Diabetes And Food: ಯಾವ ಆಹಾರ ಮಧುಮೇಹ ರೋಗಿಗಳ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತೆ?

ನೈಸರ್ಗಿಕವಾಗಿ ಸಕ್ಕರೆ ಹೊಂದಿರುವ ಅನೇಕ ಆಹಾರ ಪದಾರ್ಥಗಳು ಇವೆ. ಮಧುಮೇಹದಿಂದ ಬಳಲುತ್ತಿದ್ದರೆ ಮೊದಲು ಆಹಾರದ ಬಗ್ಗೆ ಗಮನ ಹರಿಸಿ. ಕೆಲವು ಆರೋಗ್ಯಕರ ಸೂಪರ್‌ಫುಡ್‌ಗಳು ರಕ್ತದ ಸಕ್ಕರೆ ಮಟ್ಟ ಸಮತೋಲನದಲ್ಲಿಡಲು ಸಹಕಾರಿ. ಆಹಾರದ ಸರಿಯಾದ ಜೀರ್ಣಕ್ರಿಯೆಗೆ ಸಹಕಾರಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇತ್ತೀಚಿನ ದಿನಗಳಲ್ಲಿ ಮಧುಮೇಹ (Diabetes) ಸಾಮಾನ್ಯ ಸಮಸ್ಯೆಯಾಗಿ (Problem) ಮಾರ್ಪಟ್ಟಿದೆ. ಇದು ಎಲ್ಲಾ ವಯೋಮಾನದ ಜನರನ್ನು (People) ತನ್ನ ತೆಕ್ಕೆಗೆ ತೆಗೆದುಕೊಳ್ತಿದೆ. ಹಲವರನ್ನು ಈಗಾಗಲೇ ಮಧುಮೇಹ ಬಲಿಪಶುವನ್ನಾಗಿ ಮಾಡುತ್ತಿದೆ. ಅದೇ ವೇಳೆ ಮಧುಮೇಹದಿಂದ ಇತರೆ ಅನೇಕ ಕಾಯಿಲೆಗಳು (Disease) ಬರುವ ಸಾಧ್ಯತೆ ಸಹ ಹೆಚ್ಚು. ಹೀಗಾಗಿ ಮಧುಮೇಹ ನಿಯಂತ್ರಿಸುವುದು ಬಹಳ ಮುಖ್ಯ. ಮಧುಮೇಹದಲ್ಲಿ, ರಕ್ತದ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ದೇಹವು ಸಾಕಷ್ಟು ಇನ್ಸುಲಿನ್ ಉತ್ಪಾದಿಸಲು ಸಾಧ್ಯ ಆಗಲ್ಲ. ಇನ್ಸುಲಿನ್ ಒಂದು ಹಾರ್ಮೋನ್ ಆಗಿದೆ. ಅದು ರಕ್ತದ ಸಕ್ಕರೆ ಸಾಗಿಸುತ್ತದೆ. ಮತ್ತು ಶಕ್ತಿ ಉತ್ಪಾದಿಸಲು ಸಹಾಯ ಮಾಡುತ್ತದೆ.

    ನೈಸರ್ಗಿಕವಾಗಿ ಸಕ್ಕರೆ ಹೊಂದಿರುವ ಆಹಾರ ಪದಾರ್ಥಗಳು

    ನೈಸರ್ಗಿಕವಾಗಿ ಕಂಡುಬರುವ ಸಕ್ಕರೆ ಹೊಂದಿರುವ ಅನೇಕ ಆಹಾರ ಪದಾರ್ಥಗಳು ಇವೆ. ಹಾಗಾಗಿ ಉತ್ತಮ ಹಾಗೂ ಸರಿಯಾದ ಆಹಾರ ಪದ್ಧತಿ ಆಯ್ಕೆ ಮಾಡುವುದು ಮತ್ತು ನಿಯಮಿತವಾಗಿ ಫಾಲೋ ಮಾಡುವುದು ಬಹಳ ಮುಖ್ಯ. ವಿಶೇಷವಾಗಿ ನೀವು ಮಧುಮೇಹದಿಂದ ಬಳಲುತ್ತಿದ್ದರೆ ಮೊದಲು ನೀವು ನಿಮ್ಮ ಆಹಾರದ ಬಗ್ಗೆ ಗಮನ ಹರಿಸಿ.

    ಇಂದು ನಾವು ನಿಮಗೆ ಕೆಲವು ಆರೋಗ್ಯಕರ ಸೂಪರ್‌ಫುಡ್‌ಗಳ ಬಗ್ಗೆ ತಿಳಿಸಲಿದ್ದೇವೆ. ಮಧುಮೇಹ ರೋಗಿಗಳು ಅವುಗಳನ್ನು ತಮ್ಮ ಆಹಾರ ಪಟ್ಟಿಯಲ್ಲಿ ಸೇರಿಸುವುದು ಉತ್ತಮ ಪ್ರಯೋಜನ ತಂದು ಕೊಡುತ್ತದೆ. ಈ ಎಲ್ಲಾ ಸೂಪರ್‌ಫುಡ್‌ಗಳು ನಿಮ್ಮ ರಕ್ತದ ಸಕ್ಕರೆ ಮಟ್ಟ ಸಮತೋಲನದಲ್ಲಿಡಲು ಸಹಕಾರಿ.

    ಇದನ್ನೂ ಓದಿ: ಎಷ್ಟೇ ಆರೈಕೆ ಮಾಡಿದರೂ ನಿಲ್ಲದ ಕೂದಲು ಉದುರುವ ಸಮಸ್ಯೆಗೆ ಬ್ರೇಕ್ ಹಾಕುತ್ತೆ ಹಲೀಂ ಬೀಜ!

    ಮೊಸರು ಮತ್ತು ಬೆರ್ರಿ ಹಣ್ಣುಗಳು

    ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ನಡೆಸಿದ ಅಧ್ಯಯನದ ಪ್ರಕಾರ, ಬೆರ್ರಿಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ಉರಿಯೂತ ಕಡಿಮೆ ಮಾಡುತ್ತದೆ. ಹಣ್ಣುಗಳು ಫೈಬರ್ ನ ಉತ್ತಮ ಮೂಲ. ಫೈಬರ್ ಆಹಾರದ ಸರಿಯಾದ ಜೀರ್ಣಕ್ರಿಯೆಗೆ ಸಹಕಾರಿ. ಇದು ರಕ್ತದ ಸಕ್ಕರೆ ಮಟ್ಟ ಸಮತೋಲನದಲ್ಲಿಡುತ್ತದೆ.

    ಮೊಸರಿನಲ್ಲಿರುವ ಪ್ರೋಬಯಾಟಿಕ್ಗಳು ​​ದೇಹವು ಸಕ್ಕರೆ ಭರಿತ ಆಹಾರ ಚಯಾಪಚಯಗೊಳಿಸಲು ಸಹಕಾರಿ. ಪಬ್ಮೆಡ್ ಸೆಂಟ್ರಲ್ ಪ್ರಕಾರ ಮೊಸರಿನಲ್ಲಿರುವ ಪ್ರೋಟೀನ್ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ.

    ಪಾಪ್ ಕಾರ್ನ್ / ಗೋವಿನಜೋಳ

    ಪಾಪ್ ಕಾರ್ನ್ ಸೀಮಿತ ಪ್ರಮಾಣದ ಕ್ಯಾಲೋರಿ ಹೊಂದಿದೆ. ಇದನ್ನು ಮಧುಮೇಹ ರೋಗಿಗಳಿಗೆ ಆರೋಗ್ಯಕರ ತಿಂಡಿಯಾಗಿ ನೀಡಬಹುದು. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ನಡೆಸಿದ ಅಧ್ಯಯನದ ಪ್ರಕಾರ ಕಡಿಮೆ ಕ್ಯಾಲೋರಿ ಆಹಾರಗಳ ಸೇವನೆ ತೂಕ ನಿಯಂತ್ರಿಸುತ್ತದೆ. ಇದು ರಕ್ತದ ಸಕ್ಕರೆ ಮಟ್ಟ ಸಮತೋಲನದಲ್ಲಿಡುತ್ತದೆ.

    ಚಿಯಾ ಸೀಡ್ಸ್ ಪುಡಿಂಗ್

    ಫುಡ್ ಡಾಟಾ ಸೆಂಟ್ರಲ್ ಪ್ರಕಟಿಸಿದ ಮಾಹಿತಿಯ ಪ್ರಕಾರ ಚಿಯಾ ಬೀಜಗಳಲ್ಲಿ ಪ್ರೋಟೀನ್, ಫೈಬರ್ ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳಿವೆ. ಇದು ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ. ಚಿಯಾ ಬೀಜಗಳಲ್ಲಿ ಇರುವ ಫೈಬರ್ ಸಾಕಷ್ಟು ಪ್ರಮಾಣದ ನೀರನ್ನು ಹೀರುತ್ತದೆ. ಇದು ಜೀರ್ಣಕ್ರಿಯೆ ಪ್ರಕ್ರಿಯೆ ಸಮತೋಲನದಲ್ಲಿಡುತ್ತದೆ. ರಕ್ತದ ಸಕ್ಕರೆ ಬಿಡುಗಡೆ ಪ್ರಕ್ರಿಯೆ ನಿಧಾನಗೊಳಿಸುತ್ತದೆ.

    ಕಡಲೆಕಾಯಿ ಬೆಣ್ಣೆ

    ವಿಟಮಿನ್ ಇ ಮತ್ತು ಮೆಗ್ನೀಸಿಯಮ್ನ ಉತ್ತಮ ಮೂಲವಾಗಿದೆ ಕಡಲೆಕಾಯಿ ಬೆಣ್ಣೆ. ಈ ಎಲ್ಲಾ ಪೋಷಕಾಂಶಗಳು ಮಧುಮೇಹ ನಿಯಂತ್ರಿಸುತ್ತವೆ. ಸೇಬು ಮತ್ತು ಕಡಲೆಕಾಯಿ ಬೆಣ್ಣೆಯು ಫೈಬರ್ ನಲ್ಲಿ ಸಮೃದ್ಧವಾಗಿದೆ. ಫೈಬರ್ ರಕ್ತದ ಸಕ್ಕರೆ ಮಟ್ಟ ಸಮತೋಲನಗೊಳಿಸುತ್ತದೆ.

    ಅದರಲ್ಲಿರುವ ಉತ್ಕರ್ಷಣ ನಿರೋಧಕಗಳು ಮೇದೋಜ್ಜೀರಕ ಗ್ರಂಥಿಯ ಕೋಶಗಳಿಗೆ ಹಾನಿಯಾಗದಂತೆ ತಡೆಯುತ್ತದೆ. ಇದು ಮಧುಮೇಹ ಸಮಸ್ಯೆ ಹೆಚ್ಚಿಸುತ್ತದೆ. ಚಿಯಾ ಬೀಜಗಳು ಟ್ರೈಗ್ಲಿಸರೈಡ್ ಮಟ್ಟ ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯ ಕಾಪಾಡುತ್ತದೆ.

    ಸೇಬು ಆಹಾರ ದತ್ತಾಂಶ ಕೇಂದ್ರವು ಪ್ರಕಟಿಸಿದ ಅಧ್ಯಯನದ ಪ್ರಕಾರ, ಸೇಬುಗಳು ವಿಟಮಿನ್ ಬಿ, ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ ಹೊಂದಿವೆ.

    ಇದನ್ನೂ ಓದಿ: ಪಾದ, ಕೈಗಳಲ್ಲಿ ಅಧಿಕ ಕೊಲೆಸ್ಟ್ರಾಲ್ ಲಕ್ಷಣ ಕಂಡು ಬರುವುದು ಹೇಗೆ? ಇದರ ಮುನ್ನೆಚ್ಚರಿಕಾ ಕ್ರಮಗಳೇನು?

    ಪನೀರ್

    ಪೋಷಕಾಂಶಗಳಿಂದ ಸಮೃದ್ಧವಾಗಿರುವ ಪನೀರ್ ರಕ್ತದ ಸಕ್ಕರೆ ಮಟ್ಟ ಕಾಪಾಡುತ್ತದೆ. ಮಧುಮೇಹದಿಂದ ತೊಂದರೆಗೆ ಒಳಗಾಗಿದ್ದರೆ ಪನೀರ್ ನ್ನು ಆಹಾರದಲ್ಲಿ ಸೇರಿಸಿ. ಪನೀರ್ ಅನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಉಪ್ಪು, ಮೆಣಸು ಮತ್ತು ಓರೆಗಾನೊ ಸಿಂಪಡಿಸಿ. ಆಹಾರದಲ್ಲಿ ಸೇರಿಸಿ.
    Published by:renukadariyannavar
    First published: