Health Tips: ಮಧುಮೇಹಿಗಳು ನಿಮ್ಮ ಬಾಯಿಯ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ! ಇಲ್ಲಾಂದ್ರೆ ಅಪಾಯ ಗ್ಯಾರಂಟಿ

ಮಧುಮೇಹದಿಂದ ಬಳಲುತ್ತಿರುವವರು ಸಾಮಾನ್ಯವಾಗಿ ಬಾಯಿಯ ಕೆಲವು ಮೌಖಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಬಾಯಿ ಒಣಗುವುದು, ವಾಸನೆ, ಒಸಡು ಸಮಸ್ಯೆಯಂತಹ ಲಕ್ಷಣಗಳು ಮಧುಮೇಹದ ಕೆಲವು ಆರಂಭಿಕ ಸೂಚನೆಗಳು ಕೂಡ ಹೌದು. ಸಕ್ಕರೆ ಕಾಯಿಲೆ ಇರುವವರು ಹಲ್ಲು ಸೇರಿ ಬಾಯಿಯ ಸ್ವಚ್ಛತೆ ಮತ್ತು ಸಂಪೂರ್ಣ ಆರೋಗ್ಯದ ಕಡೆ ಗಮನಹರಿಸುವುದು ಉತ್ತಮ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಮಧುಮೇಹದಿಂದ (Diabetes) ಬಳಲುತ್ತಿರುವವರು ಸಾಮಾನ್ಯವಾಗಿ ಬಾಯಿಯ ಕೆಲವು ಮೌಖಿಕ ಆರೋಗ್ಯ ಸಮಸ್ಯೆಗಳನ್ನು (Health Problems) ಎದುರಿಸುತ್ತಿರುತ್ತಾರೆ. ಬಾಯಿ ಒಣಗುವುದು, ವಾಸನೆ, ಒಸಡು ಸಮಸ್ಯೆಯಂತಹ ಲಕ್ಷಣಗಳು ಮಧುಮೇಹದ ಕೆಲವು ಆರಂಭಿಕ ಸೂಚನೆಗಳು ಕೂಡ ಹೌದು. ಸಕ್ಕರೆ ಕಾಯಿಲೆ (Sugar) ಇರುವವರು ಹಲ್ಲು ಸೇರಿ ಬಾಯಿಯ ಸ್ವಚ್ಛತೆ ಮತ್ತು ಸಂಪೂರ್ಣ ಆರೋಗ್ಯದ ಕಡೆ ಗಮನಹರಿಸುವುದು ಉತ್ತಮ. ಮಧುಮೇಹದ ಜೊತೆ ಈ ಬಾಯಿಯ (Mouth) ಕೆಲ ಸಮಸ್ಯೆಗಳು ಉಚಿತ ಎನ್ನುವಂತೆ ಬಂದುಬಿಡುತ್ತವೆ. ಈ ತೊಂದರೆಗಳನ್ನು ನಿರ್ಲಕ್ಷ್ಯಿಸದೇ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸಕ್ಕರೆ ಕಾಯಿಲೆ ಇರುವವರು ಬಾಯಿಯ ಈ ಕೆಳಕಂಡ ಮೌಖಿಕ ಆರೋಗ್ಯ ಪರಿಸ್ಥಿತಿಗಳ ಬಗ್ಗೆ ಗಮನಹರಿಸಬೇಕು ಮತ್ತು ಸಂಬಂಧಿಸಿದ ಸೂಕ್ತ ಚಿಕಿತ್ಸೆ, ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಅವಶ್ಯಕ.

1) ಒಸಡು ಸಮಸ್ಯೆ
ಮಧುಮೇಹ ಇರುವವರಲ್ಲಿ ಒಸಡು ಕಾಯಿಲೆಯು ಸಾಮಾನ್ಯ ಬಾಯಿಯ ಆರೋಗ್ಯ ಸಮಸ್ಯೆಯಾಗಿದೆ. ಒಸಡು ಕಾಯಿಲೆಯ ಮೊದಲ ಹಂತವೆಂದರೆ ಜಿಂಗೈವಿಟಿಸ್. ಇದು ನಿಮ್ಮ ಒಸಡುಗಳಲ್ಲಿ ರಕ್ತಸ್ರಾವ ಮತ್ತು ನೋವು ಉಂಟಾಗುವಂತೆ ಮಾಡುತ್ತದೆ.

ಇದನ್ನೂ ಓದಿ:  Women’s Stomach Disease: ಮಹಿಳೆಯರು ಹೊಟ್ಟೆಗೆ ಸಂಬಂಧಿಸಿದ ನೋವಿನ ಬಗ್ಗೆ ಇದೇ ಕಾರಣಕ್ಕೆ ನಿರ್ಲಕ್ಷ್ಯ ಮಾಡಬಾರದು!

ಜಿಂಗೈವಿಟಿಸ್ ಸಂದರ್ಭದಲ್ಲಿ ಬ್ಯಾಕ್ಟೀರಿಯಾಗಳು ಸಕ್ಕರೆಯನ್ನು ತಿನ್ನಲು ಇಷ್ಟಪಡುತ್ತವೆ ಮತ್ತು ಅದನ್ನು ಹಲ್ಲಿನ ಹಾನಿಕಾರಕ ಆಮ್ಲವಾಗಿ ಪರಿವರ್ತಿಸುತ್ತವೆ. ಬ್ಯಾಕ್ಟೀರಿಯಾಗಳು ಒಟ್ಟುಗೂಡಿದಂತೆ, ಅವು ಲಾಲಾರಸ ಮತ್ತು ಉಳಿದ ಆಹಾರದ ಜೊತೆಗೆ ಸೇರಿಕೊಂಡು ಪ್ಲೇಕ್ ಅನ್ನು ರೂಪಿಸುತ್ತವೆ. ಇದು ದಂತಕ್ಷಯ, ಒಸಡು ಕಾಯಿಲೆಗೆ ಕಾರಣವಾಗುತ್ತದೆ. ನಿಯಮಿತವಾಗಿ ಹಲ್ಲುಜ್ಜುವುದು, ನಂಜುನಿರೋಧಕ ಮೌತ್ ವಾಷ್ ನಿಂದ ಬಾಯಿ ತೊಳೆಯುವುದು ಈ ಸಮಸ್ಯೆಯನ್ನು ದೂರು ಮಾಡುತ್ತದೆ.

2) ಪಿರಿಯೊಡಾಂಟಿಟಿಸ್
ಚಿಕಿತ್ಸೆ, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದೇ ಇದ್ದಾಗ ಜಿಂಗೈವಿಟಿಸ್ ಪಿರಿಯೊಡಾಂಟಿಟಿಸ್ ಆಗಿ ಬದಲಾಗಬಹುದು. ಇದು ನಿಮ್ಮ ಹಲ್ಲುಗಳನ್ನು ಬೆಂಬಲಿಸುವ ಮೂಳೆ ಮತ್ತು ಅಂಗಾಂಶಗಳ ಸವೆತಕ್ಕೆ ಕಾರಣವಾಗುವ ಗಮ್ ಕಾಯಿಲೆಯಾಗಿದೆ. ಈ ಸಮಸ್ಯೆ ಉಲ್ಭಣವಾದರೆ ಮಧುಮೇಹಿಗಳು ಅವರ ಹಲ್ಲನ್ನು ಸಹ ಕಳೆದುಕೊಳ್ಳುವ ಸಾಧ್ಯತೆಗಳಿವೆ.

ಪ್ರತಿದಿನ ಫ್ಲೋಸ್ ಮತ್ತು ಬ್ರಷ್ ಮಾಡದಿದ್ದರೆ, ನಿಮ್ಮ ಹಲ್ಲುಗಳ ಮೇಲೆ ಬ್ಯಾಕ್ಟೀರಿಯಾ ಮತ್ತು ಪ್ಲೇಕ್ ಉಂಟಾಗಬಹುದು. ಇದರಿಂದಾಗಿ ಒಸಡು ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಪಿರಿಯೊಡಾಂಟಿಟಿಸ್ ಅನ್ನು ಶಮನ ಮಾಡಲು ಹಲ್ಲುಜ್ಜುವುದು ಮತ್ತು ಫ್ಲೋಸ್ಸಿಂಗ್ ಮುಖ್ಯವಾಗಿವೆ.

3) ಒಣ ಬಾಯಿ
ದೇಹದಲ್ಲಿ ಸಕ್ಕರೆ ಪ್ರಮಾಣದಲ್ಲಿ ಹೆಚ್ಚಳವಾದಂತೆ ಬಾಯಿಯಲ್ಲಿ ಲಾಲಾರಸ ಪ್ರಮಾಣವೂ ಕುಗ್ಗುತ್ತದೆ, ಗಂಟಲು ಒಣಗುತ್ತದೆ ಮತ್ತು ವಿಪರೀತ ಬಾಯಾರಿಕೆ, ಒಣ ಬಾಯಿಯಂತಹ ಅಪಾಯಗಳನ್ನು ಸೃಷ್ಟಿಮಾಡುತ್ತದೆ. ಇದನ್ನು ಹಲ್ಲಿನ ವೈದ್ಯರು ಕ್ಸೆರೋಸ್ಟೊಮಿಯಾ ಎಂದು ಕರೆಯುತ್ತಾರೆ. ಒಣ ಬಾಯಿ ಹುಣ್ಣುಗಳು ಮಾತ್ರವಲ್ಲದೆ ಇನ್ನೂ ಹೆಚ್ಚಿನ ದಂತಕ್ಷಯ ಮತ್ತು ವಸಡು ಕಾಯಿಲೆಗೆ ಕಾರಣವಾಗಬಹುದು.

4) ಸೋಂಕು
ಬ್ಯಾಕ್ಟೀರಿಯಾಗಳು ಮಾತ್ರವಲ್ಲದೇ ದೇಹದಲ್ಲಿನ ಸಕ್ಕರೆಯನ್ನು ಶಿಲೀಂಧ್ರಗಳು ಸಹ ಬೇಗ ಆವರಿಸಿಕೊಳ್ಳುತ್ತವೆ. ಆದ್ದರಿಂದ ಥ್ರಷ್ ಎಂಬ ಶಿಲೀಂಧ್ರದ ಯೀಸ್ಟ್ ಸೋಂಕು ಮಧುಮೇಹಿಗಳಲ್ಲಿ ಸಾಮಾನ್ಯವಾಗಿದೆ. ಥ್ರಷ್ ನಿಮ್ಮ ನಾಲಿಗೆ, ಕೆನ್ನೆಯ ಒಳಗೆ ಬಿಳಿ ಅಥವಾ ಕೆಂಪು ತೇಪೆಗಳನ್ನು ಉಂಟುಮಾಡಬಹುದು. ಕೆಲವೊಮ್ಮೆ ಅವು ತೆರೆದ ಹುಣ್ಣುಗಳಾಗಿ ಬದಲಾಗುತ್ತವೆ.

5) ಬರ್ನಿಂಗ್ ಮೌತ್ ಸಿಂಡ್ರೋಮ್
ಥ್ರಷ್ ಮತ್ತು ಒಣ ಬಾಯಿ ಎರಡೂ ಉರಿಯುವ ಬಾಯಿ ಸಿಂಡ್ರೋಮಿಗೆ ಕಾರಣವಾಗಬಹುದು. ನಿಮ್ಮ ಬಾಯಿ ಸುಟ್ಟಂತೆ ಭಾಸವಾಗುವುದರ ಜೊತೆಗೆ ಜುಮ್ಮೆನಿಸುವಿಕೆ ಅಥವಾ ಮರಗಟ್ಟುವಿಕೆಯಮತಹ ಅನುಭವಗಳು ಆಗುತ್ತವೆ. ಕೆಲವೊಮ್ಮೆ ಮಧುಮೇಹಿಗಳು ರುಚಿಯ ಗ್ರಹಿಸುವ ಸಾಮರ್ಥ್ಯವನ್ನು ಸಹ ಕಳೆದುಕೊಳ್ಳುತ್ತಾರೆ.

ಇದನ್ನೂ ಓದಿ:  Late Night Eating: ತಡರಾತ್ರಿ ತಿನ್ನುವ ಅಭ್ಯಾಸಕ್ಕೆ ಕಾರಣವೇನು? ರಾತ್ರಿ ತಿನ್ನುವ ಸಿಂಡ್ರೋಮ್‌ನ ಲಕ್ಷಣಗಳು ಯಾವವು?

6) ಗಾಯ ಮಾಯಲು ಹೆಚ್ಚು ಸಮಯ
ಸಕ್ಕರೆ ಕಾಯಿಲೆ ಇದ್ದವರಲ್ಲಿ ಗಾಯಗಳು ಮತ್ತು ಸೋಂಕುಗಳು ಗುಣವಾಗಲು ಹೆಚ್ಚು ಸಮಯ ಬೇಕು. ಇದರಿಂದಾಗಿ ನಿಮ್ಮ ಸೋಂಕಿನ ಅಪಾಯವು ಹೆಚ್ಚಾಗುತ್ತದೆ. ಇದೇ ಸಮಯದಲ್ಲಿ ನಿಮ್ಮ ಹಲ್ಲು, ಒಸಡುಗಳಲ್ಲಿ ಸಮಸ್ಯೆ ಕಂಡುಬಂದರೆ ನಿವಾರಣೆಯಾಗಲು ಸಹ ಸಾಕಷ್ಟು ಸಮಯ ಬೇಕಾಗುತ್ತದೆ.

ನೀವು ಹಲ್ಲಿನ ಮತ್ತು ಒಸಡು ಕಾಯಿಲೆಗೆ ಒಳಗಾಗುವ ಮೊದಲು ಮಧುಮೇಹಿಗಳು ಕೆಲವು ಸೂಕ್ತ ಕ್ರಮಗಳನ್ನು ತೆಗದುಕೊಳ್ಳಬೇಕು.

  • ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ.

  • ಬ್ರಷ್ (ಮೃದುವಾದ ಬಿರುಗೂದಲುಗಳಿರುವ ಹಲ್ಲುಜ್ಜುವ ಬ್ರಷ್ ಅನ್ನು ಬಳಸಿ) ಮತ್ತು ದಿನಕ್ಕೆ ಎರಡು ಬಾರಿ ಫ್ಲೋಸ್ ಮಾಡಿ ಮತ್ತು ನಂಜುನಿರೋಧಕ ಮೌತ್‌ವಾಶ್‌ನಿಂದ ಬಾಯಿ ತೊಳೆಯಿರಿ.

  • ಆಹಾರದಲ್ಲಿನ ಆಮ್ಲದಿಂದ ಮೃದುವಾದ ದಂತಕವಚವನ್ನು ರಕ್ಷಿಸಲು ಹಲ್ಲುಜ್ಜುವ ಮೊದಲು ತಿನ್ನುವ ನಂತರ ಕನಿಷ್ಠ 30 ನಿಮಿಷಗಳ ಕಾಲ ಕಾಯಿರಿ.

  • ನೀವು ಕೃತಕ ದಂತಗಳನ್ನು ಧರಿಸಿದರೆ, ಅವುಗಳನ್ನು ತೆಗೆದುಹಾಕಿ ಮತ್ತು ಪ್ರತಿದಿನ ಅವುಗಳನ್ನು ಸ್ವಚ್ಛಗೊಳಿಸಿ.

  • ನೀವು ಧೂಮಪಾನ ಮಾಡುತ್ತಿದ್ದರೆ, ಆ ಚಟ ಬಿಡುವುದು ಉತ್ತಮ

  •  ಪ್ರತಿ 6 ತಿಂಗಳಿಗೊಮ್ಮೆ ದಂತ ತಪಾಸಣೆ ಮಾಡಿ ದಂತವೈದ್ಯರ ಸಲಹೆ ಪಡೆಯಿರಿ.

Published by:Ashwini Prabhu
First published: