Papaya Benefits: ಮಧುಮೇಹಿಗಳು ಪಪ್ಪಾಯಿ ತಿನ್ನಬಹುದೇ? ಜೀರ್ಣಾಂಗ ವ್ಯವಸ್ಥೆಗೆ ಹೇಗೆ ಸಹಕಾರಿ?

ಹಣ್ಣುಗಳು ದೇಹವನ್ನು ಆರೋಗ್ಯವಾಗಿ ಮತ್ತು ಫಿಟ್ ಆಗಿಡಲು ಸಹ ಸಹಾಯ ಮಾಡುತ್ತವೆ. ಕೆಲವು ಹಣ್ಣುಗಳು ಎಲ್ಲಾ ಋತುಮಾನಗಳಲ್ಲಿ ಸಿಗುತ್ತವೆ. ಅಂತಹ ಹಣ್ಣುಗಳನ್ನು ಆರೋಗ್ಯ ತಜ್ಞರು ಹೆಚ್ಚು ಪ್ರಯೋಜನಕಾರಿ ಹಣ್ಣುಗಳು ಎಂದು ವರ್ಗೀಕರಿಸುತ್ತಾರೆ. ಇದರಲ್ಲಿ ಪಪ್ಪಾಯಿಯು ಸೇರ್ಪಡೆಯಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಯಾರೇ ಆಗಲಿ ದಿನವೂ (Daily) ಯಾವುದಾದರೂ ಒಂದು ತರದ ಹಣ್ಣು (Fruit) ತಿನ್ನುವುದರಿಂದ ಆರೋಗ್ಯಕ್ಕೆ (Health) ಹಿತಕಾರಿ ಎಂದು ಹೇಳಲಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಆಹಾರದಲ್ಲಿ (Food) ಋತುಮಾನದ ಹಣ್ಣುಗಳನ್ನು ನಿಯಮಿತವಾಗಿ ಸೇರಿಸಿ ಸೇವನೆ ಮಾಡಬೇಕು. ಋತುಮಾನದ ಹಣ್ಣುಗಳನ್ನು ತಿನ್ನುವ ಅಭ್ಯಾಸವು ಆರೋಗ್ಯಕ್ಕೆ ವಿಶೇಷ ಪ್ರಯೋಜನ ನೀಡುತ್ತದೆ ಎಂದು ಅಧ್ಯಯನಗಳು ಹಾಗೂ ತಜ್ಞರು ಸ್ಪಷ್ಟವಾಗಿ ಹೇಳುವುದನ್ನು ನೀವು ಕೇಳಿರಬಹುದು. ಹಣ್ಣುಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಹಣ್ಣುಗಳನ್ನು ಅನೇಕ ವಿಧದ ಜೀವಸತ್ವಗಳು, ಖನಿಜಗಳು ಮತ್ತು ಪೋಷಕಾಂಶಗಳ ಉಗ್ರಾಣವೆಂದು ಹೇಳಲಾಗಿದೆ. ಋತುಮಾನದ ಹಣ್ಣುಗಳ ಸೇವನೆ ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತವೆ.

    ಹಣ್ಣುಗಳು ದೇಹವನ್ನು ಆರೋಗ್ಯವಾಗಿ ಮತ್ತು ಫಿಟ್ ಆಗಿಡಲು ಸಹ ಸಹಾಯ ಮಾಡುತ್ತವೆ. ಕೆಲವು ಹಣ್ಣುಗಳು ಎಲ್ಲಾ ಋತುಮಾನಗಳಲ್ಲಿ ಸಿಗುತ್ತವೆ. ಅಂತಹ ಹಣ್ಣುಗಳನ್ನು ಅಧ್ಯಯನದಲ್ಲಿ ಆರೋಗ್ಯ ತಜ್ಞರು ಹೆಚ್ಚು ಪ್ರಯೋಜನಕಾರಿ ಹಣ್ಣುಗಳು ಎಂದು ವರ್ಗೀಕರಿಸುತ್ತಾರೆ.

    ಹೆಚ್ಚು ಪ್ರಯೋಜನಕಾರಿ ಹಣ್ಣು ಪಪ್ಪಾಯಿ

    ಹೆಚ್ಚು ಪ್ರಯೋಜನಕಾರಿ ಹಣ್ಣುಗಳು ವರ್ಗೀಕರಣದಲ್ಲಿ ಪಪ್ಪಾಯಿಯು ಸೇರ್ಪಡೆಯಾಗುತ್ತದೆ. ಪಪ್ಪಾಯಿ ಎಲ್ಲಾ ಸೀಸನ್ ನಲ್ಲಿ ಸಿಗುತ್ತದೆ. ಜೊತೆಗೆ ಇದನ್ನು ಆಹಾರದಲ್ಲಿ ಸೇರಿಸುವುದು ನಿಮಗೆ ಸಾಕಷ್ಟು ಪ್ರಯೋಜನಗಳನ್ನು ಹಾಗೂ ನಿಮ್ಮ ಆರೋಗ್ಯ ವರ್ಧನೆಗೆ ಸಹಾಯ ಮಾಡುತ್ತದೆ.

    ಇದನ್ನೂ ಓದಿ: ಹೇಗಪ್ಪಾ ತೂಕ ಇಳಿಸೋದು ಎಂಬ ಚಿಂತೆನಾ? ಹಾಗಿದ್ರೆ ತಜ್ಞರು ಹೇಳಿರುವ ಈ ಟಿಪ್ಸ್ ಫಾಲೋ ಮಾಡಿ

    ಸಂಶೋಧನೆಯ ಪ್ರಕಾರ, ಪಪ್ಪಾಯಿಯಲ್ಲಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟ್‌ಗಳು, ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್-ಇ ಇದೆ ಎಂದು ಹೇಳುತ್ತದೆ. ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಆಹಾರಗಳು ದೇಹಕ್ಕೆ ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಸಮಸ್ಯೆಗಳನ್ನು ಕಡಿಮೆ ಮಾಡುತ್ತವೆ.

    ಈ ಮೂಲಕ ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತವೆ. ಪಪ್ಪಾಯಿ ಹಣ್ಣಿನಲ್ಲಿರುವ ಜೀವಸತ್ವಗಳು ಮತ್ತು ಪೋಷಕಾಂಶಗಳು ದೇಹಕ್ಕೆ ಶಕ್ತಿ ಒದಗಿಸುತ್ತವೆ. ಜೊತೆಗೆ ನಿಮಗೆ ಅನೇಕ ರೀತಿಯಲ್ಲಿ ಆರೋಗ್ಯ ಪ್ರಯೋಜನ ನೀಡುತ್ತವೆ.

    ಪಪ್ಪಾಯಿ ಸೇವನೆಯಿಂದ ದೇಹಕ್ಕೆ ಸಿಗುವ ಪ್ರಯೋಜನಗಳು

    ಪಪ್ಪಾಯಿಯು ಅಸ್ತಮಾ ತಡೆಯುತ್ತದೆ. ಜೊತೆಗೆ ಕ್ಯಾನ್ಸರ್ ಕೋಶಗಳ ಬೆಳವಣಿಗೆ ತಡೆಯುತ್ತದೆ. ಇಂತಹ ಪ್ರಯೋಜನಕಾರಿ ಗುಣಗಳನ್ನು ಪಪ್ಪಾಯಿ ಹೊಂದಿದೆ ಎಂದು ಅಧ್ಯಯನಗಳು ಹೇಳಿವೆ. ಅಂತಹ ಸ್ಥಿತಿಯಲ್ಲಿ ಪಪ್ಪಾಯಿ ಸೇವನೆ ದೇಹಕ್ಕೆ ಹಲವು ರೀತಿಯ ಆರೋಗ್ಯ ಪ್ರಯೋಜನ ಒದಗಿಸುತ್ತದೆ.

    ಪಪ್ಪಾಯಿಯಲ್ಲಿ ಜಿಯಾಕ್ಸಾಂಥಿನ್ ಎಂಬ ಉತ್ಕರ್ಷಣ ನಿರೋಧಕವಿದೆ. ಇದು ಅನೇಕ ಗಂಭೀರ ಸಮಸ್ಯೆಗಳಿಂದ ಜೀವಕೋಶಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಪಪ್ಪಾಯಿಯಲ್ಲಿರುವ ವಿಟಮಿನ್‌ಗಳು ಮತ್ತು ಪೋಷಕಾಂಶಗಳು ವಯಸ್ಸಾಗುವಿಕೆ ಮತ್ತು ಸಮಸ್ಯೆಗಳಿಂದ ದೇಹವನ್ನು ರಕ್ಷಿಸುತ್ತವೆ.

    ಮಧುಮೇಹಿಗಳು ಪಪ್ಪಾಯಿ ತಿನ್ನಬಹುದೇ?

    ಮಧುಮೇಹಿಗಳು ಯಾವ ಹಣ್ಣುಗಳನ್ನು ಸೇವಿಸಬೇಕು ಎಂಬುದು ಬಹಳ ಹಿಂದಿನಿಂದಲೂ ಚರ್ಚೆಗೆ ಗ್ರಾಸವಾಗಿದೆ. ಹೆಚ್ಚಿನ ಫೈಬರ್ ಆಹಾರ ಸೇವಿಸುವವರು ರಕ್ತದ ಸಕ್ಕರೆಯ ಮಟ್ಟ ಕಡಿಮೆ ಇರುತ್ತದೆ ಎಂದು ಅಧ್ಯಯನಗಳು ಹೇಳಿವೆ. ಪಪ್ಪಾಯಿಯಲ್ಲಿ ನಾರಿನಂಶ ಹೆಚ್ಚು.

    ಇದು ಟೈಪ್-2 ಡಯಾಬಿಟಿಸ್ ಇರುವವರ ರಕ್ತದ ಸಕ್ಕರೆ, ಲಿಪಿಡ್ ಮತ್ತು ಇನ್ಸುಲಿನ್ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮಧ್ಯಮ ಗಾತ್ರದ ಪಪ್ಪಾಯಿಯು ಸುಮಾರು 6 ಗ್ರಾಂ ಫೈಬರ್ ಒದಗಿಸುತ್ತದೆ.

    ಮೂಳೆಗಳಿಗೆ ಪ್ರಯೋಜನಕಾರಿ

    ಪಪ್ಪಾಯಿಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್-ಕೆ ಇದೆ. ಇದು ಮೂಳೆಗಳಿಗೆ ಪ್ರಯೋಜನಕಾರಿ ಆಗಿದೆ. ವಿಟಮಿನ್ ಕೆ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆ ಸುಧಾರಿಸುತ್ತದೆ. ಅಂದರೆ ಇದು ಮೂಳೆಗಳನ್ನು ಬಲಪಡಿಸಲು ಮತ್ತು ಅದರ ಪುನಃ ರ್ನಿರ್ಮಾಣ ಉತ್ತೇಜಿಸಲು ಸಹಾಯ ಮಾಡುತ್ತದೆ. ಪಪ್ಪಾಯಿ ತಿನ್ನುವವರಲ್ಲಿ ಸಂಧಿವಾತ ಅಥವಾ ಮೂಳೆ ದೌರ್ಬಲ್ಯದ ಸಮಸ್ಯೆ ಕಡಿಮೆ ಮಾಡುತ್ತದೆ.

    ಜೀರ್ಣಕ್ರಿಯೆ ಚೆನ್ನಾಗಿರುತ್ತದೆ

    ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಹೊಂದಿರುವ ಜನರಿಗೆ ಪಪ್ಪಾಯಿಯ ನಿರಂತರ ಸೇವನೆ ಪ್ರಯೋಜನಕಾರಿಯಾಗಿದೆ. ಪಪ್ಪಾಯಿಯು ಪಪೈನ್ ಎಂಬ ಕಿಣ್ವ ಹೊಂದಿದೆ. ಇದು ಆರೋಗ್ಯಕರ ಜೀರ್ಣಕ್ರಿಯೆ ಕಾಪಾಡಿಕೊಳ್ಳಲು ಮತ್ತು ಆಹಾರದಿಂದ ಪೋಷಕಾಂಶಗಳ ಹೀರಿಕೊಳ್ಳುವಿಕೆ ಹೆಚ್ಚಿಸಲು ಸಹಾಯ ಮಾಡುತ್ತದೆ.

    ಇದನ್ನೂ ಓದಿ: ಸಿಗರೇಟ್ ಸೇದುವುದರಿಂದ ಕೂದಲು ಉದುರುತ್ತವೆಯೇ? ಪೌಷ್ಟಿಕ ತಜ್ಞರು ಹೇಳಿದ್ದೇನು?

    ಪಪ್ಪಾಯಿಯಲ್ಲಿ ಫೈಬರ್ ಮತ್ತು ನೀರಿನ ಅಂಶವಿದೆ. ಇವೆರಡೂ ಮಲಬದ್ಧತೆ ತಡೆಯಲು ಮತ್ತು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಗೆ ಸಹಕಾರಿ.
    Published by:renukadariyannavar
    First published: