• Home
  • »
  • News
  • »
  • lifestyle
  • »
  • Diabetes Foods: ಮಧುಮೇಹಕ್ಕೆ ಬ್ರೇಕ್​ ಹಾಕಲು ಈ ಆಹಾರ ಪದಾರ್ಥಗಳನ್ನು ತಿನ್ನಿ

Diabetes Foods: ಮಧುಮೇಹಕ್ಕೆ ಬ್ರೇಕ್​ ಹಾಕಲು ಈ ಆಹಾರ ಪದಾರ್ಥಗಳನ್ನು ತಿನ್ನಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಧುಮೇಹ ರೋಗಿಯು ತನ್ನ ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಮಧುಮೇಹ ಇದ್ದವರು ಆಗಾಗ್ಗೆ ಏನಾದರೂ ತಿನ್ನುತ್ತಾ ಇರಬೇಕಾಗುತ್ತದೆ. ಅದಕ್ಕಾಗಿ ನೀವು ಏನೇನೋ ತಿಂದು ಅನಾರೋಗ್ಯಕರ ಪದಾರ್ಥ ಸೇವನೆ ಮಾಡಬೇಡಿ. ಅನಾರೋಗ್ಯಕರ ಆಹಾರ ಸೇವನೆ ಸಕ್ಕರೆ ಮಟ್ಟ ಹೆಚ್ಚಿಸಬಹುದು. ಇದರ ಜೊತೆಗೆ ತೂಕ ಹೆಚ್ಚಾಗುವ ಮತ್ತು ಇತರ ಕಾಯಿಲೆಗಳ ಅಪಾಯವೂ ಹೆಚ್ಚಾಗುತ್ತದೆ.

ಮುಂದೆ ಓದಿ ...
  • Share this:

    ಇತ್ತೀಚಿನ ದಿನಗಳಲ್ಲಿ ಜನರ ಆಹಾರ ಪದ್ಧತಿ (Food Plan) ಮತ್ತು ಜಡ ಜೀವನಶೈಲಿಯಿಂದ (Bad Lifestyle) ಹಲವು ರೋಗಗಳು (Disease) ವೇಗವಾಗಿ ಹೆಚ್ಚುತ್ತಿವೆ. ಹಾಗಾಗಿ ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಸೂಕ್ತ ಬದಲಾವಣೆ ತರುವುದು ತುಂಬಾ ಮುಖ್ಯ. ಕೆಟ್ಟ ಜೀವನಶೈಲಿಯಿಂದ ಅಂಟಿಕೊಳ್ಳುವ ರೋಗವೆಂದರೆ ಮಧುಮೇಹ (Diabetes). ಇಂಟರ್ನ್ಯಾಷನಲ್ ಡಯಾಬಿಟಿಸ್ ಫೆಡರೇಶನ್ ವರದಿ ಪ್ರಕಾರ, ಭಾರತದಲ್ಲಿ 74 ಮಿಲಿಯನ್ ಜನರು (People) ಮಧುಮೇಹದಿಂದ ಬಳಲುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ವಿಶ್ವದ 442 ಮಿಲಿಯನ್ ಜನರು ಮಧುಮೇಹ ಕಾಯಿಲೆಗೆ ಗುರಿಯಾಗಿದ್ದಾರೆ. ಹಾಗಾಗಿ ನಿಮ್ಮ ಆಹಾರ ಮತ್ತು ದಿನಚರಿಯ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು.


    ಮಧುಮೇಹ ರೋಗಿಯು ಆಹಾರ ದಿನಚರಿ ಬಗ್ಗೆ ಕಾಳಜಿ ವಹಿಸಿ


    ಮಧುಮೇಹ ರೋಗಿಯು ತನ್ನ ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಮಧುಮೇಹ ಇದ್ದವರು ಆಗಾಗ್ಗೆ ಏನಾದರೂ ತಿನ್ನುತ್ತಾ ಇರಬೇಕಾಗುತ್ತದೆ. ಅದಕ್ಕಾಗಿ ನೀವು ಏನೇನೋ ತಿಂದು ಅನಾರೋಗ್ಯಕರ ಪದಾರ್ಥ ಸೇವನೆ ಮಾಡಬೇಡಿ. ಅನಾರೋಗ್ಯಕರ ಆಹಾರ ಸೇವನೆ ಸಕ್ಕರೆ ಮಟ್ಟ ಹೆಚ್ಚಿಸಬಹುದು. ಇದರ ಜೊತೆಗೆ ತೂಕ ಹೆಚ್ಚಾಗುವ ಮತ್ತು ಇತರ ಕಾಯಿಲೆಗಳ ಅಪಾಯವೂ ಹೆಚ್ಚಾಗುತ್ತದೆ.


    ಹಾಗಾಗಿ ಈ ಅನಾರೋಗ್ಯಕರ ಆಹಾರ ಸೇವನೆ ತಪ್ಪಿಸಲು ಆರೋಗ್ಯಕರ ತರಕಾರಿ ರಸ ಸೇವನೆ ಮಾಡಿ. ಮಧುಮೇಹಿಗಳು ಯಾವ ತರಕಾರಿಗಳನ್ನು ಸೇವಿಸುವುದು ಮುಖ್ಯ? ಈ ಬಗ್ಗೆ ಆಹಾರ ತಜ್ಞೆ ಗರಿಮಾ ನೀಡಿರುವ ಸಲಹೆ ಬಗ್ಗೆ ತಿಳಿಯೋಣ.


    ಇದನ್ನೂ ಓದಿ: ಚಳಿಗಾಲ ಆರಂಭವಾಗ್ತಾ ಇದೆ, ಈ ಪದಾರ್ಥಗಳನ್ನು ತಪ್ಪದೇ ಸೇವಿಸಿ


    ಮಧುಮೇಹ ನಿಯಂತ್ರಿಸುವ ತರಕಾರಿಗಳು


    ಸೌತೆಕಾಯಿ


    ಡಯೆಟಿಷಿಯನ್ ಗರಿಮಾ ಪ್ರಕಾರ, ಸೌತೆಕಾಯಿಯಲ್ಲಿ ಆಂಟಿ ಡಯಾಬಿಟಿಕ್ ಗುಣಗಳಿವೆ. ಇದು ಮಧುಮೇಹದಿಂದ ಬಳಲುತ್ತಿರುವ ವ್ಯಕ್ತಿಯ ರಕ್ತದ ಗ್ಲೂಕೋಸ್ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಮಧುಮೇಹದ ತೊಡಕು ತಡೆಗಟ್ಟುವಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು.


    ಟೊಮೆಟೊ


    ಟೊಮೆಟೊದಲ್ಲಿ ಕಂಡು ಬರುವ ನರಿಂಗಿನ್ ಎಂಬ ಸಂಯುಕ್ತವು ಆಂಟಿಡಯಾಬಿಟಿಕ್ ಆಗಿದೆ. ಇದು ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತದೆಟೊಮೆಟೊ ರಸವು ವಿಟಮಿನ್ ಸಿ, ವಿಟಮಿನ್ ಇ ಲೈಕೋಪೀನ್, ಬೀಟಾ-ಕ್ಯಾರೋಟಿನ್, ಫ್ಲೇವನಾಯ್ಡ್ , ಫೋಲೇಟ್ ಮತ್ತು ಪೊಟ್ಯಾಸಿಯಮ್ ಅನ್ನು ಹೊಂದಿದೆ.


    ಬೆಟ್ಟದ ನೆಲ್ಲಿಕಾಯಿ


    ಬೆಟ್ಟದ ನೆಲ್ಲಿಕಾಯಿ ಕೊರಿಲಾಜಿನ್, ಗ್ಯಾಲೊಟೆನಿನ್, ಗ್ಯಾಲಿಕ್ ಆಮ್ಲ ಮತ್ತು ಎಲಾಜಿಕ್ ಆಮ್ಲ ಎಂಬ ವಿಶೇಷ ಅಂಶಗಳಿಂದ ಸಮೃದ್ಧವಾಗಿದೆ. ಇದು ಉತ್ಕರ್ಷಣ ನಿರೋಧಕ ಮತ್ತು ಆಂಟಿಡಯಾಬಿಟಿಕ್ ಪರಿಣಾಮ ಹೊಂದಿದೆ. ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು ಸಹಕಾರಿ ಆಗಿದೆ.


    ಪಾಲಕ್ ಸೊಪ್ಪು


    ಪಾಲಕ್ ಸೊಪ್ಪಿನ ವೈಜ್ಞಾನಿಕ ಹೆಸರು ಸ್ಪೈನೇಶಿಯಾ ಒಲೆರೇಸಿಯಾ. ಇದು ಕಬ್ಬಿಣದ ಉತ್ತಮ ಮೂಲ. ಇದು ಮಧುಮೇಹಕ್ಕೆ ಮಾತ್ರವಲ್ಲದೆ ಒಟ್ಟಾರೆ ಆರೋಗ್ಯಕ್ಕೂ ಪ್ರಯೋಜನಕಾರಿ. ಹಲವು ಪೋಷಕಾಂಶಗಳನ್ನು ದೇಹಕ್ಕೆ ನೀಡುತ್ತದೆ.


    ಶುಂಠಿ


    ಶುಂಠಿ ಹೆಚ್ಚಿದ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ. ಇದು ಶುಂಠಿಯು ಇನ್ಸುಲಿನ್ ಸೀರಮ್ ನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮಧುಮೇಹ ನಿಯಂತ್ರಿಸುತ್ತದೆ.


    ಬಾಟಲ್ ಸೋರೆಕಾಯಿ


    ಸೋರೆಕಾಯಿಯು ಮಧುಮೇಹ ವಿರೋಧಿ ಗುಣ ಹೊಂದಿದೆ. ಇದು ರಕ್ತದ ಗ್ಲೂಕೋಸ್ ಅನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ.


    ಕೊತ್ತಂಬರಿ ಸೊಪ್ಪು


    ಕೊತ್ತಂಬರಿ ಸೊಪ್ಪು ರಕ್ತದ ಸಕ್ಕರೆ ಕಡಿಮೆ ಮಾಡುತ್ತದೆ. ಮಧುಮೇಹ ನಿಯಂತ್ರಿಸುತ್ತದೆ.


    ಏಳು ತರಕಾರಿಗಳಿಂದ ಆಂಟಿ ಡಯಾಬಿಟಿಕ್ ಜ್ಯೂಸ್ ತಯಾರಿಸುವುದು ಹೇಗೆ?


    ಒಂದು ಸೌತೆಕಾಯಿ, ಒಂದು ಟೊಮೆಟೊ, ಒಂದು ತುಂಡು ಶುಂಠಿ, ಕೊತ್ತಂಬರಿ ಸೊಪ್ಪು ಒಂದು ಕಪ್, ಸೋರೆಕಾಯಿ 200 ಗ್ರಾಂ, ಪಾಲಕ 100 ಗ್ರಾಂ, ಬೆಟ್ಟದ ನೆಲ್ಲಿಕಾಯಿ ಎರಡು.


    ಇದನ್ನೂ ಓದಿ: ಸಾಯಂಕಾಲ ಅಸಿಡಿಟಿ ಸಮಸ್ಯೆ ಹೆಚ್ಚಾಗಲು ಇದೇ ಕಾರಣವಂತೆ, ಇಲ್ಲಿದೆ ಮನೆಮದ್ದುಗಳು


    ತರಕಾರಿಗಳನ್ನು ಶುದ್ಧ ನೀರಿನಿಂದ ತೊಳೆಯಿರಿ. ನಂತರ ಕತ್ತರಿಸಿ ಜ್ಯೂಸರ್ ಸಹಾಯದಿಂದ ರಸವನ್ನು ಹೊರತೆಗೆಯಿರಿ. ಈಗ ಅದನ್ನು ಫಿಲ್ಟರ್ ಮಾಡಿ ಗ್ಲಾಸ್ ಗೆ ಹಾಕಿ ಕುಡಿಯಿರಿ. ಖಾಲಿ ಹೊಟ್ಟೆಯಲ್ಲಿ ಸೇವಿಸಬೇಡಿ.

    Published by:renukadariyannavar
    First published: