Weight Loss Tips: ತೂಕ ಇಳಿಸಲು ಈ ಡಿಟಾಕ್ಸ್ ಡ್ರಿಂಕ್ಸ್ ಟ್ರೈ ಮಾಡಿ

Detox Drink: ವರದಿಗಳ ಪ್ರಕಾರ, ಸೌತೆಕಾಯಿ-ಪುದೀನಾ ಪಾನೀಯವು ತೂಕ ಇಳಿಸಲು ಸಹಾಯ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುವುದು, ಕ್ಯಾನ್ಸರ್ ಅನ್ನು ತಡೆಗಟ್ಟುವುದು ಮುಂತಾದ ಇತರ ಪ್ರಯೋಜನಗಳನ್ನು ನೀಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತೂಕ ಇಳಿಸುವುದು (Weight Loss) ಎಲ್ಲರ ಕನಸು. ತೂಕ ಇಳಿಕೆ ಮಾಡುವಾಗ ಮೊದಲು ನೀವು ಮಾಡುತ್ತಿರುವ ಡಯೆಟ್​ ಅಥವಾ ಬೇರೆ ಯಾವುದೇ ರೀತಿಯ ಪ್ರಯತ್ನ ನಿಜಕ್ಕೂ ಸಹಾಯ ಮಾಡುತ್ತಿದೆಯಾ ಎಂಬುದು ಬಹಳ ಮುಖ್ಯ. ಹಾಗೆಯೇ ಕೆಲವೊಂದು ಆಹಾರ ಪದಾರ್ಥ ನಿಮ್ಮ ತೂಕ ಇಳಿಸಲು ಸಹಾಯ ಮಾಡುತ್ತದೆ. ತೂಕ ಇಳಿಸಲು ಸಹಾಯ ಮಾಡುವ 3 ಪಾನೀಯಗಳ (Detox Drink) ಲಿಸ್ಟ್ ಇಲ್ಲಿದೆ.  ತೂಕವನ್ನು ಕಳೆದುಕೊಳ್ಳಲು ನೀರನ್ನು ಯಾವಾಗಲೂ ಉತ್ತಮ ಆಯ್ಕೆ ಎಂದು ಪರಿಗಣಿಸಲಾಗಿದೆ. ನೈಸರ್ಗಿಕ ಪದಾರ್ಥಗಳೊಂದಿಗೆ ಸೇರಿಕೊಂಡು ನೀರು ಅದ್ಭುತ ಪಾನೀಯವಾಗುತ್ತದೆ.  

ಇದು ಕೇವಲ ಪೋಷಣೆ ಮಾತ್ರವಲ್ಲದೆ ದೇಹದಲ್ಲಿ ಇರುವ ಹೆಚ್ಚುವರಿ ಕೊಬ್ಬಿನ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಇವುಗಳನ್ನು ಸಾಮಾನ್ಯವಾಗಿ ಡಿಟಾಕ್ಸ್ ಪಾನೀಯಗಳು ಎಂದು ಕರೆಯಲಾಗುತ್ತದೆ.

ದಾಲ್ಚಿನ್ನಿ-ಜೇನುತುಪ್ಪ ಪಾನೀಯ

ಈ ಎರಡು ಅದ್ಭುತ ವಸ್ತುಗಳು ಯಾವ ಪ್ರಯೋಜನಗಳನ್ನು ನೀಡುತ್ತವೆ ಎಂಬುದು ಯಾರಿಗೂ ಗೊತ್ತಿಲ್ಲ. ದಾಲ್ಚಿನ್ನಿ ಆಂಟಿವೈರಲ್, ಬ್ಯಾಕ್ಟೀರಿಯಾ ಮತ್ತು ಆಂಟಿಫಂಗಲ್ ಆಗಿದ್ದರೆ, ಜೇನುತುಪ್ಪವು ಆ್ಯಂಟಿ ಆಕ್ಸಿಡೆಂಟ್​ಗಳ ಶಕ್ತಿ ಕೇಂದ್ರವಾಗಿದೆ. ದಾಲ್ಚಿನ್ನಿ-ಜೇನುತುಪ್ಪ ನೀರನ್ನು ಉಗುರು ಬೆಚ್ಚಗೆ ಸೇವನೆ ಮಾಡಬೇಕು.

ಇದನ್ನೂ ಓದಿ:ತೂಕ ಇಳಿಸೋಕೆ ಸಿರಿಧಾನ್ಯ ಎಷ್ಟು ಸಹಾಯಕರ ನೋಡಿ

ಈ ಪಾನೀಯವು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ, ಚರ್ಮದ ಸೋಂಕುಗಳಿಗೆ ಚಿಕಿತ್ಸೆ ನೀಡುತ್ತದೆ ಮತ್ತು ತೂಕ ಇಳಿಸಲು ಸಹಾಯ ಮಾಡುವುದರ ಜೊತೆಗೆ ಉರಿಯೂತವನ್ನು ಕಡಿಮೆ ಮಾಡುತ್ತದೆ.

ನಿಂಬೆ-ಶುಂಠಿ ಪಾನೀಯ 

ನಿಂಬೆ ಮತ್ತು ಶುಂಠಿಯ ಪ್ರಯೋಜನಗಳು ಒಂದೆರೆಡಲ್ಲ. ಪ್ರತಿ ಭಾರತೀಯ ಅಡುಗೆಮನೆಯಲ್ಲಿ ಸುಲಭವಾಗಿ ಕಂಡುಬರುತ್ತವೆ. ನಿಂಬೆ-ಶುಂಠಿ ಡಿಟಾಕ್ಸ್ ಪಾನೀಯವನ್ನು ತಯಾರಿಸುವ ವಿಧಾನ ಇಲ್ಲಿದೆ. ಅರ್ಧ ನಿಂಬೆ ರಸ ಮತ್ತು 2 ಇಂಚು ತುರಿದ ಶುಂಠಿಯನ್ನು ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಸೇರಿಸಬೇಕು.

ಸಾಮಾನ್ಯ ಪ್ರಮಾಣದಲ್ಲಿ ಈ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಿಂದ ವಿಷವನ್ನು ಪರಿಣಾಮಕಾರಿಯಾಗಿ ಹೊರಹಾಕುತ್ತದೆ ಎಂದು ತಜ್ಞರು ಹೇಳುತ್ತಾರೆ. ಸಂಶೋಧನಾ ಅಧ್ಯಯನಗಳ ಪ್ರಕಾರ, ಶುಂಠಿ ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ನಿಂಬೆ ವಿಟಮಿನ್ ಸಿ ಮತ್ತು  ಆ್ಯಂಟಿ ಆಕ್ಸಿಡೆಂಟ್​ಗಳ ಸಮೃದ್ಧ ಮೂಲವಾಗಿದೆ. ಈ ಪಾನೀಯವು ರೋಗನಿರೋಧಕ ಶಕ್ತಿಯನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸುತ್ತದೆ ಎಂದು ಸಾಬೀತಾಗಿದೆ.

ಸೌತೆಕಾಯಿ ಮತ್ತು ಪುದೀನ ಪಾನೀಯ

ಮತ್ತೊಂದು ಅದ್ಭುತ ಪಾನೀಯವು ಪೋಷಕಾಂಶಗಳನ್ನು ಮಾತ್ರವಲ್ಲದೆ ಅದ್ಭುತ ರುಚಿಯನ್ನು ಹೊಂದಿದೆ. ನೀರು ಸಮೃದ್ಧವಾಗಿರುವ ಸೌತೆಕಾಯಿ ಮತ್ತು ಪೌಷ್ಟಿಕಾಂಶ ಭರಿತ ಪುದೀನವನ್ನು ಒಟ್ಟಿಗೆ ಸೇರಿಸಿದಾಗ ಪ್ರಯೋಜನಗಳು ಹಲವಾರು.

ಈ ಪಾನೀಯವನ್ನು ತಯಾರಿಸಲು, ನೀವು ಒಂದು  ಕಪ್ ನೀರಿಗೆ ಕೆಲವು ಸೌತೆಕಾಯಿ ಮತ್ತು ಸಣ್ಣದಾಗಿ ಕೊಚ್ಚಿದ ಪುದೀನ ಎಲೆಗಳನ್ನು ಸೇರಿಸಿ. ಈ ಡಿಟಾಕ್ಸ್ ನೀರನ್ನು ಪ್ರತಿದಿನ ಸೇವಿಸಬಹುದು.

ಇದನ್ನೂ ಓದಿ:ತೂಕ ಕಡಿಮೆಯಾಗ್ಬೇಕು ಅಂದ್ರೆ ಈ ಹಣ್ಣುಗಳಿಂದ ದೂರ ಇರಿ

ವರದಿಗಳ ಪ್ರಕಾರ, ಸೌತೆಕಾಯಿ-ಪುದೀನಾ ಪಾನೀಯವು ತೂಕ ಇಳಿಸಲು ಸಹಾಯ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುವುದು, ಕ್ಯಾನ್ಸರ್ ಅನ್ನು ತಡೆಗಟ್ಟುವುದು ಮುಂತಾದ ಇತರ ಪ್ರಯೋಜನಗಳನ್ನು ನೀಡುತ್ತದೆ. ಇವು ಆ್ಯಂಟಿ ಆಕ್ಸಿಡೆಂಟ್​ಗಳ ಸಮೃದ್ಧ ಮೂಲವಾಗಿದೆ.
Published by:Sandhya M
First published: