• Home
  • »
  • News
  • »
  • lifestyle
  • »
  • Detox Drinks: ಹಬ್ಬದ ನಂತ್ರ ಈ ಕೆಲಸ ಮಾಡಿದ್ರೆ ಸಾಕು ದೇಹದಿಂದ ವಿಷ ಹೊರಹಾಕಬಹುದು

Detox Drinks: ಹಬ್ಬದ ನಂತ್ರ ಈ ಕೆಲಸ ಮಾಡಿದ್ರೆ ಸಾಕು ದೇಹದಿಂದ ವಿಷ ಹೊರಹಾಕಬಹುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Detox Drinks at Home: ಇಂತಹ ಸಮಸ್ಯೆಗಳು ಬರದಂತೆ ತಡೆಯಲು, ದೇಹದಲ್ಲಿ ಸಂಗ್ರಹವಾಗಿರುವ ವಿಷವನ್ನು ಹೊರಹಾಕಲು ಕೆಲವು ನಿರ್ದಿಷ್ಟ ವಿಧಾನಗಳನ್ನು ಬಳಸುವುದು ನಿಮಗೆ ಸಹಾಯ ಮಾಡುತ್ತದೆ.  

  • Share this:

ಹಬ್ಬ ಹರಿದಿನಗಳೆಂದರೆ (Festival) ಎಲ್ಲರಿಗೂ ಉತ್ಸಾಹ ಇರುತ್ತದೆ. ಅದರಲ್ಲೂ ಅಕ್ಟೋಬರ್ (October) ತಿಂಗಳಿನಲ್ಲಿ ಮಾತ್ರ ಆಯುಧಪೂಜೆ, ದೀಪಾವಳಿ (Deepavali) ಹೀಗೆ ಎರಡು ಪ್ರಮುಖ ಹಬ್ಬಗಳನ್ನು ಎಲ್ಲರೂ ಆಚರಿಸುತ್ತಿದ್ದರಂತೆ. ಹಬ್ಬ ಹರಿದಿನಗಳಲ್ಲಿ ನಾನಾ ತರಹದ ತಿಂಡಿ ತಿನಿಸುಗಳು ನಮ್ಮ ಹೊಟ್ಟೆ ಸೇರುತ್ತವೆ. ನೀವು ಯಾವುದೇ ಡಯಟ್ ಮಾಡುತ್ತೀನಿ ಎಂದು ಹೇಳಿದರೂ, ಲಡ್ಡು, ಜಿಲೇಬಿಯನ್ನು ತಿನ್ನದೇ ಇರಲಾಗುವುದಿಲ್ಲ. ನಾವು ಈ ಸಮಯದಲ್ಲಿ ಎಷ್ಟು ತಿನ್ನುತ್ತೇವೆ ಎನ್ನುವುದರ ಬಗ್ಗೆ ಲೆಕ್ಕ ಹಾಕುವುದಿಲ್ಲ. ಆದರೆ, ದೇಹದ ವಿಷಯದಲ್ಲಿ ಈ ಸಿಹಿತಿಂಡಿಗಳು ಅನಗತ್ಯ ಮತ್ತು ಅತಿಯಾದ ಕೊಬ್ಬಿನ ಶೇಖರಣೆಗೆ ಕಾರಣವಾಗಬಹುದು ಮತ್ತು ದೇಹದಲ್ಲಿ ವಿಷತ್ವವನ್ನು ಹೆಚ್ಚಿಸಬಹುದು. ಹಾಗಾಗಿ ಇದಕ್ಕೆ ಮನೆಯಲ್ಲಿಯೇ ಕೆಲ ಪರಿಹಾರ ಕಂಡುಕೊಳ್ಳುವುದು ಆರೋಗ್ಯದ (Health)  ದೃಷ್ಟಿಯಿಂದ ಉತ್ತಮ.  


ಹೌದು, ಇಂತಹ ಸಮಸ್ಯೆಗಳು ಬರದಂತೆ ತಡೆಯಲು, ದೇಹದಲ್ಲಿ ಸಂಗ್ರಹವಾಗಿರುವ ವಿಷವನ್ನು ಹೊರಹಾಕಲು ಕೆಲವು ನಿರ್ದಿಷ್ಟ ವಿಧಾನಗಳನ್ನು ಬಳಸುವುದು ನಿಮಗೆ ಸಹಾಯ ಮಾಡುತ್ತದೆ.


ನಿಂಬೆ ರಸ ಅಥವಾ ನಿಂಬೆ ಜ್ಯೂಸ್​ ಕುಡಿಯುವುದು


ಬೆಳಗ್ಗೆ ಎದ್ದ ನಂತರ ಸ್ವಲ್ಪ ನಿಂಬೆ ರಸವನ್ನು ಬೆಚ್ಚಗಿನ ನೀರಿಗೆ ಬೆರೆಸಿ ಮಿಶ್ರಣ ಮಾಡಿ. ಇದನ್ನು ಬೆಳಗ್ಗೆ ಎದ್ದಾಗ ಇದನ್ನು ಕುಡಿಯಿರಿ. ಮತ್ತೆ ಎರಡು ಗಂಟೆಗಳ ನಂತರ ನಿಂಬೆ ರಸ ಹಾಗೂ ನೀರನ್ನು ಕುಡಿಯಿರಿ. ಆದರೆ ಈ ಬಾರಿ ಸ್ವಲ್ಪ ಉಪ್ಪು ಬೆರೆಸಿ ಕುಡಿಯಿರಿ. ಮತ್ತೆ 2 ಗಂಟೆಗಳ ನಂತರ, ಎಳನೀರು ಕುಡಿಯಿರಿ, ಎಳನೀರು ಸಿಗದಿದ್ದರೆ ಮನೆಯಲ್ಲಿಯೇ ತೆಂಗಿನಕಾಯಿ ಒಡೆದು, ಅದರ ನೀರು ಕುಡಿಯಿರಿ.  ಹೀಗೆ ಮಾಡುವುದರಿಂದ ದೇಹದಲ್ಲಿ ಶೇಖರಣೆಯಾಗಿರುವ ವಿಷಕಾರಿ ಅಂಶಗಳು ಬೇಗನೇ ಹೋಗುತ್ತವೆ.


ತರಕಾರಿಗಳನ್ನು ತಿನ್ನಿ


ದಿನಕ್ಕೆ ಎರಡರಿಂದ ಮೂರು ಬಾರಿ ತರಕಾರಿಗಳನ್ನು ಸೇವಿಸಿ. ನೀವು ಸ್ವಲ್ಪ ಮಸಾಲೆ ಹಾಕಿ ಮಾಡಿದ ಸಲಾಡ್‌ಗಳನ್ನು ಸಹ ಸೇವಿಸಬಹುದು. ಕಡಲೆಕಾಯಿ, ಬೀನ್ಸ್, ಹಸಿರು ತರಕಾರಿಗಳು, ಕ್ಯಾರೆಟ್ ಮತ್ತು ಫೈಬರ್ ಭರಿತ ತರಕಾರಿಗಳನ್ನು ಸೇವಿಸುವುದರಿಂದ ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.


ಇದನ್ನೂ ಓದಿ: ಈ ಸಿಂಪಲ್ ಹ್ಯಾಕ್ಸ್ ಟ್ರೈ ಮಾಡಿದ್ರೆ ಸುಂದರವಾದ ರೆಡ್​ ಲಿಪ್ ನಿಮ್ಮದಾಗುತ್ತೆ


ಬೇಕರಿ ತಿಂಡಿಗಳಿಂದ ದೂರವಿರಿ


ಹಾನಿಕಾರಕ ಬೇಕರಿ ಉತ್ಪನ್ನಗಳು ಮತ್ತು ಎಣ್ಣೆಯಲ್ಲಿ ಕರಿದ ಚಿಪ್ಸ್ ತಿನ್ನುವ ಬದಲು, ನೀವು ಡ್ರೈ ಫ್ರೂಟ್ಸ್​ಗಳು ಮತ್ತು ಬಾದಾಮಿ ಮತ್ತು ಪಿಸ್ತಾಗಳಂತಹ ಪೌಷ್ಟಿಕ ಕಾಳುಗಳನ್ನು ತಿನ್ನಬಹುದು. ನೀವು ಹಣ್ಣುಗಳನ್ನು ಕೂಡ ಸೇವಿಸುವುದು ದೇಹದಿಂದ ವಿಷ ಹೊರಹಾಕಲು ಸಹಾಯ ಮಾಡುತ್ತದೆ.




ಹಬ್ಬದ ನಂತರ ಇದನ್ನು ಏಕೆ ಮಾಡಬೇಕು?


ಹಬ್ಬ ಹರಿದಿನಗಳಲ್ಲಿ ನಾನಾ ಬಗೆಯ ಆಹಾರ, ತಿಂಡಿ ತಿನಿಸುಗಳ ಮೊರೆಹೋಗುವವರೇ ಹೆಚ್ಚು. ಇದನ್ನು ತಪ್ಪು ಎಂದು ಹೇಳಲಾಗದು. ಸಂಭ್ರಮದ ಸಮಯದಲ್ಲಿ, ಈ ಎಲ್ಲಾ ವಿಚಾರಗಳು ಮನಸ್ಸಿಗೆ ಬರುವುದಿಲ್ಲ. ಆದ್ದರಿಂದ ಅವುಗಳನ್ನು ತಿಂದ ನಂತರ, ಅವುಗಳಿಂದ ಉಂಟಾಗುವ ಪರಿಣಾಮಗಳನ್ನು ತಡೆಯಲು ಅಥವಾ ಹೋಗಲಾಡಿಸಲು ನೀವು ದೇಹದಿಂದ ವಿಷವನ್ನು ಸಂಪೂರ್ಣವಾಗಿ ಹೊರಹಾಕುವುದು ಬಹಳ ಮುಖ್ಯ.


ಸಕ್ಕರೆ ಹೊಂದಿರುವ ಆಹಾರಗಳನ್ನು ಬಿಡಬೇಕು 


ದೇಹದಲ್ಲಿ ಹೆಚ್ಚಿನ ಸಕ್ಕರೆಯು ತೂಕ ಹೆಚ್ಚಾಗುವುದು, ಆಯಾಸ ಮತ್ತು ಮಧುಮೇಹಕ್ಕೆ ಕಾರಣವಾಗಬಹುದು. ಆದ್ದರಿಂದ ಸಕ್ಕರೆಯ ಸಿಹಿತಿಂಡಿಗಳು ಮತ್ತು ಕೇಕ್​ಗಳನ್ನು ಸಂಪೂರ್ಣವಾಗಿ ಬಿಡಬೇಕು.


ಇದನ್ನೂ ಓದಿ: ಮೊಸರನ್ನು ಈ ರೀತಿ ತಿಂದ್ರೆ ಸಾಕು, ತೂಕ ಇಳಿಸೋಕೆ ಬೇರೆ ಏನೂ ಬೇಡ


ನಿರ್ವಿಶೀಕರಣದ ಪ್ರಯೋಜನವೇನು?


ದೇಹದಿಂದ ವಿಷವನ್ನು ಹೊರಹಾಕುವ ಮೂಲಕ, ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಮತ್ತು ದೇಹಕ್ಕೆ ಹಾನಿಯಾಗದಂತೆ ತಡೆಯಲು ಸಹಾಯ ಮಾಡುತ್ತದೆ. ಇದು ದೇಹವನ್ನು ಶುದ್ಧೀಕರಿಸಲು ಮತ್ತು ಹೆಚ್ಚುವರಿ ತೂಕ ಹೆಚ್ಚಾಗುವುದನ್ನು ತಡೆಯಲು ಅವಕಾಶವನ್ನು ನೀಡುತ್ತದೆ.

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು