• ಹೋಂ
  • »
  • ನ್ಯೂಸ್
  • »
  • ಲೈಫ್ ಸ್ಟೈಲ್
  • »
  • Health Tips: ಅತಿಯಾದ ಯೋಚನೆಯಿಂದ ಖಿನ್ನತೆ, ಒತ್ತಡದ ಸಮಸ್ಯೆ: ಮೆಟಾಕಾಗ್ನಿಟಿವ್ ಥೆರಪಿ ಇದಕ್ಕೆ ಉತ್ತಮ ಚಿಕಿತ್ಸೆ

Health Tips: ಅತಿಯಾದ ಯೋಚನೆಯಿಂದ ಖಿನ್ನತೆ, ಒತ್ತಡದ ಸಮಸ್ಯೆ: ಮೆಟಾಕಾಗ್ನಿಟಿವ್ ಥೆರಪಿ ಇದಕ್ಕೆ ಉತ್ತಮ ಚಿಕಿತ್ಸೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅತಿಯಾದ ಯೋಚನೆ ಆರೋಗ್ಯಕ್ಕೆ ಹಾನಿಕಾರಕ ಅಂದಮೇಲೆ ಅದರಿಂದ ಹೊರಗೆ ಬರುವುದು ಹೇಗೆ? ಅತಿಯಾದ ಯೋಚನೆಯಿಂದ ಉಂಟಾಗುವ ಖಿನ್ನತೆ, ಒತ್ತಡಗಳನ್ನು ನಿವಾರಿಸುವುದು ಹೇಗೆ? ಚಿಕಿತ್ಸೆ ಏನು ಎಂಬುದರ ಬಗ್ಗೆ ಇಲ್ಲಿ ತಿಳಿಯೋಣ.

  • News18
  • 3-MIN READ
  • Last Updated :
  • Share this:

    ಅತಿಯಾದ ಚಿಂತೆ (Over Thinking) ಮತ್ತು ಚಿಂತನೆ ಒಬ್ಬರನ್ನು ಚಿತೆಗೆ ತಳ್ಳಿದರೂ ಆಶ್ಚರ್ಯವಿಲ್ಲ ನೋಡಿ. ಆಗುವುದರ ಬಗ್ಗೆ, ಆಗಿದ್ದರ ಬಗ್ಗೆ, ಜೀವನದಲ್ಲಿ ನಡೆದ ಕೆಟ್ಟ ಘಟನೆಗಳ ಬಗ್ಗೆ ಮತ್ತೆ ಮತ್ತೆ ಅತಿಯಾಗಿ ಯೋಚಿಸುವುದು ಒಬ್ಬರ ಮಾನಸಿಕ ಆರೋಗ್ಯದ (Mental Health) ಮೇಲೆ ಕೆಟ್ಟ ಪರಿಣಾಮ ಬೀರುವುದರಲ್ಲಿ ಅನುಮಾನವಿಲ್ಲ. ಅತಿಯಾದ ಯೋಚನೆ , ಖಿನ್ನತೆ, ಒತ್ತಡ ಇವು ಕಾಯಿಲೆ ಅಲ್ಲದಿದ್ದರೂ ಇದು ನಮ್ಮ ಸಂಪೂರ್ಣ ಆರೋಗ್ಯದ ಮೇಲೆ ಪ್ರಭಾವ ಬೀರುವ ಮಾನಸಿಕ ಸ್ಥಿತಿ ಅಥವಾ ಭಾವನೆಗಳು.


    ಅತಿಯಾದ ಯೋಚನೆ ಆರೋಗ್ಯಕ್ಕೆ ಹಾನಿಕಾರಕ ಅಂದಮೇಲೆ ಅದರಿಂದ ಹೊರಗೆ ಬರುವುದು ಹೇಗೆ? ಅತಿಯಾದ ಯೋಚನೆಯಿಂದ ಉಂಟಾಗುವ ಖಿನ್ನತೆ, ಒತ್ತಡಗಳನ್ನು ನಿವಾರಿಸುವುದು ಹೇಗೆ? ಚಿಕಿತ್ಸೆ ಏನು ಎಂಬುದರ ಬಗ್ಗೆ ಇಲ್ಲಿ ತಿಳಿಯೋಣ.


    ಮೆಟಾಕಾಗ್ನಿಟಿವ್ ಥೆರಪಿ (MCT)


    ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯದ ಮನೋವಿಜ್ಞಾನ ಪ್ರಾಧ್ಯಾಪಕರಾದ ಆಡ್ರಿಯನ್ ವೆಲ್ಸ್ ಅಭಿವೃದ್ಧಿಪಡಿಸಿದ ಈ ಚಿಕಿತ್ಸೆಯು ಮಾನಸಿಕ ತೊಳಲಾಟಗಳಿಗೆ ನೀಡುವ ಹೊಸ ರೀತಿಯ ಚಿಕಿತ್ಸೆಯಾಗಿದೆ. ಮಾಹಿತಿ ಸಂಸ್ಕರಣಾ ಮಾದರಿಯನ್ನು ಆಧರಿಸಿ ಇದನ್ನು ರಚಿಸಿದ್ದಾರೆ.


    ಇದನ್ನೂ ಓದಿ: ಸ್ಪೋರ್ಟ್ಸ್​ ಆಡುವಾಗ ಗಾಯಗಳಾದರೆ ಇಲ್ಲಿದೆ ಸುಲಭ ಪರಿಹಾರ


    ಹೆಚ್ಚು ಹೆಚ್ಚು ಯೋಚನೆ ಮಾಡಿ ಮಾನಸಿಕ ಅಸ್ವಸ್ಥತೆ ಹೊಂದಿರುವವರಿಗೆ ಆತಂಕವನ್ನು ನಿರ್ವಹಿಸಲು ಸಹಾಯ ಮಾಡುವ ಇತ್ತೀಚಿನ, ಸಾಕ್ಷ್ಯ ಆಧಾರಿತ ವಿಧಾನ ಇದು. ಈ ಚಿಕಿತ್ಸೆಯಲ್ಲಿ ನಿಮ್ಮ ಮೆದುಳು ಆಲೋಚನೆಗಳಿಗಿಂತ ಹೆಚ್ಚಾಗಿ ಯೋಚಿಸುವ ವಿಷಯವನ್ನು ತಿಳಿಸುತ್ತದೆ. ಹೀಗಾಗಿ ಅತಿಯಾದ ಯೋಚನೆಯಿಂದ ಖಿನ್ನತೆ ಮತ್ತು ಆತಂಕಕ್ಕೆ ಒಳಗಾಗಿರುವವರು ಈ ಚಿಕಿತ್ಸಾ ವಿಧಾನಕ್ಕೆ ಮೊರೆ ಹೋಗಬಹುದು.


    ಇತರೆ ಕೆಲ ಕಾಯಿಲೆಗಳಿಗೂ ಚಿಕಿತ್ಸೆಯಾಗಿ ಬಳಕೆ


    ಕೇವಲ ಈ ಸ್ಥಿತಿಗೆ ಮಾತ್ರವಲ್ಲದೇ, ವೈದ್ಯಕೀಯ ಅಭ್ಯಾಸದಲ್ಲಿ, MCT ಅನ್ನು ಸಾಮಾನ್ಯವಾಗಿ ಸಾಮಾಜಿಕ ಆತಂಕದ ಅಸ್ವಸ್ಥತೆ , ಸಾಮಾನ್ಯ ಆತಂಕದ ಅಸ್ವಸ್ಥತೆ (GAD), ಆರೋಗ್ಯ ಆತಂಕ , ಒಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್ (OCD) ಮತ್ತು ನಂತರದ ಆಘಾತಕಾರಿ ಒತ್ತಡದ ಅಸ್ವಸ್ಥತೆ (PTSD) ಮತ್ತು ಖಿನ್ನತೆಯಂತಹ ಆತಂಕದ ಅಸ್ವಸ್ಥತೆಗಳಿಗೂ ಸಹ ಚಿಕಿತ್ಸೆ ನೀಡಲು ಬಳಸಲಾಗುತ್ತಿದೆ.


    MCT ಚಿಕಿತ್ಸೆ ಹೇಗೆ ಕಾರ್ಯನಿರ್ವಹಿಸುತ್ತದೆ?


    MCT ಚಿಕಿತ್ಸೆ ಮೊದಲು ರೋಗಿಗಳು ತಮ್ಮ ಸ್ವಂತ ಆಲೋಚನೆಗಳ ಬಗ್ಗೆ ಮತ್ತು ಅವರ ಮನಸ್ಸು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಏನನ್ನು ನಂಬುತ್ತಾರೆ ಎಂಬುದನ್ನು ಕಂಡುಹಿಡಿದ ಬಳಿಕ, ಇದು ಹೇಗೆ ರೋಗಲಕ್ಷಣಗಳನ್ನು ವಿಸ್ತರಿಸುವ ಅಥವಾ ಹದಗೆಡಿಸುವ ಅತಿಯಾದ ಆಲೋಚನೆಗಳಿಗೆ ಸಹಾಯಕವಲ್ಲದ ಪ್ರತಿಕ್ರಿಯೆಗಳಿಗೆ ಹೇಗೆ ಕಾರಣವಾಗುತ್ತವೆ ಎಂಬುದನ್ನು ರೋಗಿಗೆ ತೋರಿಸುತ್ತದೆ.


    ಸಾಂದರ್ಭಿಕ ಚಿತ್ರ


    MCT ಎನ್ನುವುದು ಸಮಯ-ಸೀಮಿತ ಚಿಕಿತ್ಸೆಯಾಗಿದ್ದು, ಇದು ಸಾಮಾನ್ಯವಾಗಿ 8-12 ಅವಧಿಗಳ ನಡುವೆ ನಡೆಯುತ್ತದೆ. ಚಿಕಿತ್ಸಕರು ಅವರ ಮೆಟಾಕಾಗ್ನಿಟಿವ್ ನಂಬಿಕೆಗಳು, ಅನುಭವಗಳು ಮತ್ತು ತಂತ್ರಗಳನ್ನು ಕಂಡುಹಿಡಿಯಲು ರೋಗಿಯೊಂದಿಗೆ ಚರ್ಚೆ ನಡೆಸಿ ಅತಿಯಾದ ಚಿಂತನೆ ಮತ್ತು ಅದರಿಂದ ಉಂಟಾಗುತ್ತಿರುವ ಖಿನ್ನತೆ, ಒತ್ತಡದ ಸಂಪೂರ್ಣ ಪ್ರಕ್ರಿಯೆ ಬಗ್ಗೆ ವಿವರಿಸುತ್ತಾರೆ.


    ಹೃದ್ರೋಗ ರೋಗಿಗಳಲ್ಲೂ ಸಕಾರಾತ್ಮಕ ಫಲಿತಾಂಶ


    ಒತ್ತಡ, ಆತಂಕ ಅಹಜವಾಗಿಯೇ ಹೃದಯದ ಮೇಲೆ ಪರಿಣಾಮ ಬೀರುವುದರಿಂದ ಈ ಕ್ಲಿನಿಕಲ್ ಪ್ರಯೋಗವು ಹೃದ್ರೋಗ ಹೊಂದಿರುವ ರೋಗಿಗಳ ಜೊತೆಯೂ ಸಂಶೋಧನೆ ನಡೆಸಿದೆ. ಏಪ್ರಿಲ್ 2017 ಮತ್ತು ಏಪ್ರಿಲ್ 2020 ರ ನಡುವೆ ನಡೆಸಿದ ಕ್ಲಿನಿಕಲ್ ಪ್ರಯೋಗದಲ್ಲಿ, ಯುನೈಟೆಡ್ ಕಿಂಗ್‌ಡಮ್‌ನ ಸಂಶೋಧಕರು ಹೃದಯ ಪುನರ್ವಸತಿಗೆ ಒಳಗಾಗುತ್ತಿರುವ 240 ರೋಗಿಗಳಲ್ಲಿ ಪ್ರಯೋಗ ನಡೆಸಿದೆ. ಇವರಿಗೆ MCT ಚಿಕಿತ್ಸೆಯನ್ನು ನೀಡಲಾಗಿತ್ತು, ಇಲ್ಲಿ ಫಲಿತಾಂಶ ಉತ್ತಮವಾಗಿದೆ ಎನ್ನುತ್ತದೆ ಸಂಶೋಧನೆ.




    ಒತ್ತಡ, ಖಿನ್ನತೆ ಇದು ದೀರ್ಘಾಯುಷ್ಯದ ಮೇಲೆ ಪರಿಣಾಮ ಬೀರುವಂತದ್ದು. ಈ ಪರಿಸ್ಥಿತಿ ಅಲ್ಪಾಯುಷ್ಯದ ಮೇಲೆ 30 ಪ್ರತಿಶತ ಹೆಚ್ಚು ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಚಿಕಿತ್ಸಾ ವಿಧಾನ ಆತಂಕ ಮತ್ತು ಖಿನ್ನತೆಯನ್ನು ನಿಭಾಯಿಸುವ ಮಾರ್ಗವಾಗಿದೆ ಎನ್ನುತ್ತಾರೆ ವೇಲ್ಸ್.‌


    ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ


    ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ (CBT) - ಖಿನ್ನತೆಯ ಅಥವಾ ಒಬ್ಸೆಸಿವ್ ಆಲೋಚನೆಗಳನ್ನು ನಿಭಾಯಿಸಲು ಮತ್ತೊಂದು ಸಾಮಾನ್ಯ ಅಭ್ಯಾಸವಾಗಿದೆ. CBT ನಿಮಗೆ ತಪ್ಪಾದ ಅಥವಾ ಋಣಾತ್ಮಕ ಚಿಂತನೆಯ ಬಗ್ಗೆ ಅರಿವು ಮೂಡಿಸಲು ಸಹಾಯ ಮಾಡುತ್ತದೆ. ಹೆಚ್ಚು ಮನಸ್ಸಿನ ತೊಳಲಾಟದಲ್ಲಿ ಸಿಕ್ಕಿಕೊಂಡಿದ್ದೀರಿ ಎಂದು ನಿಮಗೆ ಅನಿಸಿದರೆ ಮಾನಸಿಕ ಚಿಕಿತ್ಸಕರನ್ನು ಭೇಟಿ ಮಾಡಿ ಈ ಚಿಕಿತ್ಸೆಯ ವಿಧಾನಕ್ಕೆ ಒಳಗಾಗಬಹುದು.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು