Fashion: ಕಿತ್ತಳೆ ಸಿಪ್ಪೆಯಿಂದ ರೆಡಿ ಆಯ್ತು ಹ್ಯಾಂಡ್ ಬ್ಯಾಗ್: ಫ್ಯಾಷನ್ ಪ್ರಿಯರು ಫಿದಾ!

Hand bag: ಖ್ಯಾತ ಆಹಾರ ಕಲಾವಿದ ಹಾಗೂ ಮಾಲಿಕ್ಯೂಲಾರ್​ ಗ್ಯಾಸ್ಟ್ರೊನಿಮಿಸ್ಟ್​ ಓಮರ್​ ಸರ್ತವಿ ಕಿತ್ತಳೆ ಹಣ್ಣಿನ ಸಿಪ್ಪೆಗಳಿಂದ ಹ್ಯಾಂಡ್ ಬ್ಯಾಗ್ ತಯಾರಿಸಿದ್ದಾರೆ. ಕಿತ್ತಳೆ ಸಿಪ್ಪೆಯನ್ನು ತೆಗೆದುಕೊಂಡು ಅದನ್ನು ವಿವಿಧ ಹಂತಗಳಲ್ಲಿ ಎರಡು ವಾರ ಸಂಸ್ಕರಿಸಿ ಬಳಿಕ ಡಿಜಿಟಲ್​ ಫ್ಯಾಬ್ರಿಕೇಷನ್​ ಎಂಬ ತಂತ್ರಾಂಶ ಬಳಕೆ ಮಾಡಿಕೊಂಡು ಲೇಸರ್​ ಸಹಾಯದಿಂದ ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ಇಂತಹದ್ದೊಂದು ಐಷಾರಾಮಿ ಬ್ಯಾಗ್​ ತಯಾರಿಸಿದ್ದಾರೆ

ಆರೆಂಜ್ ಪೀಲ್ಸ್ ಲೆದರ್ ಬ್ಯಾಗ್

ಆರೆಂಜ್ ಪೀಲ್ಸ್ ಲೆದರ್ ಬ್ಯಾಗ್

  • Share this:
ಫ್ಯಾಷನ್​ ಜಗತ್ತಿನಲ್ಲಿ (Fashion World) ಏನೆಲ್ಲ ಹೊಸ ಆವಿಷ್ಕಾರಗಳು (Inventions) ಬರುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಟ್ರೆಂಡ್​ಗೆ(Trend) ತಕ್ಕಂತೆ ವಿಧವಿಧ ಸ್ಟೈಲ್ಸ್(Style) ಬರುತ್ತಲೇ ಇರುತ್ತವೆ. ಬಟ್ಟೆ(Dress), ಬ್ಯಾಗ್(Bag), ಚಪ್ಪಲ್‌ಗಳು(Sandal) ಕಡಿಮೆ ಬೆಲೆಯಿಂದ ಹಿಡಿದು ಚಿನ್ನದ ಬೆಲೆಯವರೆಗೂ ಫ್ಯಾಷನ್(Fashion) ವಸ್ತುಗಳು ಸಿಗುತ್ತವೆ. ಅದರಲ್ಲೂ ಹ್ಯಾಂಡ್​ ಬ್ಯಾಗ್​ಗಳು(Hand Bag) ಎಂದಿಗೂ ಫ್ಯಾಷನ್​ ಟ್ರೆಂಡ್​ನಿಂದ ಹೊರಗೆ ಹೋಗುವುದೇ ಇಲ್ಲ. ಹ್ಯಾಂಡ್​ ಬ್ಯಾಗ್​ಗಳಲ್ಲಿ ಅನೇಕ ಮಾದರಿಗಳು ಇವೆ. ಈ ಸಾಲಿಗೆ ಇನ್ನೊಂದು ಹೊಸ ಬ್ಯಾಗ್ ಸೇರ್ಪಡೆಯಾಗಿದೆ. ನಾವೂ, ನೀವೆಲ್ಲಾ ಕಿತ್ತಳೆ ಹಣ್ಣನ್ನು(Orange) ತಿನ್ನುತ್ತೇವೆ. ಆದ್ರೆ ಇದ್ರಿಂದ ಬ್ಯಾಗ್ ಮಾಡುವ ಯೋಚನೆ ಕೂಡ ಬಂದಿರುವುದಿಲ್ಲ. ಆದ್ರೆ ಆಹಾರ​ ಕಲಾವಿದರೊಬ್ಬರು ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ಹ್ಯಾಂಡ್​ ಬ್ಯಾಗ್​ವೊಂದನ್ನು ತಯಾರಿಸಿದ್ದು, ಇದನ್ನು ನೋಡಿದ ಫ್ಯಾಷನ್​ ಪ್ರಿಯರು ವ್ಹಾ ವ್ಹಾ ಎಂದಿದ್ದಾರೆ.

ಕಿತ್ತಳೆ ಸಿಪ್ಪೆಯಿಂದ ರೆಡಿ ಆಯ್ತು ಹ್ಯಾಂಡ್ ಬ್ಯಾಗ್

ಖ್ಯಾತ ಆಹಾರ ಕಲಾವಿದ ಹಾಗೂ ಮಾಲಿಕ್ಯೂಲಾರ್​ ಗ್ಯಾಸ್ಟ್ರೊನಿಮಿಸ್ಟ್​ ಓಮರ್​ ಸರ್ತವಿ ಕಿತ್ತಳೆ ಹಣ್ಣಿನ ಸಿಪ್ಪೆಗಳಿಂದ ಹ್ಯಾಂಡ್ ಬ್ಯಾಗ್ ತಯಾರಿಸಿದ್ದಾರೆ. ಕಿತ್ತಳೆ ಸಿಪ್ಪೆಯನ್ನು ತೆಗೆದುಕೊಂಡು ಅದನ್ನು ವಿವಿಧ ಹಂತಗಳಲ್ಲಿ ಎರಡು ವಾರ ಸಂಸ್ಕರಿಸಬೇಕು.

ಬಳಿಕ ಡಿಜಿಟಲ್​ ಫ್ಯಾಬ್ರಿಕೇಷನ್​ ಎಂಬ ತಂತ್ರಾಂಶ ಬಳಕೆ ಮಾಡಿಕೊಂಡು ಲೇಸರ್​ ಸಹಾಯದಿಂದ ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ಇಂತಹದ್ದೊಂದು ಐಷಾರಾಮಿ ಬ್ಯಾಗ್​ ತಯಾರಿಸಿದ್ದಾರೆ. ನಂತರ ಬ್ಯಾಗ್ ಮೇಲೆ ಗೋಲ್ಡನ್ ಬಣ್ಣದ ಡಿಸೈನ್ ಕೂಡ ಓಮರ್​ ಸರ್ತವಿ ರೆಡಿ ಮಾಡಿದ್ದಾರೆ. ಬಹ್ರೇನಿ ವಿನ್ಯಾಸಕ ನೂಫ್ ಅಲ್ ಶೇಕರ್ ಅವರ ಸಹಯೋಗದೊಂದಿಗೆ ಹ್ಯಾಂಡ್ ಬ್ಯಾಗ್‌ ತಯಾರಿಸಿದ್ದಾರೆ.

ಇದನ್ನೂ ಓದಿ: ಕೂದಲು ದಟ್ಟವಾಗಿ ಬೆಳೆಯಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ

ಹ್ಯಾಂಡ್ ಬ್ಯಾಗ್​ ತಯಾರಿಸುವ ಹಂತಗಳನ್ನು ವಿಡಿಯೋ ಮೂಲಕ ತೋರಿಸಿದ್ದು ಇದನ್ನು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ಮಾತನಾಡಿದ ಓಮರ್​, ನಾನು ಹಣ್ಣುಗಳು ಹಾಗೂ ತರಕಾರಿ ಸಿಪ್ಪೆಗಳನ್ನು ಹೊಸ ರೀತಿಯಲ್ಲಿ ಬಳಕೆ ಮಾಡುವ ಉದ್ದೇಶ ಹೊಂದಿದ್ದೇನೆ. ಪರಿಸರ ಸ್ನೇಹಿ ವಸ್ತುಗಳನ್ನು ಐಷಾರಾಮಿ ವಸ್ತುಗಳನ್ನಾಗಿ ಪರಿವರ್ತನೆ ಮಾಡುವುದು. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡಿ ಪರಿಸರ ಸ್ನೇಹಿ ತಂತ್ರಜ್ಞಾನಗಳ ಮೂಲಕ ಫ್ಯಾಷನ್​ ವಸ್ತುಗಳು, ಉತ್ತಮ ಗುಣಮಟ್ಟದ ಬ್ಯಾಗ್​ಗಳು ಹಾಗೂ ವಸ್ತುಗಳನ್ನು ತಯಾರಿಸಿದ್ದೇನೆ ಎಂದು ಹೇಳಿದ್ದಾರೆ.




ಅಂದಹಾಗೆ ಓಮರ್ ಹಣ್ಣು ಅಥವಾ ತರಕಾರಿ ಸಿಪ್ಪೆಗಳನ್ನು ಬಳಕೆ ಮಾಡಿ ಫ್ಯಾಶನ್​ ವಸ್ತುಗಳನ್ನು ತಯಾರಿಸಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಅವರು ಬದನೆ ಕಾಯಿ ಸಿಪ್ಪೆಗಳನ್ನು ಬಳಕೆ ಮಾಡಿ ಮಾಸ್ಕ್​ ತಯಾರಿಸಿದ್ದರು.

ಫ್ಯಾಷನ್​ ಲೋಕದ ಟ್ರೆಂಡ್​ ಪಾಲಿಸುವ ದೃಷ್ಟಿಯಿಂದ ಪರಿಸರಕ್ಕೆ ಹಾನಿ ಮಾಡುವ ವಸ್ತುಗಳನ್ನು ತಯಾರಿಸುವ ಬದಲು ಸಾವಯವ ವಸ್ತುಗಳಿಂದ ಫ್ಯಾಷನ್​​ ವಸ್ತುಗಳನ್ನು ತಯಾರಿಸಿದರೆ ಪ್ರಕೃತಿಗೂ ಯಾವುದೇ ಹಾನಿ ಇಲ್ಲ ಎಂಬುದು ಓಮರ್​ ಅಭಿಪ್ರಾಯವಾಗಿದೆ.

ಇದನ್ನೂ ಓದಿ: ಈ ಸಂಕ್ರಾಂತಿ ಹಬ್ಬಕ್ಕೆ ಹೊಸಾ ಫ್ಯಾಷನ್ ಸಾಂಪ್ರದಾಯಿಕ ಉಡುಗೆಗಳು ಬಂದಿವೆ, ನೋಡಿ

ಆರೆಂಜ್ ಪೀಲ್ಸ್ ಲೆದರ್ ಬ್ಯಾಗ್ ಗೆ ಫ್ಯಾಷನ್ ಪ್ರಿಯರು ಫಿದಾ

ಸುಮಾರು ಒಂದು ವರ್ಷದ ಪ್ರಯೋಗದ ನಂತರ “ಆರೆಂಜ್ ಪೀಲ್ಸ್ ಲೆದರ್ ಬ್ಯಾಗ್” ಸುಂದರವಾಗಿ ರೆಡಿ ಆಗಿದೆ ಎಂದು ನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಒಮರ್ ಬರೆದಿದ್ದಾರೆ.

ಬಂಗಾರ ಬಣ್ಣದ ಲೇಪನ ಹೊಂದಿದ ಆರೆಂಜ್ ಪೀಲ್ಸ್ ಲೆದರ್ ಬ್ಯಾಗ್ ಅನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದು ಓಮರ್​ ಆಲೋಚನೆಗೆ ಅಭಿನಂದನೆ ತಿಳಿಸಿದ್ದಾರೆ.

ನೆಟ್ಟಿಗರು ತುಂಬಾ ವಿಭಿನ್ನವಾದ ಬ್ರ್ಯಾಂಡ್‌ , ಸಿಟ್ರಸ್ ಬ್ರ್ಯಾಂಡ್‌ ಎಂದು ಕರಿಯಬಹುದು ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ. ಓಮರ್​ ಸರ್ತವಿ ಫ್ಯಾಷನ್ ಜಗತ್ತಿನ ಓರ್ವ ಉತ್ತಮ ವಿನ್ಯಾಸಕಿಯಾಗಿದ್ದರೆ.
Published by:ranjumbkgowda1 ranjumbkgowda1
First published: