಕೊಂಡ್ರೂ ಕಡಿಮೆನೇ. ರಕ್ತದ ಸಕ್ಕರೆ ಮಟ್ಟ ಹೆಚ್ಚದಂತೆ ನೋಡಿಕೊಳ್ಳುವುದು, ಜಾಗ್ರತೆ ವಹಿಸುವುದು ಮುಖ್ಯವಾಗುತ್ತದೆ. ಇಲ್ಲದಿದ್ದರೆ ಇದು ಹಲವು ರೋಗ್ಯ ಸಮಸ್ಯೆ ಹೆಚ್ಚಿಸುತ್ತದೆ. ಮಧುಮೇಹಿಗಳು ಪ್ರೊಟೀನ್ ಸಮೃದ್ಧ ಆಹಾರ ಸೇವನೆ ಮಾಡ್ಬೇಕು.
ಮಧುಮೇಹಿಗಳು ಪ್ರೊಟೀನ್ ಸಮೃದ್ಧ ಆಹಾರ ಸೇವಿಸಬೇಕು
ಮಧುಮೇಹಿಗಳು ಪ್ರೊಟೀನ್ ಸಮೃದ್ಧ ಆಹಾರ ತಿನ್ನುವುದು ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತೆ. ಮಧುಮೇಹ ನಿಯಂತ್ರಿಸುವ ಮಾರ್ಗಗಳಲ್ಲಿ ಪ್ರೊಟೀನ್ ಫುಡ್ ಸೇವನೆ ಕೂಡ ಒಂದಾಗಿದೆ. ಆರೋಗ್ಯಕರ ಆಹಾರ ಮತ್ತು ವ್ಯಾಯಾಮ ಮಾಡುವುದು ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗೆಯೇ ಪ್ರೋಟೀನ್ ಸಮೃದ್ಧ ಆಹಾರ ಪದಾರ್ಥಗಳ ಸೇವನೆ ಪ್ರಯೋಜನ ತಂದು ಕೊಡುತ್ತದೆ.
ಅಂದ ಹಾಗೇ ಮಧುಮೇಹಿಗಳು ಪ್ರೊಟೀನ್ ಸಮೃದ್ಧ ಆಹಾರ ಸೇವಿಸಿದರೆ ಅದು ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು ಮತ್ತು ಇನ್ಸುಲಿನ್ ಪ್ರತಿರೋಧ ಸುಧಾರಿಸಲು ಸಹಕಾರಿ ಆಗಿದೆ. ಪ್ರೋಟೀನ್ ಸೇವನೆ ಮಧುಮೇಹ ಕಾಯಿಲೆಯನ್ನು ಉತ್ತಮವಾಗಿ ನಿಯಂತ್ರಿಸಲು ಸಹಕಾರಿ ಎನ್ನುತ್ತಾರೆ ತಜ್ಞರು.
ಪ್ರೋಟೀನ್ ಆಹಾರ ಪದಾರ್ಥ ಎಷ್ಟು ಪ್ರಮಾಣದಲ್ಲಿ ಬೇಕು?
ಮಧುಮೇಹ ರೋಗಿಗಳು ಅಧಿಕ ಪ್ರೊಟೀನ್ ಇರುವ ಆಹಾರ ಸೇವಿಸಿದರೆ ಗ್ಲೂಕೋಸ್ ನಿಯಂತ್ರಣಕ್ಕೆ ಅಗತ್ಯವಾದ ಇನ್ಸುಲಿನ್ ಪ್ರತಿರೋಧ ಸುಧಾರಿಸಲು ಪ್ರೊಟೀನ್ ಅವಶ್ಯಕವಾಗಿದೆ.
ಮಧುಮೇಹ ರೋಗಿಗಳಿಗೆ ದಿನಕ್ಕೆ 1 ಗ್ರಾಂ ಅಥವಾ ಕೆಜಿ ದರದಲ್ಲಿ ಪ್ರೋಟೀನ್ ಬೇಕಾಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ಇನ್ನು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುವ ವ್ಯಕ್ತಿಗೆ ದಿನಕ್ಕೆ 0.8 ಗ್ರಾಂ ಅಥವಾ ಕೆಜಿ ದರದಲ್ಲಿ ಪ್ರೋಟೀನ್ ಅಗತ್ಯವಿದೆ.
ಕೋಳಿಯಲ್ಲಿದೆ ಪ್ರೊಟೀನ್
ಮಾಂಸಾಹಾರಿ ಮಧುಮೇಹ ರೋಗಿಗಳು ಚಿಕನ್ ಮತ್ತು ಟರ್ಕಿಯನ್ನು ಆಹಾರದಲ್ಲಿ ಸೇರಿಸಿ. ಚಿಕನ್ ಮತ್ತು ಟರ್ಕಿಯನ್ನು ಬೇಯಿಸಿ, ಸುಟ್ಟು ಸೇವಿಸಿ. ಎಣ್ಣೆಯಲ್ಲಿ ಕರಿದು ಸೇವಿಸಬೇಡಿ.
ಮೊಟ್ಟೆ ಸೇವನೆ
ಮಧುಮೇಹಿಗಳು ಸಂಪೂರ್ಣ ಮೊಟ್ಟೆ ತಿನ್ನಬೇಕು. ಇದು ಕೊಲೆಸ್ಟ್ರಾಲ್ ಹೆಚ್ಚಿಸುವುದಿಲ್ಲ. ರಕ್ತದ ಸಕ್ಕರೆ ಮಟ್ಟ ಹೆಚ್ಚಿಸುವುದಿಲ್ಲ.
ದ್ವಿದಳ ಧಾನ್ಯಗಳ ಸೇವನೆ
ಬೀನ್ಸ್ ಮತ್ತು ಬೇಳೆಕಾಳು ಕೆಲವು ಕಾರ್ಬೋಹೈಡ್ರೇಟ್ ಹೊಂದಿದೆ. ಆದ್ರೆ ಅವು ಪ್ರೋಟೀನ್ ಮತ್ತು ಫೈಬರ್ ಹೊಂದಿವೆ. ನಿಯಮಿತ ಸೇವನೆ ಮಾಡಿದ್ರೆ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು ಸಹಕಾರಿ.
ಮೀನು ಸೇವನೆ
ಒಮೆಗಾ-3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧ ಮೀನುಗಳಾದ ಸಾಲ್ಮನ್ ಮತ್ತು ಅಲ್ಬಾಕೋರ್ ಟ್ಯೂನ ಮೀನು ಸೇವಿಸಿ. ಇದು ಹೃದಯವನ್ನು ಆರೋಗ್ಯಕರವಾಗಿಡುತ್ತದೆ. ಅವುಗಳಲ್ಲಿ ಪ್ರೋಟೀನ್ ಪ್ರಮಾಣ ಹೆಚ್ಚಿದೆ.
ಬೀಜಗಳು ಮತ್ತು ಒಣ ಹಣ್ಣುಗಳು
ಪ್ರೋಟೀನ್ ಪ್ರಮಾಣ ಪೂರೈಸಲು ನಿಯಮಿತವಾಗಿ ಒಣ ಹಣ್ಣು ಮತ್ತು ಬೀಜ ಸೇವಿಸಿ. ಬಾದಾಮಿ, ವಾಲ್ನಟ್ಸ್, ಒಣದ್ರಾಕ್ಷಿ, ಗೋಡಂಬಿ ಮತ್ತು ಪಿಸ್ತಾ ನೆನೆಸಿ, ತಿನ್ನಿ.
ಇದನ್ನೂ ಓದಿ: ಕ್ಯಾನ್ಸರ್ ಬಾರದಂತೆ ತಡೆಯಲು ಈ 7 ಪಥ್ಯ ಮತ್ತು ಸೂತ್ರಗಳನ್ನು ಅನುಸರಿಸಿ...!
ಹಾಲಿನ ಉತ್ಪನ್ನಗಳು
ಪ್ರೋಟೀನ್ ಕೊರತೆ ನಿವಾರಿಸಲು ಡೈರಿ ಉತ್ಪನ್ನಗಳು ಸಹಕಾರಿ. ಮೊಸರು, ಪನೀರ್, ಗ್ರೀಕ್ ಮೊಸರು ಮತ್ತು ಕಾಟೇಜ್ ಚೀಸ್ ಪ್ರೋಟೀನ್ ಒದಗಿಸುತ್ತದೆ. ರಕ್ತದ ಸಕ್ಕರೆ ನಿಯಂತ್ರಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ