• Home
  • »
  • News
  • »
  • lifestyle
  • »
  • Diabetes: ಡಯಾಬಿಟಿಸ್ ಇರೋರು ಬ್ರೆಡ್‌ ತಿನ್ನಬಹುದಾ? ಇಲ್ಲಿದೆ ಉತ್ತರ

Diabetes: ಡಯಾಬಿಟಿಸ್ ಇರೋರು ಬ್ರೆಡ್‌ ತಿನ್ನಬಹುದಾ? ಇಲ್ಲಿದೆ ಉತ್ತರ

ಎಲ್ಲರೂ ಇಷ್ಟ ಪಟ್ಟು ತಿನ್ನೋ ಈ ಬ್ರೆಡ್‌ ಅನ್ನು ಡಯಾಬಿಟಿಸ್ ಇರೋರು ತಿನ್ನಬಹುದಾ ಅಥವಾ ಇಲ್ವಾ? ಅನ್ನೋದರ ಕುರಿತು ನಾವಿಂದು ಇಲ್ಲಿ ಮಾಹಿತಿ ನೀಡ್ತಾ ಇದೀವಿ.

ಎಲ್ಲರೂ ಇಷ್ಟ ಪಟ್ಟು ತಿನ್ನೋ ಈ ಬ್ರೆಡ್‌ ಅನ್ನು ಡಯಾಬಿಟಿಸ್ ಇರೋರು ತಿನ್ನಬಹುದಾ ಅಥವಾ ಇಲ್ವಾ? ಅನ್ನೋದರ ಕುರಿತು ನಾವಿಂದು ಇಲ್ಲಿ ಮಾಹಿತಿ ನೀಡ್ತಾ ಇದೀವಿ.

ಎಲ್ಲರೂ ಇಷ್ಟ ಪಟ್ಟು ತಿನ್ನೋ ಈ ಬ್ರೆಡ್‌ ಅನ್ನು ಡಯಾಬಿಟಿಸ್ ಇರೋರು ತಿನ್ನಬಹುದಾ ಅಥವಾ ಇಲ್ವಾ? ಅನ್ನೋದರ ಕುರಿತು ನಾವಿಂದು ಇಲ್ಲಿ ಮಾಹಿತಿ ನೀಡ್ತಾ ಇದೀವಿ.

  • Share this:

ಪ್ರತಿದಿನ ಬೆಳಿಗ್ಗೆ(Morning) ಎದ್ದ ತಕ್ಷಣ ಎಲ್ಲರಿಗೂ ಟೀ, ಕಾಫಿ ಬೇಕೆ ಬೇಕು. ಅದರ ಜೊತೆಗೆ ಕೆಲವರು ಬಿಸ್ಕೆಟ್‌ ತಿಂದ್ರೆ ಇನ್ನು ಕೆಲವರಿಗೆ ಬ್ರೆಡ್(Bread)‌ ಬೇಕೆ ಬೇಕು. ಬ್ರೆಡ್‌ ಎಲ್ಲರ ಮನೆಲೀ ಇರೋ ಕಾಮನ್‌ ಫುಡ್(Food)‌ ಅಂತಾನೇ ಹೇಳಬಹುದು. ಇದು ಅನೇಕರಿಗೆ ವರದಾನ ಕೂಡ ಹೌದು. ಇದರಿಂದ ತಯಾರಿಸೋ ಸ್ಯಾಂಡ್‌ವಿಚ್‌ಗಳು, ಸ್ಟಫಿಂಗ್‌ ತಿನಿಸುಗಳು ಮತ್ತು ಫ್ರೆಂಚ್‌ ಟೋಸ್ಟ್‌ ಅಂತಹ ಅನೇಕ ಟೇಸ್ಟಿ ಆಹಾರಗಳಿಗೆ ಬ್ರೆಡ್‌ ಮುಖ್ಯವಾದ ಫುಡ್‌ ಎನ್ನಬಹುದು.


ಆದ್ರೆ ಎಲ್ಲರೂ ಇಷ್ಟ ಪಟ್ಟು ತಿನ್ನೋ ಈ ಬ್ರೆಡ್‌ ಅನ್ನು ಡಯಾಬಿಟಿಸ್ ಇರೋರು ತಿನ್ನಬಹುದಾ ಅಥವಾ ಇಲ್ವಾ? ಅನ್ನೋದರ ಕುರಿತು ನಾವಿಂದು ಇಲ್ಲಿ ಮಾಹಿತಿ ನೀಡ್ತಾ ಇದೀವಿ.


ಗಣನೀಯವಾಗಿ ಏರುತ್ತಲಿರುವ ಡಯಾಬಿಟಿಸ್


ಈಗೀಗ ಎಲ್ಲ ಕಡೆ ಡಯಾಬಿಟಿಸ್ ಹೆಚ್ಚಾಗುತ್ತಲಿದೆ. ಅದರಂತೆ ಡಯಾಬಿಟಿಸ್ ಡಯಾಗ್ನೋಸಿಸ್‌ ಸಂಖ್ಯೆಯು ಗಣನೀಯವಾಗಿ ಏರುತ್ತಲಿದೆ. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ 11.3% ರಷ್ಟು ಅಮೆರಿಕನ್ನರು ಮಧುಮೇಹದಿಂದ ಬಳಲುತ್ತಿದ್ದಾರೆ ಮತ್ತು ಸುಮಾರು 90-95% ರಷ್ಟು ಜನರು ಟೈಪ್ 2 ಮಧುಮೇಹವನ್ನು ಹೊಂದಿದ್ದಾರೆ.


ಅಮೆರಿಕದ ಒಟ್ಟು ಜನಸಂಖ್ಯೆಯಲ್ಲಿ ಈ ಸ್ಥಿತಿಯು ಹೆಚ್ಚು ಸಾಮಾನ್ಯ ಆಗಿದೆ ಅದರ ಜೊತೆಗೆ, ಡಯಾಗ್ನೋಸಿಸ್‌ ಅನ್ನು ಹೇಗೆ ನಿರ್ವಹಿಸುವುದು ಎಂಬುದೇ ಹಲವರಿಗೆ ಇರುವ ದೊಡ್ಡ ಸವಾಲು ಎಂದೇ ಹೇಳಬಹುದು.


ಟೈಪ್ 2 ಡಯಾಬಿಟಿಸ್


ಈ ಟೈಪ್‌ 2 ಡಯಾಬಿಟಿಸ್‌ ಇದ್ದರೆ ನಿಮ್ಮ ದೇಹವು ಇನ್ಸುಲಿನ್‌ಗೆ ಸಾಮಾನ್ಯವಾಗಿ ಪ್ರತಿಕ್ರಿಯಿಸುವುದಿಲ್ಲ, ಇದು ಇನ್ಸುಲಿನ್ ಪ್ರತಿರೋಧವನ್ನು ಉಂಟುಮಾಡುತ್ತದೆ ಮತ್ತು ಅಸ್ಥಿರ ರಕ್ತದಲ್ಲಿನ ಸಕ್ಕರೆ ಮಟ್ಟಕ್ಕೆ ಕಾರಣವಾಗುತ್ತದೆ.


ತಜ್ಞರ ಅಭಿಪ್ರಾಯ


ಬ್ರೆಡ್‌ ಅಂತಹ ಕಾರ್ಬೋಹೈಡ್ರೇಟ್ ಆಹಾರಗಳನ್ನು ತಿನ್ನುವುದು ರಕ್ತದಲ್ಲಿನ ಸಕ್ಕರೆ ಮಟ್ಟದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅಧಿಕ ರಕ್ತದ ಸಕ್ಕರೆ ಮಟ್ಟವು ಹೃದ್ರೋಗ, ದೃಷ್ಟಿ ನಷ್ಟ ಮತ್ತು ಮೂತ್ರಪಿಂಡದ ಕಾಯಿಲೆಯಂತಹ ಇನ್ನಷ್ಟು ಹಾನಿಕಾರಕ ಪರಿಣಾಮಗಳಿಗೆ ಕಾರಣವಾಗಬಹುದು. ಅದಕ್ಕಾಗಿಯೇ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ ಎಂದು ತಜ್ಞರು ಸೂಚಿಸುತ್ತಾರೆ.


ಡಯಾಬಿಟಿಸ್ ಇರೋರು ಬ್ರೆಡ್‌ ತಿನ್ನಬಹುದಾ?


ಅಯ್ಯೋ, ನನಗೆ ಡಯಾಬಿಟಿಸ್‌ ಇದೆ, ಇನ್ನು ಮುಂದೆ ಬ್ರೆಡ್‌ ತಿನ್ನಬಾರದು ಎಂದು ನೀವು ಚಿಂತೆ ಮಾಡ್ತಿದೀರಾ? ಚಿಂತೆ ಮಾಡಬೇಡಿ. ನಿಮ್ಮ ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟದ ಬಗ್ಗೆ ನಿಮಗೆ ಗಮನವಿದ್ದರೆ, ನೀವು ಕೂಡ ಬ್ರೆಡ್‌ ತಿನ್ನಬಹುದು ಎಂದು ತಜ್ಞರು ಶಿಫಾರಸು ಮಾಡಿದ್ದಾರೆ.


ಹಾಗಿದ್ರೆ ಡಯಾಬಿಟಿಸ್‌ ಇರೋರು ದಿನಕ್ಕೆ ಎಷ್ಟು ಬ್ರೆಡ್‌ ತಿನ್ನಬಹುದು?


"ಡಯಾಬಿಟಿಸ್‌ ಇರುವ ಜನರು ತಮ್ಮ ಊಟದ ಜೊತೆಗೆ ದಿನಕ್ಕೆ ಎರಡು ಬ್ರೆಡ್‌ಗಳನ್ನು ನಿಯಮಿತವಾಗಿ ತಿನ್ನಬಹುದು. ಸಾಮಾನ್ಯವಾಗಿ ಸ್ಯಾಂಡ್‌ವಿಚ್‌ಗಳಿಗಾಗಿ 15 ಗ್ರಾಂ ಕಾರ್ಬೊಹೈಡ್ರೆಟ್‌ಗಳನ್ನು ಹೊಂದಿರುವ ಸ್ಲೈಸ್‌ಗಳನ್ನು ಸೇವಿಸಬಹುದು” ಎಂದು ಕಿಟ್ಟಿ ಬ್ರೋಹಿಯರ್, M.S., RD, LD ಅವರು ಹೇಳುತ್ತಾರೆ.


ಬ್ರೆಡ್ ಅನ್ನು ನಿಮ್ಮ ಊಟದ ಭಾಗವಾಗಿ ಮಾಡುವುದು ಹೇಗೆ?


ಹೆಚ್ಚಿನ ಫೈಬರ್‌ ಅಂಶವಿರುವ ಬ್ರೆಡ್‌ ಅನ್ನು ಆರಿಸಿ


ಫೈಬರ್ ಎಂಬುದು ಬ್ರೆಡ್‌ನಂತಹ ಆಹಾರಗಳಲ್ಲಿ ಕಂಡುಬರುವ ಒಂದು ರೀತಿಯ ಕಾರ್ಬೋಹೈಡ್ರೇಟ್ ಆಗಿದೆ, ಇದು ನಿರ್ದಿಷ್ಟವಾಗಿ ಧಾನ್ಯಗಳಲ್ಲಿ ಕಂಡುಬರುತ್ತದೆ. ಫೈಬರ್‌ ಇರುವ ಆಹಾರಗಳು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಕಡಿಮೆ ಮಾಡಲು ಹೆಸರುವಾಸಿಯಾಗಿದೆ.


"ಉತ್ತಮವಾದ ಗ್ರೇನ್‌ ಬ್ರೆಡ್‌ ಅನ್ನು ಡಯಾಬಿಟಿಸ್‌ ಇರೋರು ಸೇವಿಸಿ, ಅದರಲ್ಲಿ ಕನಿಷ್ಠ 3 ಗ್ರಾಂ ಫೈಬರ್ ಅಂಶವಿರುತ್ತದೆ. ಏಕೆಂದರೆ ಫೈಬರ್ ಬ್ರೆಡ್‌ನಲ್ಲಿರುವ ಕಾರ್ಬೋಹೈಡ್ರೇಟ್‌ಗಳು ಎಷ್ಟು ವೇಗವಾಗಿ ಹೀರಲ್ಪಡುತ್ತವೆ ಮತ್ತು ಊಟದ ನಂತರ ರಕ್ತದಲ್ಲಿನ ಸಕ್ಕರೆಯ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ " ಎಂದು ತಜ್ಞರಾದ ಬ್ರೋಹಿಯರ್ ಹೇಳುತ್ತಾರೆ.


ತರಕಾರಿಗಳನ್ನು ಸೇರಿಸಿ ತಯಾರಿಸುವ ಸ್ಯಾಂಡ್‌ವಿಚ್‌ಗಳನ್ನು ಸೇವಿಸಿ. ಇದರಿಂದ ನಿಮಗೆ ಪ್ರೋಟಿನ್‌ ಅಂಶಗಳು ಸಹ ಸಿಗುತ್ತವೆ.


ಕೊನೆ ಮಾತು


ಸಂಕ್ಷಿಪ್ತವಾಗಿ ಹೇಳೊದಾದ್ರೆ, ನೀವು ಡಯಾಬಿಟಿಸ್‌ ರೋಗಿಗಳಾಗಿದ್ದರೆ, ಬ್ರೆಡ್‌ ಅನ್ನು ಆರಾಮವಾಗಿ ತಿನ್ನಬಹುದು. ಆದ್ರೆ ನಿಮ್ಮ ದೇಹಕ್ಕೆ ಕಾರ್ಬೋಹೈಡ್ರೆಟ್‌ಗಳ ಪ್ರಮಾಣ ಎಷ್ಟಿದೆ ಎಂದು ತಿಳಿದು, ಗ್ರೇನ್‌ ಬ್ರೆಡ್‌ಗಳನ್ನು ತಿನ್ನಬಹುದು. ಗ್ರೆನ್‌ ಬ್ರೆಡ್‌ನಂತಹ ಆರೋಗ್ಯಕರ ಬ್ರೆಡ್‌ಗಳನ್ನು ಆರಿಸುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಉತ್ತಮವಾಗಿದೆ. ಜೊತೆಗೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಆರೋಗ್ಯಕರ ಕೊಬ್ಬು ಅಥವಾ ಪ್ರೋಟೀನ್ ಮೂಲದೊಂದಿಗೆ ಬ್ರೆಡ್ ಅನ್ನು ಸೇವಿಸುವುದು ಮುಖ್ಯವಾಗಿದೆ.


  

Published by:Latha CG
First published: