• Home
  • »
  • News
  • »
  • lifestyle
  • »
  • Diabetes Problem: ಮಧುಮೇಹ ರೋಗಿಗಳು ಕಿತ್ತಳೆ ಹಣ್ಣು ಸೇವಿಸಬಹುದೇ?

Diabetes Problem: ಮಧುಮೇಹ ರೋಗಿಗಳು ಕಿತ್ತಳೆ ಹಣ್ಣು ಸೇವಿಸಬಹುದೇ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಧುಮೇಹ ರೋಗಿಗಳು ಸಾಮಾನ್ಯವಾಗಿ ತಾವು ಯಾವ ಆಹಾರ ಸೇವನೆ ಮಾಡಬೇಕು ಎಂಬುದರ ಬಗ್ಗೆ ಹೆಚ್ಚು ಚಿಂತನೆ ಮಾಡ್ತಾರೆ. ಯಾವ ಹಣ್ಣನ್ನು ತಿನ್ನಬೇಕು ಮತ್ತು ಯಾವುದನ್ನು ತಿನ್ನಬಾರದು ಎಂದು ಯೋಚಿಸುತ್ತಾರೆ. ಕಿತ್ತಳೆಯನ್ನು ಮಧುಮೇಹಿಗಳು ಸೇವನೆ ಮಾಡಬೇಕೇ ಅಥವಾ ಬೇಡ್ವೇ ಎಂದು ಆಲೋಚಿಸುತ್ತಾರೆ. ಈ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ತಜ್ಞರು ವಿವರಿಸಿದ್ದಾರೆ.

ಮುಂದೆ ಓದಿ ...
  • Share this:

    ಮಧುಮೇಹ ರೋಗಿಗಳ (Diabetes Patients) ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಕ್ಕೆ ಒಂದು ದೊಡ್ಡ ಕಾರಣ ಅಂದ್ರೆ ಕೆಟ್ಟ ಜೀವನಶೈಲಿ (Bad Lifestyle) ಮತ್ತು ತಪ್ಪು ಆಹಾರ (Bad Food). ಮಧುಮೇಹವು ಅಂತಹ ಕಾಯಿಲೆ ಆಗಿದೆ. ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಅಸಾಧ್ಯ ಆಗಿದೆ. ಸಂಶೋಧನೆ (Research) ನಡೆಯುತ್ತಿದೆ ಆದ್ರೂ ಸಹ ಇದುವರೆಗೆ ಅದರ ಚೇತರಿಕೆಗೆ ಸರಿಯಾದ ಚಿಕಿತ್ಸೆ ಇಲ್ಲ. ನಿಮ್ಮ ಜೀವನಶೈಲಿ ಬದಲಾಯಿಸುವ ಮೂಲಕ ನೀವು ಅದರ ರೋಗಲಕ್ಷಣಗಳು ಮತ್ತು ಪರಿಣಾಮಗಳನ್ನು ನಿಯಂತ್ರಣ ಮಾಡಬಹುದು. ಆದರೆ ಅದನ್ನು ಸಂಪೂರ್ಣವಾಗಿ ತೊಡೆದು ಹಾಕಲು ಕಷ್ಟ ಆಗುತ್ತದೆ. ಹಾಗಾಗಿ ಈ ಸಮಸ್ಯೆಯಿಂದ ದೂರವಿರಲು ಸರಿಯಾದ ಆಹಾರ ಕ್ರಮ ಫಾಲೋ ಮಾಡಬೇಕು. ಮತ್ತು ದೈಹಿಕವಾಗಿ ಸಕ್ರಿಯವಾಗಿರುವುದು ತುಂಬಾ ಮುಖ್ಯ.


    ಮಧುಮೇಹ ಕಾಯಿಲೆಯಿದ್ದವರು ಕಿತ್ತಳೆ ಹಣ್ಣು ಸೇವಿಸಬಹುದೇ?


    ಮಧುಮೇಹ ರೋಗಿಗಳು ಸಾಮಾನ್ಯವಾಗಿ ತಾವು ಯಾವ ಆಹಾರ ಸೇವನೆ ಮಾಡಬೇಕು ಎಂಬುದರ ಬಗ್ಗೆ ಹೆಚ್ಚು ಚಿಂತನೆ ಮಾಡ್ತಾರೆ. ಯಾವ ಹಣ್ಣನ್ನು ತಿನ್ನಬೇಕು ಮತ್ತು ಯಾವುದನ್ನು ತಿನ್ನಬಾರದು ಎಂದು ಯೋಚಿಸುತ್ತಾರೆ. ಕಿತ್ತಳೆಯನ್ನು ಮಧುಮೇಹಿಗಳು ಸೇವನೆ ಮಾಡಬೇಕೇ? ಅಥವಾ ಬೇಡ್ವೇ ಎಂದು ಆಲೋಚಿಸುತ್ತಾರೆ.


    ಮಧುಮೇಹದಲ್ಲಿ ಕಿತ್ತಳೆ ಸೇವಿಸಬೇಕೇ? ಕಿತ್ತಳೆ ರಕ್ತದ ಸಕ್ಕರೆ ಮಟ್ಟ ಹೆಚ್ಚಿಸುತ್ತಾ? ಈ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ತಜ್ಞರು ವಿವರಿಸಿದ್ದಾರೆ.




    ಮಧುಮೇಹದಲ್ಲಿ ಕಿತ್ತಳೆ ತಿನ್ನುವ ಬಗ್ಗೆ ತಜ್ಞರು ಹೇಳೋದೇನು?


    ಈ ಕುರಿತು ಪೂನಂ ಡಯಟ್ ಮತ್ತು ವೆಲ್ ನೆಸ್ ಕ್ಲಿನಿಕ್ ನ ನಿರ್ದೇಶಕಿ ಪೂನಂ ದುನೇಜಾ ಹೇಳಿದ್ದಾರೆ. ಕಿತ್ತಳೆಯ ಗ್ಲೈಸೆಮಿಕ್ ಸೂಚ್ಯಂಕ ತುಂಬಾ ಕಡಿಮೆ ಆಗಿದೆ. ಅದು ನಿಮ್ಮ ರಕ್ತದ ಸಕ್ಕರೆ ಮಟ್ಟ ನಿಧಾನವಾಗಿ ಹೆಚ್ಚಿಸುತ್ತದೆ ಎಂದಿದ್ದಾರೆ.


    ಮಧುಮೇಹ ಸಮಸ್ಯೆ ಇದ್ದವರು ಅದನ್ನು ನಿಮ್ಮ ಆಹಾರದಲ್ಲಿ ಸೇರಿಸಬಹುದು. ಕಿತ್ತಳೆಯಲ್ಲಿರುವ ಫೈಬರ್ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ. ಮಧ್ಯಮ ಗಾತ್ರದ ಕಿತ್ತಳೆ ಸೇವನೆ ನಿಮ್ಮ ದೇಹದ ರಕ್ತದ ಸಕ್ಕರೆ ಮಟ್ಟ ಕಾಪಾಡುತ್ತದೆ. ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುವ ಹಿಮೋಗ್ಲೋಬಿನ್ A1C ಅನ್ನು ನಿಯಂತ್ರಣ ಮಾಡುತ್ತದೆ.


    ಮಧುಮೇಹಿಗಳು ದೇಹದಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಸಿ ಹೊಂದಿರಬೇಕು. ಇದು ಆಕ್ಸಿಡೇಟಿವ್ ಒತ್ತಡ ನಿಯಂತ್ರಿಸುತ್ತದೆ. ಫೋಲೇಟ್ ಪ್ರಮಾಣವು ಕಿತ್ತಳೆಯಲ್ಲಿದೆ. ಇನ್ಸುಲಿನ್ ಪ್ರತಿರೋಧ ಕಡಿಮೆ ಮಾಡುತ್ತದೆ. ದೃಷ್ಟಿಯನ್ನು ಕಾಪಾಡುತ್ತದೆ. ಮಧುಮೇಹದ ಸ್ಥಿತಿಯು ಕಣ್ಣುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.


    ದೇಹದಲ್ಲಿ ಪೊಟ್ಯಾಸಿಯಮ್ ಕೊರತೆ ಇನ್ಸುಲಿನ್ ಪ್ರತಿರೋಧಕ್ಕೆ ಕಾರಣ. ಹಾಗಾಗಿ ನಿಮ್ಮ ಆಹಾರದಲ್ಲಿ ಪೊಟ್ಯಾಸಿಯಮ್ ಭರಿತ ಕಿತ್ತಳೆ ಸೇರಿಸಿ. ಆದರೆ ಫ್ಲೇವನಾಯ್ಡ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳು ಉರಿಯೂತ, ಆಕ್ಸಿಡೇಟಿವ್ ಒತ್ತಡ, ಇನ್ಸುಲಿನ್ ಪ್ರತಿರೋಧ ಮತ್ತು ಇನ್ಸುಲಿನ್ ಸಂವೇದನೆ ಹೆಚ್ಚಿಸುತ್ತದೆ.


    ಮಧುಮೇಹದಲ್ಲಿ ಕಿತ್ತಳೆ ಸೇವನೆಯು ಯಾವ ರೀತಿ ಪ್ರಯೋಜನಕಾರಿ?


    ಕಿತ್ತಳೆ ಫೈಬರ್‌ ನ ಉತ್ತಮ ಮೂಲ


    ಫೈಬರ್ ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಅಗತ್ಯ ಪೋಷಣೆ ನೀಡುತ್ತದೆ. ಕಿತ್ತಳೆ ಮತ್ತು ಮಧುಮೇಹದ ಕುರಿತು ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ನಡೆಸಿದ ಅಧ್ಯಯನವು ಟೈಪ್ 2 ಡಯಾಬಿಟಿಸ್‌ನಿಂದ ಬಳಲುತ್ತಿರುವ ಜನರ ಹೆಚ್ಚುತ್ತಿರುವ ರಕ್ತದ ಸಕ್ಕರೆಯ ಮಟ್ಟದಲ್ಲಿ ಇಳಿಕೆ ಮತ್ತು ಹಿಮೋಗ್ಲೋಬಿನ್ ಮಟ್ಟದಲ್ಲಿ ಹೆಚ್ಚಳ ಕಂಡು ಹಿಡಿದಿದೆ. ಮಧುಮೇಹದಿಂದ ಬಳಲುತ್ತಿದ್ದರೆ ಈ ಸ್ಥಿತಿಯನ್ನು ಸಮತೋಲನದಲ್ಲಿಡಲು ಕಿತ್ತಳೆ ಸೇವನೆ ಸಹಕಾರಿ ಎಂದು ಹೇಳಿದೆ.


    ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿದೆ ಕಿತ್ತಳೆ


    ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಟಿಸಿದ ಅಧ್ಯಯನದ ಪ್ರಕಾರ, ಗ್ಲೈಸೆಮಿಕ್ ಸೂಚ್ಯಂಕ ರಕ್ತದ ಸಕ್ಕರೆ ಮಟ್ಟ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ನೀವು ಹೆಚ್ಚಿನ ಗ್ಲೈಸೆಮಿಕ್ ಸೂಚಿ ಹೊಂದಿರುವ ಆಹಾರ ಸೇವಿಸಿದರೆ ಅದು ನಿಮ್ಮ ರಕ್ತದ ಸಕ್ಕರೆಯ ಲೇಬಲ್ ನ್ನು ವೇಗವಾಗಿ ಪ್ರಚೋದಿಸುತ್ತದೆ. ಕಿತ್ತಳೆಯ ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಕಡಿಮೆ. ಇದು ಪ್ರಯೋಜನಕಾರಿಯಾಗಿದೆ.


    ಇದನ್ನೂ ಓದಿ: ಕೂದಲ ಆರೋಗ್ಯಕ್ಕೆ ಎಣ್ಣೆ ಹಚ್ಚುವ ಸರಿಯಾದ ವಿಧಾನ ಯಾವುದು?


    ಕಿತ್ತಳೆ ಪ್ರಮುಖ ಜೀವಸತ್ವಗಳು ಮತ್ತು ಖನಿಜಗಳ ಅತ್ಯುತ್ತಮ ಮೂಲ


    ಕಿತ್ತಳೆಯು ವಿಟಮಿನ್ ಸಿ ಯಂತಹ ವಿವಿಧ ಜೀವಸತ್ವಗಳು ಮತ್ತು ಖನಿಜ ಹೊಂದಿದೆ. ಉತ್ಕರ್ಷಣ ನಿರೋಧಕವಾಗಿದೆ. ದೇಹದ ರಕ್ತದ ಸಕ್ಕರೆ ಪ್ರಮಾಣ ಆಕ್ಸಿಡೇಟಿವ್ ಒತ್ತಡ ಹೆಚ್ಚಿಸುತ್ತದೆ.

    Published by:renukadariyannavar
    First published: