Health Tips: ನೀವು Night Shiftsನಲ್ಲಿ ಕೆಲಸ ಮಾಡ್ತಾ ಇದ್ದೀರಾ..? ಹಾಗಾದ್ರೆ ಆರೋಗ್ಯದ ಬಗ್ಗೆ ಎಚ್ಚರ...!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾತ್ರಿ ತಡವಾಗಿ ಆಹಾರ ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗುತ್ತದೆ. ಮೂಲಕ್ಕಿಂತ ಶೇಕಡಾ 6.4ರಷ್ಟು ಏರಿಕೆಯಾಗಬಹುದು ಎಂದು ತಿಳಿದುಬಂದಿದೆ.

  • Share this:

ಮನುಷ್ಯನ ಆರೋಗ್ಯಕ್ಕೆ ನಿದ್ರೆ ಬಹಳ ಮುಖ್ಯ. ವಿಜ್ಞಾನದ (Science) ಪ್ರಕಾರ ಊಟವಿಲ್ಲದೇ ನಾವು ಕೆಲವು ದಿನಗಳವರೆಗೆ ಬದುಕಬಹುದಂತೆ. ಆದರೆ ನಿದ್ರೆ ಇಲ್ಲದೆ ಬದಕಲು ಸಾಧ್ಯವಿಲ್ಲವಂತೆ. ಆರೋಗ್ಯಕರ ದಿನಚರಿಗೆ (Healthy Routine) 8-9ಗಂಟೆಗಳ ಕಾಲ ನಿದ್ರಿಸುವುದು ಒಳ್ಳೆಯದು. ಆದರೆ ಈಗಿನ ನಮ್ಮ ಜೀವನ ಶೈಲಿಗೆ ಇದು ಆಗದ ಕೆಲಸ ಬಿಡಿ. ನಿದ್ದೆ ಬಿಟ್ಟು (Without sleep) ದುಡಿಯುವ ಕಾಲವಿದು. ಅದಲ್ಲದೇ ಅದೆಷ್ಟೋ ಮಂದಿ ರಾತ್ರಿ (Night Shifts) ಪಾಳಿಯಲ್ಲೂ ದುಡಿಯುವವರಿದ್ದಾರೆ.


ಎಲ್ಲರಿಗೂ ಹಗಲು ದುಡಿದು ರಾತ್ರಿ ಮನೆಗೆ ಬಂದು ಕುಟುಂಬದ ಜತೆ ಕಾಲಕಳೆದು, ಆರಾಮಾಗಿ ನಿದ್ದೆ ಮಾಡಬೇಕು ಎಂಬ ಆಸೆ ಇರುತ್ತದೆ. ಆದರೆ, ಎಲ್ಲಾ ಉದ್ಯೋಗಗಳು ಹೀಗಿರುವುದಿಲ್ಲ. ರಾತ್ರಿ ಪಾಳಿ ಮಾಡುವುದು ಆ ಸಂಸ್ಥೆಗಳಲ್ಲಿ ಅನಿವಾರ್ಯವಾಗಿರುತ್ತದೆ. ಅದರ ಪ್ರಕಾರ ನಾವು ರಾತ್ರಿ ನಿದ್ದೆ ಬಿಟ್ಟು ಕೆಲಸ ಮಾಡಬೇಕಾಗುತ್ತದೆ.
ರಾತ್ರಿ ಪಾಳಿಯಲ್ಲಿ ಇರುವವರು ಹೆಚ್ಚು ಕಷ್ಟಪಡುವುದು ಆರೋಗ್ಯ ತೊಂದರೆಯಿಂದ. ನಿದ್ದೆ ಕೊರತೆಯಿಂದ ಮತ್ತು ಆಹಾರ ಸೇವನೆಯಲ್ಲಿ ವ್ಯತ್ಯಾಸವುಂಟಾಗಿ ಆರೋಗ್ಯದಲ್ಲಿ ಏರು-ಪೇರು ಅನುಭವಿಸುತ್ತಾರೆ.


2017ರಲ್ಲಿ, ಕೋಪನ್ ಹ್ಯಾಗನ್ ವಿಶ್ವವಿದ್ಯಾನಿಲಯದ ಸೆಂಟರ್ ಫಾರ್ ಎಪಿಡೆಮಿಯಾಲಜಿ ಮತ್ತು ಸ್ಕ್ರೀನಿಂಗ್, ಸಾರ್ವಜನಿಕ ಆರೋಗ್ಯ ಇಲಾಖೆಯು ಶಿಫ್ಟ್ ವರ್ಕ್‌ನಿಂದ ಏನೆಲ್ಲಾ ಆರೋಗ್ಯ ಸಮಸ್ಯೆ ಎದುರಾಗುತ್ತದೆ ಎಂದು ವರದಿ ಸಲ್ಲಿಸಿದೆ. ವರದಿ ಪ್ರಕಾರ ರಾತ್ರಿ ಪಾಳಿಗಳು ಆರೋಗ್ಯಕ್ಕೆ ಮಾರಕವಾಗಿವೆ. ಹೃದಯರಕ್ತನಾಳದ ಕಾಯಿಲೆ, ಮಧುಮೇಹ ಸಂಬಂಧಿ ತೊಂದರೆ, ಬೊಜ್ಜು, ಮಹಿಳೆಯರಲ್ಲಿ ಋತುಚಕ್ರದ ಸಮಸ್ಯೆ ಮತ್ತು ಬುದ್ಧಿಮಾಂದ್ಯದಂತ ಸಮಸ್ಯೆಗಳು ಬಾದಿಸುತ್ತವೆ ಎಂದು ವರದಿಯಾಗಿದೆ.


ಇದನ್ನೂ ಓದಿ: Pregnancy Tips: ಗರ್ಭಿಣಿಯಾಗಿ ನೀವು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ ಆರೋಗ್ಯದ ಬಗ್ಗೆ ಇರಲಿ ಎಚ್ಚರ


ನೈಟ್ ಶಿಫ್ಟ್ ಆರೋಗ್ಯಕ್ಕೆ ಹೇಗೆ ಮಾರಕ..?
ಡಾ. ಮೈಕೆಲ್ ಗ್ರೆಗರ್ ಹೇಳುವ ಪ್ರಕಾರ ರಾತ್ರಿ ಪಾಳಿಯಲ್ಲಿ ತಿನ್ನುವ ಪ್ರಮಾಣ ದುಪ್ಪಟ್ಟಾಗಿರುತ್ತದೆ. ನಿದ್ರೆ ಹೋಗಲಾಡಿಸಲು ಕೆಲವರು ಬಾಯಿಗೆ ಕೆಲಸ ಕೊಟ್ಟಿರುತ್ತಾರೆ. ಈ ಸಂದರ್ಭದಲ್ಲಿ ಕೊಲೆಸ್ಟ್ರಾಲ್ ಮತ್ತು ಎಲ್‌ಡಿಎಲ್ ಮಟ್ಟ ಹೆಚ್ಚುತ್ತದೆ ಎಂದಿದ್ದಾರೆ. ರಾತ್ರಿ ಪಾಳಿಯಲ್ಲಿ ಹೇಗೆಲ್ಲಾ ಆರೋಗ್ಯದ ಕಾಳಜಿ ವಹಿಸಬೇಕು ನೋಡೋಣ..


1) ಆಹಾರ ಸೇವನೆ ಮೇಲೆ ಹಿಡಿತವಿರಲಿ
ರಾತ್ರಿ ಪಾಳಿಯಲ್ಲಿರುವಾಗ ಹೊರಗೆ ಹೋಗಿ ಜಂಕ್‌ಫುಡ್‌ ತಿನ್ನುವ ಅಭ್ಯಾಸ ಇದ್ದರೆ ಬಿಟ್ಟುಬಿಡಿ. ನಿದ್ರೆ ಹೋಗಿಸುವ ಸಲುವಾಗಿ ಸಿಕ್ಕಿದ್ದೆಲ್ಲಾ ತಿನ್ನಬೇಡಿ. ಸೂರ್ಯಸ್ತದ ಬಳಿಕ ನಮ್ಮ ಜೀರ್ಣಕ್ರಿಯೆ ಕಡಿಮೆ ಇರುತ್ತದೆ. ಹೀಗಾಗಿ ಒಳ್ಳೆಯ, ನಿಯಮಿತ ಆಹಾರ ಸೇವಿಸಿ.


2) ಬೆಳಗ್ಗಿನ ತಿಂಡಿ ಉತ್ತಮವಾಗಿರಲಿ
ಬೆಳಗ್ಗೆ ಆರೋಗ್ಯಕರ ಆಹಾರವನ್ನುಸೇವಿಸುವಂತೆ ಡಾ. ಗ್ರೆಗರ್ ಸಲಹೆ ನೀಡುತ್ತಾರೆ. ರಾತ್ರಿ ಪಾಳಿಯ ನಂತರ ನಾವು ಬೆಳಗ್ಗೆ ಮನೆಗೆ ತಲುಪಿದಾಗ, ಕ್ರೋಸೆಂಟ್ಸ್ ಅಥವಾ ಇತರೆ ಕೊಬ್ಬಿನ ಆಹಾರಗಳನ್ನು ಬಯಸುತ್ತೇವೆ. ಹೀಗಾಗಿ ಅವುಗಳನ್ನು ದೂರ ಮಾಡಿ ಒಳ್ಳೆಯ ಆಹಾರ ಸೇವಿಸಬೇಕು.


3) ಸಮಯಕ್ಕೆ ತಕ್ಕಂತೆ ಆಹಾರ ಸೇವನೆ
ಹೆಚ್ಚು ಕ್ಯಾಲೊರಿ ಬರ್ನ್ ಮಾಡಲು ಬೆಳಗ್ಗೆ 10 ಗಂಟೆಗೆ ತಿನ್ನುವುದು ಒಳ್ಳೆಯದು. ಈ ಸಮಯದಲ್ಲಿ ತಿನ್ನುವುದರಿಂದ 6 ಪ್ರತಿಶತ ಹೆಚ್ಚು ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಾಧ್ಯವಾಗುತ್ತದೆ. ರಾತ್ರಿ ಹೆಚ್ಚಾಗಿ ತಿನ್ನುವುದರಿಂದ 2 ವಾರಗಳಲ್ಲಿಯೇ ಸಕ್ಕರೆ ಮಟ್ಟ ಮತ್ತು ಕೊಲೆಸ್ಟ್ರಾಲ್ ಮಟ್ಟ ಹೆಚ್ಚುವ ಸಾಧ್ಯತೆ ಹೆಚ್ಚು.


ಇದನ್ನೂ ಓದಿ: Health tips: ಗಂಟಲು ನೋವಿಗೆ ಮನೆಯಲ್ಲಿಯೇ ಇದೆ ಮದ್ದು


4) ರಾತ್ರಿ-ಸಮಯದ ನಿದ್ರೆಯ ವೇಳಾಪಟ್ಟಿಗೆ ಹಿಂತಿರುಗಿ
ರಾತ್ರಿ ನಿದ್ರೆ ಬಿಡುವುದರಿಂದ ದೇಹದ ತೂಕ ಹೆಚ್ಚುತ್ತದೆ. ಹಗಲಿನಲ್ಲಾದರೂ ಚೆನ್ನಾಗಿ ನಿದ್ರಿಸುವುದು ಉತ್ತಮ. ರಾತ್ರಿ ಪಾಳಿ ಮುಗಿಸಿ ಹಗಲು ಸ್ವಲ್ಪ ಹೊತ್ತು ನಿದ್ದೆ ಮಾಡುವ ಅಭ್ಯಾಸ ಬಿಟ್ಟುಬಿಡಿ. ಹಗಲು ಕನಿಷ್ಠ 5-8 ಗಂಟೆ ನಿದ್ದೆ ಮಾಡಿರಿ. ವೈದ್ಯಶಾಸ್ತ್ರದ ಪಿತಾಮಹ ಹಿಪ್ಪೊಕ್ರೇಟ್ಸ್ ಮತ್ತು ಫ್ಲಾರೆನ್ಸ್ ನೈಟಿಂಗೇಲ್ (460-377 BC) ವಿವರಿಸಿದ ಆಹಾರ ಸೇವನೆ, ವಿಶ್ರಾಂತಿ ಕ್ರಮಬದ್ಧತೆ ಬಗ್ಗೆ ಡಾ. ಗ್ರೆಗರ್ ಇಲ್ಲಿ ಉಲ್ಲೇಖಿಸಿದ್ದಾರೆ. ಪ್ರಾಚೀನ ಭಾರತದಲ್ಲಿ ಸೂರ್ಯಾಸ್ತದ ನಂತರ ಯಾವುದೇ ಊಟವನ್ನು ಸೇವಿಸುತ್ತಿರಲಿಲ್ಲವಂತೆ. ಇದು ಒಳ್ಳೆಯ ಕ್ರಮ ಎಂದಿದ್ದಾರೆ.


5) ರಾತ್ರಿ ತಡವಾಗಿ ಆಹಾರ ಸೇವಿಸಬೇಡಿ
ರಾತ್ರಿ ತಡವಾಗಿ ಆಹಾರ ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗುತ್ತದೆ. ಮೂಲಕ್ಕಿಂತ ಶೇಕಡಾ 6.4ರಷ್ಟು ಏರಿಕೆಯಾಗಬಹುದು ಎಂದು ತಿಳಿದುಬಂದಿದೆ. ಹಗಲು ಹೊತ್ತಿಗಿಂತ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಲ್ಲಿ ಅಧಿಕ ತೂಕ ಅಥವಾ ಬೊಜ್ಜು ಹೆಚ್ಚಾಗಿ ಕಂಡುಬರುತ್ತದೆ. ಹೀಗಾಗಿ ಹಗಲಿನಲ್ಲಿ ಸೂರ್ಯಸ್ತದ ಮೊದಲೇ ಆರೋಗ್ಯಕರ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

Published by:vanithasanjevani vanithasanjevani
First published: