ಕಳಪೆ ಜೀವನಶೈಲಿಯಿಂದ (Bad Lifestyle) ಅನೇಕ ಕಾಯಿಲೆಗಳು (Disease) ಹುಟ್ಟುತ್ತವೆ. ದೇಹಕ್ಕೆ (Body) ಅನೇಕ ಕಾಯಿಲೆಗಳು ಅಂಟಿಕೊಳ್ಳಲು ಕಳಪೆ ಜೀವನಶೈಲಿ, ಕಳಪೆ ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆ ಕೊರತೆ ಕಾರಣವಾಗಿದೆ. ಅದರಲ್ಲಿ ಮಧುಮೇಹ ಕಾಯಿಲೆ (Diabetes Disease) ಸಹ ಒಂದು. ಮಧುಮೇಹ ಕಾಯಿಲೆಯಿಂದ ಲಕ್ಷಾಂತರ ಜನರು ಬಳಲುತ್ತಿದ್ದಾರೆ. ರಕ್ತದ ಸಕ್ಕರೆ ಮಟ್ಟ ಅನಿಯಂತ್ರಿತ ರೀತಿಯಲ್ಲಿ ಹೆಚ್ಚಾಗುವ ಮೂಲಕ ಮಧುಮೇಹ ರೋಗಿಯನ್ನು ಬಾಧಿಸುತ್ತದೆ. ಇದು ಅನೇಕ ಆರೋಗ್ಯ ಸಮಸ್ಯೆ ಹುಟ್ಟು ಹಾಕಲು ಕಾರಣವಾಗುತ್ತದೆ. ಅಂದ ಹಾಗೇ ಮಧುಮೇಹ ಒಮ್ಮೆ ಬಂದರೆ ಜೀವನದುದ್ದಕ್ಕೂ ಬಾಧಿಸುತ್ತದೆ. ಇದಕ್ಕೆ ಯಾವುದೇ ಶಾಶ್ವತ ಚಿಕಿತ್ಸೆ ಇಲ್ಲ.
ಉತ್ತಮ ಜೀವನಶೈಲಿ ಮೂಲಕ ಮಧುಮೇಹ ನಿಯಂತ್ರಿಸಬಹುದು
ಹಾಗಾಗಿ ಜೀವನಶೈಲಿ ಮತ್ತು ಆಹಾರ ಕ್ರಮದ ಮೂಲಕ ಇದನ್ನು ನಿಯಂತ್ರಿಸಬಹುದಾಗಿದೆ. ಆರೋಗ್ಯಕರ ಆಹಾರ ಸೇವನೆ ಮತ್ತು ವ್ಯಾಯಾಮ ಮಾಡುವ ಮೂಲಕ ಕಾಯಿಲೆಯನ್ನು ನಿಯಂತ್ರಣ ಮಾಡಬಹುದು.
ಮಧುಮೇಹ ಕಾಯಿಲೆ ನಿಯಂತ್ರಿಸುವುದು ಹೇಗೆ?
ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಆಹಾರ ಸೇವನೆ ಮಾಡುವುದು. ಮತ್ತು ಪ್ರತಿ ದಿನ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು ಸಹಕಾರಿ ಆಗಿದೆ. ಔಷಧಿ ಸೇವನೆ ಹೊರತುಪಡಿಸಿ, ನೀವು ತಿನ್ನುವ ಮತ್ತು ಕುಡಿಯುವ ಕೆಲ ಪದಾರ್ಥಗಳು ಮಧುಮೇಹ ನಿಯಂತ್ರಣಕ್ಕೆ ಸಹಕಾರಿ ಆಗಿವೆ. ಅವುಗಳಲ್ಲಿ ಒಂದು ಅಗಸೆ ಬೀಜ.
ಅಗಸೆ ಬೀಜಗಳು ಹೇಗೆ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುವ ಮೂಲಕ ಮಧುಮೇಹ ರೋಗಿಗಳಿಗೆ ಆರೋಗ್ಯ ಪ್ರಯೋಜನ ನೀಡುತ್ತದೆ ಎಂದು ನೋಡೋಣ.
ಫೈಬರ್ ನಿಂದ ಸಮೃದ್ಧವಾಗಿವೆ ಅಗಸೆ ಬೀಜಗಳು
ಸೂಪರ್ ಫುಡ್ ಗಳಲ್ಲಿ ಅಗಸೆ ಬೀಜಗಳು ಒಂದು. ಅಗಸೆ ಬೀಜಗಳು, ಫೈಬರ್, ಒಮೆಗಾ 3 ಕೊಬ್ಬು ಮತ್ತು ಪ್ರೋಟೀನ್ ಸೇರಿ ಹಲವು ಪ್ರಮಾಣದ ಅಂಶಗಳನ್ನು ಒಳಗೊಂಡಿವೆ. ಅಗಸೆ ಬೀಜಗಳು ಕ್ಯಾನ್ಸರ್ ಬೆಳವಣಿಗೆ ಅಪಾಯ ಕಡಿಮೆ ಮಾಡುತ್ತದೆ. ಸಂಧಿವಾತ ಸಮಸ್ಯೆ ತಡೆಗಟ್ಟಲು, ಹೃದಯದ ಆರೋಗ್ಯ ಸುಧಾರಿಸುತ್ತದೆ. ಜೊತೆಗೆ ಮಧುಮೇಹದಲ್ಲಿ ರಕ್ತದ ಸಕ್ಕರೆ ನಿಯಂತ್ರಿಸುವ ಕೆಲಸ ಮಾಡುತ್ತದೆ.
ರಕ್ತದ ಸಕ್ಕರೆ ನಿಯಂತ್ರಿಸಲು ಫೈಬರ್ ಸಹಕಾರಿ
ಕರಗುವ ಮತ್ತು ಕರಗದ ಫೈಬರ್ ನ್ನು ಹೊಂದಿವೆ ಅಗಸೆ ಬೀಜಗಳು. ಇದೇ ಕಾರಣಕ್ಕೆ ಮಧುಮೇಹ ರೋಗಿಗಳಿಗೆ ಅಗಸೆ ಬೀಜಗಳು ಉತ್ತಮ ಆಗಿವೆ. ಅಂದ ಹಾಗೇ, ಫೈಬರ್ ಅಂಶವು ಮಲಬದ್ಧತೆ ತಡೆಯುತ್ತದೆ. ಮತ್ತು ಕರುಳಿನ ಕಾರ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಮಧುಮೇಹಿಗಳ ಜೀರ್ಣಾಂಗ ವ್ಯವಸ್ಥೆ ಬಲಪಡಿಸಲು ಸಹಕಾರಿ ಆಗಿದೆ.
ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ
ಅಗಸೆ ಬೀಜಗಳು ನಾರಿನಂಶ ಹೆಚ್ಚಿದೆ. ಅಗಸೆ ಬೀಜಗಳು ಕಡಿಮೆ ಗ್ಲೈಸೆಮಿಕ್ ಸೂಚಿ ಹೊಂದಿದೆ. ಅಗಸೆ ಬೀಜಗಳ ಸೇವನೆ ರಕ್ತದ ಸಕ್ಕರೆ ಅಂಶ ಹೆಚ್ಚಾಗುವಿಕೆ ತಡೆಯುತ್ತದೆ.
ಸಕ್ಕರೆ ಹೀರಿಕೊಳ್ಳುವಿಕೆ ಕ್ರಿಯೆಯನ್ನು ಕಡಿಮೆ ಮಾಡುತ್ತವೆ
ಅಗಸೆ ಬೀಜಗಳಲ್ಲಿರುವ ಹೆಚ್ಚಿನ ಪ್ರಮಾಣದ ಫೈಬರ್, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ. ಜೊತೆಗೆ ಸಮಯ ಹೆಚ್ಚು ತೆಗೆದುಕೊಳ್ಳುತ್ತದೆ. ಅಗಸೆ ಬೀಜಗಳು ಸಕ್ಕರೆ ಹಾಗೂ ಹಲವು ಪೋಷಕಾಂಶಗಳ ಹೀರಿಕೊಳ್ಳುವಿಕೆ ಕಡಿಮೆ ಮಾಡುತ್ತೆ.
ಇದನ್ನೂ ಓದಿ: ತೂಕ ನಷ್ಟ ಮತ್ತು ಸೊಂಟದ ಗಾತ್ರ ಕಡಿಮೆ ಮಾಡಲು ನಿಮ್ಮ ಆಹಾರದಲ್ಲಿ ಈ ಪದಾರ್ಥ ಸೇರಿಸಿ!
ಪ್ರತಿ ದಿನ 10 ಗ್ರಾಂ ಅಗಸೆ ಬೀಜ ಸೇವಿಸಿದರೆ ರಕ್ತದ ಸಕ್ಕರೆ ಮಟ್ಟ 20 ಪ್ರತಿಶತ ಕಡಿಮೆ ಆಗುತ್ತದೆ. ಊಟದಲ್ಲಿ ಪ್ರತಿದಿನ 5 ಗ್ರಾಂ ಅಗಸೆ ಬೀಜ ಸೇವಿಸಿದರೆ ರಕ್ತದ ಗ್ಲೂಕೋಸ್ ಕಡಿಮೆ ಆಗುತ್ತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ