ಗ್ರಹಣ ಎಫೆಕ್ಟ್​​; ಆನ್​ಲೈನ್​ ಪೂಜೆಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​​

news18
Updated:July 26, 2018, 2:05 PM IST
ಗ್ರಹಣ ಎಫೆಕ್ಟ್​​; ಆನ್​ಲೈನ್​ ಪೂಜೆಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​​
news18
Updated: July 26, 2018, 2:05 PM IST
-ಸೌಮ್ಯ, ನ್ಯೂಸ್​ 18 ಕನ್ನಡ

ಬೆಂಗಳೂರು,(ಜು.26): ಈ ಶತಮಾನದ ಚಂದ್ರಗ್ರಹಣವು ಜುಲೈ 27 ರಂದು ನಡೆಯಲಿದ್ದು, ಗ್ರಹಣದ ವಿಶೇಷ ಪೂಜೆಗೆ ಆನ್ ಲೈನ್ ಬುಕಿಂಗ್ ವ್ಯವಸ್ಥೆ ಮಾಡಲಾಗಿದೆ.ಕೆ.ಆರ್.ರಸ್ತೆಯ ಉಮಾಮಹೇಶ್ವರಿ ದೇವಸ್ಥಾನದಿಂದ ಭಕ್ತರಿಗೆ ಈ ಸೌಲಭ್ಯ ಒದಗಿಸಲಾಗಿದೆ. ಈಗಾಗಲೇ ಒಂದರಿಂದ ಒಂದೂವರೆ ಸಾವಿರ ಜನ ಆನ್ ಲೈನ್ ಮೂಲಕ ಗ್ರಹಣದ ದಿನದ ಪೂಜೆಗೆ ನೋಂದಾಯಿಸಿಕೊಂಡಿದ್ದಾರೆ.  ಜುಲೈ 27 ರಂದು ನಡುರಾತ್ರಿ 12.54 ರಿಂದ 3.49 ರವರಗೆ ವಿಶೇಷ ಪೂಜೆಗಳು ನಡೆಯಲಿವೆ.ದೇವಸ್ಥಾನಕ್ಕೆ ಬರಲು ಸಾಧ್ಯವಾಗದ ಭಕ್ತರಿಗೆ ಆನ್ ಲೈನ್ ಮೂಲಕವೇ ಪೂಜೆ ಮಾಡಿಸುವ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಇದೀಗ ಆನ್​ಲೈನ್ ಪೂಜೆಗೆ ಸಿಕ್ಕಾಪಟ್ಟೆ ಬೇಡಿಕೆ ಇದ್ದು, ಕುಳಿತಲ್ಲೇ ಗ್ರಹಣ ದೋಷ ಕಳೆದುಕೊಳ್ಳುವ ಅವಕಾಶವನ್ನು ಭಕ್ತಾದಿಗಳು ಬಳಸಿಕೊಳ್ಳುತ್ತಿದ್ದಾರೆ.

ಗ್ರಹಣವು ಗುರು ಪೂರ್ಣಿಮ ದಿನದಂದು ನಡೆಯಲಿದ್ದು, ಹೀಗಾಗಿ ಪೂಜಾ ಕಾರ್ಯಗಳನ್ನು ಗ್ರಹಣಕ್ಕಿಂತ ಮುಂಚಿತವಾಗಿ ನೆರವೇರಿಸಬೇಕಾಗುತ್ತದೆ. ಆಷಾಢ ಶುಕ್ಲ ಪಕ್ಷದ ಪೂರ್ಣಿಮೆಯಲ್ಲಿ ಕಾಣಿಸುತ್ತಿರುವ ಈ ಗ್ರಹಣವು ಅರ್ಧ ಅಥವಾ ಪೂರ್ಣ ಪ್ರಮಾಣದಲ್ಲಿ ಕಾಣಿಸಲಿದೆ. ಇದರಿಂದ ಕೆಲ ರಾಶಿಯವರಿಗೆ ಭೌತಿಕ, ಸಾಮಾಜಿಕ ಹಾಗೂ ಆರ್ಥಿಕ ತೊಂದರೆಗಳು ಉಂಟಾಗುವ ಸಾಧ್ಯತೆಯಿದೆ. ಶುಕ್ರವಾರ ರಾತ್ರಿ 11 ಗಂಟೆಯ ಬಳಿಕ ಶುರುವಾಗುವ ಗ್ರಹಣವು ಬೆಳಿಗಿನ ಜಾವ 3 ಗಂಟೆ ನಂತರ ಕೊನೆಗೊಳ್ಳುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
Loading...

 
First published:July 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ