• Home
  • »
  • News
  • »
  • lifestyle
  • »
  • Diabetes Problem: ಮಧುಮೇಹ ನಿಯಂತ್ರಣಕ್ಕೆ ಯಾವ ಗಿಡಮೂಲಿಕೆ ಸೂಕ್ತ? ಇಲ್ಲಿದೆ ಮಾಹಿತಿ

Diabetes Problem: ಮಧುಮೇಹ ನಿಯಂತ್ರಣಕ್ಕೆ ಯಾವ ಗಿಡಮೂಲಿಕೆ ಸೂಕ್ತ? ಇಲ್ಲಿದೆ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಟೈಪ್ 1 ಮಧುಮೇಹ ಮತ್ತು ಟೈಪ್ 2 ಮಧುಮೇಹ ಎರಡು ಮಧುಮೇಹದ ವಿಧಗಳಾಗಿವೆ. ಎರಡೂ ರೀತಿಯ ಮಧುಮೇಹ ಹೋಗಲಾಡಿಸಲು ಆಯುರ್ವೇದ ವೈದ್ಯರು ಅದ್ಭುತ ಪರಿಹಾರ ಹೇಳಿದ್ದಾರೆ. ಡಾ. ದೀಕ್ಷಾ ಭಾವಸರ್ ಸವಲಿಯಾ ಮನೆಯಲ್ಲಿ ಇರುವ ಐದು ವಸ್ತುಗಳು ಮಧುಮೇಹ ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.

  • Share this:

    ಮಧುಮೇಹ ಕಾಯಿಲೆ (Diabetes Disease) ಒಂದು ಬಾರಿ ದೇಹಕ್ಕೆ (Body) ಅಂಟಿಕೊಂಡರೆ ಜೀವನಪರ್ಯಂತ ಹೋಗುವುದಿಲ್ಲ. ಮಧುಮೇಹ ಸಾಕಷ್ಟು ಅನಾರೋಗ್ಯಕರ ಜೀವನಶೈಲಿಯಿಂದ (Unhealthy Lifestyle) ಉಂಟಾಗುವ ಕಾಯಿಲೆ ಆಗಿದೆ. ಮಧುಮೇಹದಲ್ಲಿ ಎರಡು ಮುಖ್ಯ ವಿಧಗಳಿವೆ. ಅವುಗಳೆಂದರೆ ಟೈಪ್ 1 ಮಧುಮೇಹ ಮತ್ತು ಟೈಪ್ 2 ಮಧುಮೇಹ ಆಗಿದೆ. ಎರಡೂ ರೀತಿಯ ಮಧುಮೇಹ ಹೋಗಲಾಡಿಸಲು ಆಯುರ್ವೇದ ವೈದ್ಯರು ಅದ್ಭುತ ಪರಿಹಾರ ಹೇಳಿದ್ದಾರೆ. ಡಾ. ದೀಕ್ಷಾ ಭಾವಸರ್ ಸವಲಿಯಾ ಅವರು ಹೇಳುವ ಪ್ರಕಾರ, ಮೆಂತ್ಯ, ಮೆಣಸು ಸೇರಿ ಮನೆಯಲ್ಲಿ ಇರುವ ಐದು ವಸ್ತುಗಳು ಮಧುಮೇಹ ನಿಯಂತ್ರಿಸಲು ಸಹಾಯ ಮಾಡುತ್ತದೆ.


    ಆಯುರ್ವೇದ ಗಿಡಮೂಲಿಕೆಗಳು ಮಧುಮೇಹ ಗುಣಪಡಿಸುವ ಶಕ್ತಿ ಹೊಂದಿವೆ


    ಕರಿಮೆಣಸು, ಮೆಂತ್ಯ, ಶುಂಠಿ, ದಾಲ್ಚಿನ್ನಿ, ಅರಿಶಿನ, ಅಮಲಾ ಆಯುರ್ವೇದ ಗಿಡಮೂಲಿಕೆಗಳು, ಇವು ಎರಡೂ ರೀತಿಯ ಮಧುಮೇಹ ಗುಣಪಡಿಸುವ ಶಕ್ತಿ ಹೊಂದಿವೆ ಅಂತಾರೆ ಆಯುರ್ವೇದ ವೈದ್ಯರು. ಆದರೆ ಅವುಗಳನ್ನು ತಿನ್ನಲು ಸರಿಯಾದ ಮಾರ್ಗ ಮತ್ತು ಸರಿಯಾದ ಸಮಯವಿದೆ. ಎಂಬುದರ ಬಗ್ಗೆ ಆಯುರ್ವೇದ ವೈದ್ಯರು ವಿವರವಾಗಿ ಮಾಹಿತಿ ನೀಡಿದ್ದಾರೆ.


    ಮೆಂತ್ಯ


    ಡಾ. ದೀಕ್ಷಾ ಭಾವಸರ್ ಅವರ ಪ್ರಕಾರ, ಮೆಂತ್ಯ ಮಧುಮೇಹ ಹಿಮ್ಮೆಟ್ಟಿಸಲು ಅದ್ಭುತ ಆಯುರ್ವೇದ ಔಷಧ ಆಗಿದೆ. ಅದರ ಬಿಸಿ ಪರಿಣಾಮ ಮತ್ತು ಕಹಿ ರುಚಿ ಬೊಜ್ಜು ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


    ಇದನ್ನೂ ಓದಿ: ಪಾರ್ಶ್ವವಾಯುಗೆ ತುತ್ತಾಗದಂತೆ ತಡೆಯುತ್ತೆ ಈ ಆಹಾರಗಳು


    ಈ ಉಪವಾಸವು ರಕ್ತದ ಸಕ್ಕರೆ ಪ್ರಮಾಣ ಕಡಿಮೆ ಮಾಡಲು ಸಹಕಾರಿ ಆಗಿದೆ. ಮತ್ತು ಗ್ಲೂಕೋಸ್ ಸಹಿಷ್ಣುತೆ ಹೆಚ್ಚಿಸುತ್ತದೆ. ಮೆಂತ್ಯ ತಿನ್ನುವ ವಿಧಾನವೆಂದರೆ ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ರಾತ್ರಿ ಮಲಗುವ ಮೊದಲು ಒಂದು ಚಮಚ ಮೆಂತ್ಯದ ಪುಡಿಯನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ ಸೇವಿಸಿ.


    ಕರಿ ಮೆಣಸು


    ಕರಿಮೆಣಸು ಪೈಪರಿನ್ ಅನ್ನು ಹೊಂದಿದೆ. ಇದು ಇನ್ಸುಲಿನ್ ಸೂಕ್ಷ್ಮತೆ ಸುಧಾರಿಸುವ ಕೆಲಸ ಮಾಡುತ್ತದೆ. ಅದೇ ವೇಳೆ ಇದು ರಕ್ತದ ಸಕ್ಕರೆ ನಿಯಂತ್ರಣ ಮಾಡುತ್ತದೆ. ಮತ್ತು ಸಕ್ಕರೆ ಇದ್ದಕ್ಕಿದ್ದಂತೆ ಹೆಚ್ಚಾಗಲು ಅನುಮತಿ ನೀಡುವುದಿಲ್ಲ.


    ಕರಿಮೆಣಸು ತಿನ್ನುವ ವಿಧಾನ ಅಂದ್ರೆ ಒಂದು ಕರಿಮೆಣಸನ್ನು ಪುಡಿ ಮಾಡಿ. ಅದಕ್ಕೆ ಒಂದು ಚಮಚ ಅರಿಶಿನ ಪುಡಿ ಜೊತೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ರಾತ್ರಿ ಊಟಕ್ಕೆ ಒಂದು ಗಂಟೆ ಮೊದಲು ಸೇವನೆ ಮಾಡಿ.


    ದಾಲ್ಚಿನ್ನಿ


    ದಾಲ್ಚಿನ್ನಿ ಸೇವನೆ ಇನ್ಸುಲಿನ್ ಪ್ರತಿರೋಧ ಕಡಿಮೆ ಮಾಡುತ್ತದೆ. ಮತ್ತು ಊಟದ ನಂತರ ರಕ್ತದ ಸಕ್ಕರೆ ನಿಯಂತ್ರಣದಲ್ಲಿ ಇಡುತ್ತದೆ. ದಾಲ್ಚಿನ್ನಿ ಸೇವನೆ ಅಧಿಕ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಕೂಡ ಕಡಿಮೆ ಆಗುತ್ತದೆ.


    ದಾಲ್ಚಿನ್ನಿ ತಿನ್ನುವುದು ಹೇಗೆ ಅಂದ್ರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ದಾಲ್ಚಿನ್ನಿ ಪುಡಿ ಅರ್ಧ ಚಮಚ ಅರಿಶಿನ ಮತ್ತು ಅರ್ಧ ಚಮಚ ಮೆಂತ್ಯ ಪುಡಿ ಜೊತೆ ಸೇವನೆ ಮಾಡಿ.


    ಶುಂಠಿ


    ಶುಂಠಿ ಸೇವನೆ ಮಧುಮೇಹ ವಿರೋಧಿ, ಹೈಪೋಲಿಪಿಡೆಮಿಕ್ ಮತ್ತು ಉತ್ಕರ್ಷಣ ನಿರೋಧಕ ಗುಣ ಹೊಂದಿದೆ. ಇದು ಚಯಾಪಚಯ ಸುಧಾರಿಸುವ ಮೂಲಕ HbA1c ಮತ್ತು ವೇಗದ ಸಕ್ಕರೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.


    ಶುಂಠಿಯನ್ನು ಹೇಗೆ ತಿನ್ನಬೇಕು ಅಂದ್ರೆ ಒಂದು ಟೀ ಚಮಚ ಒಣಗಿದ ಶುಂಠಿ ಪುಡಿ ನಿಶಾ-ಅಮಲಕಿ ಜೊತೆ ಸೇವನೆ ಮಾಡಿ. ಅಲ್ಲದೆ ಊಟಕ್ಕೆ ಒಂದು ಗಂಟೆ ಮೊದಲು ಅಥವಾ ನಂತರ ಶುಂಠಿ ಚಹಾ ಕುಡಿಯಿರಿ.


    ನಿಶಾ-ಅಮಲಕಿ


    ಆಯುರ್ವೇದದಲ್ಲಿ ಅರಿಶಿನವನ್ನು ನಿಶಾ ಎಂದು ಕರೆಯುತ್ತಾರೆ. ಮತ್ತು ಆಮ್ಲವನ್ನು ಅಮಲಕಿ ಎಂದು ಕರೆಯುತ್ತಾರೆ. ಈ ಮಿಶ್ರಣ ರಕ್ತದ ಸಕ್ಕರೆ ಸಮತೋಲನದಲ್ಲಿ ಇಡುತ್ತದೆ. ಇದು ಶಕ್ತಿಯುತ ಆಗಿರಿಸುತ್ತದೆ. ಮತ್ತು ಕಫ ದೋಷ ಸಮತೋಲನ ಮಾಡುತ್ತದೆ.


    ಇದನ್ನೂ ಓದಿ: ಪ್ರತಿದಿನ ರುಚಿಕರ ಮತ್ತು ಹೆಲ್ದೀ ಪ್ರೊಟೀನ್ ಪೌಡರ್ ಮನೆಯಲ್ಲಿ ತಯಾರಿಸಿ, ಇಲ್ಲಿದೆ ರೆಸಿಪಿ


    ನಿಶಾ ಅಮಲಕಿ ತಿನ್ನುವ ವಿಧಾನ ಅಂದ್ರೆ ಅರಿಶಿನ ಮತ್ತು ಆಮ್ಲಾ ಪುಡಿ ಬೆರೆಸಿ ಒಂದು ಟೀಸ್ಪೂನ್ ಮಿಶ್ರಣ ಮಾಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

    Published by:renukadariyannavar
    First published: