• Home
  • »
  • News
  • »
  • lifestyle
  • »
  • Diabetes And Cashews: ಮಧುಮೇಹಿಗಳು ಗೋಡಂಬಿಯನ್ನು ಸೇವಿಸೋದು ಒಳ್ಳೆಯದಾ, ಕೆಟ್ಟದಾ?

Diabetes And Cashews: ಮಧುಮೇಹಿಗಳು ಗೋಡಂಬಿಯನ್ನು ಸೇವಿಸೋದು ಒಳ್ಳೆಯದಾ, ಕೆಟ್ಟದಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅನೇಕ ಆರೋಗ್ಯ ತಜ್ಞರ ಪ್ರಕಾರ ಮಧುಮೇಹ ನಿಯಂತ್ರಿಸಲು ಪ್ರೋಟೀನ್ ಮತ್ತು ಫೈಬರ್ ಭರಿತ ಆಹಾರ ಪದಾರ್ಥ ಸೇವನೆ ಮಾಡಬೇಕು. ಜೊತೆಗೆ ಲೂಯಿಸಿಯಾನ ಸ್ಟೇಟ್ ಯೂನಿವರ್ಸಿಟಿಯಲ್ಲಿ ನಡೆಸಿದ ಸಂಶೋಧನೆ ಪ್ರಕಾರ ಬಾದಾಮಿ, ಪಿಸ್ತಾ ಮತ್ತು ವಾಲ್ನಟ್‌ ಬೀಜಗಳನ್ನು ನಿಯಮಿತವಾಗಿ ತಿನ್ನುವ ಜನರಲ್ಲಿ ಟೈಪ್ 2 ಮಧುಮೇಹ ಮತ್ತು ಹೃದ್ರೋಗದ ಅಪಾಯ ಕಡಿಮೆ ಎಂದು ಹೇಳಿದೆ.

ಮುಂದೆ ಓದಿ ...
  • Share this:

    ಆರೋಗ್ಯಕರ ಜೀವನಶೈಲಿ (Healthy Lifestyle) ಮತ್ತು ಸಮತೋಲಿತ ಆಹಾರ (Food) ಸೇವನೆ ಮಾಡುವುದು ಒಟ್ಟಾರೆ ಆರೋಗ್ಯ (Health) ಕಾಪಾಡಲು ತುಂಬಾ ಮುಖ್ಯ ಪಾತ್ರ ವಹಿಸುತ್ತದೆ. ಸದೃಢ ಆರೋಗ್ಯಕ್ಕೆ ಉತ್ತಮ ಆಹಾರ ಸೇವನೆ ಮಾಡುವುದು ಮುಖ್ಯ. ಮಧುಮೇಹ (Diabetes) ಸೇರಿದಂತೆ ಅನೇಕ ರೋಗಗಳನ್ನು (Disease) ನಿಯಂತ್ರಿಸಲು ಆರೋಗ್ಯಕರ ಆಹಾರ ಹಾಗೂ ಉತ್ತಮ ಜೀವನಶೈಲಿ ರೂಢಿಸಿಕೊಳ್ಳುವುದು ಮುಖ್ಯ ಹಾಗೂ ಉತ್ತಮ ಮಾರ್ಗ ಆಗಿದೆ. ಯಾವುದೇ ರೀತಿಯ ತೊಡಕು ತಪ್ಪಿಸಲು ಆಹಾರ ಮತ್ತು ಜೀವನಶೈಲಿ ಬದಲಾವಣೆ ಮಾಡಬೇಕಾಗುತ್ತದೆ.  ಉತ್ತಮ ಆಹಾರ ಮತ್ತು ಜೀವನಶೈಲಿ ಕೊಲೆಸ್ಟ್ರಾಲ್ ಮಟ್ಟ, ರಕ್ತದೊತ್ತಡ ಮತ್ತು ಸರಿಯಾದ ದೇಹದ ತೂಕ ಕಾಪಾಡಲು ಸಹಾಯ ಮಾಡುತ್ತದೆ.


    ಮಧುಮೇಹ ನಿಯಂತ್ರಣಕ್ಕೆ ಆಹಾರ ಪದ್ಧತಿ ಹೇಗಿರಬೇಕು?


    ಅನೇಕ ಆರೋಗ್ಯ ತಜ್ಞರ ಪ್ರಕಾರ, ಮಧುಮೇಹ ನಿಯಂತ್ರಿಸಲು, ಪ್ರೋಟೀನ್ ಮತ್ತು ಫೈಬರ್ ಭರಿತ ಆಹಾರ ಪದಾರ್ಥ ಸೇವನೆ ಮಾಡಬೇಕು. ಜೊತೆಗೆ ಲೂಯಿಸಿಯಾನ ಸ್ಟೇಟ್ ಯೂನಿವರ್ಸಿಟಿಯಲ್ಲಿ ನಡೆಸಿದ ಸಂಶೋಧನೆ ಪ್ರಕಾರ,


    ಬಾದಾಮಿ, ಪಿಸ್ತಾ ಮತ್ತು ವಾಲ್ನಟ್‌ ಬೀಜಗಳನ್ನು ನಿಯಮಿತವಾಗಿ ತಿನ್ನುವ ಜನರಲ್ಲಿ ಟೈಪ್ -2 ಮಧುಮೇಹ ಮತ್ತು ಹೃದ್ರೋಗದ ಅಪಾಯ ಕಡಿಮೆ ಎಂದು ಹೇಳಿದೆ.




    ಹಾಗಾದ್ರೆ ಮಧುಮೇಹಿಗಳು ಆಹಾರದಲ್ಲಿ ಅಥವಾ ದಿನವೂ ಗೋಡಂಬಿಯನ್ನು ಸೇವಿಸಬಹುದೇ? ಇದರ ಸೇವನೆ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತದೆಯೇ? ಈ ಬಗ್ಗೆ ತಜ್ಞರು ಏನ್ ಹೇಳಿದ್ದಾರೆ ನೋಡೋಣ.


    ಗೋಡಂಬಿ ಆರೋಗ್ಯಕ್ಕೆ ಪ್ರಯೋಜನಕಾರಿ


    ಉತ್ತಮ ಕೊಬ್ಬಿನ ಜೊತೆಗೆ ಗೋಡಂಬಿ ಉತ್ತಮ ಪ್ರಮಾಣದ ಅರ್ಜಿನೈನ್ ಅಂಶ ಹೊಂದಿದೆ. ಇದು ರಕ್ತದೊತ್ತಡ ಸಮಸ್ಯೆ ಕಡಿಮೆ ಮಾಡುವ ಅಮೈನೋ ಆಮ್ಲ ಆಗಿದೆ. ಇದು ತಾಮ್ರ, ಮೆಗ್ನೀಸಿಯಮ್ ಮತ್ತು ಸತು ಹೊಂದಿದೆ.


    ಈ ಪೋಷಕಾಂಶಗಳು ಉತ್ತಮ ಉತ್ಕರ್ಷಣ ನಿರೋಧಕ ಮತ್ತು ರೋಗ ನಿರೋಧಕ ಶಕ್ತಿ ಮತ್ತು ನರಮಂಡಲ ಸುಧಾರಿಸಲು ಸಹಾಯ ಮಾಡುತ್ತದೆ. ಗೋಡಂಬಿಯಲ್ಲಿ ಒಲಿಯಿಕ್ ಆಸಿಡ್ ಕೂಡ ಇದೆ. ಇದು ರಕ್ತದ ಕೆಟ್ಟ ಕೊಬ್ಬನ್ನು ಕಡಿಮೆ ಮಾಡುತ್ತದೆ.


    ಒಣ ಹಣ್ಣುಗಳು ಮತ್ತು ಬೀಜಗಳು ಮಧುಮೇಹಿಗಳಿಗೆ ಒಳ್ಳೆಯದೇ?


    ಬೀಜಗಳಲ್ಲಿ ಕೊಬ್ಬಿದೆ. ಹಾಗೂ ಅವುಗಳಲ್ಲಿ ಉತ್ತಮ ಕೊಬ್ಬು ಇದೆ. ಇದು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ಪ್ರಕಾರ, ಬೀಜ ಮತ್ತು ಒಣಹಣ್ಣುಗಳು ​​​​ಅನೇಕ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಹೆಚ್ಚು ಪ್ರಯೋಜನಕಾರಿ ಎಂದು ಹೇಳಿದೆ.


    ಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ಅಪರ್ಯಾಪ್ತ ಕೊಬ್ಬು ಇದೆ. ಇದು ಅನೇಕ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ. ಜೀವಕೋಶದ ಬೆಳವಣಿಗೆಗೆ ಸಹಾಯ ಮಾಡುವುದು ಮತ್ತು ಹೃದಯ ಸೇರಿದಂತೆ ಇತರ ಅಂಗಗಳನ್ನು ರಕ್ಷಿಸುತ್ತದೆ. ಮಧುಮೇಹಿಗಳ ಆಹಾರದಲ್ಲಿ ಬೀಜಗಳನ್ನು ಸೇರಿಸುವುದು ತುಂಬಾ ಮುಖ್ಯ.


    ಮಧುಮೇಹಿಗಳಿಗೆ ಗೋಡಂಬಿ ಸೇವನೆ ಒಳ್ಳೆಯದೇ?


    ಜರ್ನಲ್ ಆಫ್ ನ್ಯೂಟ್ರಿಷನ್ ನಡೆಸಿದ ಇತ್ತೀಚಿನ ಸಂಶೋಧನೆ ಪ್ರಕಾರ, ಮಧುಮೇಹಿಗಳು ಇತರ ಬೀಜಗಳಿಗಿಂತ ಗೋಡಂಬಿ ಸೇವನೆ ಉತ್ತಮ ಎಂದು ಹೇಳಿದೆ. ಇದರ ರಸವು ಮಧುಮೇಹ ವಿರೋಧಿ ಗುಣ ಹೊಂದಿದೆ. ಇದರಲ್ಲಿ ಒಳ್ಳೆಯ ಕೊಬ್ಬು ಇದೆ. ಇದು ಆರೋಗ್ಯಕರ.


    ಇದನ್ನೂ ಓದಿ: ಮಧುಮೇಹಿಗಳು ತಿನ್ನಬಹುದಾದ ಹತ್ತು ಹಣ್ಣುಗಳ ಪಟ್ಟಿ ಇಲ್ಲಿದೆ..!


    ಗೋಡಂಬಿಯು ಹೆಚ್ಚಿನ ಪ್ರಮಾಣದ ಆಹಾರದ ಫೈಬರ್ ಹೊಂದಿದೆ. ತೂಕ ನಷ್ಟಕ್ಕೆ ಇದು ಸಹಕಾರಿ. ಗೋಡಂಬಿ ಅತ್ಯುತ್ತಮ ಒಣ ಹಣ್ಣು. ಗೋಡಂಬಿ ಸೇವನೆಯು ಉತ್ತಮ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತದೆ. ಮತ್ತು ರಕ್ತದ ಸಕ್ಕರೆ ಕಡಿಮೆ ಮಾಡುತ್ತದೆ. ಗೋಡಂಬಿಯನ್ನು ಮಿತವಾಗಿ ಸೇವಿಸಿದರೆ ತೂಕ ಅಥವಾ ರಕ್ತದ ಸಕ್ಕರೆ ಹೆಚ್ಚಲ್ಲ.

    Published by:renukadariyannavar
    First published: