ಇತ್ತೀಚೆಗೆ ಯುವಜನತೆಯಲ್ಲಿ ಡಯಾಬಿಟಿಕ್ ರೆಟಿನೋಪತಿ ಹೆಚ್ಚಾಗುತ್ತಿದೆ. ನೀವು ಅದನ್ನು ಹೇಗೆ ನಿಯಂತ್ರಿಸಬಹುದು ಎಂಬುದನ್ನು ಇಲ್ಲಿ ನೋಡಿ!

ಮಧುಮೇಹವನ್ನು ತಡೆಗಟ್ಟಬಹುದು, ಮತ್ತು ಕೆಲವು ಸಂದರ್ಭಗಳಲ್ಲಿ, ಅದನ್ನು ಮೊದಲೇ ಕಂಡುಹಿಡಿದರೆ ಅದನ್ನು ಹಿಮ್ಮೆಟ್ಟಿಸಬಹುದು ಕೂಡಾ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನಿಮಗೆ ಗೊತ್ತೆ? ಭಾರತದ ಮಹಾನಗರ ಹಾಗೂ ನಗರ ಪ್ರದೇಶಗಳಲ್ಲಿ ವಾಸಿಸುವ ಜನರು ಹಿಂದೆಂದಿಗಿಂತಲೂ ಈಗ ಹೆಚ್ಚಾಗಿ ಮಧುಮೇಹದಿಂದ ಬಳಲುವ ಸಾಧ್ಯತೆಯಿದೆ. 1,110,100 ಮಕ್ಕಳು ಮತ್ತು 20 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹದಿಹರೆಯದವರು ಜಾಗತಿಕವಾಗಿ ಟೈಪ್ 1 ಮಧುಮೇಹದೊಂದಿಗೆ ಜೀವಿಸುತ್ತಿದ್ದಾರೆಂದು ಅಂದಾಜು ಮಾಡಲಾಗಿದೆ.5 ಅರ್ಧಕ್ಕಿಂತ ಹೆಚ್ಚಿನ ಜನಸಂಖ್ಯೆಯು ತಮ್ಮ ಜೀವನದಲ್ಲಿ ವಿವಿಧ ಹಂತಗಳ ಮಧುಮೇಹಕ್ಕೆ ತುತ್ತಾಗುವ ಅಪಾಯ್ದಲ್ಲಿದ್ದಾರೆ1. ಇದು ಕೇಳುವುದಕ್ಕೆ ಎಷ್ಟು ಭಯಾನಕವೋ ಅಷ್ಟೇ ಸತ್ಯ ಕೂಡ.

  ಈಗ ಪ್ರಸ್ತುತದಲ್ಲಿ ಜಗತ್ತಿನಾದ್ಯಂತ 537 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಅದರಲ್ಲಿ ಸರಿಸುಮಾರು 74 ಮಿಲಿಯನ್ ಮಧುಮೇಹ ಪ್ರಕರಣಗಳು ಭಾರತ ದೇಶದಲ್ಲೊಂದೇ ಇದ್ದು, ಮುಂದಿನ ದಶಕದಲ್ಲಿ ಇದು ತೀವ್ರ ಏರಿಕೆಯಾಗುವ ಅಪಾಯವನ್ನು ತಜ್ಞರು ಅಂದಾಜಿಸಿದ್ದಾರೆ2. ಆರೋಗ್ಯಕರವಲ್ಲದ ಆಹಾರ ಪದ್ಧತಿ, ಸ್ಥೂಲಕಾಯತೆ ಮತ್ತು ಜಡ ಜೀವನಶೈಲಿಯ ಹೆಚ್ಚುತ್ತಿರುವ ಕಾರಣದಿಂದ ಭಾರತವು ಮಧುಮೇಹ ಸಾಂಕ್ರಾಮಿಕದ ಕೇಂದ್ರಬಿಂದುವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

  ಟೈಪ್-1 ಮಧುಮೇಹವು ಒಂದು ಆಟೋಇಮ್ಯೂನ್ ಕಾಯಿಲೆಯಾಗಿದ್ದು, ಪ್ರತಿರಕ್ಷಣಾ ವ್ಯವಸ್ಥೆಯು ಮೇದೋಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಉತ್ಪಾದಿಸುವ ಕೋಶಗಳನ್ನು ನಾಶಪಡಿಸುತ್ತದೆ, ಬದುಕಲು ಇನ್ಸುಲಿನ್ ಬಳಕೆಯನ್ನು ಅಗತ್ಯವಾಗಿಸುತ್ತದೆ. ಚಯಾಪಚಯ ಕಾರಣಗಳಿಂದಾಗಿ ಉತ್ಪತ್ತಿಯಾಗುವ ಇನ್ಸುಲಿನ್ ಅನ್ನು ದೇಹವು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗದೇ ಇದ್ದಾಗ "ವಯಸ್ಕ-ಪೂರ್ವ" ಟೈಪ್ -2 ಮಧುಮೇಹವು ಸಂಭವಿಸುತ್ತದೆ, ಇದು ಮೇದೋಜೀರಕ ಗ್ರಂಥಿಯು ಅತಿಯಾದ ಕೆಲಸ ಮಾಡಲು ಹಾಗೂ ಕೊನೆಗೆ ಅದು ಉತ್ಪಾದನೆಯನ್ನು ನಿಲ್ಲಿಸಲು ಕಾರಣವಾಗುತ್ತದೆ.

  ವಯಸ್ಸಾದವರಿಗೆ” ಮಾತ್ರ ಈ ರೋಗ ಕಾಡುತ್ತದೆ ಎಂಬುದು ಕೇವಲ ಕಟ್ಟುಕತೆ ಅಷ್ಟೇ. ಮಧುಮೇಹವು ಎಲ್ಲಾ ವಯಸ್ಸಿನವರು, ಸಮುದಾಯಗಳು ಮತ್ತು ಖಂಡಗಳ ಮೇಲೆ ಪರಿಣಾಮ ಬೀರುತ್ತದೆ. ಟೈಪ್-2 ಮಧುಮೇಹವು ಭಾರತೀಯ ಯುವಜನತೆಯನ್ನು ಕಾಡುತ್ತಿದ್ದು, ಇದು ಅವರ ಮೇಲೆ ತೀವ್ರವಾದ ಪರಿಣಾಮ ಬೀರುತ್ತಿದೆ. ಭಾರತದಲ್ಲಿ ಮಧುಮೇಹ ಹೊಂದಿರುವ 25 ವರ್ಷದೊಳಗಿನ ಪ್ರತಿ ನಾಲ್ಕು (25.3%) ಜನರಲ್ಲಿ ಒಬ್ಬರು ವಯಸ್ಕ-ಪೂರ್ವ ಟೈಪ್-2 ಮಧುಮೇಹವನ್ನು ಹೊಂದಿದ್ದಾರೆ ಎಂಬುದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಲ್ಲಿನ ಯುವ ಮಧುಮೇಹ ನೋಂದಾವಣೆ ದತ್ತಾಂಶವು ತೋರಿಸುತ್ತದೆ4. ಕುಟುಂಬದಲ್ಲಿ ಮಧುಮೇಹದ ಇತಿಹಾಸವನ್ನು ಹೊಂದಿರುವ ಹಿರಿಯರು, ಸ್ಥೂಲಕಾಯತೆ, ಆರೋಗ್ಯಕರವಲ್ಲದ ಆಹಾರ ಮತ್ತು ಚಟುವಟಿಕೆರಹಿತ ಜೀವನವನ್ನು ಹೊಂದಿರುವ ವ್ಯಕ್ತಿಗಳಲ್ಲಿ ಟೈಪ್-2 ಮಧುಮೇಹವು ಕಂಡುಬರುತ್ತದೆ4. ಇದು ಅಪಾಯಕಾರಿ ಪ್ರವೃತ್ತಿಯಾಗಿದೆ.

  ಮಧುಮೇಹವು ನಿಮ್ಮ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಮೂತ್ರಪಿಂಡದ ಕಾಯಿಲೆಯಿಂದ ಹಿಡಿದು ಕೆಳ ಕೈಕಾಲು ಮತ್ತು ಪಾದದ ತೊಡಕುಗಳು, ನರಗಳ ಕ್ಷೀಣತೆ, ಮೂತ್ರಕೋಶದ ಸಮಸ್ಯೆಗಳು ಮುಂತಾದ ಇದು ಹಲವಾರು ಅಂಗ ವ್ಯವಸ್ಥೆಗಳ5 ಮೇಲೆ, ಅದರಲ್ಲೂ ವಿಶೇಷವಾಗಿ ಕಣ್ಣುಗಳಿಗೆ ಹಾನಿಯನ್ನುಂಟುಮಾಡುತ್ತದೆ. ಹಾಗೆಯೇ ಹೆಚ್ಚು ಪ್ರಚಲಿತದಲ್ಲಿರುವ ಆದರೆ ಸಂಪೂರ್ಣವಾಗಿ ತಡೆಗಟ್ಟಬಹುದಾದ ತೊಡಕುಗಳಲ್ಲಿ ಒಂದು ಡಯಾಬಿಟಿಕ್ ರೆಟಿನೋಪತಿ5.

  ಡಯಾಬಿಟಿಕ್ ರೆಟಿನೋಪತಿಯು ಮಧುಮೇಹ ಹೊಂದಿರುವ ಜನರಲ್ಲಿ ಕಂಡುಬರುವ ಕಣ್ಣಿನ ಸಂಬಂಧಿತ ತೊಡಕಾಗಿದ್ದು, ಇದು ಬೆಳಕನ್ನು ಚಿತ್ರಗಳಾಗಿ ಪ್ರಕ್ರಿಯೆಗೊಳಿಸುವ ಕಾರ್ಯವನ್ನು ನಿರ್ವಹಿಸುವ ಕಣ್ಣಿನ ಒಂದು ಭಾಗವಾದ ರೆಟಿನಾದ ಮೇಲೆ ಪರಿಣಾಮ ಬೀರುತ್ತದೆ. ರಕ್ತದ ಗ್ಲೂಕೋಸ್ ಮಟ್ಟ ಹೆಚ್ಚಾಗುವುದರಿಂದ ಕಣ್ಣಿನಲ್ಲಿರುವ ರಕ್ತನಾಳಗಳು ಸಿಡಿಯಲು, ಊದಿಕೊಳ್ಳಲು ಅಥವಾ ಸೋರಿಕೆಯಾಗಲು ಕಾರಣವಾಗಬಹುದು; ಆದ್ದರಿಂದ ಇದು ಕಣ್ಣಿಗೆ ಹಾನಿಯಾಗುತ್ತದೆ. ಡಯಾಬಿಟಿಕ್ ರೆಟಿನೋಪತಿಯು ಆರಂಭಿಕ ಹಂತಗಳಲ್ಲಿ ಲಕ್ಷಣರಹಿತವಾಗಿರುತ್ತದೆ ಆದರೆ ಸ್ಥಿತಿಯು ಮುಂದುವರೆದಂತೆ, ದೃಷ್ಟಿ ಮಂದವಾಗುವುದರಿಂದ ಅದು ಓದುವಲ್ಲಿ ತೊಂದರೆಯನ್ನು ಉಂಟುಮಾಡಬಹುದು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ, ಇದರಿಂದ ಶಾಶ್ವತವಾಗಿ ದೃಷ್ಟಿ ಕಳೆದುಕೊಳ್ಳಬೇಕಾಗಬಹುದು3. ಇದು ಒಂದು ರೀತಿಯ ಕುರುಡುತನವಾಗಿದ್ದು, ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಇದನ್ನು ಸಂಪೂರ್ಣವಾಗಿ ತಪ್ಪಿಸಬಹುದಾಗಿದೆ.

  1980 ಮತ್ತು 2008 ರ ನಡುವೆ ವಿಶ್ವಾದ್ಯಂತ ನಡೆಸಲಾದ 35 ಅಧ್ಯಯನಗಳ ವಿಶ್ಲೇಷಣೆಯ ಆಧಾರದ ಮೇಲೆ, ರೆಟಿನಾದ ಚಿತ್ರಗಳನ್ನು ಬಳಸಿಕೊಂಡು ಮಧುಮೇಹ ಹೊಂದಿರುವ ಜನರಲ್ಲಿ ಯಾವುದೇ ಡಯಾಬಿಟಿಕ್ ರೆಟಿನೋಪತಿಯ ಒಟ್ಟಾರೆ ಹರಡುವಿಕೆಯು 35% ಮತ್ತು 12% ಜನರಲ್ಲಿ ಕುರುಡುತನದ ಡಯಾಬಿಟಿಕ್ ರೆಟಿನೋಪತಿ ಇದೆ ಎಂದು ಅಂದಾಜಿಸಲಾಗಿದೆ5. ಇಲ್ಲಿ ಕಂಡುಬಂದ ಇನ್ನೊಂದು ಭಯಾನಕ ಅಂಶವೆಂದರೆ, ಇದು ಶಿಶುಗಳ ಮೇಲೆ ಕೂಡಾ ಪರಿಣಾಮ ಬೀರಬಹುದು6!

  ಒಳ್ಳೆ ಸುದ್ದಿ ಬೇಕೇ? ಸರಿಯಾದ ಚಿಕಿತ್ಸೆ ಮತ್ತು ಶಿಫಾರಸು ಮಾಡಿದ ಜೀವನಶೈಲಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ, ಮಧುಮೇಹ ಹೊಂದಿರುವ ಅನೇಕ ಜನರು ತೊಂದರೆಗಳ ಅಪಾಯವನ್ನು ತಡೆಯಲು ಅಥವಾ ವಿಳಂಬಗೊಳಿಸಲು ಸಾಧ್ಯವಾಗುತ್ತದೆ. ಅದು ಪರಿಣಾಮಕಾರಿಯಾಗಿ ಜಾರಿಯಾಗಲು, Novartis ಜೊತೆಗೂಡಿ Network 18 ' Netra Suraksha ' – ಮಧುಮೇಹವನ್ನು ತಡೆಯುವತ್ತ ಭಾರತ ಉಪಕ್ರಮವನ್ನು ಲಾಂಚ್ ಮಾಡಿದೆ, ಈ ಉಪಕ್ರಮವು ವೈದ್ಯಕೀಯ ಕ್ಷೇತ್ರದ ತಜ್ಞರು, ಚಿಂತಕರ ಚಾವಡಿಗಳು ಮತ್ತು ನೀತಿ ರೂಪಕರೊಂದಿಗೆ ಚರ್ಚೆ ನಡೆಸುವ ಮೂಲಕ ಡಯಾಬಿಟಿಕ್ ರೆಟಿನೋಪತಿಯ ಬಗ್ಗೆ ಜಾಗೃತಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಉಪಕ್ರಮದ ಭಾಗವಾಗಿ, Network18 ಮಾಹಿತಿಯುಕ್ತ ಲೇಖನಗಳು ಮತ್ತು ವಿವರಣಾತ್ಮಕ ವಿಡಿಯೋಗಳನ್ನು ಕೂಡ ಪ್ರಕಟಿಸುತ್ತದೆ.

  ಈಗ ನೀವು ಕಾರ್ಯವನ್ನು ಕೈಗೊಳ್ಳಬೇಕಾದ ಸಮಯ. ನಿಮ್ಮನ್ನು ಮತ್ತು ನಿಮ್ಮ ಪ್ರೀತಿಪಾತ್ರರನ್ನು ಪರೀಕ್ಷಿಸುವ ಮೂಲಕ ನೀವು ನಿಮ್ಮ ಕೆಲಸವನ್ನು ಮಾಡಿ. ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಮಾನಿಟರ್ ಮಾಡುವ ಮೂಲಕ ಮತ್ತು ಅದನ್ನು ಮ್ಯಾನೇಜ್ ಮಾಡುವ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ನಿಯಮಿತವಾಗಿ ವ್ಯಾಯಾಮ ಮಾಡಿ, ಸಾಕಷ್ಟು ನೀರು ಕುಡಿಯುತ್ತಿರಿ ಮತ್ತು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಆಹಾರವನ್ನು ಆರಿಸುವ ಮೂಲಕ ನಿಮ್ಮ ಕಾರ್ಬ್ ಮತ್ತು ಸಕ್ಕರೆ ಸೇವನೆಯನ್ನು ಮ್ಯಾನೇಜ್ ಮಾಡಿ. ಮಧುಮೇಹವನ್ನು ತಡೆಗಟ್ಟಬಹುದು, ಮತ್ತು ಕೆಲವು ಸಂದರ್ಭಗಳಲ್ಲಿ, ಅದನ್ನು ಮೊದಲೇ ಕಂಡುಹಿಡಿದರೆ ಅದನ್ನು ಹಿಮ್ಮೆಟ್ಟಿಸಬಹುದು ಕೂಡಾ! ನಿಯಮಿತ ಕಣ್ಣಿನ ತಪಾಸಣೆ, ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ ಮತ್ತು ಒತ್ತಡವನ್ನು ಕಡಿಮೆ ಮಾಡಲು ಸ್ವಯಂ ಕಾಳಜಿಯ ದಿನಚರಿಯಂತಹ ಸರಿಯಾದ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಉತ್ತಮವಾದ ಜೀವನವನ್ನು ನಡೆಸಿ.

  ಡಯಾಬಿಟಿಕ್ ರೆಟಿನೋಪತಿಗೆ ವಿಷಯಕ್ಕೆ ಬಂದರೆ, ತಡೆಗಟ್ಟುವಿಕೆ ಬಹಳ ಪ್ರಮುಖವಾಗಿದೆ. ಆದ್ದರಿಂದ, ನಿಮಗೆ ಮಧುಮೇಹ ಇಲ್ಲದಿದ್ದರೂ ಕೂಡಾ ಪ್ರತಿ ವರ್ಷ ನಿಮ್ಮ ಕಣ್ಣುಗಳನ್ನು ಪರೀಕ್ಷಿಸಿಕೊಳ್ಳಿ! ಪರೀಕ್ಷಿಸಿದರೆ ಯಾವುದೇ ರೀತಿಯ ನೋವಾಗುವುದಿಲ್ಲ ಮತ್ತು ಪ್ರಕ್ರಿಯೆಯು ವೇಗವಾಗಿರುತ್ತದೆ. ನಿಮ್ಮ ಕಣ್ಣುಗಳ ಉತ್ತಮ ಆರೈಕೆಯನ್ನು ಪ್ರಾರಂಭಿಸಲು ನಿಮಗೆ ನೀವೇ ಸಹಾಯ ಮಾಡಿಕೊಳ್ಳುವುದಕ್ಕಾಗಿ ನೇತ್ರ ಸುರಕ್ಷಾ ಉಪಕ್ರಮದ ಆನ್‌ಲೈನ್ ಡಯಾಬಿಟಿಕ್ ರೆಟಿನೋಪತಿ ಸ್ವಯಂ ತಪಾಸಣೆಯನ್ನು ಬಳಸಿ. 

  Netra Suraksha initiative ಕುರಿತು ಇನ್ನಷ್ಟು ವಿವರಗಳನ್ನು ತಿಳಿದುಕೊಳ್ಳಲು News18.com ಅನುಸರಿಸಿ ಹಾಗೂ 21 ನೇ ಶತಮಾನದ ವೇಗವಾಗಿ ಬೆಳೆಯುತ್ತಿರುವ ಆರೋಗ್ಯ ತುರ್ತುಸ್ಥಿತಿಯಾದ ಮಧುಮೇಹದ ವಿರುದ್ಧದ ಹೋರಾಟದಲ್ಲಿ ನಮ್ಮೊಂದಿಗೆ ಕೈಜೋಡಿಸಿ.    Sources: 

  1. https://www.medicalnewstoday.com/articles/diabetes-in-india 10 Dec, 2021.

  2. IDF Atlas, International Diabetes Federation, 10th edition, 2021

  3. https://www.nei.nih.gov/learn-about-eye-health/eye-conditions-and-diseases/diabetic-retinopathy 10 Dec, 2021.

  4. https://www.hindustantimes.com/health/world-diabetes-day-one-in-every-four-of-india-s-youth-suffer-from-the-deadlier-type-2/story-LP4ugRJ5qqLNITYg24xCbO.html 10 Dec, 2021.

  5. IDF Atlas, International Diabetes Federation, 9th edition, 2019

  6. https://www.diabetesincontrol.com/retinopathy-occurs-sooner-in-prediabetes/ 10 Dec, 2021.

  Published by:Soumya KN
  First published: