• Home
  • »
  • News
  • »
  • lifestyle
  • »
  • Healthy Food: ಮಧುಮೇಹಿಗಳು ಚಿಂತಿಸದೆ ಈ 7 ಆಹಾರ ಪದಾರ್ಥಗಳನ್ನು ಸೇವಿಸಬಹುದು

Healthy Food: ಮಧುಮೇಹಿಗಳು ಚಿಂತಿಸದೆ ಈ 7 ಆಹಾರ ಪದಾರ್ಥಗಳನ್ನು ಸೇವಿಸಬಹುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಧುಮೇಹಿಗಳು ಆರೋಗ್ಯದ ಬಗ್ಗೆ ಬಹಳಷ್ಟು ಜಾಗರೂಕರಾಗಿರಬೇಕಾದದ್ದು ಅತ್ಯಂತ ಅವಶ್ಯಕ. ಯಾವ ಆಹಾರವನ್ನು ಸೇವಿಸಬೇಕು ಹಾಗೂ ಯಾವುದನ್ನು ಸೇವಿಸಬಾರದು ಎಂಬ ಬಗ್ಗೆ ತಿಳಿಯಲು ಮುಂದೆ ಓದಿ.

  • Share this:

ಅಧಿಕ ರಕ್ತದ (Blood pressure) ಸಕ್ಕರೆಯು ಅಕ್ಷರಶಃ ಸೈಲೆಂಟ್‌ ಕಿಲ್ಲರ್‌ ನಂತೆ ವರ್ತಿಸುತ್ತದೆ. ಅದು ಇಂದು ಜಾಗತಿಕವಾಗಿ ಲಕ್ಷಾಂತರ ಜನರ (People) ಮೇಲೆ ಪರಿಣಾಮ ಬೀರುತ್ತಿದೆ. ಮಧುಮೇಹವನ್ನು ನಿಯಂತ್ರಣದಲ್ಲಿಡಲು ಆರೋಗ್ಯಕರ (Healthy) ಜೀವನಶೈಲಿ ಮತ್ತು ಸರಿಯಾದ ಆಹಾರ ಹಾಗೂ ನಿಯಮಿತ ವ್ಯಾಯಾಮ ಅತ್ಯಗತ್ಯ. ವಿಶೇಷವಾಗಿ ಆಹಾರದ (Food) ವಿಷಯಕ್ಕೆ ಬಂದಾಗ, ಅಧಿಕ ರಕ್ತದ ಸಕ್ಕರೆ ಹೊಂದಿರುವ ಜನರು ಬಹಳಷ್ಟು ಜಾಗರೂಕರಾಗಿರಬೇಕು.


ಕಡಿಮೆ ಕೊಬ್ಬು, ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಹೊಂದಿರುವ ಆಹಾರಗಳು ಮಧುಮೇಹಿಗಳಿಗೆ ಒಳ್ಳೆಯದು. ಮಧುಮೇಹಿಗಳು ಯಾವುದೇ ತಪ್ಪಿತಸ್ಥ ಭಾವನೆ ಇಲ್ಲದೇ ಸೇವಿಸಬಹುದಾದ 7 ವಿಧದ ಆಹಾರಗಳು ಇಲ್ಲಿವೆ.


ಬಾದಾಮಿ: ಮಧುಮೇಹಿಗಳು ಹೆಚ್ಚು ಚಿಂತಿಸದೆ ತಿನ್ನಬಹುದಾದ ಆಹಾರಗಳಲ್ಲೊಂದು ಬಾದಾಮಿ. ಕಡಿಮೆ ಕಾರ್ಬೋಹೈಡ್ರೇಟ್ ಅಂಶದೊಂದಿಗೆ ಪ್ರೋಟೀನ್, ಉತ್ತಮ ಕೊಬ್ಬುಗಳು ಮತ್ತು ಫೈಬರ್‌ನೊಂದಿಗೆ ಲೋಡ್ ಆಗಿರುವ ಬಾದಾಮಿಯು ಅಧಿಕ ರಕ್ತದ ಸಕ್ಕರೆ ಹೊಂದಿರುವ ಜನರಿಗೆ ಉತ್ತಮ ಆಯ್ಕೆಯಾಗಿದೆ. ಅದು ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದ್ದಾಗಿ ತಿಳಿದುಬಂದಿದೆ.


ಧಾನ್ಯಗಳು: ಜೋಳ, ಬಾಜ್ರಾ, ಗೋಧಿ, ಬಹುಧಾನ್ಯ, ಕ್ವಿನೋವಾ ಮತ್ತು ಓಟ್‌ಮೀಲ್‌ನಂತಹ ಧಾನ್ಯಗಳು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಹೊಂದಿರುವ ಆಹಾರಗಳಾಗಿವೆ. GI ಸಂಖ್ಯೆಯು ನಿರ್ದಿಷ್ಟ ವಸ್ತುವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಎಷ್ಟು ಹೆಚ್ಚಿಸುತ್ತದೆ ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ ನೈಸರ್ಗಿಕವಾಗಿ, ಕಡಿಮೆ GI ಹೊಂದಿರುವ ಈ ಧಾನ್ಯಗಳು ಅಧಿಕ ರಕ್ತದ ಸಕ್ಕರೆ ಹೊಂದಿರುವ ಜನರಿಗೆ ಅದ್ಭುತವಾದ ಆಹಾರವಾಗಿದೆ.


ಇದನ್ನೂ ಓದಿ: ತೂಕ ಇಳಿಸೋಕೆ ಆಹಾರದ ಬಣ್ಣವೂ ಮುಖ್ಯವಂತೆ, ಈ ರೀತಿ ಆಹಾರ ಸೇವಿಸಿ


ಮೊಟ್ಟೆ: ನಿಮ್ಮ ಅಧಿಕ ರಕ್ತದ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವಲ್ಲಿ ಮೊಟ್ಟೆಗಳು ಸಹಾಯಕವಾಗಿದೆ. ಮೊಟ್ಟೆ ಆರೋಗ್ಯಕರ ಕೊಬ್ಬಿನ ಉತ್ತಮ ಮೂಲವಾಗಿದೆ. ಇದು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮೊಟ್ಟೆಗಳು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಹಳದಿ ಲೋಳೆಯು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತದೆ. ಆದ್ದರಿಂದ ಅದನ್ನು ನಿಮ್ಮ ಆಹಾರದಲ್ಲಿ ಸೇರಿಸಲು ಮರೆಯದಿರಿ.


ಹುರಿದ ಕಡಲೆ: ಒಂದು ಅಧ್ಯಯನದ ಪ್ರಕಾರ, ಕಡಲೆ ಮತ್ತು ಇತರ ಕಾಳುಗಳು ಮಧುಮೇಹವನ್ನು ಹೆಚ್ಚಾಗುವ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಧಿಕ ರಕ್ತದ ಸಕ್ಕರೆ ಇರುವವರಿಗೆ ಹುರಿದ ಕಡಲೆ ಉತ್ತಮ ತಿಂಡಿಯಾಗಿದೆ.


ಹಣ್ಣುಗಳು: ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದು. ಆದರೆ ಎಲ್ಲಾ ಹಣ್ಣುಗಳು ಮಧುಮೇಹಿಗಳಿಗೆ ಒಳ್ಳೆಯದಲ್ಲ. ಆದಾಗ್ಯೂ ಕಡಿಮೆ GI ಹೊಂದಿರುವ ಅನೇಕ ಹಣ್ಣುಗಳಿವೆ. ಅವು ಬೆರ್ರಿ ಹಣ್ಣುಗಳು, ಪ್ಲಮ್ಗಳು, ಚೆರ್ರಿಗಳು, ಸೇಬುಗಳು, ಕಿತ್ತಳೆಗಳು, ಕಿವಿ ಹಣ್ಣು, ಆವಕಾಡೊ ಮುಂತಾದವು.


ಮನೆಯಲ್ಲಿ ಮಾಡಿದ ಪಾಪ್ಕಾರ್ನ್: ಪಾಪ್‌ಕಾರ್ನ್ ಟೇಸ್ಟಿ ಮತ್ತು ರುಚಿಕರವಾದ ತಿಂಡಿ. ವರದಿಗಳ ಪ್ರಕಾರ, ಮೂರು ಕಪ್ ಪಾಪ್ ಕಾರ್ನ್ ಕೇವಲ 100 ಕ್ಯಾಲೋರಿಗಳನ್ನು ಮತ್ತು 4 ಗ್ರಾಂನಷ್ಟು ಫೈಬರ್ ಅನ್ನು ಹೊಂದಿರುತ್ತದೆ. ಹಾಗಾಗಿ ಇದನ್ನು ಮಧುಮೇಹಿಗಳು ಸುಲಭವಾಗಿ ಸೇವಿಸಬಹುದು. ಆದರೆ ಇದಕ್ಕೆ ಬಳಸುವ ಬೆಣ್ಣೆ ಮತ್ತು ಉಪ್ಪನ್ನು ಪರೀಕ್ಷಿಸಿಕೊಳ್ಳಬೇಕಷ್ಟೇ.




ಕೋಸುಗಡ್ಡೆ : ಇದರಲ್ಲಿರುವ ಸಲ್ಫೋರಾಫೆನ್ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಏಕೆಂದರೆ ಇದು ಗಮನಾರ್ಹವಾದ ಮಧುಮೇಹ-ವಿರೋಧಿ ಪರಿಣಾಮವನ್ನುಹೊಂದಿದೆ ಎಂಬುದನ್ನು ಸಂಶೋಧನಾ ಅಧ್ಯಯನಗಳು ಕಂಡುಹಿಡಿದಿದೆ.


ಕೋಸುಗಡ್ಡೆ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಇದು ಮಧುಮೇಹಿಗಳು ಮುಕ್ತವಾಗಿ ಸೇವಿಸಬಹುದಾದ ಆಹಾರವಾಗಿದೆ.


ಒಟ್ಟಾರೆ, ಮಧುಮೇಹಿಗಳು ಆರೋಗ್ಯದ ಬಗ್ಗೆ ಬಹಳಷ್ಟು ಜಾಗರೂಕರಾಗಿರಬೇಕಾದದ್ದು ಅತ್ಯಂತ ಅವಶ್ಯಕ. ಯಾವ ಆಹಾರವನ್ನು ಸೇವಿಸಬೇಕು ಹಾಗೂ ಯಾವುದನ್ನು ಸೇವಿಸಬಾರದು ಎಂಬ ಬಗ್ಗೆ ಸರಿಯಾದ ಜ್ಞಾನವೂ ಅವಶ್ಯ.

First published: