Breakfast Tips: ಮಳೆಗಾಲದಲ್ಲಿ ಬೆಳಗಿನ ತಿಂಡಿ ಬಗ್ಗೆ ಚಿಂತೆನಾ? ಹಾಗಾದ್ರೆ ಇಲ್ಲಿದೆ ಪರಿಹಾರ

Monsoon Food: ಮಳೆಗಾಲದಲ್ಲಿ ರುಚಿಕರವಾದ ಮತ್ತು ಪೋಷಕಾಂಶಯುಕ್ತ ಬೆಳಗಿನ ತಿಂಡಿ ಬಹಳ ಮುಖ್ಯವಾಗುತ್ತದೆ. ಅದರಲ್ಲೂ ಈ ಸಮಯದಲ್ಲಿ ವಿಭಿನ್ನ ರೀತಿಯ ಆಹಾರ ಸೇವನೆ ಮಾಡುವ ಬಯಕೆಯಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಳಗಿನ ಉಪಾಹಾರವು ದಿನದ ಪ್ರಮುಖ ಆಹಾರ ಎಂದು ಬಹಳಷ್ಟು ಜನರು ಹೇಳುತ್ತಾರೆ. ನಿಮ್ಮ ದಿನದ ಆರಂಭದಲ್ಲಿ ಒಳ್ಳೆಯ ಆಹಾರ ಸೇವಿಸುವುದು ನಿಜಕ್ಕೂ ಉತ್ತಮ. ಇದು ನಿಮಗೆ ಪೋಷಕಾಂಶಗಳನ್ನು ನೀಡಿ, ದೇಹದ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಅಲ್ಲದೇ ನೀವು ಊಟ ಮಾಡುವವರೆಗೆ ಹೆಚ್ಚು ಹಸಿವಾಗದಂತೆ ನೋಡಿಕೊಳ್ಳುತ್ತದೆ. ನೀವು ಬೆಳಗಿನ ಉಪಹಾರ ಸೇವನೆ ಮಾಡದಿದ್ದಲ್ಲಿ, ಆರೋಗ್ಯ ಸಮಸ್ಯೆಗಳು, ಆಲಸ್ಯ ಉಂಟಾಗುತ್ತದೆ. ಇದಕ್ಕೆ ಪರಿಹಾರ ರುಚಿಕರವಾದ ಉಪಹಾರ. ಅದರಲ್ಲೂ ಮಳೆಗಾಲದಲ್ಲಿ ಹಸಿವು ಹೆಚ್ಚು. ಈ ಸಮಯದಲ್ಲಿ ಬೆಳಗಿನ ತಿಂಡಿ ಅತ್ಯಂತ ಉಪಯುಕ್ತವಾಗುತ್ತದೆ. ಹಾಗಾದರೆ ಮಳೆಗಾಲದಲ್ಲಿ ಯಾವ ತಿಂಡಿಗಳು ಬೆಸ್ಟ್ ಇಲ್ಲಿದೆ.

ಪನೀರ್ ಬೇಸನ್ ಚಿಲ್ಲಾ
ರುಚಿ ಮತ್ತು ಆರೋಗ್ಯದ ಅಂಶಗಳೆರಡರಲ್ಲೂ ಭಾರತೀಯ ತಿಂಡಿಗಳನ್ನುಸೋಲಿಸುವುದು ಕಷ್ಟ. ಈ ಪನೀರ್ ಬೆಸನ್ ಚಿಲ್ಲಾ ಮಳೆಗಾಲದಲ್ಲಿ ನಿಮ್ಮ ಬೆಳಗಿನ ತಿಂಡಿಗೆ ಆರೋಗ್ಯಕರವಾದ ಪದಾರ್ಥ ಮಾತ್ರವಲ್ಲದೆ, ನೀವು ಇದನ್ನು ದಿನವಿಡೀ ತಿನ್ನುವಷ್ಟು ರುಚಿಕರವಾಗಿರುತ್ತದೆ. ಇದು ತಯಾರಿಸಲು ಕೇವಲ 10 ನಿಮಿಷಗಳು ಸಾಕು.

ಟೋಸ್ಟಿ ಸ್ಯಾಂಡ್‌ವಿಚ್
ನಾವೆಲ್ಲರೂ ಬೆಳಿಗ್ಗೆ ಬೆಣ್ಣೆ ಅಥವಾ ಜಾಮ್‌ನೊಂದಿಗೆ ಬ್ರೆಡ್ ಅನ್ನು ಫ್ರೈ ಮಾಡಿ ಸೇವಿಸುವುದು ಸಾಮಾನ್ಯ. ಆದರೆ ಮಳೆಗಾಲದ ಬೆಳಿಗ್ಗೆ ಬ್ರೆಡ್ ನಿಂದ ವಿಭಿನ್ನ ಆಹಾರ ಪದಾರ್ಥ ಮತ್ತು ಹೆಚ್ಚು ಪೋಷಕಾಂಶಯುಕ್ತ ಆಹಾರ ತಯಾರಿಸಬೇಕು ಎಂಬುದಿದ್ದರೆ, ಅದಕ್ಕೆ ಮಾರ್ಗವೆಂದರೆ ಸ್ಯಾಂಡ್‌ವಿಚ್‌ .ಬ್ರೆಡ್‌ಗೆ ನಿಮಗೆ ಬೇಕಾಗಿರುವ ತರಕಾರಿಗಳನ್ನು ಸೇರಿಸಿ ಮತ್ತು ಸ್ವಲ್ಪ ಗ್ರಿಲ್ ಅಥವಾ ಪ್ಯಾನ್ ಫ್ರೈ ಮಾಡಿ ಸೇವಿಸಿ.

ಮಸಾಲ ಫ್ರೆಂಚ್ ಟೋಸ್ಟ್
ಫ್ರೆಂಚ್ ಟೋಸ್ಟ್ ನೀವು ಸೇವಿಸಬಹುದಾದ ಆರೋಗ್ಯಕರ ಬೆಳಗಿನ ತಿಂಡಿಗಳಲ್ಲಿ ಒಂದಾಗಿದೆ ಎಂಬುದರ ಬಗ್ಗೆ ಯಾವುದೇ ಅನುಮಾನವಿಲ್ಲ. ಈಗ, ಮಳೆಗಾಲ ಬೆಳಿಗ್ಗೆ ಸ್ವಲ್ಪ ಬಿಸಿ ಪದಾರ್ಥ ಸೇವನೆ ಆರೋಗ್ಯದ ವಿಚಾರದಲ್ಲಿ ಒಳ್ಳೆಯ ಆಯ್ಕೆ. ಮೊಟ್ಟೆಯ ಬಿಳಿ ಭಾಗ ಮತ್ತು ತರಕಾರಿಗಳನ್ನು ಸೇರಿಸಿ ಮಸಾಲ ಹಾಕಿ ಬ್ರೆಡ್ ಟೋಸ್ಟ್ ಸವಿದರೆ, ದೇಹಕ್ಕೆ ಬೇಕಾಗಿರುವ ಪೋಷಕಾಂಶವೂ ಲಭಿಸುತ್ತದೆ ಹಾಗೂ ನಾಲಿಗೆಗೆ ರುಚಿ ಕೂಡ.

ಇದನ್ನೂ ಓದಿ: ಹೃದಯದ ಸ್ವಾಸ್ಥ್ಯಕ್ಕಾಗಿ ಯಾವ ರೀತಿಯ ಆಹಾರ ಕ್ರಮ ಅನುಸರಿಸಬೇಕು? ಇಲ್ಲಿದೆ ಮಾಹಿತಿ

ಕಾರ್ನ್ ಸಲಾಡ್
ಬೆಳಗಿನ ತಿಂಡಿಯಲ್ಲಿ ಜೋಳವನ್ನು ಸೇರಿಸಿದರೆ ಬಹಳಷ್ಟು ಪೋಷಕಾಂಶಗಳು ದೇಹವನ್ನು ಸೇರುತ್ತದೆ. ಇದು ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿರುವ ಪದಾರ್ಥಗಳಲ್ಲಿ ಒಂದಾಗಿದೆ. ಇದರ ಸಲಾಡ್ ಒಳ್ಳೆಯ ಆಯ್ಕೆ. ಬೇಯಿಸಿದ ಸ್ವಿಟ್ ಕಾರ್ನ್ ಜೊತೆ ಕೆಲ ತರಕಾರಿಗಳನ್ನು ಹಾಕಿ, ಸ್ವಲ್ಪ ಚಾಟ್ ಮಸಾಲ ಹಾಕಿ ಸೇವನೆ ಮಾಡುವುದು ರುಚಿಕರ ಮತ್ತು ಆರೋಗ್ಯಕರ.

ಓಟ್ ಮೀಲ್ ಪೋಹಾ
ಓಟ್ ಮೀಲ್ ಪೌಷ್ಠಿಕಾಂಶಕ್ಕೆ ಹೆಸರುವಾಸಿಯಾಗಿದೆ ಮತ್ತು ಇದನ್ನು ಯಾವ ರೀತಿಯ ಆಹಾರ ಪದಾರ್ಥಗಳ ಜೊತೆ ಬೇಕಾದರೂ ಸೇರಿಸಬಹುದು. ಇನ್ನು ನಿಮಗೆ ಬೆಳಗ್ಗೆ ಪೌಷ್ಟಿಕಾಂಶದ ಪ್ರಮಾಣ ಹೆಚ್ಚಿರುವ ಖಾರದ ತಿಂಡಿ ಬೇಕಿದ್ದರೆ, ಓಟ್ ಮೀಲ್ ಅನ್ನು ಪೋಹಾ ರೂಪದಲ್ಲಿ ಬೇಯಿಸುವುದು ಮಳೆಗಾಲದ ಸಮಯದಲ್ಲಿ ಉತ್ತಮವಾಗಿರುತ್ತದೆ.

ಚಿಕನ್ ಅಮ್ಲೆಟ್
ಆಮ್ಲೆಟ್‌ಗಳು ಈಗಾಗಲೇ ನಿಮ್ಮ ಸಾಮಾನ್ಯವಾಗಿ ಬೆಳಗಿನ ತಿಂಡಿಯ ಭಾಗವಾಗಿದೆ. ಮಾಂಸಹಾರ ಪ್ರಿಯರಿಗೆ ಈ ತಿಂಡಿ ಬಹಳ ಇಷ್ಟವಾಗುತ್ತದೆ. ಚಿಕನ್ ಆಮ್ಲೆಟ್ ಮಾಡಿ ಅದರ ಜೊತೆ ಮಾಶ್ರೂಮ್ ಫ್ರೈ ಮಾಡಿ ಸೇವಿಸುವುದು ಮಳೆಗಾಲದಲ್ಲಿ ಬೆಚ್ಚನೆಯ ಅನುಭವ ನೀಡುತ್ತದೆ ಹಾಗೂ ಆರೊಗ್ಯಕ್ಕೂ ಸಹ ಒಳ್ಳೆಯದು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: