Diabetes: 50 ವರ್ಷದಿಂದ ಡಯಾಬಿಟಿಸ್​​ನಿಂದ ಬಳಲುತ್ತಿದ್ದ ರೋಗಿ ಗುಣಮುಖ ಆಗಿದ್ದು ಹೀಗೆ

Diabetes: ನಿಮ್ಮ ಜೀವನದ ಪ್ರತಿಯೊಂದು ನಿಮಿಷವನ್ನು ನೀವು ಎಚ್ಚರಿಕೆಯಿಂದ ಕಳೆಯಬೇಕಾಗುತ್ತದೆ. ಇನ್ಸುಲಿನ್ ಮಟ್ಟವನ್ನು ಕಟ್ಟೆಚ್ಚರದಲ್ಲಿ ಮೇಲ್ವಿಚಾರಣೆ ಮಾಡಬೇಕಾಗುತ್ತದೆ

ಬ್ರಿಯಾನ್ ಶೆಲ್ಟನ್

ಬ್ರಿಯಾನ್ ಶೆಲ್ಟನ್

  • Share this:
ಎಳೆಹರೆಯದ ಮಧುಮೇಹ ಅಥವಾ ಇನ್ಸುಲಿನ್ (Diabetes or Insulin) ಅವಲಂಬಿತ ಮಧುಮೇಹ ಎಂದು ಕರೆಯಲಾದ ಟೈಪ್ 1 ಡಯಾಬಿಟೀಸ್‌ನಲ್ಲಿ (Type 1 diabetes) ಮೆದೋಜ್ಜೀರಕ ಗ್ರಂಥಿಯು(chronic disease) ಕಡಿಮೆ ಇನ್ಸುಲಿನ್ ಇಲ್ಲವೇ ಇನ್ಸುಲಿನ್ ಉತ್ಪಾದನೆ ಮಾಡದೇ ಇರುವ ದೀರ್ಘಕಾಲದ ಸ್ಥಿತಿಯಾಗಿದೆ. ಶಕ್ತಿ ಉತ್ಪಾದಿಸಲು ಜೀವಕೋಶಗಳಿಗೆ ಗ್ಲೂಕೋಸ್ ಪ್ರವೇಶಕ್ಕೆ ಅಗತ್ಯವಾಗಿರುವ ಹಾರ್ಮೋನ್ (Hormone)ಇದಾಗಿದೆ. ಟೈಪ್-1 ಮಧುಮೇಹಕ್ಕೆ ಯಾವುದೇ ಔಷಧವಿಲ್ಲ. ಆದರೆ ರೋಗಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ನಿರ್ವಹಿಸಲು ವೈದ್ಯರ (Doctor)ಸೂಚನೆಗಳನ್ನು ಪಾಲಿಸಬೇಕಾಗುತ್ತದೆ. ಅದೇ ರೀತಿ ಆಹಾರ (Foods) ಜೀವನ ಶೈಲಿಯಲ್ಲಿ ಕಟ್ಟುನಿಟ್ಟಿನ ಕ್ರಮ ಪಾಲಿಸಬೇಕಾಗುತ್ತದೆ

ಇನ್ಸುಲಿನ್ ಪೂರೈಕೆ
ಗುಡ್‌ ಮಾರ್ನಿಂಗ್ ಅಮೆರಿಕ ಉಲ್ಲೇಖಿಸಿರುವಂತೆ ಅಮೆರಿಕದ ಓಹಿಯೋ-ನಿವಾಸಿ ಬ್ರಿಯಾನ್ ಶೆಲ್ಟನ್ ಸುಮಾರು 50 ವರ್ಷಗಳ ಕಾಲ ಟೈಪ್ 1 ಡಯಾಬಿಟಿಸ್‌ ಹೊಂದಿದ್ದರು. ಇದೊಂದು ದೀರ್ಘಕಾಲದ ಕಾಯಿಲೆಯಾಗಿದ್ದು ಇದರಲ್ಲಿ ಮೇದೋಜ್ಜೀರಕ ಗ್ರಂಥಿಯಲ್ಲಿನ ಇನ್ಸುಲಿನ್-ತಯಾರಿಸುವ ಕೋಶಗಳು ನಾಶವಾಗುತ್ತವೆ ಹಾಗೂ ವ್ಯಕ್ತಿಯು ಇನ್ಸುಲಿನ್ ಮೇಲೆ ಅವಲಂಬಿತವಾಗಿರುವಂತೆ ಮಾಡುತ್ತದೆ. ಈ ಸಮಯದಲ್ಲಿ ರೋಗಿಯು ಇನ್ಸುಲಿನ್ ಪಂಪ್ ಅಥವಾ ಶಾಟ್‌ಗಳ ಮೂಲಕ ದೇಹಕ್ಕೆ ಇನ್ಸುಲಿನ್ ಪೂರೈಕೆ ಮಾಡಬೇಕಾಗುತ್ತದೆ.

ಇದನ್ನೂ ಓದಿ: Fruit Juice: ಈ ಹಣ್ಣಿನ ರಸ ಕುಡಿದರೆ ಕೇವಲ 3 ಗಂಟೆಯಲ್ಲಿ ರಕ್ತದಲ್ಲಿನ ಸಕ್ಕರೆ ಕಮ್ಮಿ ಆಗುತ್ತಂತೆ

ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿರುವಂತೆ 64ರ ಹರೆಯದ ಬ್ರಿಯಾನ್ ಶೆಲ್ಟನ್ ಇನ್ಸುಲಿನ್ ಉತ್ಪಾದಿಸುವ ಸ್ಟೆಮ್ ಸೆಲ್‌ಗಳನ್ನು ಬಳಸಿಕೊಂಡು ಹೊಸ ಪ್ರಕಾರದ ಚಿಕಿತ್ಸೆಗೆ ಒಳಗಾಗಿದ್ದಾರೆ. ಅಮೆರಿಕದಲ್ಲಿ ಸರಿ ಸುಮಾರು 1.5 ಮಿಲಿಯನ್ ಜನರು ಈ ರೋಗದಿಂದ ಬಳಲುತ್ತಿದ್ದಾರೆ. ಸ್ಟೆಮ್ ಸೆಲ್‌ಗಳಿಂದ ಬೆಳೆದ ಹೊಸ ಕೋಶಗಳನ್ನು ಪಡೆದುಕೊಂಡರು. ಇದು ಅವರಿಗೆ ಇನ್ಸುಲಿನ್ ರಚಿಸುವ ಮತ್ತು ನಿಯಂತ್ರಿಸುವ ದೇಹದ ನೈಸರ್ಗಿಕ ಸಾಮರ್ಥ್ಯ ಪುನಃಸ್ಥಾಪಿಸಲು ಸಹಾಯ ಮಾಡಿತು.

ಚಿಕಿತ್ಸೆಗೂ ಮುನ್ನ ಶೆಲ್ಟನ್ ಜೀವನ:

ಟೈಪ್-1 (ಜುವೆನೈಲ್) ಎಳೆ ಹರೆಯದ ಮಧುಮೇಹವು ಹೇಗೆ ನೋವುಂಟು ಮಾಡುತ್ತದೆ
ಚಿಕಿತ್ಸೆ ಪ್ರಾರಂಭಿಸುವ ಮೊದಲು, ಶೆಲ್ಟನ್ ಆರೋಗ್ಯವು ಹದಗೆಟ್ಟಿತು ಮತ್ತು ಹೈಪೋಗ್ಲೈಸೀಮಿಯಾದಿಂದ ಬಳಲುತ್ತಿದ್ದರು, ಇದು ರೋಗಿಯ ರಕ್ತದಲ್ಲಿನ ಸಕ್ಕರೆಯ ಮಟ್ಟ ತುಂಬಾ ಕಡಿಮೆಯಿರುವ ಸ್ಥಿತಿಯು ಅವರು ಪ್ರಜ್ಞೆ ಕಳೆದುಕೊಳ್ಳುತ್ತಾರೆ. ಇದು ಪ್ರಜ್ಞಾಹೀನ ಸ್ಥಿತಿಯನ್ನುಂಟು ಮಾಡುತ್ತದೆ ಹಾಗೂ ರೋಗಿಯು ನಿಂತ ಜಾಗದಲ್ಲಿಯೇ ಕುಸಿಯುತ್ತಾರೆ.

ಮಾನಸಿಕ ಶಾಂತಿ
ನಿಮ್ಮ ಜೀವನದ ಪ್ರತಿಯೊಂದು ನಿಮಿಷವನ್ನು ನೀವು ಎಚ್ಚರಿಕೆಯಿಂದ ಕಳೆಯಬೇಕಾಗುತ್ತದೆ. ಇನ್ಸುಲಿನ್ ಮಟ್ಟವನ್ನು ಕಟ್ಟೆಚ್ಚರದಲ್ಲಿ ಮೇಲ್ವಿಚಾರಣೆ ಮಾಡಬೇಕಾಗುತ್ತದೆ ಎಂದವರು ಗುಡ್‌ ಮಾರ್ನಿಂಗ್ ಅಮೆರಿಕಗೆ ತಿಳಿಸಿದರು. ಜೂನ್‌ನಲ್ಲಿ ಹೊಸ ಕ್ಲಿನಿಕಲ್ ಪ್ರಯೋಗದಲ್ಲಿ ಪಾಲ್ಗೊಂಡ ಅವರು ದೇಹವು ಕಳೆದುಕೊಂಡ ಜೀವಕೋಶಗಳನ್ನು ಮರಳಿ ನೀಡುತ್ತದೆ ಎಂಬ ಭರವಸೆಯನ್ನ ಪಡೆದರು. ಶೆಲ್ಟನ್ ಹೊಸ ಚಿಕಿತ್ಸೆಯಿಂದ ಕಳೆದುಕೊಂಡಿದ್ದ ಜೀವನೋತ್ಸಾಹ ಮರಳಿ ಪಡೆದುಕೊಂಡಿದ್ದಾರೆ. ಆರೋಗ್ಯ ಹಾಗೂ ಮಾನಸಿಕ ಶಾಂತಿಯನ್ನು ಮರಳಿ ಪಡೆದಿದ್ದಾರೆ.

ಮಧುಮೇಹ ಚಿಕಿತ್ಸೆಯು ಸಾರ್ವಜನಿಕರಿಗೆ ಯಾವಾಗ ಲಭ್ಯವಾಗುತ್ತದೆ?
ಶೆಲ್ಟನ್ಚಿಕಿತ್ಸೆಯು ಪ್ರಸ್ತುತ ಸಾರ್ವಜನಿಕರಿಗೆ ಲಭ್ಯವಿಲ್ಲ ಮತ್ತು ಪ್ರಸ್ತುತ ಟೈಪ್ 1 ಡಯಾಬಿಟಿಸ್ ಹೊಂದಿರುವ 42 ಮಿಲಿಯನ್‌ಗಿಂತಲೂ ಹೆಚ್ಚು ಜನರಿಗೆ ಇದು ಲಭ್ಯವಾಗುವ ಮೊದಲು ಹೆಚ್ಚುವರಿ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು. ಈ ಸಂಖ್ಯೆಯನ್ನು WHO ವರದಿಯಿಂದ ಪಡೆಯಲಾಗಿದೆ, ಇದು ಎಲ್ಲಾ ರೀತಿಯ ಮಧುಮೇಹಿಗಳ ಜಾಗತಿಕ ಜನಸಂಖ್ಯೆಯನ್ನು 422 ಮಿಲಿಯನ್‌ಗಿಂತಲೂ ಹೆಚ್ಚು ಎಂದು ಲೆಕ್ಕ ಹಾಕಿದೆ.

ನಿಷ್ಕ್ರಿಯ
ಪ್ರಸ್ತುತ ಜಗತ್ತು ನಡೆಯುತ್ತಿರುವ COVID-19 ಸಾಂಕ್ರಾಮಿಕ ರೋಗ ಎದುರಿಸುತ್ತಿರುವಾಗ, ಒಂದಕ್ಕಿಂತ ಹೆಚ್ಚು ರೋಗಗಳನ್ನು ಹೊಂದಿರುವ ರೋಗಿಗಳ ಮುನ್ನರಿವನ್ನು ಇನ್ನಷ್ಟು ಕಠೋರಗೊಳಿಸಿವೆ. ಅಧಿಕ ರಕ್ತದೊತ್ತಡ, ದುರ್ಬಲಗೊಂಡ ಅಥವಾ ನಿಗ್ರಹಿಸಲಾದ ರೋಗನಿರೋಧಕ ಶಕ್ತಿ, ಇತ್ಯಾದಿಗಳ ಹೊರತಾಗಿ ಮಧುಮೇಹವು ಕಾಳಜಿಯ ಪ್ರಮುಖ ಕ್ಷೇತ್ರವಾಗಿ ಹೊರಹೊಮ್ಮಿದೆ. ಮಧುಮೇಹವು ಸಕ್ಕರೆಯನ್ನು ತನ್ನ ಜೀವಕೋಶಗಳಿಗೆ ತೆಗೆದುಕೊಳ್ಳುವ ದೇಹದ ಸಾಮರ್ಥ್ಯ ನಿಷ್ಕ್ರಿಯಗೊಳಿಸುತ್ತದೆ ಮತ್ತು ಅದನ್ನು ಶಕ್ತಿಗಾಗಿ ಬಳಸುತ್ತದೆ, ಇದು ನಿಮ್ಮ ರಕ್ತಪ್ರವಾಹದಲ್ಲಿ ಹೆಚ್ಚುವರಿ ಸಕ್ಕರೆಯ ಸಂಗ್ರಹಕ್ಕೆ ಕಾರಣವಾಗುತ್ತದೆ.

ಮಧುಮೇಹ ಪತ್ತೆಯಾದಲ್ಲಿ ಏನು ಮಾಡಬೇಕು?
ನೀವು ಮಧುಮೇಹ ಹೊಂದಿದ್ದರೆ, ನೀವು ಮಾಡಬಹುದಾದ ಪ್ರಮುಖ ವಿಷಯವೆಂದರೆ ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಮ್ಮ ಆರೋಗ್ಯ ತಜ್ಞರು ಶಿಫಾರಸು ಮಾಡಿದ ಗುರಿಯ ವ್ಯಾಪ್ತಿಯಲ್ಲಿ ಇಟ್ಟುಕೊಳ್ಳುವುದು. ಸಾಮಾನ್ಯವಾಗಿ, ಈ ಗುರಿಗಳು:

ಊಟಕ್ಕೆ ಮುಂಚಿತವಾಗಿ: 80 ಮತ್ತು 130 mg/dL ನಡುವೆ.

ಊಟದ ಪ್ರಾರಂಭದ ಸುಮಾರು ಎರಡು ಗಂಟೆಗಳ ನಂತರ: 180 mg/dL ಗಿಂತ ಕಡಿಮೆ.
ಇತರ ಅಂಗಗಳಿಗೆ ಯಾವುದೇ ಹಾನಿಯಾಗದಂತೆ ನಿಮ್ಮ ಆರೋಗ್ಯ ಸ್ಥಿತಿಯನ್ನು ಉತ್ತಮವಾಗಿ ನಿವರ್ಹಿಸುವತ್ತ ಗಮನಹರಿಸಿರಿ. ಕಸ್ಟಮೈಸ್ ಮಾಡಿದ ಆಹಾರ ಯೋಜನೆ ಅನುಸರಿಸುವುದು, ವಾರಕ್ಕೆ ಐದು ಬಾರಿ 30 ನಿಮಿಷಗಳ ವ್ಯಾಯಾಮ, ಧೂಮಪಾನ ತ್ಯಜಿಸುವುದು, ಆಲ್ಕೋಹಾಲ್ ಅನ್ನು ಸೀಮಿತಗೊಳಿಸುವುದು ಮತ್ತು ರಾತ್ರಿಯಲ್ಲಿ 7 - 9 ಗಂಟೆಗಳ ನಿದ್ದೆಯನ್ನು ಪಡೆಯುವುದು ಸೇರಿದಂತೆ ಚಿಕಿತ್ಸೆಯ ಯೋಜನೆಯನ್ನು ನಿಕಟವಾಗಿ ಅನುಸರಿಸಬೇಕು ಎಂದು ಕ್ಲೀವ್ಲ್ಯಾಂಡ್ ಕ್ಲಿನಿಕ್ ಶಿಫಾರಸು ಮಾಡುತ್ತದೆ.

ಇದನ್ನೂ ಓದಿ: Stevia: ಸಕ್ಕರೆಗಿಂತ ಸಿಹಿ, ಆದ್ರೆ ಡಯಾಬಿಟಿಸ್ ಇರುವವರಿಗೆ ಭಾರೀ ಒಳ್ಳೆಯದು

ನಿಮ್ಮ ವೈದ್ಯರು ಸೂಚಿಸಿದಂತೆ ಯಾವಾಗಲೂ ನಿಮ್ಮ ಔಷಧಿಗಳನ್ನು ಮತ್ತು ಇನ್ಸುಲಿನ್ ಅನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು. ಯುನಿವರ್ಸಿಟಿ ಆಫ್ ಮಿಚಿಗನ್ ಹೆಲ್ತ್ ಪ್ರಕಾರ, ಟೈಪ್ 2 ಡಯಾಬಿಟಿಸ್‌ಗೆ ಸದ್ಯಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಆದರೆ ಅದನ್ನು ನಿಯಂತ್ರಿಸಬಹುದು. ಮತ್ತು ಕೆಲವು ಸಂದರ್ಭಗಳಲ್ಲಿ, ಇದು ಉಪಶಮನ ಕೂಡ ಆಗುತ್ತದೆ. ಮಧುಮೇಹ ಔಷಧವಿಲ್ಲದೆ ಸೂಕ್ತ ಆಹಾರ ಹಾಗೂ ಕಟ್ಟುನಿಟ್ಟಿನ ಜೀವನ ಶೈಲಿಯ ಮೂಲಕ ಮಧುಮೇಹವನ್ನು ನಿಯಂತ್ರಣ ಹಾಗೂ ಉಪಶಮನ ಮಾಡಿಕೊಳ್ಳಬಹುದಾಗಿದೆ.
Published by:vanithasanjevani vanithasanjevani
First published: