• Home
 • »
 • News
 • »
 • lifestyle
 • »
 • Diabetes Problem: ಮಧುಮೇಹ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಈ ವ್ಯಾಯಾಮ ಮಾಡದಿರಿ!

Diabetes Problem: ಮಧುಮೇಹ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಈ ವ್ಯಾಯಾಮ ಮಾಡದಿರಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಧುಮೇಹ ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸ್ ಎರಡರಲ್ಲೂ ನಿಯಮಿತ ವ್ಯಾಯಾಮ ಮಾಡುವುದು ಮಧುಮೇಹದ ತೊಡಕು ಮತ್ತು ಸಮಸ್ಯೆಗೆ ಪರಿಹಾರ ನೀಡುತ್ತದೆ. ಆದರೆ ಕೆಲವೊಮ್ಮೆ ತಪ್ಪಾಗಿ ಮಾಡುವ ವ್ಯಾಯಾಮ ಬೇರೆಲ್ಲಾ ಸಮಸ್ಯೆ ಹುಟ್ಟು ಹಾಕುತ್ತದೆ. ಹಾಗಾಗಿ ನೀವು ಮಧುಮೇಹ ಅಥವಾ ಮಧುಮೇಹ ಪೂರ್ವ ಲಕ್ಷಣ ಹೊಂದಿದ್ದರೆ ಕೆಲವು ವ್ಯಾಯಾಮ ಮಾಡಬಾರದು.

ಮುಂದೆ ಓದಿ ...
 • Share this:

  ಮಧುಮೇಹ ಕಾಯಿಲೆಗೆ (Diabetes Disease) ಗುಣಪಡಿಸುವ ಚಿಕಿತ್ಸೆ (Treatment) ಇಲ್ಲ ಎಂಬುದು ನಿಮಗೆ ಗೊತ್ತೇ ಇದೆ. ಇದನ್ನ ಉತ್ತಮ ಜೀವನಶೈಲಿ (Lifestyle) ಮತ್ತು ಆರೋಗ್ಯಕರ ಆಹಾರ (Healthy Food) ಸೇವನೆ ಮತ್ತು ವ್ಯಾಯಾಮದಿಂದ ತಡೆಗಟ್ಟಲು ಮತ್ತು ನಿಯಂತ್ರಣ ಸಾಧ್ಯ. ಇದಕ್ಕೆ ವ್ಯಾಯಾಮ ಪ್ರಯೋಜನಕಾರಿ ಆಗಿದೆ. ಮಧುಮೇಹ ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸ್ ಎರಡರಲ್ಲೂ ನಿಯಮಿತ ವ್ಯಾಯಾಮ ಮಾಡುವುದು ಮಧುಮೇಹದ ತೊಡಕು ಮತ್ತು ಸಮಸ್ಯೆಗೆ ಪರಿಹಾರ ನೀಡುತ್ತದೆ. ಆದರೆ ಕೆಲವೊಮ್ಮೆ ತಪ್ಪಾಗಿ ಮಾಡುವ ವ್ಯಾಯಾಮ ಬೇರೆಲ್ಲಾ ಸಮಸ್ಯೆ ಹುಟ್ಟು ಹಾಕುತ್ತದೆ. ಹಾಗಾಗಿ ನೀವು ಮಧುಮೇಹ ಅಥವಾ ಮಧುಮೇಹ ಪೂರ್ವ ಲಕ್ಷಣ ಹೊಂದಿದ್ದರೆ ಕೆಲವು ವ್ಯಾಯಾಮ ಮಾಡುವುದನ್ನು ತಪ್ಪಿಸಬೇಕು.


  ಮಧುಮೇಹ ರೋಗಿಗಳು ಯಾವ ವ್ಯಾಯಾಮ ಮಾಡುವುದನ್ನು ತಪ್ಪಿಸಬೇಕು?


  ಟೈಪ್ 2 ಡಯಾಬಿಟಿಸ್‌ಗೆ ಸೂಕ್ತವಲ್ಲದ ವ್ಯಾಯಾಮಗಳು ಇವೆ. ಜಿಂದಾಲ್ ನೇಚರ್ ಕೇರ್ ಇನ್‌ಸ್ಟಿಟ್ಯೂಟ್‌ನ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಬಬಿನಾ ಎನ್‌ಎಂ ಹೇಳುವ ಪ್ರಕಾರ, ನಿಯಮಿತ ವ್ಯಾಯಾಮ ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ. ನಿಯಮಿತ ವ್ಯಾಯಾಮವು ಲಿಪಿಡ್ ಪ್ರೊಫೈಲ್‌ನಲ್ಲಿ ಧನಾತ್ಮಕ ಬದಲಾವಣೆ ತರುತ್ತದೆ.


  ರಕ್ತದೊತ್ತಡ ಮತ್ತು ತೂಕ ನಷ್ಟ ಸಂಭವಿಸಬಹುದು. ಹೃದಯರಕ್ತನಾಳದ ಅಪಾಯಕಾರಿ ಅಂಶಗಳು ಸುಧಾರಿಸಬಹುದು. ಆದರೆ ತಪ್ಪಾದ ವ್ಯಾಯಾಮ ಮಾಡಿದಾಗ ಹೃದಯರಕ್ತನಾಳದ ಸಮಸ್ಯೆ, ಕೀಲು ಮತ್ತು ಪಾದಗಳ ಮೃದು ಅಂಗಾಂಶಕ್ಕೆ ಹಾನಿ, ದೃಷ್ಟಿ ನಷ್ಟ, ಹೈಪೊಗ್ಲಿಸಿಮಿಯಾ, ಹೈಪರ್ಗ್ಲೈಸೀಮಿಯಾ ಮತ್ತು ಕೀಟೋಸಿಸ್ಗೆ ಕಾರಣ ಆಗುತ್ತದೆ.
  ಇನ್ಸುಲಿನ್ ಡೋಸ್ನ ಪ್ರತಿಕೂಲ ಪರಿಣಾಮ ತನಿಖೆ ಮಾಡುವುದು ಮತ್ತು ಗ್ಲೈಸೆಮಿಕ್ ನಿಯಂತ್ರಣದ ಮೇಲೆ ವ್ಯಾಯಾಮ ಮಾಡುವುದು ಅವಶ್ಯಕ. ಸರಿಯಾದ ವ್ಯಾಯಾಮದ ಜೊತೆಗೆ ಮಧುಮೇಹ ರೋಗಿಗಳು ತಮ್ಮ ಚಯಾಪಚಯ ಸರಿಪಡಿಸಬಹುದು. ಇದು ಜೀವನದ ಗುಣಮಟ್ಟ ಸುಧಾರಿಸುತ್ತದೆ.


  ಮಧುಮೇಹ ರೋಗಿಗಳು ತಪ್ಪಿಸಬೇಕಾದ ವ್ಯಾಯಾಮಗಳು


  ಶ್ರಮದಾಯಕ ವ್ಯಾಯಾಮ ಮಾಡಬೇಡಿ


  ಮಧುಮೇಹ ರೋಗಿಗಳು ಹೆಚ್ಚಿನ ಪರಿಣಾಮ, ಬೆವರು ಬರುವ ವ್ಯಾಯಾಮ ಮಾಡಬಾರದು. ಮಧುಮೇಹದಿಂದ ರೋಗಿಯಲ್ಲಿ ರೆಟಿನಾದ ತೊಡಕು ಸಹ ಸಂಭವಿಸುತ್ತದೆ. ಭಾರ ಎತ್ತುವ ವ್ಯಾಯಾಮ ತಪ್ಪಿಸಬೇಕು.


  ತೀವ್ರ ಬಿಸಿ ಮತ್ತು ತಣ್ಣನೆಯ ವಾತಾವರಣದಲ್ಲಿ ವ್ಯಾಯಾಮ ತಪ್ಪಿಸಿ


  ಡಾ. ಬಬಿನಾ ಪ್ರಕಾರ, ಮಧುಮೇಹ ರೋಗಿಗಳು ಸಹ ಹೃದಯದ ಸ್ವನಿಯಂತ್ರಿತ ನರರೋಗಕ್ಕೆ ಬಲಿಯಾಗಬಹುದು. ರೋಗಿಯ ರಕ್ತಕೊರತೆಯ ಅಪಾಯ ಹೆಚ್ಚಾಗುತ್ತದೆ. ರೋಗಿಗಳು ಬಿಸಿ ಮತ್ತು ತಣ್ಣನೆಯ ವಾತಾವರಣದಲ್ಲಿ ವ್ಯಾಯಾಮ ಮಾಡಬಾರದು. ಅಂತಹ ರೋಗಿಗಳ ರಕ್ತದೊತ್ತಡ ಅಪಾಯಕಾರಿ.


  ತೂಕ ಎತ್ತುವ ವ್ಯಾಯಾಮ ಮಾಡಬೇಡಿ


  ಮಧುಮೇಹ ರೋಗಿಗಳು ಡಯಾಬಿಟಿಕ್ ಪೆರಿಫೆರಲ್ ನ್ಯೂರೋಪತಿಗೆ ಗುರಿಯಾಗುತ್ತಾರೆ. ಇದರಿಂದ ಬಳಲುತ್ತಿರುವ ರೋಗಿಗಳು ಶ್ರಮದಾಯಕ ಮತ್ತು ಭಾರ ಹೊರುವ ವ್ಯಾಯಾಮ ಮಾಡಬಾರದು.


  ಪಾದಗಳಿಗೆ ಗಾಯವಾದರೆ ಸಮಸ್ಯೆ ಹೆಚ್ಚಾಗಬಹುದು. ರೋಗಿಯು ಹಂತದ ವ್ಯಾಯಾಮ ಮತ್ತು ಹೆಚ್ಚು ವಾಕಿಂಗ್ ಅನ್ನು ತಪ್ಪಿಸಬೇಕು. ಇದು ಪೀಡಿತ ಕಾಲಿನ ಮೇಲೆ ಒತ್ತಡ ಬಿದ್ದಾಗ ಮೂಳೆ ಮುರಿತ ಮತ್ತು ಹುಣ್ಣು ಉಂಟಾಗಲು ಕಾರಣವಾಗುತ್ತದೆ.


  ರಕ್ತದ ಸಕ್ಕರೆ ತುಂಬಾ ಹೆಚ್ಚಾದಾಗ ವ್ಯಾಯಾಮ ಮಾಡಬೇಡಿ


  ಡಾ. ಬಬಿನಾ ಪ್ರಕಾರ, ಉಪವಾಸ ಗ್ಲೂಕೋಸ್ ಮಟ್ಟವು 250mg/dl ಗಿಂತ ಹೆಚ್ಚಿದ್ದರೆ ಮತ್ತು ಕೀಟೋನ್‌ ಇದ್ದರೆ, ಅಂತಹ ಮಧುಮೇಹ ರೋಗಿಯು ವ್ಯಾಯಾಮವನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಕೀಟೋನ್‌ ಹೊಂದಿರದಿದ್ದರೂ 250mg/dl ಗಿಂತ ಹೆಚ್ಚಿನ ಸಕ್ಕರೆ ಮಟ್ಟ ಇದ್ದಾಗ ವ್ಯಾಯಾಮ ಮಾಡುವಾಗ ಜಾಗ್ರತೆ ವಹಿಸಿ.


  ಇದನ್ನೂ ಓದಿ: ತ್ವಚೆಯ ಸಮಸ್ಯೆ ಹೋಗಲಾಡಿಸಲು ಕರ್ಪೂರವನ್ನು ಹೀಗೆ ಬಳಸಿ!


  ಮಧುಮೇಹ ರೋಗಿಗಳಿಗೆ ಪ್ರಮುಖ ಸಲಹೆಗಳು


  ವ್ಯಾಯಾಮದ ಮೊದಲು ಮತ್ತು ನಂತರ ರಕ್ತದ ಸಕ್ಕರೆ ಮಟ್ಟ ಪರಿಶೀಲಿಸಿ. ವೇಗವಾಗಿ ಕಾರ್ಯನಿರ್ವಹಿಸುವ ಕಾರ್ಬೋಹೈಡ್ರೇಟ್ ಆಹಾರ ಒಯ್ಯಿರಿ. ಸಾಕಷ್ಟು ನೀರು ಕುಡಿಯಿರಿ. ಮಧುಮೇಹಿಗಳು ಆರಾಮದಾಯಕ ಬೂಟುಗಳು ಮತ್ತು ಬಟ್ಟೆ ಧರಿಸಿ. ವ್ಯಾಯಾಮದ ಮೊದಲು ಇನ್ಸುಲಿನ್ ಬಳಸಬೇಡಿ. ಇದು ಹೈಪೊಗ್ಲಿಸಿಮಿಯಾ ಅಪಾಯ ಹೆಚ್ಚಿಸಬಹುದು.

  Published by:renukadariyannavar
  First published: