Decemberನಲ್ಲಿ ಮದುವೆಯಾಗೋರು ಈ ಸ್ಥಳಗಳಿಗೆ ಹನಿಮೂನ್​ಗೆ ಹೋಗಬಹುದು..!

ಹನಿಮೂನ್‌ಗೆ  (Honey Moon) ಹೋಗುವಂತಹ ಮತ್ತು ಕಡಿಮೆ ಖರ್ಚಿನಲ್ಲಿ ಉತ್ತಮ  ಸೇವೆ ಪಡೆಯುವುದಕ್ಕೆ ಕೆಲವು ಸ್ಥಳಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ನೀವು ಹನಿಮೂನ್ ಪ್ಲ್ಯಾನ್ ಮಾಡುವ ಮುಂಚೆ ಒಮ್ಮೆ ಇದನ್ನು ಓದಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನೀವು ಡಿಸೆಂಬರ್ ತಿಂಗಳಿನಲ್ಲಿ ಮದುವೆ  (Wedding In December) ಆಗುತ್ತಿದ್ದರೆ ಖಂಡಿತವಾಗಿಯೂ ಒಂದು ಒಳ್ಳೆಯ ಹನಿಮೂನ್‌ಗೆ ಹೋಗುವ ಸ್ಥಳವನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು ಎಂದು ನಿರ್ಧಾರ ಮಾಡಿರುತ್ತೀರಿ. ಏಕೆಂದರೆ ವರ್ಷದ ಕೊನೆಯ ತಿಂಗಳು ಮತ್ತು ವೈವಾಹಿಕ ಜೀವನವನ್ನು ಹೊಸ ವರ್ಷದಿಂದ ಶುರು ಮಾಡಲು ಕಾತುರರಾಗಿರುತ್ತೀರಿ.ಆದರೆ ಕೆಲವು ಸ್ಥಳಗಳು ನೋಡಲು ತುಂಬಾನೇ ಆಕರ್ಷಣೀಯವಾಗಿದ್ದು, ದುಬಾರಿಯಾಗಿರುತ್ತವೆ. ನಾವು ನಮ್ಮ ಖರ್ಚು ವೆಚ್ಚಗಳನ್ನು ಸಹ ಗಮನದಲ್ಲಿಟ್ಟುಕೊಳ್ಳಬೇಕಲ್ಲವೇ?

ಹನಿಮೂನ್‌ಗೆ  (Honey Moon) ಹೋಗುವಂತಹ ಮತ್ತು ಕಡಿಮೆ ಖರ್ಚಿನಲ್ಲಿ ಉತ್ತಮ  ಸೇವೆ ಪಡೆಯುವುದಕ್ಕೆ ಕೆಲವು ಸ್ಥಳಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ನೀವು ಹನಿಮೂನ್ ಪ್ಲ್ಯಾನ್ ಮಾಡುವ ಮುಂಚೆ ಒಮ್ಮೆ ಇದನ್ನು ಓದಿ.

ಶಿಮ್ಲಾಭಾರತದ ಪಾಕೆಟ್ ಫ್ರೆಂಡ್ಲಿ ಮಧುಚಂದ್ರದ ತಾಣ ಎಂದರೆ ಅದು ಶಿಮ್ಲಾ ಎಂದು ಹೇಳಬಹುದು. ಡಿಸೆಂಬರ್‌ನಲ್ಲಿ ಮದುವೆ ಆದ್ದರೆ, ಮಧುಚಂದ್ರಕ್ಕೆ ಶಿಮ್ಲಾಗಿಂತ ಉತ್ತಮ ಸ್ಥಳವಿಲ್ಲ. ಈ ಸ್ಥಳವು ಬಿಳಿ ಹಿಮದ ಕಂಬಳಿಯಿಂದ ಮುಚ್ಚಲ್ಪಡುತ್ತದೆ ಮತ್ತು ಚಳಿಗಾಲದ ವಂಡರ್‌ಲ್ಯಾಂಡ್ ಆಗಿ ಬದಲಾಗುತ್ತದೆ. ಶಿಮ್ಲಾ ಚರ್ಚ್, ಸ್ಕ್ಯಾಂಡಲ್ ಪಾಯಿಂಟ್ ಮತ್ತು ಚಾಡ್ವಿಕ್ ಜಲಪಾತಗಳು ಇಲ್ಲಿ ಭೇಟಿ ಮಾಡಬೇಕಾದ ಕೆಲವು ತಾಣಗಳಾಗಿವೆ.

ಜೋಧಪುರ: ಜೋಧಪುರ್ ರಾಜಸ್ಥಾನದ ಎರಡನೇಯ ದೊಡ್ಡ ನಗರ ಮತ್ತು ಪ್ರಪಂಚದಾದ್ಯಂತದ ನವದಂಪತಿಗಳನ್ನು ತನ್ನೆಡೆಗೆ ಆಕರ್ಷಿಸುತ್ತದೆ. ನಗರವು ವಿಶಿಷ್ಟವಾದ ಹಳ್ಳಿಗಾಡಿನ ಮೋಡಿಯನ್ನು ಹೊಂದಿದೆ. ಭವ್ಯವಾದ ಅರಮನೆಗಳು ಮತ್ತು ದೇವಾಲಯಗಳಿಂದ ಸುತ್ತುವರೆದಿರುವ ಈ ಸ್ಥಳವು ಖರ್ಚು ವೆಚ್ಚದಲ್ಲಿಯೂ ಸಹ ಉತ್ತಮವಾದ ಆಯ್ಕೆಯಾಗಿದೆ. ನೀವು ರಾಜಮನೆತನಗಳ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಮೆಹ್ರಾನ್ ಘರ್ ಕೋಟೆ, ಉಮೈದ್ ಭವನ್ ಅರಮನೆ, ಜಸ್ವಂತ್ ತಾಡಾ ಮತ್ತು ಮಂಡೋರ್ ಉದ್ಯಾನಗಳಿಗೆ ಭೇಟಿ ನೀಡುವುದು ಸೂಕ್ತ. ಡಿಸೆಂಬರ್‌ನಲ್ಲಿ ಇಲ್ಲಿಗೆ ಬರಲು ಒಳ್ಳೆಯ ಸಮಯ ಎಂದು ಹೇಳಬಹುದು.

ವಿಯೆಟ್ನಾಂ: ವಿಯೆಟ್ನಾಂ ಸಹ ಪಾಕೆಟ್ ಸ್ನೇಹಿಯಾಗಿದ್ದು, ಪ್ರಪಂಚದಾದ್ಯಂತದ ನವ ದಂಪತಿಗಳಿಗೆ ಮಧುಚಂದ್ರಕ್ಕೆ ಸೂಕ್ತವಾದ ಸ್ಥಳವಾಗಿದೆ. ವಿಯೆಟ್ನಾಂ ಸಂಸ್ಕೃತಿ, ಇತಿಹಾಸ ಮತ್ತು ಕಲೆಯ ಸುಂದರ ಮಿಶ್ರಣವಾಗಿದೆ. ಸಾಹಸ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವ ದಂಪತಿಗೆ ಇದು ಹೇಳಿ ಮಾಡಿಸಿದ ಸ್ಥಳ. ಅವರು ಕಡಲ ತೀರದಲ್ಲಿ ಸುತ್ತಾಡಲು ಮತ್ತು ಕೆಲವು ಅದ್ಭುತ ಸೂರ್ಯಾಸ್ತದ ದೃಶ್ಯಗಳನ್ನು ಅನುಭವಿಸಲು ಇದು ಉತ್ತಮ ಆಯ್ಕೆ.

ಫುಕೆಟ್, ಥೈಲ್ಯಾಂಡ್: ಫುಕೆಟ್ ನವ ದಂಪತಿಗಳಿಗೆ ಬಜೆಟ್ ಸ್ನೇಹಿ ಆಗಿದ್ದು, ಬೀಚ್ ಹನಿಮೂನ್ ಸ್ಥಳ ಹುಡುಕುತ್ತಿರುವವರು ಫುಕೆಟ್‌ಗೆ ಹೋಗಬಹುದು. ಪಟಾಂಗ್ ಬೀಚ್ ಮತ್ತು ಕರಾನ್ ಬೀಚ್ ನೋಡಲು ತುಂಬಾನೇ ಸುಂದರವಾಗಿವೆ ಮತ್ತು ಫಿ ಫಿ ದ್ವೀಪ ನೋಡುವುದು ಮತ್ತು ಇಲ್ಲಿನ ಮರಳು ಕಡಲ ತೀರಗಳಲ್ಲಿ ಕ್ಯಾಂಡಲ್ ಲೈಟ್ ಡಿನ್ನರ್ ಮಾಡುವುದನ್ನು ತಪ್ಪಿಸಿಕೊಳ್ಳಲೇಬೇಡಿ.

ಶ್ರೀಲಂಕಾ: ಏಷ್ಯಾದ ಅದ್ಭುತಗಳಲ್ಲಿ ಒಂದಾದ ಶ್ರೀಲಂಕಾ ಒಂದು ಸುಂದರ ರಾಷ್ಟ್ರವಾಗಿದೆ. ಮಧುಚಂದ್ರಕ್ಕೆಂದು ಬರುವ ದಂಪತಿ ತಮ್ಮ ಜೇಬಿನಲ್ಲಿ ಎಷ್ಟು ದುಡ್ಡಿದೆಯೋ ಅಷ್ಟು ಆನಂದಿಸಬಹುದು. ಶ್ರೀಲಂಕಾ ಕಡಲ ತೀರಗಳು ಸುಂದರ ಮತ್ತು ಆಕರ್ಷಕವಾಗಿವೆ. ದಂಪತಿ ಸಿಗಿರಿಯಾದಲ್ಲಿನ ಗುಹೆಗಳನ್ನು ನೋಡಲು ಹೋಗಬಹುದು ಅಥವಾ ಸುಂದರವಾದ ಕಡಲ ತೀರಗಳಲ್ಲಿ ಬೆಳದಿಂಗಳಲ್ಲಿ ದಂಪತಿ ವಾಕ್ ಮಾಡುವುದನ್ನು ಸಹ ಆನಂದಿಸಬಹುದು.

ಮಾರಿಷಸ್: ಸುಂದರವಾದ ಕಡಲ ತೀರದಲ್ಲಿ ಅಲಂಕಾರಿಕ ಹನಿಮೂನ್ ಸ್ಥಳವನ್ನು ನೀವು ಹುಡುಕುತ್ತಿದ್ದೀರಾ? ಸರಿ, ಮಾರಿಷಸ್ ನಿಮಗೆ ಒಳ್ಳೆಯ ಆಯ್ಕೆ ಆಗಬಹುದು. ದ್ವೀಪ ರಾಷ್ಟ್ರವು ಪ್ರಣಯಿಗಳು ಮತ್ತು ನವ ದಂಪತಿಗೆ ಹೇಳಿ ಮಾಡಿಸಿದ ಸ್ಥಳವಾಗಿದ್ದು, ನಿಮ್ಮ ಜೇಬಿಗೆ ಸರಿ ಹೊಂದುವಂತೆ ದೇಶವು ಹಲವಾರು ವಸತಿ ಆಯ್ಕೆಗಳನ್ನು ಹೊಂದಿದೆ. ದಂಪತಿ ಡಾಲ್ಫಿನ್ ಮತ್ತು ತಿಮಿಂಗಿಲ ವೀಕ್ಷಣೆಗೆ ಹೋಗಬಹುದು ಅಥವಾ ಇಲ್ಲಿನ ಖಾಸಗಿ ದ್ವೀಪದಲ್ಲಿ ಕ್ಯಾಂಡಲ್ ಲೈಟ್ ಡೇಟ್ ಆನಂದಿಸಬಹುದು. ಡಿಸೆಂಬರ್‌ನಲ್ಲಿ ಮಾರಿಷಸ್‌ನ ಆಹ್ಲಾದಕರ ಹವಾಮಾನವನ್ನು ನೀವು ಆನಂದಿಸಬಹುದು.

ಬಾಲಿರೋಮ್ಯಾಂಟಿಕ್ ನವ ದಂಪತಿಗೆ ಸುಲಭವಾಗಿ ಪಾಕೆಟ್‌ಗೆ ಹೊಂದುವಂತ ಜಾಗ ಎಂದರೆ ಅದು ಇಂಡೋನೇಷ್ಯಾದ ಬಾಲಿ ಎಂದರೆ ಅತಿಶಯೋಕ್ತಿಯಲ್ಲ. ಕೆಲವು ಕಡಲ ತೀರಗಳು ಮತ್ತು ಸಾಂಸ್ಕೃತಿಕ ಆಕರ್ಷಣೆಗಳಿಂದ ಕೂಡಿದ ಈ ಸ್ಥಳವು ಪ್ರಕೃತಿಯ ಸ್ವರ್ಗವಾಗಿದೆ. ಬಾಲಿ ಬಹಳ ಸಮಯದಿಂದ ಪ್ರಪಂಚದಾದ್ಯಂತದ ಮಧುಚಂದ್ರಕ್ಕೆಂದು ಬರುವ ದಂಪತಿಗಳನ್ನು ಆಕರ್ಷಿಸುತ್ತಿದೆ. ಡಿಸೆಂಬರ್ ತಿಂಗಳು ಈ ಸ್ಥಳದ ಸೌಂದರ್ಯ ಅನುಭವಿಸಲು ಒಳ್ಳೆಯ ಸಮಯ ಎಂದು ಹೇಳಲಾಗುತ್ತದೆ.
First published: