Diabetic Kidney Disease: ಮಧುಮೇಹ ಮೂತ್ರಪಿಂಡ ಕಾಯಿಲೆ ಯಾರಲ್ಲಿ ಮತ್ತು ಯಾವಾಗ ಸಂಭವಿಸುತ್ತದೆ? ಇದರ ಲಕ್ಷಣಗಳು ಹೀಗಿವೆ

ಡಯಾಬಿಟಿಕ್ ಕಿಡ್ನಿ ಡಿಸೀಸ್ ಎಂದು ಕರೆಯಲ್ಪಡುವ ಮಧುಮೇಹ ಕಾಯಿಲೆಯಿಂದ ಮೂತ್ರಪಿಂಡದ ತೊಂದರೆಗಳು ಉಂಟಾಗುತ್ತವೆ. ಮಧುಮೇಹ ಹೊಂದಿರುವ ಪ್ರತಿ 3 ವಯಸ್ಕರಲ್ಲಿ ಒಬ್ಬರು ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಯಾವುದೇ ಕಾಯಿಲೆ (Disease) ಇರಲಿ ಅದು ಉಂಟಾಗುವಾಗ ದೇಹದಲ್ಲಿ (Body) ಕೆಲವು ಬದಲಾವಣೆಗಳು (Changes), ಕೆಲ ಸಂಕೇತಗಳು (Sign) ಗೋಚರವಾಗುತ್ತವೆ. ಕೆಲವು ಕಾಯಿಲೆಗಳು ಯಾವುದೇ ಸಂಕೇತ ನೀಡದೆಯೇ ಬಂದು ದೇಹವನ್ನು ಸೇರುತ್ತವೆ. ಇನ್ನು ಕೆಲವು ದೀರ್ಘಕಾಲಿಕ ರೋಗಗಳು ದೇಹದಲ್ಲಿ ಕೆಲವು ಮುಖ್ಯ ಸಂಕೇತ, ಚಿಹ್ನೆ ತೋರಿಸುತ್ತವೆ. ಅದರಲ್ಲಿ ಡಯಾಬಿಟಿಸ್ ಕೂಡ ಒಂದು. ಯಾರಿಗಾದರೂ ಸಕ್ಕರೆ ಕಾಯಿಲೆ ಬಂದರೆ ಅವರು ದೇಹದಲ್ಲಿ ಕೆಲವು ರೋಗ ಲಕ್ಷಣಗಳನ್ನು ಕಾಣುತ್ತಾರೆ. ಈ ರೋಗ ಲಕ್ಷಣಗಳಿಂದ, ಏನೋ ತಪ್ಪಾಗಿದೆ ಎಂದು ಅವರು ಅರ್ಥ ಮಾಡಿಕೊಳ್ಳುತ್ತಾರೆ. ಅದರ ನಂತರ ಅವರು ರೋಗ ಲಕ್ಷಣಗಳ ಆಧಾರದ ಮೇಲೆ ಆ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಾರೆ.

    ರೋಗಗಳ ರೋಗ ಲಕ್ಷಣಗಳನ್ನು ತ್ವರಿತವಾಗಿ ಅರ್ಥ ಮಾಡಿಕೊಳ್ಳದ ಅಥವಾ ದೀರ್ಘ ಕಾಲದವರೆಗೆ ರೋಗ ಲಕ್ಷಣಗಳು ಕಾಣಿಸಿಕೊಳ್ಳುವ ಕೆಲವು ರೋಗಗಳಿವೆ. ಮಧುಮೇಹ ಕೂಡ ಅಂತಹ ಒಂದು ಕಾಯಿಲೆ ಆಗಿದೆ. ಸಕ್ಕರೆ ಕಾಯಿಲೆಯ ಲಕ್ಷಣಗಳು ಅಷ್ಟು ಬೇಗ ಗೋಚರ ಆಗುವುದಿಲ್ಲ.

    ಡಯಾಬಿಟಿಕ್ ಕಿಡ್ನಿ ಡಿಸೀಸ್

    ಅದರಲ್ಲೂ ಡಯಾಬಿಟಿಕ್ ಕಿಡ್ನಿ ಡಿಸೀಸ್ ಎಂದು ಕರೆಯಲ್ಪಡುವ ಮಧುಮೇಹ ಕಾಯಿಲೆಯಿಂದ ಮೂತ್ರಪಿಂಡದ ತೊಂದರೆಗಳು ಉಂಟಾಗುತ್ತವೆ. ಮಧುಮೇಹ ಹೊಂದಿರುವ ಪ್ರತಿ 3 ವಯಸ್ಕರಲ್ಲಿ ಒಬ್ಬರು ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದಾರೆ.

    ಇದನ್ನೂ ಓದಿ: ಮಧುಮೇಹಿಗಳಿಗೆ ಈ ಚಹಾ ವರದಾನವಾಗಿದೆ! ಪ್ರತಿನಿತ್ಯ ಸೇವಿಸಿ ಹೃದಯದ ಆರೋಗ್ಯವನ್ನೂ ಕಾಪಾಡಿಕೊಳ್ಳಿ!

    ಮಧುಮೇಹ ಮೂತ್ರಪಿಂಡ ಕಾಯಿಲೆ ಯಾವಾಗ ಸಂಭವಿಸುತ್ತದೆ?

    ಮೂತ್ರಪಿಂಡದ ಫಿಲ್ಟರ್‌ಗಳು (ಗ್ಲೋಮೆರುಲಿ) ಹಾನಿಗೊಳಗಾದಾಗ ಮತ್ತು ಮೂತ್ರಪಿಂಡವು ಅಸಹಜ ಪ್ರಮಾಣದ ಪ್ರೋಟೀನ್‌ಗಳನ್ನು ರಕ್ತದಿಂದ ಮೂತ್ರಕ್ಕೆ ಬಿಡುಗಡೆ ಮಾಡಲು ಪ್ರಾರಂಭಿಸಿದಾಗ ಮಧುಮೇಹ ಮೂತ್ರಪಿಂಡ ಕಾಯಿಲೆ ಸಂಭವಿಸುತ್ತದೆ. ಈ ಸ್ಥಿತಿಯು ದೇಹಕ್ಕೆ ಅಪಾಯಕಾರಿ.

    ಮಧುಮೇಹ ಮೂತ್ರಪಿಂಡ ಕಾಯಿಲೆಗೆ ಶೀಘ್ರ ಚಿಕಿತ್ಸೆ ನೀಡದೆ ಬಿಟ್ಟರೆ, ಮೂತ್ರಪಿಂಡ ವೈಫಲ್ಯವೂ ಸಂಭವಿಸಬಹುದು. ಮಧುಮೇಹದ ಲಕ್ಷಣಗಳು ಆರಂಭದಲ್ಲಿ ಅಷ್ಟೊಂದು ಅಪಾಯಕಾರಿಯಾಗಿರುವುದಿಲ್ಲ. ಆದರೆ ಕಾಲಾಂತರದಲ್ಲಿ ಗಂಭೀರ ಸ್ಥಿತಿಗೆ ಕಾರಣವಾಗುತ್ತವೆ. ಮಧುಮೇಹದ ಸಮಸ್ಯೆ ಹೆಚ್ಚಾದರೆ ಅದರ ಲಕ್ಷಣಗಳು ಮುಖದ ಮೇಲೂ ಕಾಣಿಸಿಕೊಳ್ಳುತ್ತವೆ.

    ಮುಖದ ಮೇಲೆ ಕಾಣಿಸಿಕೊಳ್ಳುತ್ತವೆ ಮಧುಮೇಹದ ಕಿಡ್ನಿ ಕಾಯಿಲೆಯ ಲಕ್ಷಣಗಳು

    ಮುಖದ ಈ ಭಾಗದಲ್ಲಿ ರೋಗ ಲಕ್ಷಣಗಳು ಕಂಡು ಬರುತ್ತವೆ. ತಜ್ಞರ ಪ್ರಕಾರ ಮಧುಮೇಹದ ಕಿಡ್ನಿ ಕಾಯಿಲೆಯ ಲಕ್ಷಣಗಳು, ಕಣ್ಣಿನ ಸುತ್ತಲೂ ಕಾಣಿಸಿಕೊಳ್ಳಬಹುದು. ಮಧುಮೇಹದ ಕಾಯಿಲೆ ಯಾರಲ್ಲಿ ಅಧಿಕವಾಗಿರುತ್ತದೆಯೋ, ಅವರ ಕಣ್ಣುಗಳ ಸುತ್ತಲೂ ಊತ ಉಂಟಾಗುತ್ತದೆ.

    ಮಧುಮೇಹದಿಂದ ಮೂತ್ರಪಿಂಡದ ಮೇಲೆ ಪರಿಣಾಮ ಬೀರುತ್ತದೆ. ಮತ್ತು ಮಧುಮೇಹ ಮೂತ್ರಪಿಂಡ ಕಾಯಿಲೆ ಪ್ರಾರಂಭವಾಗಿದೆ ಎಂದು ಇದರ ಅರ್ಥ. ಇದಲ್ಲದೆ ಮಧುಮೇಹ ಮೂತ್ರಪಿಂಡ ಕಾಯಿಲೆಯ ಕೆಲವು ಇತರೆ ಲಕ್ಷಣಗಳು ಹೀಗಿವೆ…

    - ಆಲೋಚಿಸುವಲ್ಲಿ ತೊಂದರೆ

    - ಹಸಿವು ಕಡಿಮೆಯಾಗುವುದು

    - ತೂಕ ನಷ್ಟ

    - ಒಣ, ತುರಿಕೆ ಚರ್ಮ

    - ಸ್ನಾಯು ಸೆಳೆತ

    - ಕಾಲು ಮತ್ತು ಪಾದದ ಊತ

    - ಪದೇ ಪದೇ ಮೂತ್ರ ವಿಸರ್ಜನೆ

    - ಹಳದಿ ಮೂತ್ರ

    - ಪದೇ ಪದೇ ಅನಾರೋಗ್ಯ

    ಯಾರಲ್ಲಿ ಈ ಮೇಲಿನ ರೋಗ ಲಕ್ಷಣಗಳು ಕಂಡು ಬರುತ್ತವೆಯೋ ಅವರು ಮೊದಲು ವೈದ್ಯರನ್ನು ಸಂಪರ್ಕಿಸಿ. ಯಾವುದೇ ವ್ಯಕ್ತಿಯು ಸಾಧ್ಯವಾದಷ್ಟು ಬೇಗ ವೈದ್ಯರನ್ನು ಭೇಟಿ ಮಾಡಬೇಕು. ಮೂತ್ರಪಿಂಡದ ಕಾರ್ಯ ಚಟುವಟಿಕೆಯು ಪರಿಣಾಮ ಬೀರುತ್ತದೆ. ಮತ್ತೊಂದೆಡೆ, ಮೂತ್ರಪಿಂಡದ ವೈಫಲ್ಯ ತುಂಬಾ ಗಂಭೀರವಾದ ಸ್ಥಿತಿಗೆ ಕಾರಣವಾಗುತ್ತದೆ.

    ಇದನ್ನೂ ಓದಿ: ಕೂದಲು ಉದುರಿ ನೆತ್ತಿಯೇ ಬೋಳಾಗೋದೇಕೆ? ಕೆಲವು ಸರಳ ಮನೆ ಮದ್ದು ಟ್ರೈ ಮಾಡಿ

    ಯಾರಿಗೆ ಮಧುಮೇಹದ ಕಿಡ್ನಿ ಕಾಯಿಲೆಯ ಅಪಾಯವಿರುತ್ತದೆ?

    ಟೈಪ್ 1 ಮಧುಮೇಹ ಹೊಂದಿರುವ ರೋಗಿಗಳು, ಟೈಪ್ 2 ಡಯಾಬಿಟಿಸ್ ರೋಗಿಗಳಿಗಿಂತ ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಹೆಚ್ಚು ಒಳಗಾಗುತ್ತಾರೆ. ಟೈಪ್ 1 ಡಯಾಬಿಟಿಸ್ ಇರುವವರಲ್ಲಿ ಡಯಾಬಿಟಿಕ್ ಮೂತ್ರಪಿಂಡ ಕಾಯಿಲೆ ತುಂಬಾ ಸಾಮಾನ್ಯ. ಆದರೆ ಟೈಪ್ 2 ಡಯಾಬಿಟಿಸ್ ಇರುವವರಲ್ಲಿ ಈ ಸಮಸ್ಯೆಯು ಹೆಚ್ಚಾಗಿ ಕಂಡು ಬರುತ್ತದೆ.
    Published by:renukadariyannavar
    First published: