• Home
  • »
  • News
  • »
  • lifestyle
  • »
  • Papaya Seeds: ಪಪ್ಪಾಯಿ ಬೀಜದಿಂದ ಮಧುಮೇಹ ಮತ್ತು ಕೊಲೆಸ್ಟ್ರಾಲ್ ಕಡಿಮೆ ಆಗುತ್ತಂತೆ! ಇದನ್ನು ಹೇಗೆ ಬಳಸಬೇಕು ಗೊತ್ತಾ?

Papaya Seeds: ಪಪ್ಪಾಯಿ ಬೀಜದಿಂದ ಮಧುಮೇಹ ಮತ್ತು ಕೊಲೆಸ್ಟ್ರಾಲ್ ಕಡಿಮೆ ಆಗುತ್ತಂತೆ! ಇದನ್ನು ಹೇಗೆ ಬಳಸಬೇಕು ಗೊತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪಪ್ಪಾಯಿ ಬೀಜಗಳ ಸೇವನೆ ಮಾಡುವುದು ಮಧುಮೇಹ, ಕೊಲೆಸ್ಟ್ರಾಲ್‌ನಂತಹ ಗಂಭೀರ ಕಾಯಿಲೆ ಗುಣವಾಗಿಸುತ್ತದೆ ಎಂದು ಹೇಳಲಾಗುತ್ತದೆ. ಇದು ಹೃದ್ರೋಗ ದೂರ ಮಾಡಲು ಸಹಾಯ ಮಾಡುತ್ತದೆಯಂತೆ!

  • Share this:

    ಪಪ್ಪಾಯಿ ಹಣ್ಣಿನ (Papaya Fruit) ಜೊತೆಗೆ ಅದರ ಬೀಜಗಳೂ (Seeds) ಸಾಕಷ್ಟು ಪ್ರಯೋಜನ (Benefits) ಮತ್ತು ಅಡ್ಡ ಪರಿಣಾಮ (Side Effects) ಹೊಂದಿವೆ. ಜನರು (People) ಹೊಟ್ಟೆ ಸ್ವಚ್ಛಗೊಳಿಸಲು ಪಪ್ಪಾಯಿ ಸೇವನೆ ಮಾಡುತ್ತಾರೆ. ಹೀಗೆ ಪಪ್ಪಾಯಿ ಆಯ್ಕೆ ಮಾಡಿಕೊಂಡು ಅದರ ಬೀಜಗಳನ್ನು ಹಿಂದೆ ಮುಂದೆ ಯೋಚನೆ ಮಾಡದೇ ಕಸದಂತೆ ಎಸೆದು ಬಿಡುತ್ತಾರೆ. ಪಪ್ಪಾಯಿ ಹಣ್ಣಿನಷ್ಟೆಯೇ ಪಪ್ಪಾಯಿ ಬೀಜಗಳು ಸಹ ಯಾವೆಲ್ಲಾ ಪ್ರಯೋಜನ ನೀಡುತ್ತವೆ ಎಂದು ನಾವು ನೋಡೋಣ. ಪಪ್ಪಾಯಿ ಬೀಜಗಳ ಸೇವನೆ ಮಾಡುವುದು ಮಧುಮೇಹ, ಕೊಲೆಸ್ಟ್ರಾಲ್, ಸೋಂಕಿನಂತಹ ಗಂಭೀರ ಕಾಯಿಲೆ ಗುಣವಾಗಿಸುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ ಇದು ಅಡ್ಡ ಪರಿಣಾಮವನ್ನೂ ಉಂಟು ಮಾಡುತ್ತದೆ.


    ಆಯುರ್ವೇದ ತಜ್ಞ ಡಾ. ಅಬ್ರಾರ್ ಮುಲ್ತಾನಿ ಅವರ ಪ್ರಕಾರ, ಕೆಲವರು ಪಪ್ಪಾಯಿ ಬೀಜಗಳನ್ನು ತಿನ್ನುವುದರಿಂದ ಅಡ್ಡ ಪರಿಣಾಮ ಉಂಟಾಗಬಹುದು. ಹಾಗಾಗಿ ಅದರ ಸೇವನೆಯಿಂದ ದೂರವಿರಬೇಕು ಎಂದು ಹೇಳುತ್ತಾರೆ.


    ಪಪ್ಪಾಯಿ ಬೀಜಗಳಲ್ಲಿ ಏನಿದೆ?


    ಹೆಲ್ತ್‌ ಲೈನ್ ಪ್ರಕಾರ, ಪಪ್ಪಾಯಿ ಬೀಜಗಳಲ್ಲಿ ಫೈಬರ್, ಆರೋಗ್ಯಕರ ಕೊಬ್ಬು ಮತ್ತು ಪಾಲಿಫಿನಾಲ್‌ ಮತ್ತು ಫ್ಲೇವನಾಯ್ಡ್‌ಗಳು ಇವೆ. ಪಾಲಿಫಿನಾಲ್‌ಗಳು ಮತ್ತು ಫ್ಲೇವನಾಯ್ಡ್‌ಗಳು ಉತ್ಕರ್ಷಣ ನಿರೋಧಕಗಳಂತೆ ಕೆಲಸ ಮಾಡುತ್ತವೆ. ಇದು ಹೃದ್ರೋಗ ದೂರ ಮಾಡಲು ಸಹಾಯ ಮಾಡುತ್ತದೆ.


    ಇದನ್ನೂ ಓದಿ: ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆ ಕಡಿಮೆ ಮಾಡಲು ಯಾವ ಆಹಾರ ಸೇವಿಸಬೇಕು?


    ಪಪ್ಪಾಯಿ ಬೀಜಗಳ ಸೇವನೆ ಮಧುಮೇಹ ರೋಗ ಕಡಿಮೆ ಮಾಡುತ್ತದೆ


    ಪಪ್ಪಾಯಿ ಹಣ್ಣಿನ ಪ್ರಯೋಜನದಂತೆ, ಅದರ ಬೀಜಗಳು ಸಹ ಮಧುಮೇಹ ರೋಗ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಫೈಬರ್ ನ್ನು ಹೊಂದಿದೆ. ಇದು ರಕ್ತದ ಸಕ್ಕರೆ ನಿಯಂತ್ರಿಸುತ್ತದೆ.


    ಅದೇ ವೇಳೆ ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ಪ್ರಕಾರ, ​​​​ಪಪ್ಪಾಯಿ ಬೀಜಗಳಲ್ಲಿ ಇರುವ ಮೊನೊಸಾಚುರೇಟೆಡ್ ಕೊಬ್ಬು ಆರೋಗ್ಯಕರ ಎಂದು ಪರಿಗಣಿಸುತ್ತದೆ. ಮತ್ತು ಅವುಗಳನ್ನು ಮಧುಮೇಹ ಆಹಾರದಲ್ಲಿ ಸೇರಿಸಲು ಶಿಫಾರಸು ಮಾಡುತ್ತದೆ.


    ಕೊಲೆಸ್ಟ್ರಾಲ್ ಮತ್ತು ಬೊಜ್ಜು ಕಡಿಮೆ ಮಾಡಲುತ್ತದೆ ಪಪ್ಪಾಯಿ ಬೀಜಗಳು


    ಪಪ್ಪಾಯಿ ಬೀಜಗಳಲ್ಲಿ ಫೈಬರ್ ಸಮೃದ್ಧ ಇದೆ. ಇದು ಬೊಜ್ಜಿನ ಸಮಸ್ಯೆ ನಿವಾರಿಸುತ್ತದೆ. ನೀವು ತೂಕ ಇಳಿಸಲು ಬಯಸಿದರೆ ಈ ಆರೋಗ್ಯಕರ ಬೀಜಗಳನ್ನು ಪ್ರತಿದಿನ ಸೇವಿಸಿ. ಜೊತೆಗೆ ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ.


    ಸಾಂಕ್ರಾಮಿಕ ರೋಗಾಣು ತಟಸ್ಥ


    ಇತ್ತೀಚಿನ ದಿನಗಳಲ್ಲಿ ಜನರು ಮತ್ತೆ ಮತ್ತೆ ಸೋಂಕಿಗೆ ತುತ್ತಾಗುತ್ತಿದ್ದಾರೆ. ಈ ಸಮಸ್ಯೆ ತಪ್ಪಿಸಲು ಪಪ್ಪಾಯಿ ಬೀಜಗಳನ್ನು ಸಹ ಸೇವನೆ ಮಾಡಬಹುದು. ಯಾಕಂದ್ರೆ ಪಪ್ಪಾಯಿ ಬೀಜ ಸೇವನೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.


    ಜೊತೆಗೆ ಅನೇಕ ರೀತಿಯ ಶಿಲೀಂಧ್ರಗಳು ಮತ್ತು ಪರಾವಲಂಬಿಗಳನ್ನು ತಟಸ್ಥ ಮಾಡುತ್ತವೆ ಎಂಬುದು ಅನೇಕ ಸಂಶೋಧನೆಗಳು ಹೇಳಿವೆ. ಡಾ. ಅಬ್ರಾರ್ ಮುಲ್ತಾನಿ ಪ್ರಕಾರ, ಅಪೆಂಡಿಕ್ಸ್ ಚಿಕಿತ್ಸೆಯಲ್ಲಿ ಪಪ್ಪಾಯಿ ಬೀಜಗಳು ಸಹ ಪ್ರಯೋಜನಕಾರಿ ಆಗಿವೆ.


    ಮೂತ್ರಪಿಂಡದ ಆರೋಗ್ಯ ಕಾಪಾಡುತ್ತದೆ


    ಮೂತ್ರಪಿಂಡದ ಆರೋಗ್ಯಕ್ಕೂ ಪಪ್ಪಾಯಿ ಬೀಜಗಳು ಪ್ರಯೋಜನಕಾರಿ. ಇದು ಉತ್ಕರ್ಷಣ ನಿರೋಧಕ ಹೊಂದಿದೆ. ಇದು ಮೂತ್ರಪಿಂಡದ ಹಾನಿಗೆ ಕಾರಣವಾಗುವ ಆಕ್ಸಿಡೇಟಿವ್ ಒತ್ತಡ ನಿವಾರಿಸುತ್ತದೆ.


    ಇದರಿಂದ ಕಿಡ್ನಿಯನ್ನು ವೃದ್ಧಾಪ್ಯದವರೆಗೂ ಆರೋಗ್ಯವಾಗಿಡಬಹುದು. ಇದು ಅನೇಕ ಸಂಶೋಧನೆಗಳಲ್ಲಿ ಕಂಡು ಬಂದಿದೆ. ಇದನ್ನು ಸಾಬೀತುಪಡಿಸಲು ಹೆಚ್ಚಿನ ಸಂಶೋಧನೆಯ ಅಗತ್ಯತೆ ಇದೆ.


    ಯಾವ ಜನರು ಪಪ್ಪಾಯಿ ಬೀಜಗಳನ್ನು ಸೇವನೆ ಮಾಡಬಾರದು ?


    ಪಪ್ಪಾಯಿ ದುಷ್ಪರಿಣಾಮದಂತೆಯೇ ಇದರ ಬೀಜಗಳಿಗೂ ಅಡ್ಡ ಪರಿಣಾಮ ಇದೆ. ಗರ್ಭಿಣಿಯರು ಮತ್ತು ಪುರುಷರು ಪೌಷ್ಟಿಕ ತಜ್ಞರು ಅಥವಾ ಆಯುರ್ವೇದ ವೈದ್ಯರ ಸಲಹೆ ನಿರ್ಲಕ್ಷಿಸಿ ಅತಿಯಾಗಿ ಸೇವಿಸಿದರೆ ಅಡ್ಡ ಪರಿಣಾಮ ಉಂಟಾಗುತ್ತದೆ.


    ಇದು ಗರ್ಭಿಣಿ ಮಹಿಳೆಯರಲ್ಲಿ ಗರ್ಭಪಾತ ಉಂಟು ಮಾಡಬಹುದು. ಮತ್ತು ಪುರುಷರ ವೀರ್ಯಕ್ಕೆ ಹಾನಿ ಆಗುತ್ತದೆ. ಅದೇ ವೇಳೆ ಮಗುವಿಗೆ ಹಾಲುಣಿಸುವ ಮಹಿಳೆಯರು ಸಹ ಅದನ್ನು ಸೇವನೆ ಮಾಡಬಾರದು.


    ಇದನ್ನೂ ಓದಿ: ದೇಹದಲ್ಲಿ ಮೆಗ್ನೀಸಿಯಮ್ ಕೊರತೆ ಈ ಅಪಾಯಕ್ಕೆ ಕಾರಣವಂತೆ, ಎಚ್ಚರವಿರಲಿ


    ಪಪ್ಪಾಯಿ ಬೀಜಗಳನ್ನು ಹೇಗೆ ತಿನ್ನಬೇಕು ?


    ಆಯುರ್ವೇದ ತಜ್ಞ ಡಾ.ಅಬ್ರಾರ್ ಮುಲ್ತಾನಿ ಪ್ರಕಾರ, ಒಂದು ದಿನದಲ್ಲಿ 1 ಗ್ರಾಂ ಅಥವಾ 5 ಪಪ್ಪಾಯಿ ಬೀಜಗಳಿಗಿಂತ ಹೆಚ್ಚು ತಿನ್ನಬಾರದು. ಪಪ್ಪಾಯಿ ಬೀಜಗಳನ್ನು ಕಚ್ಚಾ ತಿನ್ನಬಹುದು. ಬೀಜಗಳ ಪುಡಿ ಮಾಡಿ ಸೇವಿಸಬೇಕು.

    Published by:renukadariyannavar
    First published: