Amla Pickle: ಅಮ್ಮ ಮಾಡೋ ದೇಸಿ ಸ್ಟೈಲ್​ ನೆಲ್ಲಿಕಾಯಿ ಉಪ್ಪಿನಕಾಯಿ! ಇಲ್ಲಿದೆ ರೆಸಿಪಿ

ರುಚಿಕರವಾದ ನೆಲ್ಲಿಕಾಯಿ ಉಪ್ಪಿನಕಾಯಿ

ರುಚಿಕರವಾದ ನೆಲ್ಲಿಕಾಯಿ ಉಪ್ಪಿನಕಾಯಿ

ಕರಾವಳಿ ಶೈಲಿಯಲ್ಲಿ ಅಮ್ಮ ಮಾಡುವ ಸಿಂಪಲ್ಲಾಗಿರುವ ನೆಲ್ಲಿಕಾಯಿ ಉಪ್ಪಿನಕಾಯಿ ಮಾಡಬೇಕೇ? ಐದೇ ವಸ್ತುಗಳನ್ನು ಬಳಸಿ ತಯಾರಿಸಬಹುದಾಗ ರುಚಿಕರವಾದ ಉಪ್ಪಿನಕಾಯಿ ರೆಸಿಪಿ ಇಲ್ಲಿದೆ.

  • News18 Kannada
  • 5-MIN READ
  • Last Updated :
  • Bangalore, India
  • Share this:

ನೆಲ್ಲಿಕಾಯಿ (Amla) ಹಲವು ಆರೋಗ್ಯ ಗುಣಗಳನ್ನು (Health Benefits) ಹೊಂದಿದ್ದು ಇದರಿಂದ ಹಲವಾರು ಬಗೆಯ ಖಾದ್ಯಗಳನ್ನು ತಯಾರಿಸುತ್ತಾರೆ. ಇದರಲ್ಲಿ ನೆಲ್ಲಿಕಾಯಿ ಉಪ್ಪಿನಕಾಯಿಯೂ (Pickle) ಫೇಮಸ್. ಸೀಸನಲ್ ಪಿಕಲ್ ಆಗಿ ನೆಲ್ಲಿಕಾಯಿ ಉಪ್ಪಿನಕಾಯಿಯನ್ನು ತಯಾರಿಸಿ ಬಳಸಬಹುದು. ಇದನ್ನು ಬೇರೆ ಬೇರೆ ವಿಧಾನದಲ್ಲಿ ತಯಾರಿಸಬಹುದು. ನಿಮಗೆ ಕರಾವಳಿ ಶೈಲಿಯಲ್ಲಿ (Coastal style)  ಅಮ್ಮ ಮಾಡುವ ಸಿಂಪಲ್ಲಾಗಿರುವ ನೆಲ್ಲಿಕಾಯಿ ಉಪ್ಪಿನಕಾಯಿ ಮಾಡಬೇಕೆಂದಿದ್ದರೆ ರೆಸಿಪಿ ಇಲ್ಲಿದೆ.


ಅರ್ಧ ಕೆಜಿ ನೆಲ್ಲಿಕಾಯಿ ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆಯಿರಿ. ನಂತರ ಸ್ವಲ್ಪವೇ ನೀರಿನಲ್ಲಿ ನೆಲ್ಲಿಕಾಯಿಯನ್ನು ಹದವಾದ ಉರಿಯಲ್ಲಿ 10 ನಿಮಿಷ ಬೇಯಿಸಿ. ನೆಲ್ಲಿಕಾಯಿ ಬೆಂದು ಅದರ ಮೇಲೆ ಕ್ರ್ಯಾಕ್ ಕಾಣಿಸಿದಾಗ ಸ್ಟವ್ ಆಫ್ ಮಾಡಿ ನೀರಿನಿಂದ ನೆಲ್ಲಿಕಾಯಿ ತೆಗೆದು ಆರಲು ಬಿಡಿ.


ನೀರಿನ ಅಂಶ ಚೆನ್ನಾಗಿ ಆರಲಿ. ನಂತರ ಅದನ್ನು ಎಸಳುಗಳಾಗಿ ಬಿಡಿಸಿಕೊಳ್ಳಿ. ದೊಡ್ಡ ನೆಲ್ಲಿಕಾಯಿಯಾಗಿದ್ದರೆ ಅದನ್ನು ಎರಡು ಹೋಳು ಮಾಡಬಹುದು. ಇಲ್ಲವಾದರೆ ಎಸಳುಗಳಾಗಿಯೇ ಬಳಸಬಹುದು. ನಂತರ ಭರಣಿಯಲ್ಲಿ ನೆಲ್ಲಿಕಾಯಿ ಹಾಕಿ, ಉಪ್ಪು ಹಾಕಿ ಸ್ಟೋರ್ ಮಾಡಿ.


ಸರಿಯಾಗಿ ಒಂದು ದಿನ ಅದನ್ನು ಹಾಗೆಯೇ ಬಿಡಿ. ನೆಲ್ಲಿಕಾಯಿ ಚೆನ್ನಾಗಿ ಉಪ್ಪು ಹೀರಿಕೊಳ್ಳಲಿ. ಈಗ ನೆಲ್ಲಿಕಾಯಿ ಉಪ್ಪಿನಕಾಯಿಗೆ ರುಚಿಕರವಾದ ಮಸಾಲೆ ರೆಡಿ ಮಾಡಿ.


ಬೇಕಾದ ವಸ್ತುಗಳು:


ಸಾಸಿವೆ
ಗುಂಟೂರು ಮೆಣಸು
ಅರಶಿನ
ಉಪ್ಪು
ಮೆಂತ್ಯೆ ಕಾಳು


ನೀವು ತಕ್ಷಣದ ಬಳಕೆಗೆ ಉಪ್ಪಿನಕಾಯಿ ಮಾಡುವುದಾಗಿದ್ದರೆ ಗುಂಟೂರು ಮೆಣಸನ್ನು ಹದವಾದ ಬಿಸಿ ನೀರಿನಲ್ಲಿ ಚೆನ್ನಾಗಿ ತೊಳೆದು ನೀರನ್ನು ಆರಲು ಬಿಡಿ. (ಹೆಚ್ಚು ಸಮಯ ನೀರಿನಲ್ಲಿ ಬಿಡಬಾರದು, ತಕ್ಷಣ ತೊಳೆದು ತೆಗೆಯಿರಿ). ನೀವು ಈ ಉಪ್ಪಿನಕಾಯಿ ಹೆಚ್ಚು ಕಾಲ ಸ್ಟೋರ್ ಮಾಡಲು ಬಯಸಿದರೆ ಮೆಣಸನ್ನು ತಣ್ಣೀರಿನಲ್ಲಿ ತೊಳೆದು ಚೆನ್ನಾಗಿ ಬಿಸಿಲಿಗೆ ಒಣಗಿಸಬೇಕಾಗುತ್ತದೆ.


Amla Pickle


ಅರ್ಧ ಕೆಜಿ ದೊಡ್ಡ ನೆಲ್ಲಿಕಾಯಿಗೆ ಬೇಕಾದ ಮಸಾಲೆ ರೆಸಿಪಿ ಇಲ್ಲಿದೆ:


ಎರಡು ಹಿಡಿ ಗುಂಟೂರು ಮೆಣಸಿನ ಕಾಯಿ ಮಿಕ್ಸಿ ಜಾರ್​ಗೆ ಹಾಕಿ. ನಂತರ ಒಂದೂವರೆ ಟೇಬಲ್ ಸ್ಪೂನ್ ಅರಶಿನ ಹಾಕಿ. ಒಂದೂವರೆ ಟೇಬಲ್ ಸ್ಪೂನ್ ಸಾಸಿವೆ ಹಾಕಿ. ಅರ್ಧ ಟೇಬಲ್ ಸ್ಪೂನ್ ಮೆಂತ್ಯೆ ಕಾಳು ಬಳಸಿ. (ಮೆಂತ್ಯೆ ಹಾಗೂ ಸಾಸಿವೆಯನ್ನು ಸಪರೇಟ್ ಆಗಿ ಮಧ್ಯಮ ಉರಿಯಲ್ಲಿ ಸ್ವಲ್ಪವೇ ಸ್ವಲ್ಪ ಹುರಿದುಕೊಳ್ಳಿ). 2 ಟೇಬಲ್ ಸ್ಪೂನ್ ಉಪ್ಪು ಸೇರಿಸಿ.




ಉಗುರು ಬೆಚ್ಚಗಿನ ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಮಸಾಲೆ ನುಣ್ಣಗೆ ರುಬ್ಬಿದಾಗ ಮಸಾಲೆಯ ಪರಿಮಳ ಹಾಗೂ ಬಣ್ಣವನ್ನು ಆಧರಿಸಿ ಅರಶಿನ ಅಥವಾ ಸಾಸಿವೆಯನ್ನು ಸೇರಿಸಿಕೊಳ್ಳಬಹುದು.


ಉಪ್ಪು ಹಾಕಿಟ್ಟ ನೆಲ್ಲಿಕಾಯಿ ಹೋಳುಗಳು ಮತ್ತು ರೆಡಿಯಾಗಿರುವ ಉಪ್ಪಿನಕಾಯಿ


ಇದನ್ನೂ ಓದಿ: Chicken Salna Recipe: ಸೂಪರ್ ಸಂಡೇಗೆ ಚಿಕನ್ ಸಲ್ನಾ ರೆಸಿಪಿ ಮಾಡಿ ಸವಿಯಿರಿ


ಈಗ ಉಪ್ಪಿನಲ್ಲಿಟ್ಟ ನೆಲ್ಲಿಕಾಯಿಗೆ ಈ ಮಸಾಲೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಚೆನ್ನಾಗಿ ಮಸಾಲೆ ನೆಲ್ಲಿಕಾಯಿಗೆ ಹಿಡಿದುಕೊಳ್ಳಲಿ. ನಂತರ ಸಂಪೂರ್ಣವಾಗಿ ಒಣಗಿರುವ ಜಾರ್​​ನಲ್ಲಿ ಈ ಒಪ್ಪಿನ ಕಾಯಿಯನ್ನು ಹಾಕಿ ಸ್ಟೋರ್ ಮಾಡಿ.


ಉಪ್ಪಿನಕಾಯಿ ಸವಿಯಲು ರೆಡಿ


1 ದಿನ ಬಿಟ್ಟು ಒಣಗಿರುವ ಸೌಟು ಬಳಸಿ ಇದನ್ನು ಮತ್ತೊಮ್ಮೆ ಮಿಕ್ಸ್ ಮಾಡಿ. ಈ ಸಂದರ್ಭದಲ್ಲಿ ಉಪ್ಪು ಕಮ್ಮಿ ಆಗಿದ್ದರೆ ಉಪ್ಪು ಸೇರಿಸಬಹುದು. ಇನ್ನೊಂದು ದಿನ ಸ್ಟೋರ್ ಮಾಡಿಕೊಳ್ಳಿ. ನೆಲ್ಲಿಕಾಯಿ ಮಸಾಲೆಯನ್ನು ಚೆನ್ನಾಗಿ ಹೀರಿಕೊಂಡಿರುತ್ತದೆ. ಈಗ ನೆಲ್ಲಿಕಾಯಿಯ ರುಚಿಕರವಾದ ದೇಸಿ ಶೈಲಿಯ ಉಪ್ಪಿನಕಾಯಿ ಸವಿಯಲು ರೆಡಿ.

First published: