ಇತ್ತೀಚಿನ ದಿನಗಳಲ್ಲಿ ಬಿಪಿ ಮತ್ತು ಡಯಾಬಿಟಿಸ್ ಕಾಯಿಲೆ (BP And Diabetes Disease) ಸಾಮಾನ್ಯ ಎಂಬಂತಾಗಿದೆ. ಮನೆ ಮನೆಗಳಲ್ಲಿ ಬಿಪಿ ಮತ್ತು ಮಧುಮೇಹ ಕಾಯಿಲೆ ರೋಗಿಗಳು (Patients) ಕಂಡು ಬರ್ತಾರೆ. ಮಧುಮೇಹವು ವೇಗವಾಗಿ ಬೆಳೆಯುತ್ತಿರುವ ಗಂಭೀರ (Serious) ಕಾಯಿಲೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ ಆಗಿದೆ. ಮಧುಮೇಹ ಒಮ್ಮೆ ದೇಹ (Body) ಸೇರಿದ್ರೆ ವಾಸಿ ಮಾಡಲು ಸಾಧ್ಯವಿಲ್ಲ. ಆದರೆ ಅದನ್ನು ನಿಯಂತ್ರಿಸಬಹುದು. ಮಧುಮೇಹ ಕಾಯಿಲೆ ಉಂಟಾದಾಗ ಇದು ಮೇದೋಜ್ಜೀರಕ ಗ್ರಂಥಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ ಅದು ಇನ್ಸುಲಿನ್ ಎಂಬ ಹಾರ್ಮೋನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಇಲ್ಲವೇ ಉತ್ಪಾದಿಸುವುದಿಲ್ಲ.
ಟೈಪ್ 2 ಡಯಾಬಿಟಿಸ್ ಕಾಯಿಲೆ
ಈ ಹಾರ್ಮೋನ್ ರಕ್ತದ ಸಕ್ಕರೆ ನಿಯಂತ್ರಿಸುವ ಕೆಲಸ ಮಾಡುತ್ತದೆ. ಟೈಪ್ 2 ಡಯಾಬಿಟಿಸ್ ಕಾಯಿಲೆಯನ್ನು ಜೀವನಶೈಲಿ ಮತ್ತು ಆಹಾರದಲ್ಲಿ ಬದಲಾವಣೆ ಮಾಡುವ ಮೂಲಕ ನಿಯಂತ್ರಣ ಮಾಡಬಹುದು.
ಇನ್ನು ಟೈಪ್ 1 ಮಧುಮೇಹ ಇದ್ದಾಗ ರಕ್ತದ ಸಕ್ಕರೆ ನಿಯಂತ್ರಿಸಲು ಇನ್ಸುಲಿನ್ ಚುಚ್ಚುಮದ್ದು ಹಾಕಬೇಕಾಗುತ್ತದೆ.
ಮಧುಮೇಹ ಇದ್ದಾಗ ಆಯಾಸ, ದೃಷ್ಟಿ ಮಸುಕಾಗುವುದು, ತೂಕ ನಷ್ಟ, ಹಸಿವು ಹೆಚ್ಚಾಗುವುದು, ಗಾಯ ನಿಧಾನವಾಗಿ ಗುಣವಾಗುವುದು, ಸೋಂಕುಗಳ ಹೆಚ್ಚಳ, ಒಸಡು ಊದಿಕೊಳ್ಳುವುದು ಮತ್ತು ರಕ್ತಸ್ರಾವ ಬರುವುದು, ಕೈ ಅಥವಾ ಕಾಲುಗಳಲ್ಲಿ ಜುಮ್ಮೆನಿಸುವಿಕೆ ಮತ್ತು ಮರಗಟ್ಟುವಿಕೆ ಸಮಸ್ಯೆ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಮಧುಮೇಹ ಸಮಸ್ಯೆಯು ಮೂತ್ರಕ್ಕೆ ಸಂಬಂಧಿಸಿದ ಹಲವು ಲಕ್ಷಣಗಳನ್ನು ಸೂಚಿಸುತ್ತದೆ. ಮಧುಮೇಹ ಮೂತ್ರಕ್ಕೆ ಸಂಬಂಧಿಸಿದ ಯಾವೆಲ್ಲಾ ಲಕ್ಷಣಗಳನ್ನು ತೋರಿಸುತ್ತದೆ?
ಹೆಚ್ಚು ಬಾಯಾರಿಕೆಯಾಗುವುದು, ಆಗಾಗ್ಗೆ ಮೂತ್ರ ವಿಸರ್ಜನೆ ಹೋಗುವುದು ಸಾಮಾನ್ಯ ಲಕ್ಷಣಗಳಾಗಿವೆ. ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವ ಇಂತಹ ಸಮಸ್ಯೆಗಳು ಆರೋಗ್ಯಕ್ಕೆ ಹಾನಿ ಮಾಡುತ್ತವೆ. ತಕ್ಷಣ ವೈದ್ಯರ ಬಳಿ ತಪಾಸಣೆ ಮಾಡಿಸಿ.
ಮಧುಮೇಹವು ರಕ್ತದ ಸಕ್ಕರೆಯ ಪ್ರಮಾಣವು ಹೆಚ್ಚಾಗುತ್ತದೆ. ಹೆಚ್ಚುವರಿ ಸಕ್ಕರೆ ಫಿಲ್ಟರ್ ಮಾಡಲು ಮತ್ತು ಹೀರಿಕೊಳ್ಳಲು ಮೂತ್ರಪಿಂಡಗಳು ಹೆಚ್ಚು ಕೆಲಸ ಮಾಡುತ್ತವೆ. ಹೀಗಾಗಿ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕಾಗುತ್ತದೆ.
ಮೂತ್ರದ ಬಣ್ಣ ಬದಲಾಗುವುದು
ಮೂತ್ರದ ಬಣ್ಣದ ಬಗ್ಗೆ ತಿಳಿಯಿರಿ. ಯಾಕಂದ್ರೆ ಮಧುಮೇಹವು ಹೆಚ್ಚು ಮೂತ್ರ ವಿಸರ್ಜನೆಗೆ ಕಾರಣವಾಗುತ್ತದೆ. ಮಧುಮೇಹಿಗಳ ಮೂತ್ರದಲ್ಲಿ ಸಕ್ಕರೆ ಪ್ರಮಾಣವು ಹೆಚ್ಚಾಗಬಹುದು. ಮೂತ್ರಪಿಂಡಗಳು ಅದನ್ನು ಫಿಲ್ಟರ್ ಮಾಡದೇ ಹೋದಾಗ ಮೂತ್ರದ ಬಣ್ಣ ಬದಲಾಗುತ್ತದೆ.
ಸಿಹಿ ಅಥವಾ ಹಣ್ಣಿನ ವಾಸನೆ ಬರುವುದು
ಮೂತ್ರವು ಸ್ವಲ್ಪ ಸಿಹಿ ಅಥವಾ ಹಣ್ಣಿನ ವಾಸನೆ ಬರುತ್ತಿದ್ದರೆ ತಕ್ಷಣ ವೈದ್ಯರ ಬಳಿ ತಪಾಸಣೆ ಮಾಡಿಸಿ. ಇದು ಮಧುಮೇಹದ ಸಂಕೇತ ಆಗಿರಬಹುದು.
ಮೂತ್ರಪಿಂಡದ ತೊಂದರೆಗಳು
ಮಧುಮೇಹ ಕಾಯಿಲೆಯು ಮೂತ್ರಪಿಂಡದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದು ಕಿಡ್ನಿ ಸಂಬಂಧಿ ಕಾಯಿಲೆಗೆ ಕಾರಣವಾಗುತ್ತದೆ. ಮೂತ್ರದಲ್ಲಿ ಪ್ರೋಟೀನ್ ಇದ್ದರೆ ಮೂತ್ರವು ಬಣ್ಣ ಬದಲಾಗಬಹುದು.
ಯುಟಿಐ ಸೋಂಕಿನ ಅಪಾಯ
ಮಧುಮೇಹವು ಯುಟಿಐ ಸೋಂಕಿನ ಅಪಾಯ ಹೆಚ್ಚಿಸುತ್ತದೆ, ಮಹಿಳೆಯರಲ್ಲಿ ಯುಟಿಐ ಕೇಸ್ ತುಂಬಾ ಇರುತ್ತವೆ. ಹೆಚ್ಚಿನ ಗ್ಲೂಕೋಸ್ ಮಟ್ಟವು ಸೋಂಕಿನ ವಿರುದ್ಧ ಹೋರಾಡಲು ಕಷ್ಟವಾಗುತ್ತದೆ. ಆಗ ಮೂತ್ರದ ವಾಸನೆ, ಸುಡುವ ಸಂವೇದನೆ, ಆಗಾಗ್ಗೆ ಮೂತ್ರ ವಿಸರ್ಜನೆ ಉಂಟಾಗುತ್ತವೆ.
ಇದನ್ನೂ ಓದಿ: ನಿಮ್ಮ ಮನಸ್ಸಿನಲ್ಲಿ ಆಗೋ ಬದಲಾವಣೆ ಥೈರಾಯ್ಡ್ ಕಾಯಿಲೆಯ ಸೂಚನೆಯಂತೆ!
ಮಧುಮೇಹದ ಲಕ್ಷಣಗಳು ಕಾಣಿಸಿದರೆ ಏನು ಮಾಡಬೇಕು?
ಮೂತ್ರ ವಿಸರ್ಜನೆಗೆ ಸಂಬಂಧಿಸಿದ ಯಾವುದೇ ರೋಗ ಲಕ್ಷಣ ಕಂಡು ಬಂದರೆ ಭಯ ಪಡದೆ ವೈದ್ಯರನ್ನು ಭೇಟಿ ಮಾಡಿ. ರಕ್ತದ ಸಕ್ಕರೆ ಮಟ್ಟ ಪರೀಕ್ಷಿಸಿ. 8 ಗಂಟೆಗಳ ಕಾಲ ಉಪವಾಸ ಮಾಡಿ. ಜೀವನಶೈಲಿಯಲ್ಲಿ ಬದಲಾವಣೆ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ