Diabetes Problem: ಶುಗರ್​ ಕಂಟ್ರೋಲ್​​ನಲ್ಲಿ ಇರಬೇಕೆಂದರೆ ಈ ಸಿಂಪಲ್​ ಆಯುರ್ವೇದ ಟಿಪ್ಸ್​ ಪಾಲಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಧುಮೇಹವು ರಕ್ತದ ಸಕ್ಕರೆ ಹೆಚ್ಚಿಸುವ ರೋಗವಾಗಿದೆ. ಹಾಗಾಗಿ ರೋಗಿಗಳು ರಕ್ತದ ಸಕ್ಕರೆ ನಿಯಂತ್ರಿಸುವುದು ಮುಖ್ಯ. ಮಧುಮೇಹ ಅಥವಾ ರಕ್ತದ ಸಕ್ಕರೆ ಹೇಗೆ ನಿಯಂತ್ರಿಸುವುದು ಎಂಬ ಪ್ರಶ್ನೆ ಬಹುತೇಕ ರೋಗಿಗಳದ್ದಾಗಿದೆ. ಮಧುಮೇಹ ರೋಗಿಗಳಲ್ಲಿ ಹೆಚ್ಚಿದ ರಕ್ತದ ಸಕ್ಕರೆ ಅನೇಕ ರೋಗ ಲಕ್ಷಣ ಉಂಟು ಮಾಡುತ್ತದೆ.

ಮುಂದೆ ಓದಿ ...
  • Share this:

    ಮಧುಮೇಹ (Diabetes) ಎಂಬುದು ವ್ಯಕ್ತಿಯಲ್ಲಿ ಒಮ್ಮೆ ಶುರುವಾದರೆ ಅದು ಜೀವನಪರ್ಯಂತ ಗುಣಪಡಿಸಲಾಗದ ಕಾಯಿಲೆ (Disease) ಆಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಒಮ್ಮೆ ಮಧುಮೇಹ ಕಾಯಿಲೆಗೆ ವ್ಯಕ್ತಿ ಬಲಿಯಾದರೆ ರೋಗವು ದೇಹವನ್ನು (Body) ಒಳಗಿನಿಂದ ನಿಧಾನವಾಗಿ ಟೊಳ್ಳಾಗಿಸುತ್ತಾ ಹೋಗುತ್ತದೆ. ಇದಕ್ಕೆ ಯಾವುದೇ ಚಿಕಿತ್ಸೆ (Treatment) ಇಲ್ಲ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಅಷ್ಟೇ ಅಲ್ಲದೇ ಮಧುಮೇಹವು ಮಾರಣಾಂತಿಕವೂ ಆಗುವ ಸಾಧ್ಯತೆ ಹೆಚ್ಚು. ಹಲವು ಜನರು (People) ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದನ್ನು ನಿಯಂತ್ರಿಸಿದರೆ ಮಾತ್ರ ಉತ್ತಮ ಹಾಗೂ ಆರೋಗ್ಯಕರ ಜೀವನ ನಡೆಸಲು ಸಾಧ್ಯ. ಅದಾಗ್ಯೂ ಉತ್ತಮ ಜೀವನಶೈಲಿಯೇ ಈ ಕಾಯಿಲೆ ಹತ್ತಿಕ್ಕಲು ಇರುವ ರಾಮಬಾಣ.


    ಮಧುಮೇಹ ನಿಯಂತ್ರಣಕ್ಕೆ ಆಯುರ್ವೇದ ಪರಿಹಾರ


    ಮಧುಮೇಹವು ರಕ್ತದ ಸಕ್ಕರೆ ಹೆಚ್ಚಿಸುವ ರೋಗವಾಗಿದೆ. ಹಾಗಾಗಿ ರೋಗಿಗಳು ರಕ್ತದ ಸಕ್ಕರೆ ನಿಯಂತ್ರಿಸುವುದು ಮುಖ್ಯ. ಮಧುಮೇಹ ಅಥವಾ ರಕ್ತದ ಸಕ್ಕರೆ ಹೇಗೆ ನಿಯಂತ್ರಿಸುವುದು ಎಂಬ ಪ್ರಶ್ನೆ ಬಹುತೇಕ ರೋಗಿಗಳದ್ದಾಗಿದೆ.


    ಮಧುಮೇಹ ರೋಗಿಗಳಲ್ಲಿ ಹೆಚ್ಚಿದ ರಕ್ತದ ಸಕ್ಕರೆ ಅನೇಕ ರೋಗ ಲಕ್ಷಣ ಉಂಟು ಮಾಡುತ್ತದೆ. ಮಧುಮೇಹವನ್ನು ಸರಳ ಮತ್ತು ಪರಿಣಾಮಕಾರಿ ವಿಧಾನಗಳ ಮೂಲಕ ನಿರ್ವಹಿಸಬಹುದು. ಹಾಗಾಗಿ ಮೊದಲು ಮಧುಮೇಹ ಗಂಭೀರ ಹಂತ ತಲುಪುವ ಮೊದಲು ಅದನ್ನು ಪತ್ತೆ ಹಚ್ಚಬೇಕು.




    ಮಧುಮೇಹಕ್ಕೆ ಆಯುರ್ವೇದ ಚಿಕಿತ್ಸೆ ಯಾವುದು?


    ಸರಿಯಾದ ಸಮಯಕ್ಕೆ ಕಾಯಿಲೆ ಪತ್ತೆ ಹಚ್ಚಿದರೆ ಅದಕ್ಕೆ ಉತ್ತಮ ರೀತಿಯ ಚಿಕಿತ್ಸೆ ಕೊಡಿಸಬಹುದು. ಮಧುಮೇಹಕ್ಕೆ ಆಯುರ್ವೇದ ಚಿಕಿತ್ಸೆ ಯಾವುದು? ಅಧಿಕ ರಕ್ತದ ಸಕ್ಕರೆ ನಿಯಂತ್ರಿಸಲು ಮೊದಲು ಆರೋಗ್ಯಕರ ಜೀವನಶೈಲಿ ನಡೆಸುವುದು ಮುಖ್ಯ.


    ನಿತ್ಯವೂ ನಿಯಮಿತವಾಗಿ ಯೋಗ ಮಾಡುವುದು, ವಾಕಿಂಗ್ ಹೋಗುವುದು, ಆರೋಗ್ಯಕರ ಆಹಾರ ಪದ್ಧತಿ ಫಾಲೋ ಮಾಡುವುದು, ಔಷಧ ಸೇವನೆ ಹಾಗೂ ಕೆಲವು ಮನೆಮದ್ದು ಮಾಡಬಹುದು.


    ಆಯುರ್ವೇದ ವೈದ್ಯರು ಹೇಳುವ ಪ್ರಕಾರ, ಅಗ್ನಿಯ ಕಡಿಮೆ ಕಾರ್ಯ ನಿರ್ವಹಣೆಯಿಂದ ಮಧುಮೇಹ ಉಂಟಾಗುತ್ತದೆ ಎಂದು ಅವರು ಹೇಳುತ್ತಾರೆ. ರಕ್ತದ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ.


    ಮಧುಮೇಹ ಮತ್ತು ರಕ್ತದ ಸಕ್ಕರೆ ಮಟ್ಟ ನಿರ್ವಹಿಸಲು ವಿವಿಧ ಇಂಗ್ಲಿಷ್ ಮತ್ತು ಆಯುರ್ವೇದ ಔಷಧಿಗಳಿವೆ. ಇವುಗಳ ಹೊರತಾಗಿ ಕೆಲವು ಆಯುರ್ವೇದ ಮನೆಮದ್ದುಗಳಿವೆ. ಅವುಗಳನ್ನು ನೋಡೋಣ.


    ಆಯುರ್ವೇದ ಗಿಡಮೂಲಿಕೆಗಳ ಪುಡಿ


    ಆಯುರ್ವೇದದ ಗಿಡಮೂಲಿಕೆಗಳಾದ ಗುಡುಚಿ, ಕುಡ್ಕಿ, ಶಾರದೂನಿಕ ಮತ್ತು ಪುನರ್ ನವ ಮೂಲಿಕೆಗಳು ರಕ್ತದ ಸಕ್ಕರೆ ನಿಯಂತ್ರಿಸುತ್ತವೆ. ಗಿಡಮೂಲಿಕೆಗಳ ಮಿಶ್ರಣವನ್ನು ತಯಾರಿಸುವಾಗ ಇವುಗಳನ್ನು ಬೆರೆಸಲಾಗುತ್ತದೆ. ಬೆಚ್ಚಗಿನ ನೀರಿನಲ್ಲಿ ಈ ಮಿಶ್ರಣವನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಸೇವಿಸುವುದು ಪ್ರಯೋಜನ ನೀಡುತ್ತದೆ.


    ತಾಮ್ರದ ಪಾತ್ರೆಯಿಂದ ನೀರು ಕುಡಿಯಿರಿ


    ತಾಮ್ರದ ಪಾತ್ರೆಯಿಂದ ನೀರನ್ನು ಕುಡಿಯುವುದು ಆರೋಗ್ಯ ಪ್ರಯೋಜನ ನೀಡುತ್ತದೆ. ಶತಮಾನಗಳಿಂದಲೂ ಶಿಫಾರಸು ಮಾಡಲ್ಪಟ್ಟಿದೆ. ಆಯುರ್ವೇದ ತಜ್ಞರ ಪ್ರಕಾರ, ತಾಮ್ರದ ಪಾತ್ರೆಯ ನೀರು ಸೇವನೆಯು ರಕ್ತದ ಸಕ್ಕರೆಯ ಏರಿಳಿತ ತಡೆಯುತ್ತದೆ. ರಾತ್ರಿಯಿಡೀ ತಾಮ್ರದ ಪಾತ್ರೆಯಲ್ಲಿ ನೀರು ಸಂಗ್ರಹಿಸಿ ಕುಡಿಯಿರಿ.


    ಸಾಂದರ್ಭಿಕ ಚಿತ್ರ


    ಮೆಂತ್ಯ ಬೀಜಗಳ ಸೇವನೆ


    ಆಯುರ್ವೇದ ತಜ್ಞರ ಪ್ರಕಾರ, ಮಧುಮೇಹ ರೋಗಿಗಳು ನಿಯಮಿತವಾಗಿ ಮೆಂತ್ಯ ಬೀಜ ಸೇವಿಸಬೇಕು. ಮೆಂತ್ಯ ಬೀಜಗಳ ಮೊಳಕೆ ಕಾಳು ಸೇವನೆಯು ಪ್ರಯೋಜನಕಾರಿ. ಬೆಳಿಗ್ಗೆ ಮೆಂತ್ಯ ನೀರು ಕುಡಿಯಬಹುದು.


    ಕಹಿ ಪದಾರ್ಥಗಳ ಸೇವನೆ


    ಸಕ್ಕರೆ ಅಥವಾ ಕಾರ್ಬೋಹೈಡ್ರೇಟ್‌ ಗಳ ಸೇವನೆಯ ಬದಲು ಕಹಿ ಆಹಾರ ಸೇವಿಸಿ. ಹಾಗಲಕಾಯಿ, ಆಮ್ಲಾ, ಸೆಣಬಿನ ಬೀಜ ಮತ್ತು ಅಲೋವೆರಾ ಇತ್ಯಾದಿ ಸೇವಿಸಿ.


    ಆಹಾರ ಬದಲಾವಣೆ ಮಾಡಿ


    ಒಂದೇ ರೀತಿಯ ಆಹಾರ ಸೇವನೆ ತಪ್ಪಿಸಿ. ಕಡಿಮೆ ಕೊಬ್ಬು ಪದಾರ್ಥ ಸೇವಿಸಿ. ಡೈರಿ ಉತ್ಪನ್ನಗಳ ಬದಲಿಗೆ ಬಾದಾಮಿ, ಸೋಯಾ, ಕೆನೆ ತೆಗೆದ ಹಾಲು ಮತ್ತು ಕಡಿಮೆ ಕೊಬ್ಬಿನ ಮೊಸರು ಸೇವನೆ ಮಾಡಿ.


    ಅಡಿಗೆ ಮಸಾಲೆ ಪದಾರ್ಥ ಸೇವನೆ


    ಅಡುಗೆ ಮನೆಯ ಮಸಾಲೆ ಪದಾರ್ಥಗಳು ಮಧುಮೇಹ ವಿರೋಧಿ ಗುಣ ಹೊಂದಿವೆ. ಅರಿಶಿನ, ಸಾಸಿವೆ, ಇಂಗು, ದಾಲ್ಚಿನ್ನಿ ಮತ್ತು ಕೊತ್ತಂಬರಿ ಬೀಜ ರಕ್ತದ ಸಕ್ಕರೆ ನಿಯಂತ್ರಿಸುವ ಸಾಮರ್ಥ್ಯ ಹೊಂದಿವೆ.


    ಇದನ್ನೂ ಓದಿ: ಸೌಂದರ್ಯಕ್ಕೊಂದೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು ರೋಸ್ ವಾಟರ್  


    ಮಧುಮೇಹ ತಡೆಗಟ್ಟುವ ಇತರ ಮಾರ್ಗಗಳು


    ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಟಲ್ ಸೋರೆಕಾಯಿ ರಸ ಕುಡಿಯಬಹುದು, ನಿಮ್ಮ ಆಹಾರಕ್ಕೆ ಕಡಲೆ ಸೇರಿಸಿ, ಹಾಗಲಕಾಯಿ ಕರಿ ಅಥವಾ ಜ್ಯೂಸ್ ಕುಡಿಯಿರಿ. ಆಮ್ಲಾ ಜ್ಯೂಸ್ ಹಾಗೂ ಬಾಟಲ್ ಸೋರೆಕಾಯಿ ರಸ ಕುಡಿಯಿರಿ.

    Published by:renukadariyannavar
    First published: