ಗರ್ಭಧಾರಣೆ (Pregnancy) ವೇಳೆ ಹೆಚ್ಚಿನ ಮಹಿಳೆಯರಿಗೆ ತಮ್ಮ ಆರೋಗ್ಯ ಕ್ರಮದ ಬಗ್ಗೆ ಚಿಂತೆ ಇರುತ್ತೆ. ಮಧುಮೇಹ (Diabetes) ಇರುವ ಗರ್ಭಿಣಿಯರು ಈ ಸಮಯದಲ್ಲಿ ಸರಿಯಾದ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋಗೋದು ಅತೀ ಮುಖ್ಯ. ಇದರಿಂದ ಮಧುಮೇಹ ಹೊಂದಿರುವ ಗರ್ಭಿಣಿಯರಿಗೆ ತುಂಬಾ ಕ್ರಮಬದ್ಧವಾಗಿ (Methodical) ಆಹಾರವನ್ನು ನೀಡಬೇಕು. ಕೆಲವು ಮಹಿಳೆಯರಲ್ಲಿ ಗರ್ಭಧಾರಣೆ ವೇಳೆ ಮಧುಮೇಹ ಕಾಣಿಸಿಕೊಳ್ಳುವುದು. ಇದು ಗರ್ಭಧಾರಣೆ ವೇಳೆ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಿಸುವುದು. ನಿಮಗೆ ಮಧುಮೇಹ ಇದ್ದರೂ ಅಥವಾ ಗರ್ಭಧಾರಣೆ ವೇಳೆ ಮಧುಮೇಹ ಬಂದರೂ ನೀವು ಸೇವಿಸುವಂತಹ ಆಹಾರದ (Food) ಬಗ್ಗೆ ವಿಶೇಷ ಕಾಳಜಿ ವಹಿಸಿಕೊಳ್ಳಬೇಕು. ಗರ್ಭಧಾರಣೆ ವೇಳೆ ಕಾಣಿಸಿಕೊಳ್ಳುವಂತಹ ಮಧುಮೇಹಕ್ಕೆ ನೀವು ವೈದ್ಯರನ್ನು ಸಂಪರ್ಕಿಸಬೇಕು.
ಸಾಮಾನ್ಯ ಗರ್ಭಿಣಿಯರಿಗಿಂತ ಮಧುಮೇಹ ಇರುವಂತಹ ಗರ್ಭಿಣಿಯರಿಗೆ ನೀಡುವಂತಹ ಆಹಾರವು ಭಿನ್ನವಾಗಿರುವುದು
ಕಲ್ಲಂಗಡಿ ತುಂಬಾ ಒಳ್ಳೆಯದು
ಕಲ್ಲಂಗಡಿ ಹಣ್ಣು ಗರ್ಭಿಣಿಯರಿಗೆ ತುಂಬಾ ಒಳ್ಳೆಯದು. ಕಲ್ಲಂಗಡಿಯಲ್ಲಿ ಹೆಚ್ಚಿನ ಮಟ್ಟದ ನೀರಿನಾಂಶವಿದೆ. ಆದರೆ ಇದರಲ್ಲಿ ಗ್ಲೈಸೆಮಿಕ್ ಕಡಿಮೆ ಇದೆ. ಕಲ್ಲಂಗಡಿಯು ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ. ಕಲ್ಲಂಗಡಿಯಲ್ಲಿ ಗರಿಷ್ಠ ಮಟ್ಟದಲ್ಲಿ ನೀರು ಇದ್ದರೂ ಉಳಿದಂತೆ ಹಲವಾರು ಪೋಷಕಾಂಶಗಳೂ ಇವೆ. ಪ್ರಮುಖವಾಗಿ ವಿಟಮಿನ್ ಎ ಮತ್ತು ಸಿ. ಈ ಪೋಷಕಾಂಶಗಳು ಗರ್ಭಿಣಿಯ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುವ ಜೊತೆಗೇ ಮಗುವಿನ ಪೋಷಣೆಗೂ ನೆರವಾಗುತ್ತದೆ.
ಇದನ್ನೂ ಓದಿ: Pregnancy: ಗರ್ಭಿಣಿಯರಿಗೆ ಯಾವ ಪ್ರಾಣಾಯಾಮ ಬೆಸ್ಟ್ & ಸೇಫ್? ವೈದ್ಯರ ಸಲಹೆ ಹೀಗಿದೆ!
ಗೆಣಸು ಶಕ್ತಿ ನೀಡುತ್ತೆ
ಗರ್ಭಿಣಿಯರಿಗೆ ಹೆಚ್ಚಿನ ಶಕ್ತಿಬೇಕಾಗುತ್ತದೆ. ಇದರಿಂದ ಪಿಷ್ಠ ಕಾರ್ಬ್ ಹೊಂದಿರುವ ಅನ್ನ ಸೇವನೆ ಮಾಡಬೇಕು. ಗೆಣಸಿನಲ್ಲಿ ಪ್ರಮುಖವಾಗಿ ಪಿಷ್ಟದ ಪ್ರಮಾಣ ಹೆಚ್ಚಿದ್ದರೂ ಇವು ಜೀರ್ಣಗೊಂಡಾಗ ಸರಳ ಸಕ್ಕರೆಗಳಾಗಿ ವಿಂಗಡನೆಗೊಳ್ಳುತ್ತವೆ. ಈ ಸಕ್ಕರೆಗಳನ್ನು ಹೀರಿಕೊಳ್ಳಲು ನಮ್ಮ ಜೀರ್ಣಾಂಗಗಳಿಗೆ ಹೆಚ್ಚು ಕಷ್ಟಪಡಬೇಕಾಗಿಲ್ಲ ಹಾಗೂ ಈ ಸಕ್ಕರೆ ರಕ್ತದಲ್ಲಿನ ಒಟ್ಟಾರೆ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ನೆರವಾಗುವ ಕಾರಣ ಮಧುಮೇಹಿಗಳಿಗೂ ಗೆಣಸು ಸೂಕ್ತವಾದ ಆಹಾರವಾಗಿದೆ.
ಓಟ್ಸ್, ಮಿಲ್ಲೆಟ್ ಸೇವಿಸಿ
ಇಡೀ ಸಿರೇಲ್ ಗಳಾಗಿರುವ ಮುಸ್ಲಿ, ಓಟ್ಸ್, ಮಿಲ್ಲೆಟ್ ಮಧುಮೇಹದಿಂದ ಬಳಲುತ್ತಿರುವ ಗರ್ಭಿಣಿಯರಿಗೆ ತುಂಬಾ ಒಳ್ಳೆಯದು. ನಿಮಗೆ ಬೇಕಿರುವ ಕಾರ್ಬ್ರೋಹೈಡ್ರೇಟ್ಸ್ ಇದರಿಂದ ಸಿಗುವುದು ಮತ್ತು ಮಲಬದ್ಧತೆಯನ್ನು ದೂರವಿರಿಸಬಹುದು.
ಸಿಟ್ರಸ್ ಹಣ್ಣುಗಳು
ಮಧುಮೇಹಿಗಳು ಯಾವತ್ತೂ ಜ್ಯೂಸ್ ಕುಡಿಯಬಾರದು. ಇವರು ಹಣ್ಣುಗಳನ್ನು ತಿಂದರೆ ಒಳ್ಳೆಯದು. ಕಿತ್ತಳೆ, ಸಿಹಿ ಲಿಂಬೆ ಮತ್ತು ಬೆರ್ರಿಗಳು ಒಳ್ಳೆಯದು. ಆದರೆ ದಿನಕ್ಕೆ ಒಂದು ಹಣ್ಣು ಮಾತ್ರ ತಿನ್ನಿ.
ಸೇಬು ತಿನ್ನೋದನ್ನು ಮರೆಯದಿರಿ
ಸೇಬಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕರಗುವ ನಾರು ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪೋಷಕಾಂಶಗಳಿರುವ ಕಾರಣ ಎಲ್ಲಾ ವರ್ಗದ ಜನರಿಗೆ ಆರೋಗ್ಯದ ಭಾಗ್ಯ ಕರುಣಿಸುವ ಹಣ್ಣಾಗಿದೆ. ಇನ್ನು ಗರ್ಭಿಣಿಯರು ಯಾವತ್ತೂ ಸೇಬು ಸೇವನೆ ಮಾಡುವುದನ್ನು ಕಡೆಗಣಿಸಲೇಬಾರದು. ಮಧುಮೇಹ ಹೊಂದಿರುವ ಗರ್ಭಿಣಿಯರು ದಿನಕ್ಕೆ ಒಂದು ಹಸಿರು ಸೇಬು ಅಥವಾ ಳಿ ಕೆಂಪು ಸೇಬು ತಿನ್ನಬಹುದು.
ಇದನ್ನೂ ಓದಿ: Pregnancy Tips: ಅವಳಿ ಮಕ್ಕಳ ಗರ್ಭಧಾರಣೆ ವೇಳೆ ಇರಲಿ ಡಬಲ್ ಕಾಳಜಿ..!
ಅಡುಗೆಯಲ್ಲಿರಲಿ ಹಸಿರು ತರಕಾರಿಗಳು
ಸಾತ್ವಿಕ ಆಹಾರವೆಂದು ಕರೆಯಲಾಗುವ ತರಕಾರಿಗಳು ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಮಾಂಸಹಾರಿಗಳಿಗಿಂತ ಸಸ್ಯಾಹಾರಿಗಳು ಹೆಚ್ಚು ಆರೋಗ್ಯವಾಗಿದ್ದಾರೆ ಎಂದರೆ ತಪ್ಪಾಗಲಾರದು. ತರಕಾರಿ ಹಾಗೂ ಹಸಿರೆಲೆ ತರಕಾರಿಗಳಲ್ಲಿ ಇರುವಂತಹ ಹಲವಾರು ರೀತಿಯ ವಿಟಮಿನ್ ಹಾಗೂ ಪೋಷಕಾಂಶಗಳು ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಮೊಟ್ಟೆ, ಸೋಯಾ
ಗರ್ಭಿಣಿ ಮಹಿಳೆಯು ದಿನಕ್ಕೆ ಎರಡು ಮೊಟ್ಟೆ ಸೇವನೆ ಮಾಡುವುದು ಒಳ್ಳೆಯದು. ಇದರಲ್ಲಿ ಹೆಚ್ಚಿನ ಸಕ್ಕರೆಯಂಶ ಇಲ್ಲದೆ ಇರುವ ಕಾರಣದಿಂದಾಗಿ ಇದನ್ನು ಸೇವಿಸಬಹುದು. ಮಧುಮೇಹಿಗಳಿಗೆ ಸೋಯಾವು ಒಳ್ಳೆಯ ಪ್ರೋಟೀನ್ ಒದಗಿಸುವುದು. ನೀವು ಸಸ್ಯಹಾರಿಯಾಗಿದ್ದರೆ ಆಗ ನೀವು ಮಾಂಸ ಮತ್ತು ಮೀನಿನ ಬದಲು ಸೋಯಾ ಸೇವಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ