ಈ ವಿಟಮಿನ್ ಗಳು ನಮ್ಮ ದೇಹದ ಆರೋಗ್ಯಕ್ಕೆ ತುಂಬಾನೇ ಅವಶ್ಯಕ ಅಂತ ಹೇಳಬಹುದು. ಹೌದು.. ಎಲ್ಲಾ ರೀತಿಯ ವಿಟಮಿನ್ ಗಳಿರುವ ಆಹಾರವು ನಮ್ಮ ದೇಹಕ್ಕೆ ತುಂಬಾನೇ ಅವಶ್ಯಕ. ಅದರಲ್ಲೂ ಈ ವಿಟಮಿನ್ ಬಿ12 (Vitamin B12) ನಮ್ಮ ದೇಹದ ಬೆಳವಣಿಗೆ ಮತ್ತು ಸಾಮಾನ್ಯ ಕಾರ್ಯನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಅಗತ್ಯ ಪೋಷಕಾಂಶವಾಗಿದೆ. ಫೋರ್ಟಿಸ್ ಅಸೋಸಿಯೇಟ್ ಎಸ್ ಎಲ್ ರಹೇಜಾ ಆಸ್ಪತ್ರೆಯ (SL Raheja Hospital Mahim) ಇಂಟರ್ನಲ್ ಮೆಡಿಸಿನ್ (Internal Medicine) ವಿಭಾಗದ ಹಿರಿಯ ಸಲಹೆಗಾರರಾದ ಡಾ. ಪರಿತೋಷ್ ಬಘೇಲ್ ಹೇಳುವಂತೆ, ಕೆಂಪು ರಕ್ತ ಕಣಗಳ ಉತ್ಪಾದನೆಗೆ ವಿಟಮಿನ್ ಬಿ12 ತುಂಬಾನೇ ಅಗತ್ಯವಿದೆ. "ಇದು ನಮ್ಮ ದೇಹದ ಜೀವಕೋಶಗಳಲ್ಲಿ ಡಿಎನ್ಎ ಸಂಶ್ಲೇಷಣೆಗೆ ಅಗತ್ಯವಿರುವ ಪ್ರಮುಖ ವಿಟಮಿನ್ ಆಗಿದೆ. ಅಲ್ಲದೆ, ನರವ್ಯೂಹದ ಬೆಳವಣಿಗೆ ಮತ್ತು ಮೈಲಿನೇಷನ್ (ಅಂದರೆ ನರ ಕೋಶಗಳಿಗೆ ಲೇಪನ) ಗೆ ಇದು ಅಗತ್ಯವಾಗಿದೆ" ಎಂದು ಅವರು ಹೇಳುತ್ತಾರೆ. ವಿಟಮಿನ್ ಬಿ12 ಕೊರತೆ ಸಾಮಾನ್ಯವಾಗಿದೆ ಮತ್ತು ಹಲವಾರು ಆರೋಗ್ಯ ಸಮಸ್ಯೆಗಳಿಗೆ (Health Problems) ಕಾರಣವಾಗಬಹುದು.
ಏನಿದು ವಿಟಮಿನ್ ಬಿ12?
ವಿಟಮಿನ್ ಬಿ12 ವಿಟಮಿನ್ ಬಿ-ಕಾಂಪ್ಲೆಕ್ಸ್ ವರ್ಗಕ್ಕೆ ಸೇರಿದ ನೀರಿನಲ್ಲಿ ಕರಗುವ ವಿಟಮಿನ್ ಆಗಿದೆ. "ಕೋಬಾಲ್ಟ್ ವಿಟಮಿನ್ ಬಿ12 ನಲ್ಲಿ ಕಂಡು ಬರುತ್ತದೆ ಮತ್ತು ಆದ್ದರಿಂದ ಇದನ್ನು 'ಕೋಬಾಲಮಿನ್' ಎಂದೂ ಸಹ ಕರೆಯಲಾಗುತ್ತದೆ. ಇದು ಎರಡು ಸಕ್ರಿಯ ರೂಪಗಳಲ್ಲಿ, ಮೀಥೈಲ್-ಕೋಬಾಲಮಿನ್ ಮತ್ತು 5-ಡಿಯೋಕ್ಸಿಯಾಡೆನೊಸಿಲ್-ಕೋಬಾಲಮಿನ್ ಇರುತ್ತವೆ. ಹೈಡ್ರಾಕ್ಸಿ-ಕೋಬಾಲಮಿನ್ ಮತ್ತು ಸೈನೊ-ಕೋಬಾಲಮಿನ್ ಎಂಬ ಎರಡು ನಿಷ್ಕ್ರಿಯ ರೂಪಗಳು, ಕಿಣ್ವ ಪ್ರತಿಕ್ರಿಯೆಗಳಿಂದ ದೇಹದಲ್ಲಿ ಸಕ್ರಿಯ ರೂಪಗಳಾಗಿ ಪರಿವರ್ತನೆಗೊಳ್ಳುತ್ತವೆ" ಎಂದು ಬಘೇಲ್ ಅವರು ಹೇಳುತ್ತಾರೆ.
ವಿಟಮಿನ್ ಬಿ12 ಕೊರತೆಗೆ ಕಾರಣಗಳು ಏನು?
ವಿಟಮಿನ್ ಬಿ12 ಕೊರತೆಯ ಲಕ್ಷಣಗಳು ಇವು..
ಮೆಗಾಲೊಬ್ಲಾಸ್ಟಿಕ್ ರಕ್ತಹೀನತೆಯು ಬಿ12 ಕೊರತೆಯ ವಿಶಿಷ್ಟ ಲಕ್ಷಣವಾಗಿದೆ, ಇದು ಕೆಲವೊಮ್ಮೆ ಪ್ಯಾನ್ಸಿಟೊಪೆನಿಯಾ ಅಂದರೆ ಕಡಿಮೆ ಬಿಳಿ ರಕ್ತ ಕಣಗಳು (ಡಬ್ಲ್ಯೂಬಿಸಿ) ಮತ್ತು ಪ್ಲೇಟ್ಲೆಟ್ ಗಳೊಂದಿಗೆ ಕಡಿಮೆ ಹಿಮೋಗ್ಲೋಬಿನ್ ಗೆ ಸಂಬಂಧಿಸಿದೆ ಎಂದು ವೈದ್ಯರು ಇದರ ಕೊರತೆಯ ರೋಗಲಕ್ಷಣಗಳನ್ನು ಹಂಚಿಕೊಂಡಿದ್ದಾರೆ ನೋಡಿ.
ನಾಲಿಗೆ ಹಾಳಾಗುವುದು
ಸುಲಭ ಕೊಬ್ಬು
ಎದೆಬಡಿತ
ತೂಕ ಕಡಿಮೆಯಾಗುವುದು
ಬೆರಳುಗಳ ಹೈಪರ್ ಪಿಗ್ಮೆಂಟೇಶನ್
ನರವೈಜ್ಞಾನಿಕ ರೋಗಲಕ್ಷಣಗಳು: ಕೈ ಮತ್ತು ಕಾಲುಗಳಲ್ಲಿ ಜುಮುಗುಡುವಿಕೆ ಅಥವಾ ಮರಗಟ್ಟುವಿಕೆ, ನಡೆಯುವಾಗ ಅಸಮತೋಲನ, ಬುದ್ಧಿಮಾಂದ್ಯತೆ, ಹೆಚ್ಚಿದ ಮರೆಗುಳಿತನವು ವಿಟಮಿನ್ ಬಿ12 ಕೊರತೆಯೊಂದಿಗೆ ಕಂಡು ಬರುತ್ತದೆ.
ಗರ್ಭಾವಸ್ಥೆಯಲ್ಲಿ ವಿಟಮಿನ್ ಬಿ12 ಕೊರತೆ: ಇದು ನವಜಾತ ಶಿಶುವಿನಲ್ಲಿ ನರನಾಳದ ದೋಷಗಳು, ಬೆಳವಣಿಗೆಯ ವಿಳಂಬಗಳು ಮತ್ತು ರಕ್ತಹೀನತೆಯಂತಹ ನರವೈಜ್ಞಾನಿಕ ಮತ್ತು ಹೆಮಟಾಲಾಜಿಕಲ್ ಸಮಸ್ಯೆಗಳಿಗೆ ಕಾರಣವಾಗಬಹುದು. ಇಷ್ಟೇ ಅಲ್ಲದೆ ವಿಟಮಿನ್ ಬಿ12 ಕೊರತೆಯು ಖಿನ್ನತೆಯ ರೋಗಲಕ್ಷಣಗಳೊಂದಿಗೂ ಸಂಬಂಧಿಸಿದೆ ಎಂದು ವೈದ್ಯರು ಹೇಳುತ್ತಾರೆ.
ವೈದ್ಯರ ಬಳಿ ಯಾವಾಗ ಹೋಗಬೇಕು?
"ನೀವು ಸಸ್ಯಾಹಾರಿಯಾಗಿದ್ದರೆ, ನಿಯಮಿತವಾಗಿ ಆಂಟಾಸಿಡ್ ಗಳನ್ನು ಸೇವಿಸುತ್ತಿದ್ದರೆ, ಹೀರಿಕೊಳ್ಳುವ ಅಸ್ವಸ್ಥತೆಗಳನ್ನು ಹೊಂದಿದ್ದರೆ ಅಥವಾ ಜಠರಗರುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ ಮತ್ತು ವಿಟಮಿನ್ ಬಿ12 ಕೊರತೆಯ ಲಕ್ಷಣಗಳನ್ನು ಹೊಂದಿದ್ದರೆ, ನೀವು ವೈದ್ಯರ ಬಳಿ ತಪಾಸಣೆಗೆ ಒಳಗಾಗಬೇಕು. ಬಿ12 ಮಟ್ಟವನ್ನು ಪರೀಕ್ಷಿಸಿಕೊಳ್ಳಲು ಸರಳವಾದ ರಕ್ತ ಪರೀಕ್ಷೆ ಮಾಡಿಸಿದರೆ ಸಾಕು" ಎಂದು ಹೇಳುತ್ತಾರೆ ವೈದ್ಯರು.
ಈ ಆಹಾರಗಳಲ್ಲಿ ವಿಟಮಿನ್ ಬಿ12 ಹೆಚ್ಚಾಗಿರುತ್ತದೆಯಂತೆ..
ಸಸ್ಯಾಹಾರಿ ಆಹಾರದಲ್ಲಿ ವಿಟಮಿನ್ ಬಿ12 ಅಷ್ಟಾಗಿ ಕಂಡು ಬರುವುದಿಲ್ಲ. ಪ್ರಾಣಿ ಮೂಲದ ಆಹಾರವು ವಿಟಮಿನ್ ಬಿ12 ನ ಮೂಲವಾಗಿದೆ. ಮೀನು, ಮಾಂಸ, ಕೋಳಿ ಉತ್ಪನ್ನಗಳು, ಹಾಲು, ಮೊಸರು, ಚೀಸ್ ನಂತಹ ಡೈರಿ ಉತ್ಪನ್ನಗಳು ಮತ್ತು ಧಾನ್ಯಗಳಂತಹ ಬಲವರ್ಧಿತ ಆಹಾರಗಳು ವಿಟಮಿನ್ ಬಿ 12 ನ ಸಮೃದ್ಧ ಮೂಲಗಳಾಗಿವೆ" ಎಂದು ವೈದ್ಯರು ಹೇಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ