Diabetes in Children: ಮಕ್ಕಳಲ್ಲಿ ಹೆಚ್ಚಾಗ್ತಿದೆ ಮಧುಮೇಹ. ಪೋಷಕರು ತಪ್ಪದೇ ಈ ಕೆಲಸ ಮಾಡಬೇಕು

ಮಧುಮೇಹವು ವಯಸ್ಕರರಲ್ಲಿ ಮಾತ್ರ ಕಾಣುವ ಕಾಯಿಲೆ ಎಂದು ನಾವೆಲ್ಲಾ ಅಂದುಕೊಂಡಿದ್ದೇವೆ. ಆದರೆ ಇದು ತಪ್ಪು, ಆಘಾತಕಾರಿ ಎನ್ನುವಂತೆ ಮಕ್ಕಳಲ್ಲೂ ಸಹ ಟೈಪ್ 2 ಮಧುಮೇಹ ಕಂಡು ಬರುತ್ತಿದೆ. ಕೆನಡಾ ಜರ್ನಲ್ ಆಫ್ ಡಯಾಬಿಟಿಸ್‌ನ ಇತ್ತೀಚಿನ ವರದಿಯ ಪ್ರಕಾರ, ಮಕ್ಕಳಲ್ಲಿ ಟೈಪ್ 2 ಮಧುಮೇಹವು ಕಳೆದ ಎರಡು ದಶಕಗಳಲ್ಲಿ ಜಗತ್ತಿನಾದ್ಯಂತ ತೀವ್ರ ಏರಿಕೆ ಕಂಡಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಭಾರತವನ್ನು (India) ವಿಶ್ವದ ಮಧುಮೇಹದ (Diabetes) ರಾಜಧಾನಿ ಎನ್ನಬಹುದು, ಏಕೆಂದರೆ ಅಷ್ಟು ಪ್ರಮಾಣದಲ್ಲಿ ಇಲ್ಲಿ ಪ್ರತಿ ವರ್ಷ ರೋಗನಿರ್ಣಯ ಮಾಡುವ ಮಧುಮೇಹ ರೋಗಿಗಳ ಸಂಖ್ಯೆ ಇದೆ. ಮಧುಮೇಹಿ ರೋಗಿಗಳ ಸಂಖ್ಯೆಯ ಜೊತೆಗೆ ಮತ್ತೊಂದು ಆಘಾತಕಾರಿ ವಿಚಾರ ಕೂಡ ಒಂದಿದೆ. ಮಧುಮೇಹವು ವಯಸ್ಕರರಲ್ಲಿ ಮಾತ್ರ ಕಾಣುವ ಕಾಯಿಲೆ (Disease) ಎಂದು ನಾವೆಲ್ಲಾ ಅಂದುಕೊಂಡಿದ್ದೇವೆ. ಆದರೆ ಇದು ತಪ್ಪು, ಆಘಾತಕಾರಿ ಎನ್ನುವಂತೆ ಮಕ್ಕಳಲ್ಲೂ (Children) ಸಹ ಟೈಪ್ 2 ಮಧುಮೇಹ ಕಂಡು ಬರುತ್ತಿದೆ. ಕೆನಡಾ ಜರ್ನಲ್ ಆಫ್ ಡಯಾಬಿಟಿಸ್‌ನ ಇತ್ತೀಚಿನ ವರದಿಯ ಪ್ರಕಾರ, ಮಕ್ಕಳಲ್ಲಿ ಟೈಪ್ 2 ಮಧುಮೇಹವು (Type 2 Diabetes) ಕಳೆದ ಎರಡು ದಶಕಗಳಲ್ಲಿ ಜಗತ್ತಿನಾದ್ಯಂತ ತೀವ್ರ ಏರಿಕೆ ಕಂಡಿದೆ.

ಆಫ್ರಿಕಾ, ಅರಬ್, ಏಷ್ಯಾ, ಹಿಸ್ಪಾನಿಕ್, ದಕ್ಷಿಣ ಏಷ್ಯಾ ಮೂಲದ ಮಕ್ಕಳು ಟೈಪ್ 2 ಮಧುಮೇಹದ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಮಕ್ಕಳಲ್ಲಿ ಟೈಪ್ 1 ಡಯಾಬಿಟಿಸ್ ಮತ್ತು ಟೈಪ್ 2 ಡಯಾಬಿಟಿಸ್
ಟೈಪ್ 1 ಡಯಾಬಿಟಿಸ್ ಮೆಲ್ಲಿಟಸ್, ಟೈಪ್ 2 ಡಯಾಬಿಟಿಸ್ ಮೆಲ್ಲಿಟಸ್‌ನಂತೆ ಹೆಚ್ಚುತ್ತಿದೆ, ಅದೇ ಅನುಪಾತದಲ್ಲಿಲ್ಲದಿದ್ದರೂ, ವರ್ಷಕ್ಕೆ 3-5% ಹೆಚ್ಚಳವಾಗುತ್ತಿದೆ ಎಂದು ಮಕ್ಕಳ ತಜ್ಞ ಡಾ. ಅಭಿಷೇಕ್ ಕುಲಕರ್ಣಿ ಹಂಚಿಕೊಂಡಿದ್ದಾರೆ. “ಭಾರತವು 0-14 ವರ್ಷ ವಯಸ್ಸಿನ 1 ಲಕ್ಷ ಮಕ್ಕಳಿಗೆ ಟೈಪ್ 1 ಡಯಾಬಿಟಿಸ್ ಮೆಲ್ಲಿಟಸ್‌ನ 3 ಹೊಸ ಪ್ರಕರಣಗಳನ್ನು ಹೊಂದಿದೆ ಮತ್ತು ಟೈಪ್ 1 ಡಯಾಬಿಟಿಸ್ ಮೆಲ್ಲಿಟಸ್‌ನ ಹರಡುವಿಕೆಯ ಡೇಟಾವು ಕೆಲವು ರಾಜ್ಯಗಳಲ್ಲಿ 1 ಲಕ್ಷ ಮಕ್ಕಳಿಗೆ 18 ಪ್ರಕರಣಗಳನ್ನು ತೋರಿಸುತ್ತದೆ ಎಂದಿದ್ದಾರೆ.

ಟೈಪ್ 1 ಡಯಾಬಿಟಿಸ್ ಮೆಲ್ಲಿಟಸ್ ಎಚ್‌ಎಲ್‌ಎ ಪೂರ್ವಭಾವಿ ವ್ಯಕ್ತಿಗಳಲ್ಲಿ ಪರಿಸರ ಅಥವಾ ಇಡಿಯೋಪಥಿಕ್ ಪ್ರಚೋದಕಗಳಿಂದ ಉಂಟಾಗುವ ಸ್ವಯಂ ನಿರೋಧಕ ಕಾಯಿಲೆಯಾಗಿದ್ದು, ಟೈಪ್ 2 ಡಯಾಬಿಟಿಸ್ ಮೆಲ್ಲಿಟಸ್ ಸಾಮಾನ್ಯವಾಗಿ ಬೊಜ್ಜು, ಪ್ರತಿಕೂಲ ಆಹಾರ ಮತ್ತು ಜೀವನಶೈಲಿಯ ಅಂಶಗಳಿಂದ ಉಲ್ಬಣಗೊಳ್ಳುವ ಸ್ಥಿತಿಯಾಗಿದೆ.

ಮಕ್ಕಳಲ್ಲಿ ಮಧುಮೇಹದ ಲಕ್ಷಣಗಳು
ಮಕ್ಕಳಲ್ಲಿ ಸಾಮಾನ್ಯವಾಗಿ ಗುರುತಿಸಲಾದ ಮಧುಮೇಹದ ಕೆಲವು ಲಕ್ಷಣಗಳೆಂದರೆ ಬಾಯಾರಿಕೆ, ಆಗಾಗ್ಗೆ ಮೂತ್ರ ವಿಸರ್ಜನೆ, ಹಸಿವು, ತೂಕ ನಷ್ಟ, ಆಲಸ್ಯ, ಕಿರಿಕಿರಿ ಅಥವಾ ನಡವಳಿಕೆಯ ಬದಲಾವಣೆಗಳು ಮುಖ್ಯವಾಗಿವೆ. ಹೀಗಾಗಿ ಮಕ್ಕಳಲ್ಲಿ ಹೆಚ್ಚು ಬಾಯಾರಿಕೆ, ಅತಿಯಾದ ಮೂತ್ರ ವಿಸರ್ಜನೆ, ತೂಕ ನಷ್ಟದಂತಹ ಆಸ್ಮೋಟಿಕ್ ರೋಗಲಕ್ಷಣಗಳನ್ನು ಗಮನಿಸಲು ಡಾ. ಕುಲಕರ್ಣಿ ಪೋಷಕರಿಗೆ ತಿಳಿಸುತ್ತಾರೆ.

ಇದನ್ನೂ ಓದಿ: Smarter Brain: ನಿಮ್ಮ ಮೆದುಳು ಸಖತ್ ಬ್ರಿಲಿಯಂಟ್ ಆಗ್ಬೇಕಾ? ಹಾಗಿದ್ರೆ ಈ 7 ತಂತ್ರಗಳನ್ನ ಫಾಲೋ ಮಾಡಿ!

ಚಿಕಿತ್ಸೆ ಏನು?
ಟೈಪ್ 1 ಡಯಾಬಿಟಿಸ್ ಮೆಲ್ಲಿಟಸ್‌ಗೆ ಚುಚ್ಚುಮದ್ದು ಅಥವಾ ಇನ್ಸುಲಿನ್ ಪಂಪ್‌ಗಳ ಮೂಲಕ ನಿರಂತರ ಸಬ್ಕ್ಯುಟೇನಿಯಸ್ ಇನ್ಸುಲಿನ್ ಇನ್ಫ್ಯೂಷನ್ ಮೂಲಕ ಬೇಸಲ್ ಬೋಲಸ್ ಇನ್ಸುಲಿನ್ ಚಿಕಿತ್ಸೆಯ ಅಗತ್ಯವಿರುತ್ತದೆ. ಟೈಪ್ 2 ಡಯಾಬಿಟಿಸ್ ಮೆಲ್ಲಿಟಸ್ ಅನ್ನು ಮೆಟ್‌ಫಾರ್ಮಿನ್, ಜಿಎಲ್‌ಪಿ 1 ರಿಸೆಪ್ಟರ್ ಅನಲಾಗ್‌ಗಳು ಮತ್ತು ಹೊಸ ಫಾರ್ಮಾಕೋಥೆರಪ್ಯೂಟಿಕ್ ಜೊತೆಗೆ ಆಹಾರ ಮತ್ತು ಜೀವನಶೈಲಿಯ ಮಾರ್ಪಾಡುಗಳೊಂದಿಗೆ ಪರಿಣಾಮಕಾರಿಯಾಗಿ ನಿರ್ವಹಿಸಬಹುದು.

ಆಹಾರ ಕ್ರಮ, ಜೀವನ ಶೈಲಿ ಹೇಗಿರಬೇಕು?
ಟೈಪ್ 1 ಡಯಾಬಿಟಿಸ್ ಮೆಲ್ಲಿಟಸ್ ಹೊಂದಿರುವ ಮಕ್ಕಳು ಆರೋಗ್ಯಕರ ಆಹಾರದ ಆಯ್ಕೆಗಳನ್ನು (ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಆಹಾರಗಳು) ಮತ್ತು ಯೋಜಿತ ಸಂದರ್ಭಗಳಲ್ಲಿ ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಆಹಾರಗಳ ಸೇವನೆಯನ್ನು ಸೀಮಿತಗೊಳಿಸುವುದರೊಂದಿಗೆ ವಯಸ್ಸಿಗೆ ಸೂಕ್ತವಾದ ಶಿಫಾರಸು ಮಾಡಿದ ಆಹಾರದ ಪ್ರಮಾಣಗಳನ್ನು ಸೇವಿಸಬೇಕು.

ಇದನ್ನೂ ಓದಿ:  Foods For Postpartum: ಹೆರಿಗೆಯ ನಂತರ ಈ ಆಹಾರಗಳನ್ನು ಸೇವಿಸಿದ್ರೆ ಬಹಳ ಒಳ್ಳೆಯದಂತೆ

ಟೈಪ್ 2 ಡಯಾಬಿಟಿಸ್ ಮೆಲ್ಲಿಟಸ್ ಹೊಂದಿರುವ ಮಕ್ಕಳು ಮೇಲಿನ ಆಹಾರದ ನೀತಿಯನ್ನು ಅನುಸರಿಸಬಹುದು. ಅದಾಗ್ಯೂ ಹೆಚ್ಚಿನ ಬೊಜ್ಜು ಹೊಂದಿರುವ ಸಂದರ್ಭಗಳಲ್ಲಿ, ಆಹಾರದ ಕ್ಯಾಲೋರಿ ಸೇವನೆಯ ಮೇಲೆ ಗಮನ ವಹಿಸಬೇಕು. ಜೊತೆಗೆ ಯಾವುದೇ ರೀತಿಯ ಮಧುಮೇಹ ಹೊಂದಿರುವ ಮಕ್ಕಳಿಗೆ ವಾರದಲ್ಲಿ ಕನಿಷ್ಠ 5 ದಿನ 45 ನಿಮಿಷಗಳ ಮಧ್ಯಮ ತೀವ್ರತೆಯ ವ್ಯಾಯಾಮವನ್ನು ಮಾಡಿಸಬೇಕು ಎನ್ನುತ್ತಾರೆ ವೈದ್ಯರು.

ಈ ಮೇಲಿನ ಯಾವುದೇ ರೀತಿಯ ಮಧುಮೇಹ ಹೊಂದಿರುವ ಮಕ್ಕಳು ಆರೋಗ್ಯಕರ ಆಹಾರಗಳಿಗೆ ಬದ್ಧರಾಗಿರಬೇಕು. ಮಕ್ಕಳಲ್ಲಿ ಡಯಾಬಿಟಿಸ್ ಗೆ ಸಂಬಂಧಿಸಿದ ಲಕ್ಷಣಗಳು ಕಂಡು ಬಂದಲ್ಲಿ ತೀವ್ರಾ ನಿಗಾವಹಿಸಿ ಪುಟ್ಟ ಮಕ್ಕಳ ಬಗ್ಗೆ ಕಾಳಜಿ ಮಾಡಬೇಕು. ಸರಿಯಾದ ಆಹಾರ, ಕಾಳಜಿ, ಜೀವನ ಶೈಲಿಯಿಂದ ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು ಎಂಬುವುದು ವೈದ್ಯರ ಅಭಿಪ್ರಾಯ.
Published by:Ashwini Prabhu
First published: