• Home
  • »
  • News
  • »
  • lifestyle
  • »
  • Diabetes And Tea: ಮಧುಮೇಹಿಗಳು ಈ ಪದಾರ್ಥಗಳ ಚಹಾ ಕುಡಿದರೆ ಆರೋಗ್ಯಕ್ಕೆ ಹಿತ!

Diabetes And Tea: ಮಧುಮೇಹಿಗಳು ಈ ಪದಾರ್ಥಗಳ ಚಹಾ ಕುಡಿದರೆ ಆರೋಗ್ಯಕ್ಕೆ ಹಿತ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಹಾ ಎಂದರೆ ಕೇವಲ ಚಹಾ ಎಲೆಗಳಲ್ಲ. ಜೊತೆಗೆ ಸಕ್ಕರೆ ಮತ್ತು ಹಾಲಿನ ಮಿಶ್ರಣ ಇರುತ್ತೆ. ಮಧುಮೇಹ ರೋಗಿಯು ಒಂದು ದಿನದಲ್ಲಿ 2 ರಿಂದ 4 ಕಪ್ ಅಥವಾ ಅದಕ್ಕಿಂತ ಹೆಚ್ಚು ಚಹಾ ಸೇವಿಸಿದರೆ ಕೆಟ್ಟ ಪರಿಣಾಮ ಬೀರುತ್ತದೆ. ಚಿಕಿತ್ಸೆ ಮತ್ತು ಔಷಧಿ ಯಾವುದೇ ಕೆಲಸ ಮಾಡಲ್ಲ. ಹಾಲು ಮತ್ತು ಸಕ್ಕರೆ ಕಪ್ ಚಹಾವು ಸಕ್ಕರೆ ಮಟ್ಟವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಮುಂದೆ ಓದಿ ...
  • Share this:

    ಚಳಿಗಾಲದಲ್ಲಿ (Winter) ತಂಪು ಹವಾಮಾನ (Cold Weather) ಬಿಸಿ ಬಿಸಿ ಪದಾರ್ಥ (Hot Food) ತಿನ್ನಲು ಮತ್ತು ಕುಡಿಯುವ (Drink) ಬಯಕೆ ಹೆಚ್ಚು ಉಂಟಾಗಲು ಕಾರಣವಾಗುತ್ತದೆ. ಬೆಳಗ್ಗೆ ತುಂಬಾ ಜನರು ಟೀ (Tea) ಕುಡಿಯುತ್ತಾರೆ. ಅದರಲ್ಲೂ ಚಳಿ ಇದ್ದಾಗ ಪದೇ ಪದೇ ಚಹಾ, ಕಾಫಿ ಕುಡಿಯುವ ಮನಸ್ಸಾಗುತ್ತದೆ. ಟೀ ಕುಡಿಯಲು ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಹೆಚ್ಚಿನ ಜನರು ಚಹಾ ಅಥವಾ ಕಾಫಿ ಕುಡಿಯದೇ ತಮ್ಮ ದಿನವನ್ನು ಪ್ರಾರಂಭಿಸಲು ಕಷ್ಟ ಪಡ್ತಾರೆ. ಕೆಲವರಿಗೆ ಎದ್ದ ಕೂಡಲೇ ಚಹಾ ಬೇಕು. ಆದರೆ ಮಧುಮೇಹ ರೋಗಿಗಳೂ ಚಹಾ ಸೇವಿಸಬಹುದಾ? ಅವರಿಗೆ ಅದು ಆರೋಗ್ಯಕರವೇ? ಎಂಬ ಪ್ರಶ್ನೆಗೆ ಉತ್ತರ ಏನಿದೆ ನೋಡೋಣ.


    ಮಧುಮೇಹ ರೋಗಿಗಳೂ ಚಹಾ ಸೇವಿಸಬಹುದಾ?


    ಕುಟುಂಬದಲ್ಲಿ ಯಾರಾದರೂ ಮಧುಮೇಹಿಗಳಿದ್ದರೆ, ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕು. ಹಾಗಾದರೆ ದಿನನಿತ್ಯ ಮಾಡುವ ಚಹಾವನ್ನು ಮಧುಮೇಹ ರೋಗಿಗಳೂ ಸೇವಿಸಬಹುದೇ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ನೋಡೋಣ.


    ರಕ್ತದ ಸಕ್ಕರೆ ಮಟ್ಟದ ಮೇಲೆ ಚಹಾದ ಪರಿಣಾಮ


    ಎನ್‌ಎಂ ಜಿಂದಾಲ್ ನೇಚರ್‌ಕ್ಯೂರ್ ಇನ್‌ಸ್ಟಿಟ್ಯೂಟ್‌ನಲ್ಲಿ ಮುಖ್ಯ ವೈದ್ಯಕೀಯ ಅಧಿಕಾರಿಯಾಗಿರುವ ಡಾ. ಬಬಿನಾ ಅವರ ಪ್ರಕಾರ, ಚಹಾ ಎಂದರೆ ಕೇವಲ ಚಹಾ ಎಲೆಗಳಲ್ಲ. ಜೊತೆಗೆ ಸಕ್ಕರೆ ಮತ್ತು ಹಾಲಿನ ಮಿಶ್ರಣ ಇರುತ್ತೆ. ಮಧುಮೇಹ ರೋಗಿಯು ಒಂದು ದಿನದಲ್ಲಿ 2 ರಿಂದ 4 ಕಪ್ ಅಥವಾ ಅದಕ್ಕಿಂತ ಹೆಚ್ಚು ಚಹಾ ಸೇವಿಸಿದರೆ ಕೆಟ್ಟ ಪರಿಣಾಮ ಬೀರುತ್ತದೆ. ಚಿಕಿತ್ಸೆ ಮತ್ತು ಔಷಧಿ ಯಾವುದೇ ಕೆಲಸ ಮಾಡಲ್ಲ.




    ಹಾಲು ಮತ್ತು ಸಕ್ಕರೆ ಕಪ್ ಚಹಾವು ಸಕ್ಕರೆ ಮಟ್ಟವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಹಾಗಾಗಿ ಮಧುಮೇಹ ರೋಗಿಯು ತನ್ನ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮಧುಮೇಹ ರೋಗಿಗಳು ತಮ್ಮ ಆಹಾರದಲ್ಲಿ ಕೆಲವು ಮುಖ್ಯ ಪದಾರ್ಥ ಸೇರಿಸಿದರೆ ನೈಸರ್ಗಿಕವಾಗಿ ಅವರ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು ಅಂತಾರೆ.


    ಜಂಕ್ ಫುಡ್ ಕರಿದ ಪದಾರ್ಥ ಸೇವಿಸಬೇಡಿ


    ಮಧುಮೇಹಿಗಳು ಜಂಕ್ ಫುಡ್, ಅಧಿಕ ಉಪ್ಪು, ಸಕ್ಕರೆ ಮತ್ತು ಕೊಬ್ಬಿನ ಆಹಾರ ಸೇವಿಸಬಾರದು. ಆರೋಗ್ಯಕ್ಕೆ ಹಾನಿಕಾರಕ. ರಕ್ತದ ಸಕ್ಕರೆ ಮಟ್ಟ ಹೆಚ್ಚಿಸುತ್ತದೆ. ಅತಿಯಾದ ಕರಿದ ಮತ್ತು ಜಂಕ್ ಫುಡ್‌ ಸೇವನೆ ಒತ್ತಡದ ಮಟ್ಟ ಹೆಚ್ಚಿಸುತ್ತದೆ. ತೂಕವು ವೇಗವಾಗಿ ಹೆಚ್ಚುತ್ತದೆ. ಅನೇಕ ರೋಗಗಳು ನಿಮ್ಮ ದೇಹ ಪ್ರವೇಶಿಸುತ್ತವೆ ಎಂದು ಹೇಳುತ್ತಾರೆ.


    ಚಹಾದ ಆರೋಗ್ಯಕರ ಆಯ್ಕೆ ಯಾವುದು?


    ರಕ್ತದ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡುವ ಚಹಾ ಸೇವಿಸಿದರೆ ಮಧುಮೇಹಿಗಳ ಆರೋಗ್ಯಕ್ಕೂ ಸಹಕಾರಿ. ಇದು ಟೈಪ್ 2 ರೋಗಿಗಳಿಗೆ ಹೂವಿನ ಚಹಾ ಮತ್ತು ಹಸಿರು ಚಹಾ ಉತ್ತಮ ಆಯ್ಕೆ ಎಂದು ಅಧ್ಯಯನಗಳು ತೋರಿಸುತ್ತವೆ.


    ದಿನಕ್ಕೆ 2 ರಿಂದ 4 ನಾಲ್ಕು ಕಪ್ ಹಸಿರು ಚಹಾ ಸೇವಿಸಿದರೂ ಅದು ನಿಮ್ಮ ದೇಹಕ್ಕೆ ಹಾನಿಕಾರಕವಲ್ಲ ಮತ್ತು ನಿಮ್ಮ ಮಧುಮೇಹವನ್ನು ಹೆಚ್ಚಿಸುವುದಿಲ್ಲ ಅಂತಾರೆ ತಜ್ಞರು.


    ದಾಲ್ಚಿನ್ನಿ ಚಹಾ


    ದಾಲ್ಚಿನ್ನಿ ಉತ್ಕರ್ಷಣ ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ. ಇದು ಮಧುಮೇಹ ಹೊಂದಿರುವ ಜನರಲ್ಲಿ ಇನ್ಸುಲಿನ್ ಪರಿಣಾಮ ಹೆಚ್ಚಿಸುತ್ತದೆ.


    ಏಲಕ್ಕಿ ಚಹಾ


    ಏಲಕ್ಕಿಯಲ್ಲಿ ಮ್ಯಾಂಗನೀಸ್ ಹೇರಳವಾಗಿದೆ. ಇದು ರಕ್ತದ ಸಕ್ಕರೆಯ ಮಟ್ಟ ನಿಯಂತ್ರಿಸುತ್ತದೆ.


    ಶುಂಠಿ ಚಹಾ


    ಶುಂಠಿಯು ಉತ್ತಮ ಜೀರ್ಣಕ್ರಿಯೆಗೆ ಸಹಕಾರಿ. ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ.


    ಇದನ್ನೂ ಓದಿ: ಚರ್ಮ ಮತ್ತು ಮೂಳೆಗಳ ಆರೋಗ್ಯಕ್ಕೆ ಈ ಪದಾರ್ಥಗಳು ಸಹಕಾರಿ


    ಗ್ರೀನ್ ಟೀ


    ಗ್ರೀನ್ ಟೀ ಆ್ಯಂಟಿಆಕ್ಸಿಡೆಂಟ್ ಪಾಲಿಫಿನಾಲ್‌ ಮತ್ತು ಪಾಲಿಸ್ಯಾಕರೈಡ್‌ ರಕ್ತದೊತ್ತಡ ನಿಯಂತ್ರಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ. ಮಧುಮೇಹದಿಂದ ಉಂಟಾಗುವ ಹಾನಿ ಕಡಿಮೆ ಮಾಡುತ್ತದೆ.

    Published by:renukadariyannavar
    First published: