Netra Suraksha: ಡಯಾಬಿಟೀಸ್ ಸಂಬಂಧಿತ ಸಮಸ್ಯೆಗಳು ನಿಮ್ಮ ಕುಟುಂಬದ ಜೀವನದ ಗುಣಮಟ್ಟವನ್ನು ಗಂಭೀರವಾಗಿ ಅಡ್ಡಿಪಡಿಸಬಹುದು

ಡಯಾಬಿಟಿಕ್ ರೆಟಿನೋಪಥಿಯನ್ನು ಬಹಳ ಸುಲಭವಾಗಿ ಪತ್ತೆಹಚ್ಚಬಹುದು. ಇದಕ್ಕೆ ಬೇಕಾಗಿರುವುದೆಂದರೆ ಒಂದು ಸರಳವಾದ, ನೋವುರಹಿತ, ನಿಯಮಿತ ಕಣ್ಣಿನ ಪರೀಕ್ಷೆ (ನೇತ್ರ ವೈದ್ಯರ ಬಳಿಯೇ ಹೊರತು ಕನ್ನಡಕಗಳ ಅಂಗಡಿಯಲ್ಲಿ ಅಲ್ಲ!).

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಯಾರೊಬ್ಬರೂ ಸಹ ಕರುಡುರಾಗುವ ಬಗ್ಗೆ ಯೋಚಿಸಲು ಬಯಸುವುದಿಲ್ಲ. ಹೌದು, ಖಂಡಿತ ಸತ್ಯ. ಇದೊಂದು ಅತಿಯಾದ ಅಹಿತಕರ ಯೋಚನೆ. ನೀವು ಕಳೆದುಕೊಳ್ಳಲಿರುವ ಸಂಗತಿಗಳ ಬಗ್ಗೆ ಯೋಚಿಸಿಯೇ ಬಳಲುವಿರಿ. ವಾಸ್ತವ ಏನೆಂದರೆ ನೀವು ನಿಮ್ಮ ಕೆಲಸವನ್ನು ಬಿಡಬೇಕಾಗುತ್ತದೆ. ನೀವು ಸ್ವತಃ ಇನ್ನೇನನ್ನೋ ಮಾಡಲು ನಿಮ್ಮನ್ನು ಮರುಕೌಶಲಗೊಳಿಸುವ ಸಮಯ ಅದು (ಅದೂ ಸಹ, ಅಂತಿಮವಾಗಿ ನೀವು ಅತ್ಯಂತ ಹೆಚ್ಚು ಸಂಪಾದನೆ ಮಾಡುವುದನ್ನು ಆರಂಭಿಸುವ ಸಮಯ!). ನಿಮ್ಮ ದೈನಂದಿನ ಜೀವನ ವಿಧಾನ ಬದಲಾಗುತ್ತದೆ. ನಿಮ್ಮ ಹೊಸ ವರ್ತನೆಗಳನ್ನು ಗುರುತಿಸಿದಾಗ ನಿಮಗೆ ಅಗತ್ಯವಿರುವ ಎಲ್ಲಾ ಸಹಾಯ ಎಂದರೆ: ನಿಮಗೊಬ್ಬ ಸಹಾಯಕ ಬೇಕೇ? ನಿಮ್ಮ ಸಂಗಾತಿಯು ನಿಮ್ಮನ್ನು ಬಿಟ್ಟು ಹೋಗುತ್ತಾರೆಯೇ? ಇದು ನಿಮ್ಮ ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಇದು ಅವರ ಶಿಕ್ಷಣದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ವಿದೇಶಿ ಕಾಲೇಜಿಗೆ ಪಾವತಿ ಮಾಡಲು ನೀವು ಈಗಲೂ ಸಮರ್ಥರಾಗಿರುವಿರೇ? ವೈದ್ಯಕೀಯವಾಗಿ ಇದು ಎಷ್ಟು ವೆಚ್ಚವಾಗುತ್ತದೆ? NetraSuraksha ಸೆಲ್ಫ್ ಚೆಕ್ ಅನ್ನು ಇಲ್ಲಿ ತೆಗೆದುಕೊಳ್ಳಿ

  ಜೀವನವು ಸಂಪೂರ್ಣ ನಾಟಕೀಯವಾಗಿ ಬದಲಾಗುತ್ತದೆ. ಆದರೆ ಇದನ್ನೆಲ್ಲಾ ನಾವು ಈಗ ಏಕೆ ಮಾತನಾಡುತ್ತಿದ್ದೇವೆ? ಯಾಕೆಂದರೆ ನೀವು ತಿಳಿದಿರಲೇಬೇಕಾದ ಕೆಲವು ಅಂಕಿಸಂಖ್ಯೆಗಳು ಇಲ್ಲಿವೆ:

  • 2019ರಲ್ಲಿ 20-79 ವಯಸ್ಸಿನ ಸುಮಾರು 463 ಮಿಲಿಯನ್ ವಯಸ್ಕರು ಡಯಾಬಿಟೀಸ್‌ನೊಂದಿಗೆ ಬದುಕುತ್ತಿದ್ದು, ಒಟ್ಟಾರೆ ಸಂಖ್ಯೆಯು 463 ಮಿಲಿಯನ್‌ಗೆ ಏರಿಕೆಯಾಗಿದ್ದು, ಇದು ವಿಶ್ವ ಜನಸಂಖ್ಯೆಯ 9.3% ರಷ್ಟನ್ನು ಪ್ರತಿನಿಧಿಸುತ್ತದೆ. ಈ ಸಂಖ್ಯೆಯು 2030ರಲ್ಲಿ 578 ಮಿಲಿಯನ್‌ಗೆ (10.2%) ಮತ್ತು 2045ರಲ್ಲಿ 700 ಮಿಲಿಯನ್‌ಗೆ (10.9%) ತಲುಪಬಹುದು ಎಂದು ಊಹಿಸಲಾಗಿದೆ1

  • ಇಬ್ಬರಲ್ಲಿ ಒಬ್ಬರು (50.1%) ಅಥವಾ ಡಯಾಬಿಟೀಸ್‌ನೊಂದಿಗೆ ಬದುಕುತ್ತಿರುವ 463 ಮಿಲಿಯನ್ ವಯಸ್ಕರಲ್ಲಿ 231.9 ಮಿಲಿಯನ್ ಜನರು (20-79 ವರ್ಷ ವಯಸ್ಸಿನವರಲ್ಲಿ, ಅಗಾಧ ಎನ್ನಬಹುದಾದ ಟೈಪ್ 2 ಡಯಾಬಿಟೀಸ್) ಈ ಸ್ಥಿತಿಯನ್ನು ಹೊಂದಿರುವ ಬಗ್ಗೆ ತಿಳಿದುಕೊಂಡಿಲ್ಲ1.

  • ಭಾರತದಲ್ಲಿ, ಡಯಾಬಿಟೀಸ್ ಇರುವ ಜನರ ಒಟ್ಟು ಸಂಖ್ಯೆಯು 2019ರಲ್ಲಿ 77 ಮಿಲಿಯನ್ ಆಗಲಿದೆ ಎಂದು ಅಂದಾಜಿಸಲಾಗಿದ್ದು, ಅದರಲ್ಲಿ 43.9 ಮಿಲಿಯನ್ ಜನರು ರೋಗನಿರ್ಣಯಕ್ಕೆ (ಡಯಾಗ್ನಾಸಿಸ್) ಒಳಗಾಗಿಲ್ಲ1.


  ಕೊನೆಯ ಅಂಶವು ನಿಮ್ಮನ್ನು ಆತಂಕಗೊಳಿಸಬಹುದು – ಭಾರತದಲ್ಲಿ ಡಯಾಬಿಟೀಸ್ ಇರುವ ಅರ್ಧಕ್ಕೂ ಹೆಚ್ಚಿನ ಜನರು ರೋಗನಿರ್ಣಯಕ್ಕೆ ಒಳಗಾಗಿಲ್ಲ. ಸಮಯ ಕಳೆದಂತೆ, ಈ ಸಂಖ್ಯೆಯು ಹೆಚ್ಚಾಗುತ್ತದೆಯಷ್ಟೇ. ಪ್ರಯಾಣ, ದೀರ್ಘ ಕೆಲಸದ ಅವಧಿ, ಒತ್ತಡ, ಹೊರಗೆ ಊಟ ಮಾಡುವುದು, ವ್ಯಾಯಾಮ ಮಾಡಲು ಸಮಯ ಇಲ್ಲದಿರುವುದು ಮತ್ತು ಡೆಸ್ಕ್ ಕೆಲಸಗಳು ಡಯಾಬಿಟೀಸ್ ಸಂಭಾವ್ಯತೆಯನ್ನು ಹೆಚ್ಚಿಸುತ್ತಿವೆ. ಅದೂ ನಿರ್ದಿಷ್ಟವಾಗಿ ನಗರ ಪ್ರದೇಶಗಳಲ್ಲಿ. ದೃಷ್ಟಿ ಕಳೆದುಕೊಳ್ಳುವುದರ ಬಗ್ಗೆ ಮಾತನಾಡುತ್ತಿದ್ದವರು ಈಗೇಕೆ ನಾವು ಡಯಾಬಿಟೀಸ್ ಬಗ್ಗೆ ಮಾತನಾಡುತ್ತಿದ್ದೇವೆ? ಇಲ್ಲಿ ಇನ್ನಷ್ಟು ಅಂಶಗಳಿವೆ: 

  • ಡಯಾಬಿಟಿಕ್ ಕಣ್ಣಿನ ರೋಗವು ಹೆಚ್ಚು ಭಯಪಡಿಸುವ ಡಯಾಬಿಟೀಸ್‌ನ ಒಂದು ಸಮಸ್ಯೆಯಾಗಿದೆ, ಅದು ಅತಿ ಹೆಚ್ಚು ಎಂಬಂತೆ ಡಯಾಬಿಟಿಕ್ ರೆಟಿನೋಪಥಿ, ಡಯಾಬಿಟಿಕ್ ಮ್ಯಾಕ್ಯುಲಾರ್ ಎಡಿಮಾ, ಕ್ಯಾಟರಾಕ್ಟ್ ಮತ್ತು ಗ್ಲಾಕೋಮಾವನ್ನು ಅಷ್ಟೇ ಅಲ್ಲದೆ, ಆದರ ಜತೆಗೆ ಎರಡು ದೃಷ್ಟಿ (ಡಬಲ್ ವಿಷನ್) ಮತ್ತು ದೃಷ್ಟಿ ಕೇಂದ್ರೀಕರಿಸಲು ಅಸಮರ್ಥತೆಯನ್ನು ಸಹ ಒಳಗೊಂಡಿದೆ1.  1. ಬಹುತೇಕ ದೇಶಗಳು, ವಿನಾಶಕಾರಿ ವೈಯಕ್ತಿಕ ಮತ್ತು ಸಮಾಜೋ ಆರ್ಥಿಕ ಪರಿಣಾಮಗಳನ್ನು ಹೊಂದಿರುವ, ಕೆಲಸ ಮಾಡುವ ವಯಸ್ಸಿನ ಜನಸಂಖ್ಯೆಯ ಕುರುಡುತನಕ್ಕೆ ಇರುವ ಪ್ರಮುಖ ಕಾರಣಗಳಲ್ಲಿ ಡಯಾಬಿಟಿಕ್ ರೆಟಿನೋಪಥಿಯೂ ಒಂದು ಎಂದು ಒಪ್ಪಿಕೊಂಡಿವೆ1.  • 1980ರಿಂದ 2008ರ ಅವಧಿಯಲ್ಲಿ ವಿಶ್ವದಾದ್ಯಂತ ನಡೆಸಲಾದ 35 ಅಧ್ಯಯನಗಳನ್ನು ಆಧರಿಸಿ ಹೇಳುವುದಾದರೆ, ಡಯಾಬಿಟೀಸ್ ಇರುವವರಲ್ಲಿ ರೆಟಿನಲ್ ಇಮೇಜ್‌ಗಳನ್ನು ಬಳಸಿ ಅಂದಾಜಿಸಿದಂತೆ ಯಾವುದೇ DR ಹರಡುವಿಕೆಯು ಒಟ್ಟಾರೆ ದೃಷ್ಟಿಸಹಿತ 35% ಆಗಿದೆ – 12% ನಲ್ಲಿ ಭಯಭೀತಗೊಳಿಸುವ DR ಇದೆ1.


  ಆ ಸಂಖ್ಯೆಗಳನ್ನು ಮತ್ತೊಮ್ಮೆ ನೋಡಿ. ಭಾರತದಲ್ಲಿ ಡಯಾಬಿಟೀಸ್ ಇರುವ ಅರ್ಧಕ್ಕಿಂತಲೂ ಹೆಚ್ಚಿನವರು ರೋಗನಿರ್ಣಯಕ್ಕೆ ಒಳಗಾಗಿಲ್ಲ. ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನವರು ಡಯಾಬಿಟಿಕ್ ರೆಟಿನೋಪಥಿಯ ಕೆಲವು ಸ್ವರೂಪವನ್ನು ಹೊಂದಿದ್ದಾರೆ ಹಾಗೂ ಎಂಟರಲ್ಲಿ ಒಬ್ಬರು ಗಂಭೀರ ಸ್ವರೂಪದ ಡಯಾಬಿಟಿಕ್ ರೆಟಿನೋಪಥಿ ಹೊಂದಿದ್ದಾರೆ ಹಾಗೂ ಅವರ ದೃಷ್ಟಿಯನ್ನು ಹಾನಿಮಾಡಲು ಇದು ಬಹುಮುಖ್ಯ ಕಾರಣವಾಗಬಲ್ಲದು.

  ಈ ಸಂಖ್ಯೆಗಳು ನಿಮ್ಮನ್ನು ಹುಬ್ಬೇರಿಸುವಂತೆ ಮಾಡಿದವೇ? ನಮಗಾದದ್ದೂ ಸಹ ಅದೇ. ಇದಕ್ಕಾಗಿಯೇ, ಡಯಾಬಿಟಿಕ್ ರೆಟಿನೋಪಥಿ ಸಮಸ್ಯೆಯನ್ನು ಭರಿಸಿಕೊಳ್ಳಲು ವೈದ್ಯಕೀಯ ಕ್ಷೇತ್ರದ ಪರಿಣತರು, ನೀತಿ ನಿರೂಪಕರು ಮತ್ತು ಥಿಂಕ್ ಟ್ಯಾಂಕ್‌ಗಳ ಅತ್ಯುತ್ತಮ ತಜ್ಞರನ್ನು ಜೊತೆಗೂಡಿಸಲಿಕ್ಕಾಗಿ, Novartis ಸಹಯೋಗದೊಂದಿಗೆ Network18, 'Netra Suraksha' - India Against Diabetes ಉಪಕ್ರಮವನ್ನು ಆರಂಭಿಸಿದೆ.

  ಡಯಾಬಿಟಿಕ್ ರೆಟಿನೋಪಥಿಯ ಕುರಿತು ನಾವು ಮೊದಲು ತಿಳಿದುಕೊಂಡ ಸಂಗತಿ ಏನೆಂದರೆ ಅದು ತನ್ನ ಪ್ರಾಥಮಿಕ ಹಂತಗಳಲ್ಲಿ ಲಕ್ಷಣರಹಿತವಾಗಿರುತ್ತದೆ ಎಂಬುದು. ಇದು, ದುರಾದೃಷ್ಟವಶಾತ್, ಇದೇ ಹಂತದಲ್ಲಿಯೇ ಚಿಕಿತ್ಸೆಯು ಅತ್ಯಂತ ಪರಿಣಾಮಕಾರಿಯಾಗುವುದು. ಲಕ್ಷಣಗಳು ಕಂಡುಬರಲು ಆರಂಭವಾಗುವ ಸಮಯದಲ್ಲಾಗಲೇ ಸಾಕಷ್ಟು ಪ್ರಮಾಣದ ದೃಷ್ಟಿಹೀನತೆ ಉಂಟಾಗಿರುತ್ತದೆ. ಕೆಟ್ಟ ಸಂಗತಿ ಏನೆಂದರೆ ಈ ಹಾನಿಯನ್ನು ಬದಲಾಯಿಸಲು ಆಗುವುದಿಲ್ಲ. ಒಮ್ಮೆ ರೋಗನಿರ್ಣಯ ಮಾಡಿದರೆ, ರೋಗಿಯು ಒಂದು ವೇಳೆ ನಿರ್ದಿಷ್ಟವಾಗಿ ವೈದ್ಯರ ಸೂಚನೆಗಳನ್ನು ಚಾಚೂತಪ್ಪದೆ ಅನುಸರಿಸಿದರೆ ಈ ರೋಗವನ್ನು ಅವರು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಬಹುದು, 

  ನಾವು ತಿಳಿದುಕೊಂಡ ಇನ್ನೊಂದು ಸಂಗತಿ ಎಂದರೆ ಡಯಾಬಿಟಿಕ್ ರೆಟಿನೋಪಥಿಯನ್ನು ಬಹಳ ಸುಲಭವಾಗಿ ಪತ್ತೆಹಚ್ಚಬಹುದು. ಇದಕ್ಕೆ ಬೇಕಾಗಿರುವುದೆಂದರೆ ಒಂದು ಸರಳವಾದ, ನೋವುರಹಿತ, ನಿಯಮಿತ ಕಣ್ಣಿನ ಪರೀಕ್ಷೆ (ನೇತ್ರ ವೈದ್ಯರ ಬಳಿಯೇ ಹೊರತು ಕನ್ನಡಕಗಳ ಅಂಗಡಿಯಲ್ಲಿ ಅಲ್ಲ!). ದುಂಡು ಮೇಜಿನ ಸಂವಾದಗಳು, ವಿವರಣಾತ್ಮಕ ವೀಡಿಯೊಗಳು ಹಾಗೂ ಲೇಖನಗಳ ಮೂಲಕ ಇದನ್ನು ಕಾರ್ಯಸಾಧುವಾಗಿಸುವುದು Netra Suraksha ದ ಧ್ಯೇಯವಾಗಿದೆ. ನೀವು ಈ ಎಲ್ಲಾ ಸಾಮಗ್ರಿಗಳನ್ನು News18.comNetra Suraksha ಉಪಕ್ರಮ ಪುಟದಲ್ಲಿ ಪಡೆದುಕೊಳ್ಳಬಹುದು. ನಿಮ್ಮ ಅಪಾಯವನ್ನು ನಿರ್ಣಯಿಸಲು ನಾವು ಆನ್‌ಲೈನ್ Diabetic Retinopathy ಸ್ವಯಂ ತಪಾಸಣೆಯನ್ನು ಸಹ ವಿನ್ಯಾಸಗೊಳಿಸಿದ್ದೇವೆ.

  ಅಲ್ಲಿಂದ ಪ್ರಾರಂಭಿಸಿ ಎಂದು ನಾವು ನಿಮಗೆ ಶಿಫಾರಸು ಮಾಡುತ್ತೇವೆ. ಆನ್‌ಲೈನ್ Diabetic Retinopathy ಸ್ವಯಂ ತಪಾಸಣೆಯನ್ನು ತೆಗೆದುಕೊಳ್ಳಿ ಮತ್ತು Netra Suraksha ಉಪಕ್ರಮ ಪುಟವನ್ನು ಓದಿ. ನಿಮಗಾಗಿ ಮತ್ತು ಕುಟುಂಬಕ್ಕಾಗಿ ನಿಮ್ಮ ವೈದ್ಯರ ಬಳಿ ಕಣ್ಣಿನ ಪರೀಕ್ಷೆಯನ್ನು ನಿಗದಿಪಡಿಸಿಕೊಳ್ಳಿ. ನೀವು ಅದನ್ನು ಮಾಡಿದಾಗ, ಅದರೊಂದಿಗೆ ರಕ್ತ ಪರೀಕ್ಷೆಯನ್ನೂ ನಿಗದಿಪಡಿಸಿ ಮತ್ತು ನಿಮ್ಮ ರಕ್ತದ ಸಕ್ಕರೆ ಪ್ರಮಾಣವನ್ನು ಪರೀಕ್ಷಿಸಿಕೊಳ್ಳಿ. ಈ ಪರೀಕ್ಷೆಗಳನ್ನು ನಿಮ್ಮ ಕೌಟುಂಬಿಕ ಕ್ಯಾಲೆಂಡರ್‌ನಲ್ಲಿ ಗುರುತಿಸಿಟ್ಟುಕೊಳ್ಳಿ – ನೀವು ಅದನ್ನು ನಿಮಗೆ ಪ್ರಮುಖವೆನಿಸುವ ದಿನಾಂಕದೊಂದಿಗೆ ಸೇರಿಸಿಯೂ ಗುರುತಿಸಬಹುದು, ಅದರಿಂದಾಗಿ ಪ್ರತಿವರ್ಷ ಪುನರಾವರ್ತಿಸುವುದನ್ನು ನೀವು ಮರೆಯುವುದಿಲ್ಲ.

  ಈ ಮಾತನ್ನು ಎಲ್ಲರಿಗೂ ಹಂಚಿ: ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ. ಪರಿಹಾರದ ಒಂದು ಭಾಗವಾಗಿ. ಮೇಲಕ್ಕೆ ಸ್ಕ್ರಾಲ್ ಮಾಡಿ ಮತ್ತು ಸಂಖ್ಯೆಗಳನ್ನು ಮತ್ತೊಮ್ಮೆ ಓದಿ. ಈ ರೋಗವನ್ನು ನಾವು ಮಟ್ಟಹಾಕಬೇಕೆಂದರೆ, ಡಯಾಬಿಟೀಸ್ ಇರುವ ಪ್ರತಿಯೊಬ್ಬರೂ ಸಹ ವಾರ್ಷಿಕ ಕಣ್ಣು ಪರೀಕ್ಷೆ ಮಾಡಿಸಿಕೊಳ್ಳುವಂತೆ ಮಾಡಬೇಕು. ಡಯಾಬಿಟೀಸ್ ಮತ್ತು ಡಯಾಬಿಟಿಕ್ ರೆಟಿನೋಪಥಿಯ ವಿರುದ್ಧ ಒಂದು ಅತ್ಯುತ್ತಮ ಹೋರಾಟ ಮಾಡೋಣ. ಅದರಲ್ಲಿ ಜಯಶಾಲಿಗಳಾಗೋಣ.

  ಉಲ್ಲೇಖಗಳು: 

  1. IDF Atlas, International Diabetes Federation, 9th edition, 2019

  Published by:Soumya KN
  First published: