Dandruff : ಯಾವುದೇ ಶ್ಯಾಂಪು, ಟ್ರೀಟ್​ಮೆಂಟ್​ ಮಾಡಿದ್ರೂ ತಲೆಹೊಟ್ಟು ಸಮಸ್ಯೆಯೇ; ಹಾಗಾದ್ರೆ ತಜ್ಞರಿಂದಲೇ ಇದೆ ಉತ್ತರ

ತಲೆಹೊಟ್ಟಿಗೆ ವಾತಾವರಣದ ಬದಲಾವಣೆ, ವಿಪರೀತ ಬೆವರುವುದು ಮತ್ತು ದೇಹದಲ್ಲಿನ ಹಾರ್ಮೋನ್ ಅಸಮತೋಲನ ಪ್ರಮುಖ ಕಾರಣ

ತಲೆಹೊಟ್ಟು

ತಲೆಹೊಟ್ಟು

  • Share this:

ಅಂದವಾದ ಕೇಶರಾಶಿಯ ನಡುವೆ ತಲೆಹೊಟ್ಟು (Dandruff problems) ಕೂದಲಿನ ಸೌಂದರ್ಯವನ್ನು ಹಾಳು ಮಾಡುವುದಲ್ಲದೇ ಕಿರಿಕಿರಿಯನ್ನು ಉಂಟು ಮಾಡುತ್ತದೆ. ತಲೆಕೆರೆತ ಅಥವಾ ಕೂದಲು ಶುಷ್ಕವಾಗುವುದು ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಡ್ಯಾಂಡ್ರಫ್​​ ಮೂಲ ಕಾರಣ. ಇದನ್ನು ಸರಿಯಾದ ಸಮಯಕ್ಕೆ ನಿವಾರಿಸಿಕೊಳ್ಳದಿದ್ರೆ ದೀರ್ಘಾವಧಿಯವರೆಗೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಹಾಗಾದ್ರೆ ತಲೆ ಹೊಟ್ಟು ನಿವಾರಣೆಗೆ ಯಾವೆಲ್ಲಾ ಚಿಕಿತ್ಸೆಗಳಿವೆ ಎನ್ನುವುದನ್ನು ಚರ್ಮರೋಗ ತಜ್ಙರಾದ ಡಾ. ಜೈಶ್ರೀ ಶರದ್ ಅವರು ಒಂದಷ್ಟು ಒಳ ನೋಟವನ್ನು ತೆರೆದಿಟ್ಟಿದ್ದಾರೆ. ತಲೆಹೊಟ್ಟಿಗೆ ಕಾರಣಗಳು ಮತ್ತು ಇದಕ್ಕಿರುವ ಚಿಕಿತ್ಸೆಗಳ ಬಗ್ಗೆ ಇನ್​ಸ್ಟಾಗ್ರಾಂ ಪೋಸ್ಟ್​​ನಲ್ಲಿ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ.


ತಲೆಹೊಟ್ಟಿಗೆ ಕಾರಣ ಮತ್ತು ಪರಿಹಾರಗಳು


ಡಾ. ಜೈಶ್ರೀಯವರ ಪ್ರಕಾರ ತಲೆಹೊಟ್ಟಿಗೆ ವಾತಾವರಣದ ಬದಲಾವಣೆ, ವಿಪರೀತ ಬೆವರುವುದು ಮತ್ತು ದೇಹದಲ್ಲಿನ ಹಾರ್ಮೋನ್ ಅಸಮತೋಲನ ಪ್ರಮುಖ ಕಾರಣ. ಇಷ್ಟೇ ಅಲ್ಲದೇ ಮಲಸೇಝಿಯಾ ಫರ್​ ಫರ್ ಎನ್ನುವ ಶಿಲೀಂದ್ರದ ಸೋಂಕು ಕೂಡ ತಲೆಹೊಟ್ಟನ್ನು ತರಬಹುದು ಎನ್ನುತ್ತಾರೆ. ಇನ್ನೂ ಕೆಲವೊಮ್ಮೆ ನೀವು ಕೂದಲಿನ ಬುಡದ ಸ್ವಚ್ಚತೆ ಬಗ್ಗೆ ಗಮನ ಹರಿಸದಿದ್ದರೇ ಆಗಲೂ ತಲೆಹೊಟ್ಟು ಸಮಸ್ಯೆ ತಲೆದೂರಬಹುದು.


ಊರಿಯೂತ ಸಮಸ್ಯೆ ಕೂಡ ಕಾರಣ

ಇದು ಸಾಮಾನ್ಯವಾದ ಕಾರಣಗಳಾದರೆ ವಿಡಿಯೋವಿನ ಶೀರ್ಷಿಕೆಯಲ್ಲಿ ಅಚ್ಚರಿ ಎನಿಸುವ ವೈದ್ಯಕೀಯ ಕಾರಣವನ್ನು ನೀಡಿದ್ದಾರೆ.ತಲೆಹೊಟ್ಟು ಹೆಚ್ಚಾಗಲು ಊರಿಯೂತ ಸಮಸ್ಯೆಯೂ ಕಾರಣವಂತೆ. ಸೆಬೋರ್​​ಹೆಕ್ ಟರ್ಮಟೈಟೀಸ್​​ ಅಥವಾ ಬುಡದಲ್ಲಿ ಉಂಟಾಗುವ ಸೋರಿಯಾಸ್​ ಸಮಸ್ಯೆ ತಲೆಹೊಟ್ಟಿಗೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸುತ್ತಾರೆ.


ಇದನ್ನು ಓದಿ: ಮನೆಯಲ್ಲೇ ಈ ತಿನಿಸುಗಳನ್ನು ಮಾಡಿಕೊಳ್ಳಿ, ಆರೋಗ್ಯ ಕಾಪಾಡಿಕೊಳ್ಳಿ

ಇನ್ನೂ ಡಾ. ಜೈಶ್ರೀಯವರು ತಲೆಹೊಟ್ಟು ನಿವಾರಣೆಯ ಚಿಕಿತ್ಸೆಯ ಬಗ್ಗೆಯೂ ಹಂಚಿಕೊಂಡಿದ್ದಾರೆ. ಡಾ. ಜೈಶ್ರೀಯವರ ಪ್ರಕಾರ ಶೇಕಡಾ 2 ರಷ್ಟು ಕೆಟೋಕೋನಜೋಲ್ ಅಥವಾ ಜಿಂಕ್​​ ಪಿರಿಥಿಯೋನ್ ಶಾಂಪುವಿನ ಬಳಕೆಯಿಂದ ತಲೆಹೊಟ್ಟನ್ನು ನಿಯಂತ್ರಣದಲ್ಲಿಡಬಹುದು.


ಇದನ್ನು ಓದಿ: ಬೇರೆ ನಟಿಯರಿಗೆ ಹೋಲಿಸಿ ಬಿಳಿ ಕೂದಲ ಬಗ್ಗೆ ಪ್ರಶ್ನಿಸಿದ ನೆಟ್ಟಿಗರಿಗೆ ಸಖತ್ತಾಗಿ ಉತ್ತರಿಸಿದ Samreera Reddy

ಪ್ರತಿಯೊಬ್ಬರೂ ತಮ್ಮ ತಲೆಕೂದಲಿನ ಬುಡವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕೆಂದು ಸಲಹೆ ನೀಡುತ್ತಾರೆ. ಕೇಶಕ್ಕೆ ಸಂಬಂಧಿಸಿದ ಸೌಂದರ್ಯೋತ್ಪನ್ನವನ್ನು ಹೆಚ್ಚು ಬಳಸದಂತೆ ಸಲಹೆ ನೀಡುತ್ತಾರೆ. ಇದೆಲ್ಲಾ ಪ್ರಯತ್ನಿಸಿದ ಬಳಿಕವೂ ತಲೆಹೊಟ್ಟು ಕಂಡು ಬಂದರೆ ಚರ್ಮರೋಗ ತಜ್ಞರನ್ನು ಭೇಟಿ ಮಾಡುವಂತೆ ಸಲಹೆ ನೀಡುತ್ತಾರೆ.


ಡಾ. ಜೈಶ್ರೀಯವರು ಈ ಹಿಂದಿನ ತಮ್ಮ ಪೋಸ್ಟ್​ನಲ್ಲಿ ಕೂದಲಿನ ಆರೈಕೆ ಬಗೆಗಿನ ಕೆಲವು ತಪ್ಪುಕಲ್ಪನೆಗಳ ಬಗ್ಗೆಯೂ ಮಾತನಾಡಿದ್ದರು.




  • ಎಣ್ಣೆ ತಲೆಗೆ ಕಂಡೀಷ್ನರ್​​ನಂತೆ ವರ್ತಿಸುತ್ತದೆ. ಆದರೆ ಕೂದಲಿನ ಬೆಳವಣಿಗೆಗೆ ಕಾರಣವಾಗುವುದಿಲ್ಲ ಎನ್ನುತ್ತಾರೆ.
    ಬಿಳಿಕೂದಲನ್ನು ಕೀಳುವುದರಿಂದ ಇನ್ನಷ್ಟು ನೆರೆಕೂದಲು ಬೆಳವಣಿಗೆಯಾಗುವುದಿಲ್ಲ. ಕೂದಲಿನ ಬುಡದಲ್ಲಿ ಪಿಗ್ಮೆಂಟ್​ ಕಳೆದುಕೊಂಡರೆ ಮಾತ್ರ ನೆರೆಕೂದಲು ಕಾಣಿಸುತ್ತದೆ.

  • ಡ್ರೈ ಶ್ಯಾಂಪೂ ಎಣ್ಣೆಯನ್ನು ಹೀರಿಕೊಳ್ಳಬಹುದು. ಆದರೆ ಕೂದಲಿನ ಬುಡವನ್ನು ಸ್ವಚ್ಚ ಮಾಡುವುದಿಲ್ಲ.
    ಡಾ. ಜೈಶ್ರೀಯವರು ಅನೇಕ ಬಾರಿ ತಮ್ಮ ಅನುಯಾಯಿಗಳಿಗೆ ಕೂದಲು ಮತ್ತು ತ್ವಚೆಗೆ ಸಂಬಂಧಿಸಿದ ಅನೇಕ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುತ್ತಿರುತ್ತಾರೆ. ಕಳೆದ ತಿಂಗಳು ಫಿಟ್ನೆಸ್ ತರಬೇತುದಾರರಾದ ಯಸ್ಮಿನ್ ಕರಾಚಿವಾಲ ಅವರೊಟ್ಟಿಗೆ ಮಾತನಾಡುತ್ತಾ ಹೊಳೆಯುವ ತ್ವಚೆಯ ರಹಸ್ಯದ ಬಗ್ಗೆ ಹಂಚಿಕೊಂಡಿದ್ದರು.

  • ನೀವು ಯಾವುದೇ ಉತ್ಪನ್ನವನ್ನು ಆಯ್ಕೆ ಮಾಡುವಾಗ ನಿಮ್ಮ ತ್ವಚೆಗೆ ಹೊಂದುತ್ತದೆಯೇ ಎಂದು ಪರಿಶೀಲಿಸಿ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ. ಇದೇ ಸೆಷನ್​ನಲ್ಲಿ ವಿವಿಧ ರೀತಿಯ ತ್ವಚೆಯ ಬಗ್ಗೆ ತಿಳಿಸಿಕೊಟ್ಟಿದ್ದಾರೆ.
    ಒಂದು ಮಾತು ನೆನಪಿಡಿ. ತ್ವಚೆ ಇಲ್ಲವೇ ಕೂದಲು ಯಾವುದರ ಆರೈಕೆ ಮಾಡಿದರೂ ಅದನ್ನು ದಿನಚರಿಯಂತೆ ಅನುಸರಿಸಬೇಕು. ಆಗ ಮಾತ್ರವೇ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಲು ಸಾಧ್ಯ ಎನ್ನುತ್ತಾರೆ. ಡಾ. ಜೈಶ್ರೀ.


First published: