ಆಹಾರ (Food), ವ್ಯಾಯಾಮ (Exercise) ಮತ್ತು ಉತ್ತಮ ಜೀವನಶೈಲಿಯು (Lifestyle) ನಿಮ್ಮನ್ನು ಜೀವನಪೂರ್ತಿ (Lifelong) ಆರೋಗ್ಯವಾಗಿಡುವ (Health) ಮೂರು ಸಂಗತಿಗಳು ಆಗಿವೆ. ಅದರಲ್ಲೂ ನೀವು ಮಧುಮೇಹ ರೋಗಿಗಳಾಗಿದ್ದರೆ ಕೆಲವು ಆಹಾರ ಕ್ರಮದ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು. ಮಧುಮೇಹ ನಿಯಂತ್ರಿಸಲು, ನಿಮ್ಮ ಆಹಾರದ ಬಗ್ಗೆ ನೀವು ಹೆಚ್ಚು ಗಮನ ಹರಿಸಬೇಕು. ಮಧುಮೇಹ ಒಮ್ಮೆ ಬಂದರೆ ಜೀವನಪೂರ್ತಿ ಹೋಗುವುದಿಲ್ಲ. ಮಧುಮೇಹವನ್ನು ಕೇವಲ ನಿಯಂತ್ರಿಸಬಹುದು ಅಷ್ಟೇ. ಈ ಕಾಯಿಲೆಗೆ ಸಾಕಷ್ಟು ಕಾಳಜಿ ವಹಿಸಬೇಕಾಗುತ್ತದೆ. ಒಮ್ಮೆ ಮಧುಮೇಹ ಬಂದರೆ ಜೀವನ ಪರ್ಯಂತ ಎಚ್ಚರಿಕೆ ವಹಿಸಲೇಬೇಕಾಗುತ್ತದೆ. ನೀವು ಗಮನ ಹರಿಸದಿದ್ದರೆ ನಂತರ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ.
ಮಧುಮೇಹ ನಿಯಂತ್ರಿಸಲು ನೀವು ಕೆಲ ಮನೆಮದ್ದು
ಮಧುಮೇಹ ನಿಯಂತ್ರಿಸಲು ನೀವು ಕೆಲ ಮನೆಮದ್ದುಗಳನ್ನು ಅಳವಡಿಸಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ನಿರಂತರವಾಗಿ ಏರಿಕೆ ಆಗುತ್ತಿದೆ. ಮುಖ್ಯವಾಗಿ ತಪ್ಪು ಆಹಾರ ಮತ್ತು ಕಳಪೆ ಜೀವನಶೈಲಿ ಇದಕ್ಕೆ ಕಾರಣವಾಗಿದೆ.
ನೀವು ಕುಂದ್ರು ಎಲೆಗಳನ್ನು ಸಹ ಬಳಸಬಹುದು. ಕುಂದ್ರು ಎಲೆ ಮತ್ತು ಇತರೆ ಕೆಲವು ಪದಾರ್ಥಗಳು ಮಧುಮೇಹ ರೋಗಿಗಳಿಗೆ ಹೇಗೆ ಪ್ರಯೋಜನಕಾರಿ ಎಂದು ತಿಳಿಯೋಣ.
ಇದನ್ನೂ ಓದಿ: ಬಿಳಿ ಕೂದಲ ಸಮಸ್ಯೆ ನಿವಾರಣೆಗೆ ವಾಲ್ ನಟ್ ಸಿಪ್ಪೆಯಿಂದ ಹೀಗೆ ಮಾಡಿ, ಪ್ರಯೋಜನ ಪಡೆಯಿರಿ
ಮಧುಮೇಹವನ್ನು ನಿಯಂತ್ರಣಕ್ಕೆ ಕೆಲ ಮನೆಮದ್ದುಗಳು
ಆಲಿವ್ ಎಣ್ಣೆ
ಮಧುಮೇಹ ರೋಗಿಯು ಎಣ್ಣೆಯನ್ನು ಸಂವೇದನಾಶೀಲವಾಗಿ ಬಳಕೆ ಮಾಡಬೇಕು. ಆಲಿವ್ ಎಣ್ಣೆಯನ್ನು ಬಳಸುವುದು ಉತ್ತಮ. ಇದು ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ. ಇದು ಟ್ರೈಗ್ಲಿಸರೈಡ್ಗಳ ಮಟ್ಟ ಕಡಿಮೆ ಮಾಡುತ್ತದೆ. ಆಲಿವ್ ಎಣ್ಣೆಯು ರಕ್ತದ ಸಕ್ಕರೆಯನ್ನು ಸಹ ನಿಯಂತ್ರಿಸುತ್ತದೆ. ಆಲಿವ್ ಎಣ್ಣೆಯ ದೀರ್ಘಾವಧಿ ಬಳಕೆ ಹೃದಯ ಸಂಬಂಧಿ ಕಾಯಿಲೆ ಅಪಾಯ ನಿಯಂತ್ರಿಸುತ್ತದೆ.
ಬೆಳ್ಳುಳ್ಳಿ
ನಿಮ್ಮ ಆಹಾರದಲ್ಲಿ ತರಕಾರಿ ಮತ್ತು ಮಸಾಲೆ ಸೇರಿಸಿ. ಇದು ರಕ್ತದ ಸಕ್ಕರೆ ನಿಯಂತ್ರಿಸುತ್ತದೆ. ಮಧುಮೇಹಿಗಳು ಬೆಳ್ಳುಳ್ಳಿ ಸೇವಿಸಬೇಕು. ಬೆಳ್ಳುಳ್ಳಿ ತುಂಬಾ ಪ್ರಯೋಜನಕಾರಿ. ಬೆಳ್ಳುಳ್ಳಿ ಸೇವನೆ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ದೆ. ಆಗ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ರಾತ್ರಿ 2-3 ಎಸಳು ಬೆಳ್ಳುಳ್ಳಿಯನ್ನು ನೀರಿನಲ್ಲಿ ನೆನೆಸಿ ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.
ಮೆಂತ್ಯ
ಮಧುಮೇಹ ರೋಗಿಗಳು ಮೆಂತ್ಯ ಸೇವಿಸಿ. ಮೆಂತ್ಯ ಬೀಜಗಳನ್ನು ತಿನ್ನುವುದು ರಕ್ತದ ಸಕ್ಕರೆ ನಿಯಂತ್ರಣದಲ್ಲಿಡುತ್ತದೆ. ಒಂದು ಚಮಚ ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ನೆನೆಸಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೀಜಗಳೊಂದಿಗೆ ನೀರನ್ನು ಕುಡಿಯಿರಿ. ಇದರಿಂದ ಅರ್ಧ ಗಂಟೆ ಬೇರೇನೂ ತಿನ್ನಬೇಕಾಗಿಲ್ಲ.
ಕುಂದ್ರು ಎಲೆಗಳು ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ
ಕುಂದ್ರು ತರಕಾರಿ ತಯಾರಿಕೆಗೆ ಬಳಸುತ್ತಾರೆ. ಆದರೆ ಕುಂದ್ರುವಿನ ಜೊತೆಗೆ ಇದರ ಎಲೆಗಳು ಅನೇಕ ರೀತಿಯ ಆರೋಗ್ಯ ಸಮಸ್ಯೆ ಹೋಗಲಾಡಿಸಲು ಪರಿಣಾಮಕಾರಿ. ಇದರಲ್ಲಿ ಹಲವು ರೀತಿಯ ಪೋಷಕಾಂಶಗಳಿವೆ.
ವಿಟಮಿನ್ಗಳು, ಖನಿಜಗಳು, ಕ್ಯಾಲ್ಸಿಯಂ, ಫೈಬರ್, ಆಂಟಿಆಕ್ಸಿಡೆಂಟ್, ಉರಿಯೂತದ, ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಇದರಲ್ಲಿ ಕಂಡು ಬರುತ್ತವೆ. ಇದು ಸಕ್ಕರೆ ರೋಗಿಗಳಿಗೆ ಪ್ರಯೋಜನಕಾರಿ. ಸಕ್ಕರೆ ರೋಗಿಗಳು ಕುಂದ್ರು ಎಲೆಗಳನ್ನು ಸೇವಿಸಬೇಕು.
ಇದನ್ನೂ ಓದಿ: ಮಹಿಳೆಯರ ಮುಖದ ಮೇಲಿನ ಅನಗತ್ಯ ಕೂದಲು ತೆಗೆದು ಹಾಕುವುದು ಹೇಗೆ?
ಮಧುಮೇಹ ರೋಗಿಗಳು ಕುಂದ್ರು ಎಲೆಗಳನ್ನು ಈ ರೀತಿ ಸೇವಿಸಬೇಕು
ಮಧುಮೇಹ ರೋಗಿಗಳು ಕುಂದ್ರು ಎಲೆಗಳನ್ನು ಚೆನ್ನಾಗಿ ತೊಳೆಯಿರಿ. ತೊಳೆದ ನಂತರ ಈ ಎಲೆಗಳನ್ನು ಒಣಗಿಸಿ. ನಂತರ ಮಿಕ್ಸಿಯಲ್ಲಿ ಪುಡಿ ಮಾಡಿ. ಈಗ 1 ಗ್ರಾಂ ಈ ಪುಡಿಯನ್ನು ನೀರಿನಲ್ಲಿ ಅಥವಾ ಹಾಲಿನಲ್ಲಿ ಬೆರೆಸಿ ಮತ್ತು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ