• Home
  • »
  • News
  • »
  • lifestyle
  • »
  • Diabetes Symptoms: ಕೈಗಳಲ್ಲಿ ಕಾಣಿಸಿಕೊಳ್ಳುವ ಈ ಲಕ್ಷಣಗಳು ಮಧುಮೇಹ ಕಾಯಿಲೆಯ ಸಂಕೇತಗಳಾಗಿರಬಹುದು ಎಚ್ಚರ!

Diabetes Symptoms: ಕೈಗಳಲ್ಲಿ ಕಾಣಿಸಿಕೊಳ್ಳುವ ಈ ಲಕ್ಷಣಗಳು ಮಧುಮೇಹ ಕಾಯಿಲೆಯ ಸಂಕೇತಗಳಾಗಿರಬಹುದು ಎಚ್ಚರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಧುಮೇಹವನ್ನು ಪತ್ತೆ ಹಚ್ಚಲು ರಕ್ತದ ಸಕ್ಕರೆ ಪ್ರಮಾಣ ಎಷ್ಟಿದೆ ಎಂದು ಪರೀಕ್ಷೆ ಮಾಡುವುದು ಅತ್ಯಂತ ನಿಖರ ಮತ್ತು ಸುಲಭ ವಿಧಾನ ಆಗಿದೆ. ಈಗ ತಜ್ಞರ ಪ್ರಕಾರ ವ್ಯಕ್ತಿಯು ತನ್ನ ಕೈಗಳತ್ತ ಗಮನ ಹರಿಸುವ ಮೂಲಕವೂ ಮಧುಮೇಹ ಕಾಯಿಲೆ ಕಂಡು ಹಿಡಿಯಬಹುದು ಎಂದು ಹೇಳಿದ್ದಾರೆ. ದೇಹದಲ್ಲಿ ಸಕ್ಕರೆಯ ಪ್ರಮಾಣವು ಹೆಚ್ಚಾದಾಗ ಕೈಗಳ ಬಣ್ಣ ಮತ್ತು ನೋಟವು ಬದಲಾಗುತ್ತದೆ.

ಮುಂದೆ ಓದಿ ...
  • Share this:

    ಜಡ ಜೀವನಶೈಲಿ (Bad Lifestyle) ಮತ್ತು ಕೆಟ್ಟ ಆಹಾರ ಪದ್ಧತಿಯಿಂದ (Bad Food Plan) ಮಧುಮೇಹ ಕಾಯಿಲೆ (Diabetes Disease) ಬರುತ್ತದೆ. ಮಧುಮೇಹ ಕಾಯಿಲೆ ಒಮ್ಮೆ ದೇಹವನ್ನು (Body) ಆವರಿಸಿದರೆ ಇದಕ್ಕೆ ಯಾವುದೇ ರೀತಿಯ ಚಿಕಿತ್ಸೆ (Treatment) ಇಲ್ಲ. ಇದನ್ನು ಸಂಪೂರ್ಣವಾಗಿ ತೆಗೆದು ಹಾಕಲು ಸಾಧ್ಯವಿಲ್ಲ. ಮಧುಮೇಹ ಕಾಯಿಲೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರನ್ನು ಬಾಧಿಸುತ್ತಿದೆ. ಮಧುಮೇಹ ಕಾಯಿಲೆಯಲ್ಲಿ ಎರಡು ಮುಖ್ಯ ವಿಧಗಳಿವೆ. ಒಂದು ಟೈಪ್ 1 ಮಧುಮೇಹ ಮತ್ತೊಂದು ಟೈಪ್ 2 ಮಧುಮೇಹ. ಮಧುಮೇಹದ ಲಕ್ಷಣಗಳನ್ನು ಗುರುತಿಸುವುದು ಹೇಗೆ ಎಂಬುದು ನಿಮ್ಮ ಪ್ರಶ್ನೆ ಆಗಿದ್ದರೆ, ಮಧುಮೇಹವನ್ನು ಪತ್ತೆ ಹಚ್ಚಲು ರಕ್ತದ ಸಕ್ಕರೆ ಪ್ರಮಾಣ ಎಷ್ಟಿದೆ ಎಂದು ಪರೀಕ್ಷೆ ಮಾಡಲಾಗುತ್ತದೆ.


    ಮಧುಮೇಹ ಕಾಯಿಲೆ


    ಮಧುಮೇಹವನ್ನು ಪತ್ತೆ ಹಚ್ಚಲು ರಕ್ತದ ಸಕ್ಕರೆ ಪ್ರಮಾಣ ಎಷ್ಟಿದೆ ಎಂದು ಪರೀಕ್ಷೆ ಮಾಡುವುದು ಅತ್ಯಂತ ನಿಖರ ಮತ್ತು ಸುಲಭ ವಿಧಾನ ಆಗಿದೆ. ಈಗ ತಜ್ಞರ ಪ್ರಕಾರ, ವ್ಯಕ್ತಿಯು ತನ್ನ ಕೈಗಳತ್ತ ಗಮನ ಹರಿಸುವ ಮೂಲಕವೂ ಮಧುಮೇಹ ಕಾಯಿಲೆ ಕಂಡು ಹಿಡಿಯಬಹುದು ಎಂದು ಹೇಳಿದ್ದಾರೆ.


    ದೇಹದಲ್ಲಿ ಸಕ್ಕರೆಯ ಪ್ರಮಾಣವು ಹೆಚ್ಚಾಗಲು ಪ್ರಾರಂಭಿಸಿದಾಗ, ಕೈಗಳ ಬಣ್ಣ ಮತ್ತು ನೋಟವು ಬದಲಾಗುತ್ತದೆ. ಅಮೇರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿ ಅಸೋಸಿಯೇಷನ್ ಪ್ರಕಾರ, ಕೈಯಲ್ಲಿ ಕಾಣಿಸಿಕೊಳ್ಳುವ ಮಧುಮೇಹದ ಈ ರೋಗ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿದೆ.


    ಇದನ್ನೂ ಓದಿ: ಚಳಿಗಾಲ ಆರಂಭವಾಗ್ತಾ ಇದೆ, ಈ ಪದಾರ್ಥಗಳನ್ನು ತಪ್ಪದೇ ಸೇವಿಸಿ


    ಕೈಗಳ ಯಾವ ಲಕ್ಷಣಗಳಿಂದ ಮಧುಮೇಹವನ್ನು ನಿರ್ಣಯಿಸುವುದು?


    ಮಧುಮೇಹ ಎಂದರೇನು ಎಂಬುದನ್ನು ಮೊದಲು ತಿಳಿಯುವುದು ಮುಖ್ಯ. ರಕ್ತದಲ್ಲಿ ಅನಿಯಂತ್ರಿತ ಗ್ಲೂಕೋಸ್ ಇದ್ದಾಗ ಮಧುಮೇಹ  ಉಂಟಾಗುತ್ತದೆ. ಕೈಯಲ್ಲಿ ವಿಭಿನ್ನ ರೀತಿಯ ಗುರುತು, ವಿನ್ಯಾಸ ಅಥವಾ ಬಣ್ಣ ಕಾಣಿಸಿಕೊಂಡರೆ ಅದು ದೇಹದಲ್ಲಿ ಅಧಿಕ ರಕ್ತದ ಸಕ್ಕರೆಯ ಸಂಕೇತ ಆಗಿರಬಹುದು.


    ಮಧುಮೇಹದ ಈ ರೋಗ ಲಕ್ಷಣಗಳನ್ನು ನಿಕಟವಾಗಿ ಗುರುತಿಸುವ ಮೂಲಕ ನೀವು ಮಧುಮೇಹ ನಿಯಂತ್ರಣಕ್ಕೆ ನಿರ್ದಿಷ್ಟ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಮಧುಮೇಹದಿಂದ ಕೈಗಳ ಮೇಲೆ ಯಾವ ಚಿಹ್ನೆಗಳು ಕಂಡು ಬರುತ್ತವೆ ಎಂದು ತಿಳಿಯಿರಿ.


    ಕೈಗಳಲ್ಲಿ ಮಧುಮೇಹದ ಸಂಕೇತಗಳು : ಕೈಯಲ್ಲಿ ಹಳದಿ, ಕೆಂಪು ಅಥವಾ ಕಂದು ಗುರುತುಗಳು ಕಾಣಿಸಿಕೊಳ್ಳುವುದು.


    ಮಧುಮೇಹ ಹೆಚ್ಚಾದರೆ ಏನಾಗುತ್ತದೆ?


    ಮಧುಮೇಹ ಹೆಚ್ಚಾದರೆ ಕೈಗಳ ಮೇಲೆ ಹಳದಿ, ಕೆಂಪು ಅಥವಾ ಕಂದು ಬಣ್ಣದ ಗುರುತುಗಳು ಗಾಢವಾಗಿ ಕಾಣಿಸುತ್ತವೆ. ಮಧುಮೇಹದ ಈ ಸಂಕೇತಗಳು ಚಿಕ್ಕ ಧಾನ್ಯದ ಗುರುತಿನಂತೆ ಕಾಣಿಸಲು ಶುರುವಾಗಿ ಮುಂದೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದಾಗ ಊದಿಕೊಂಡ ಮತ್ತು ಗಟ್ಟಿಯಾದ ಚರ್ಮ ಅಂಟಿ ದೊಡ್ಡ ತೇಪೆ ಉಂಟಾಗುತ್ತದೆ. ಇದನ್ನು ನೆಕ್ರೋಬಯೋಸಿಸ್ ಲಿಪೊಯಿಡಿಕಾ ಸ್ಥಿತಿ ಎಂದು ಕರೆಯುತ್ತಾರೆ.


    ಚರ್ಮ ಕಪ್ಪಾಗುವಿಕೆ


    ಮಧುಮೇಹದ ಈ ಸಂಕೇತವು ಮೊಣಕೈ ಮತ್ತು ಆರ್ಮ್ಪಿಟ್ ಗಳ ಬಳಿ ಕೈಯಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ವೇಳೆ ಚರ್ಮದ ಬಣ್ಣವು ನೇರಳೆ ಬಣ್ಣದಂತೆ ಗಾಢವಾಗುತ್ತದೆ. ಚರ್ಮದ ಬಣ್ಣದಲ್ಲಿ ಈ ಬದಲಾವಣೆ ರಕ್ತದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚುತ್ತಿದೆ ಎಂದು ಸೂಚಿಸುತ್ತದೆ. ಇದು ಪ್ರಿ-ಡಯಾಬಿಟಿಸ್‌ ಲಕ್ಷಣ. ಇದನ್ನು ಅಕಾಂತೋಸಿಸ್ ನಿಗ್ರಿಕನ್ಸ್ ಎನ್ನುತ್ತಾರೆ.


    ದಪ್ಪ ಮತ್ತು ಗಟ್ಟಿ ಚರ್ಮ


    ಕೈ ಬೆರಳುಗಳ ಸುತ್ತಲಿನ ಚರ್ಮವು ದಪ್ಪ ಮತ್ತು ಗಟ್ಟಿಯಾಗುತ್ತದೆ. ಇದು ಮಧುಮೇಹದ ಲಕ್ಷಣ ಆಗಿರಬಹುದು. ಇದನ್ನು ಡಿಜಿಟಲ್ ಸ್ಕ್ಲೆರೋಸಿಸ್ ಎನ್ನುತ್ತಾರೆ. ಇದು ಪಾಮ್ನ ಹಿಂಭಾಗದಲ್ಲಿ ಕಾಣಿಸುತ್ತದೆ. ಬೆರಳು ಬಗ್ಗಿಸುವುದು ಕಷ್ಟವಾಗುತ್ತದೆ.


    ಕೈಯಲ್ಲಿ ಗುಳ್ಳೆಗಳು ಆಗುವುದು


    ಮಧುಮೇಹದಿಂದ ಕೈಯಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುತ್ತದೆ. ಆದರೆ ಕೆಲವೊಮ್ಮೆ ಮಧುಮೇಹ ರೋಗಿಗಳ ಕೈಯಲ್ಲಿ ದೊಡ್ಡ ಗುಳ್ಳೆಗಳು ಕಾಣಿಸುತ್ತವೆ. ಅವು ಎರಡಕ್ಕಿಂತ ಹೆಚ್ಚು ಇರಬಹುದು. ಇವು ನೋವುಂಟು ಮಾಡಲ್ಲ.


    ಚರ್ಮದ ಸೋಂಕು ಕಾಣಿಸುವುದು


    ಪದೇ ಪದೇ ಕೈಯಲ್ಲಿ ಚರ್ಮದ ಸೋಂಕು ಕಾಣಿಸಿದರೆ ವೈದ್ಯರನ್ನು ಸಂಪರ್ಕಿಸಿ. ಇದು ಮಧುಮೇಹದ ಸಂಕೇತವಾಗಿರಬಹುದು. ಈ ಸೋಂಕು ಚರ್ಮದ ಮೇಲೆ ಸುಡುವಿಕೆ, ಊತ ಮತ್ತು ನೋವುಂಟು ಮಾಡುತ್ತದೆ. ಸಣ್ಣ ಮೊಡವೆ ಮತ್ತು ತುರಿಕೆ ಕಾಣಿಸಿಕೊಳ್ಳುತ್ತದೆ.


    ಇದನ್ನೂ ಓದಿ: ಸಾಯಂಕಾಲ ಅಸಿಡಿಟಿ ಸಮಸ್ಯೆ ಹೆಚ್ಚಾಗಲು ಇದೇ ಕಾರಣವಂತೆ, ಇಲ್ಲಿದೆ ಮನೆಮದ್ದುಗಳು


    ಕೈಯಲ್ಲಿ ಮಧುಮೇಹದ ಇತರೆ ಸಂಕೇತಗಳು  


    ಗಾಯ ಗುಣವಾಗದಿರುವುದು, ಸಣ್ಣ ಹಳದಿ ದದ್ದು ಉಂಟಾಗುವುದು, ಚರ್ಮದ ಅತಿಯಾದ ಶುಷ್ಕತೆ, ಕಣ್ಣುರೆಪ್ಪೆಗಳ ಸುತ್ತಲೂ ಹಳದಿ ತೇಪೆ ಕಾಣಿಸುವುದು, ನರಹುಲಿ.

    Published by:renukadariyannavar
    First published: