ನಿಮಗೆ ನೆನಪಿದೆಯೇ ನಾವೆಲ್ಲರೂ ಚಿಕ್ಕವರಿದ್ದಾಗ ನಮಗೆ ಹಾಲು, ಮೊಸರು, ತುಪ್ಪ, ಬೆಣ್ಣೆ, ಪನ್ನೀರ್ನಂತಹ ಡೈರಿ ಉತ್ಪನ್ನಗಳನ್ನು ತಿನ್ನುವಂತೆ ನಮ್ಮ ಮನೆಯ ಹಿರಿಯರು ನಮಗೆ ತಿದ್ದಿ ಬುದ್ದಿ ಹೇಳುತ್ತಿದ್ದರು. ಆದರೆ ನಾವು ಬೆಳೆದು ದೊಡ್ಡವರಾದಂತೆ ತುಪ್ಪ ತಿನ್ನುವುದರಿಂದ ಫ್ಯಾಟ್ ಅಂಶ ದೇಹಕ್ಕೆ ಸೇರುತ್ತದೆ ಎನ್ನುವ ಆತಂಕ ಎಲ್ಲೆಡೆ ಹರಿದಾಡಿತು. ಇನ್ನೂ ದೇಸಿ ತುಪ್ಪ ಸೇವನೆ ಮಾಡಿ ಅಂದರೆ ಅದು ಫ್ಯಾಟ್ ಅಂಶದಿಂದ ಕೂಡಿದೆ. ಅಲ್ಲದೇ ಹೃದಯಕ್ಕೆ ತೊಂದರೆ, ಅಪಧಮನಿಗಳನ್ನು ಬ್ಲಾಕ್ ಮಾಡುತ್ತದೆ ಎನ್ನುವ ಭಯ ಸೃಷ್ಟಿಯಾಗಿದೆ.
ದೇಸಿ ತುಪ್ಪ ಸಿದ್ಧವಾಗುವುದು ಹೇಗೆ?
ಹಾಲಿನಲ್ಲಿರುವ ಫ್ಯಾಟ್ ಅಂಶಗಳಾದ ಮಲಾಯ್, ಕೆನೆ, ಬೆಣ್ಣೆಯನ್ನು ಹಾಲಿನಿಂದ ಬೇರ್ಪಡಿಸಿ 100 ಡಿಗ್ರಿ ಸೆಲ್ಷಿಯಸ್ನಲ್ಲಿ ಬಿಸಿ ಮಾಡಿ, ಆವಿ ಪ್ರಕ್ರಿಯೆಯಿಂದ ನೀರಿನಂಶವನ್ನು ಹೊರತೆಗೆಯಲಾಗುತ್ತದೆ. ನೀರನ್ನು ಬೇರ್ಪಡಿಸಿ ತೆಗೆದ ಹಾಲಿನ ಫ್ಯಾಟನ್ನು ಫಿಲ್ಟರ್ ಮಾಡಿ ಹಾಲಿನಂಶವನ್ನು ಸಂಪೂರ್ಣವಾಗಿ ಹೊರಗೆ ತೆಗೆಯಲಾಗುತ್ತದೆ.
ಆಯುರ್ವೇದ ವೈದ್ಯ ಮತ್ತು ನಮ್ಮ ಭಾರತದ ಅಡುಗೆ ಮನೆಯಲ್ಲಿ ಹಲವಾರು ವರ್ಷಗಳಿಂದ ಈ ಪದ್ಧತಿ ಬೆಳೆದು ಬಂದಿದೆ. ದೇಸಿ ತುಪ್ಪವನ್ನು ಘೃತ ಎಂದು ಕರೆಯುತ್ತಾರೆ. ಸಂಸ್ಕೃತದಲ್ಲಿ ಘೃತ ಎಂದರೆ ತುಪ್ಪ ಎಂದು ಅರ್ಥ. ನಮ್ಮ ಧಾರ್ಮಿಕ ಕಾರ್ಯಗಳಲ್ಲಿ ಮತ್ತು ಹೋಮಗಳಲ್ಲಿ ತುಪ್ಪದ ಬಳಕೆ ಸಾಮಾನ್ಯವಾಗಿದೆ.
ಆಯುರ್ವೇದ ತುಪ್ಪದ ಬಗ್ಗೆ ಏನು ಹೇಳುತ್ತದೆ?
ಯುಎಸ್ ಲೈಬ್ರರಿ ಆಫ್ ಮೆಡಿಸಿನ್ ಲೇಖಕರಾದ ಹರಿ ಶರ್ಮಾ, ಕ್ಸಿಯೊಯಿಂಗ್ ಜಾಂಗ್ ಮತ್ತು ಚಂದ್ರಧರ್ ದ್ವಿವೇದಿ ಅವರು ಪ್ರಕಟಿಸಿದ ಪೀರ್-ರಿವ್ಯೂಡ್ ಪೇಪರ್‌ನಲ್ಲಿರುವ ಕೆಲವು ಅಂಶಗಳು ಗಮನ ಸೆಳೆಯುತ್ತವೆ. ದಕ್ಷಿಣ ಡಕೋಟಾ ರಾಜ್ಯ ವಿಶ್ವವಿದ್ಯಾಲಯದ ಔಷಧಶಾಸ್ತ್ರದ ಪ್ರಖ್ಯಾತ ಪ್ರಾಧ್ಯಾಪಕರು ಚಂದ್ರಧರ್ ದ್ವಿವೇದಿ.
ಸೀರಮ್ ಲಿಪಿಡ್ ಮಟ್ಟಗಳು ಮತ್ತು ಮೈಕ್ರೋಸೋಮಲ್ ಲಿಪಿಡ್ ಪೆರಾಕ್ಸಿಡೇಶನ್ ಮೇಲೆ ತುಪ್ಪದ ಪರಿಣಾಮಗಳನ್ನು ತಜ್ಞರು ಗಮನಿಸಿದಾಗ ಹಲವಾರು ಅಂಶಗಳು ಬೆಳಕಿಗೆ ಬಂದಿವೆ. ಕಳೆದ ಹಲವಾರು ದಶಕಗಳಲ್ಲಿ ಏಷ್ಯಾದ ಭಾರತೀಯರಲ್ಲಿ ಸಿಎಡಿ ಅಂದರೆ ಪರಿಧಮನಿಯ ಕಾಯಿಲೆಗೆ ತುತ್ತಾಗಿರುವುದು ಕಂಡು ಬಂದಿದ್ದು, ಇದಕ್ಕೆ ತುಪ್ಪದ ಸೇವನೆಯೇ ಕಾರಣವೆಂದು ಉಲ್ಲೇಖಿಸಲಾಗಿದೆ.
ತುಪ್ಪವು ಸ್ಯಾಚುರೇಟೆಡ್ ಫ್ಯಾಟಿ ಆಸಿಡ್ಸ್, ಕೊಲೆಸ್ಟ್ರಾಲ್ ಹಾಗೂ ಕಾಯಿಸಿದ ತುಪ್ಪದಲ್ಲಿನ ಕೊಲೆಸ್ಟ್ರಾಲ್ ಆಕ್ಸಿಡೀಕರಣದಿಂದ ಆರೋಗ್ಯಕರ ಆಹಾರಗಳ ಪಟ್ಟಿಯಿಂದ ಕುಸಿದಿದೆ.
ಈ ಅಧ್ಯಯನವನ್ನು ಅಮೆರಿಕದ ನ್ಯೂ ಬೆಥೆಸ್ಡಾ, ಲ್ಯಾಂಕಾಸ್ಟರ್ ಫೌಂಡೇಶನ್ ಒದಗಿಸಿದ ನಿಧಿಯಿಂದ ಮಾಡಲಾಗಿದೆ.
ಈ ಪರೀಕ್ಷೆಗಳು ಹೇಗೆ ನಡೆದವು?
ಈ ನಿಟ್ಟಿನಲ್ಲಿ ಆರೋಗ್ಯವಂತ ವ್ಯಕ್ತಿಗಳ ಆಹಾರದಲ್ಲಿ ಸೇರಿಸಲಾದ ತುಪ್ಪ ಪ್ರಯೋಜನಕಾರಿ ಪರಿಣಾಮಗಳನ್ನು ಬೀರುತ್ತದೆ. ಹಾಗೆಂದು ಅಡುಗೆ ಎಣ್ಣೆಯ ಬದಲಿಗೆ ತುಪ್ಪವನ್ನು ಬಳಕೆ ಮಾಡಬೇಕು ಎಂದಲ್ಲ.
ಮನುಷ್ಯನ ಮೇಲೆ ಈ ಸಂಶೋಧನೆಯ ಸಾರಂಶ
ಪ್ರಾಚೀನ ಆಯುರ್ವೇದ ಗ್ರಂಥಗಳಲ್ಲಿ ಆರೋಗ್ಯದ ಮೇಲೆ ತುಪ್ಪದ ಪ್ರಯೋಜನಕಾರಿ ಪರಿಣಾಮಗಳನ್ನು ತಿಳಿಸಿದೆ. ಆಯುರ್ವೇದ ಔಷಧ ವ್ಯವಸ್ಥೆಯಲ್ಲಿ ಸಾವಿರಾರು ವರ್ಷಗಳಿಂದ ತುಪ್ಪವನ್ನು ಚಿಕಿತ್ಸೆಯ ಒಂದು ಭಾಗವಾಗಿ ಬಳಸಲಾಗುತ್ತಿದೆ . ಇದಕ್ಕೆ ಪೂರಕವಾಗಿ ಈ ಸಕಾರಾತ್ಮಕ ಸಂಶೋಧನಾ ಆವಿಷ್ಕಾರಗಳು ಬೆಂಬಲಿಸುತ್ತವೆ ಎಂದು ಸಂಶೋಧಕರು ತೀರ್ಮಾನಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ