Food: ಸಸ್ಯಾಹಾರಿಗಳೇ ಇಲ್ಲಿ ಕೇಳಿ, ಇನ್ಮುಂದೆ ನೀವೂ ಸಹ ವೆಜ್ ಫಿಶ್ ಫ್ರೈ ತಿನ್ನಬಹುದು!

Veg Fish: ದೆಹಲಿಯ ಖಾಸಗಿ ಹೋಟೆಲ್ ಒಂದು ಸಂಪೂರ್ಣ ಸಸ್ಯಾಹಾರದ ಮೀನಿನ ಫ್ರೈ ತಯಾರು ಮಾಡಿದೆ. ಇದನ್ನ ನೋಡಿ ಸಸ್ಯಾಹಾರಿ ಪ್ರಿಯರು ಇನ್ನು ಮುಂದೆ ನಾವು ಕೂಡ ವೆಜ್ ಫಿಶ್ ಫ್ರೈ ಸೇವನೆ ಮಾಡಬಹುದು ಎಂದು ಫುಲ್ ಹ್ಯಾಪಿ ಆಗಿದ್ದಾರೆ..

ವೆಜ್ ಫಿಶ್ ಫ್ರೈ

ವೆಜ್ ಫಿಶ್ ಫ್ರೈ

 • Share this:
  ಸಾಮಾನ್ಯವಾಗಿ ಸಸ್ಯಹಾರಿಗಳು (Vegetarians) ಮಾಂಸಹಾರ (Non veg) ಕಂಡರೆ ದೂರ ಓಡುತ್ತಾರೆ.. ಹೋಟೆಲ್​​ಗಳಿಗೆ (Hotel) ಹೋಗುವಾಗಲೂ ಸಂಪೂರ್ಣ ಸಸ್ಯಾಹಾರ ಇರುವ ಹೋಟೆಲ್ ಹುಡುಕಿ ಹೋಗುತ್ತಾರೆ. ಆದರೆ
  ಮಾಂಸಾಹಾರದಲ್ಲಿ ಸಿಗುವ ನಾನಾ ಬಗೆಯ ತಿನಿಸುಗಳು (Food) ಸಸ್ಯಹಾರದಲ್ಲಿ ಅಷ್ಟಾಗಿ ಸಿಗುವುದಿಲ್ಲ.. ಹೀಗಾಗಿ ಸಸ್ಯಾಹಾರಿಗಳು ಪಾಲಿಗೆ ಬಂದಿದ್ದು ಪಂಚಾಮೃತ ಅಂತಹ ಸಿಕ್ಕ ಆಹಾರದಲ್ಲಿ ಸಂತೃಪ್ತಿ ಪಟ್ಟುಕೊಳ್ಳುತ್ತಾರೆ. ಅದರಲ್ಲೂ ಮಾಂಸಹಾರಿ ಸೇವನೆ ಮಾಡುವ ಮೀನುಗಳನ್ನು ನೋಡಿದರೆ ಸಸ್ಯಹಾರಿಗಳಿಗೆ ಒಮ್ಮೆ ಸೇವನೆ ಮಾಡಬೇಕು ಎಂದು ಅನಿಸುತ್ತದೆ.. ಆದ್ರೆ ಮೀನು (Fish) ಎಂಬ ಕಾರಣಕ್ಕೆ ಸಸ್ಯಹಾರಿಗಳು ಮೂಗುಮುಚ್ಚಿಕೊಂಡು ಓಡಾಡುತ್ತಾರೆ. ಆದ್ರೆ ಈಗ ಸಸ್ಯಹಾರಿಗಳಿಗೆ ಗುಡ್ ನ್ಯೂಸ್ (Good News) ಒಂದು ಸಿಕ್ಕಿದ್ದು, ದೆಹಲಿಯಲ್ಲಿ (Delhi) ಖಾಸಗಿ ಹೋಟೆಲ್ ಒಂದು ಸಂಪೂರ್ಣ ಸಸ್ಯಾಹಾರದ ಮೀನಿನ ಫ್ರೈ ತಯಾರಿಸಿದೆ.

  ವೆಜಿಟೇರಿಯನ್ ಮೀನಿನ ಫ್ರೈ ತಯಾರಿಸಿದ ದೆಹಲಿಯ ಹೋಟೆಲ್

  ಇತ್ತೀಚೆಗೆ ಬೀದಿ ಬದಿ ಉಪಾಹಾರ ಮಳಿಗೆಗಳು ಗ್ರಾಹಕರನ್ನು ಸೆಳೆಯುವ ಸಲುವಾಗಿ ವಿವಿಧ ರೀತಿಯ ವಿಶಿಷ್ಟ ತಿನಿಸುಗಳನ್ನು ತಯಾರಿಸುತ್ತಿದ್ದಾರೆ. ಇಂತಹ ವಿಭಿನ್ನ ಆಹಾರಗಳ ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದ್ದನ್ನು ನೀವು ನೋಡಿರಬಹುದು.. ಅದರಲ್ಲೂ ಮಾಂಸಹಾರಿಗಳು ಸೇವನೆ ಮಾಡುವ ವಿವಿಧ ತಿನಿಸುಗಳ ಹೆಸರನ್ನು ಹೊಂದಿರುವ ಸಸ್ಯಹಾರಿ ಖಾದ್ಯಗಳ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತವೆ..

  ಇದನ್ನೂ ಓದಿ: ಚಪಾತಿ ಜೊತೆ ಸ್ಪೆಷಲ್ ಟೊಮ್ಯಾಟೊ ಬದನೆಕಾಯಿ ಪಲ್ಯ ಇದ್ರೆ ರುಚಿಯೋ ರುಚಿ

  ಅಲ್ಲದೆ ಈ ಹಿಂದೆ ಮಾಂಸಾಹಾರಿಗಳು ಸೇವನೆ ಮಾಡುವ ಚಿಕನ್ 65, ಕಬಾಬ್ ಬಿರಿಯಾನಿ ಹೀಗೆ ವಿವಿಧ ಬಗೆಯ ಮಾಂಸಹಾರಿ ಅಡುಗೆಗಳನ್ನು ಶುದ್ಧ ಸಸ್ಯಾಹಾರಿ ತರಕಾರಿಗಳನ್ನು ಬಳಸಿ ತಯಾರು ಮಾಡಿ ಮಾಂಸಹಾರದ ರೀತಿಯಲ್ಲಿ ಅವುಗಳಿಗೂ ಹೆಸರು ಕೊಡಲಾಗುತ್ತಿತ್ತು.. ಇದನ್ನ ಸಸ್ಯಹಾರಿಗಳು ಅಷ್ಟೇ ಇಷ್ಟಪಟ್ಟು ಸವಿಯುತ್ತಿದ್ದಾರೆ.. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ದೆಹಲಿಯ ಖಾಸಗಿ ಹೋಟೆಲ್ ಒಂದು ಸಂಪೂರ್ಣ ಸಸ್ಯಾಹಾರದ ಮೀನಿನ ಫ್ರೈ ತಯಾರು ಮಾಡಿದೆ.. ಇದನ್ನ ನೋಡಿ ಸಸ್ಯಾಹಾರಿ ಪ್ರಿಯರು ಇನ್ನು ಮುಂದೆ ನಾವು ಕೂಡ ವೆಜ್ ಫಿಶ್ ಫ್ರೈ ಸೇವನೆ ಮಾಡಬಹುದು ಎಂದು ಫುಲ್ ಹ್ಯಾಪಿ ಆಗಿದ್ದಾರೆ..

  ಸೋಯಾ ಬೀನ್ಸ್‌ನಿಂದ ಮಾಡಿದ 'ವೆಜ್ ಫಿಶ್

  ಇನ್ನು ದೆಹಲಿಯ ಖಾಸಗಿ ಹೋಟೆಲ್ ತಯಾರು ಮಾಡಿರುವ ಮೀನಿನ ಫ್ರೈ ಸಂಪೂರ್ಣ ಸೋಯಾಬೀನ್ಸ್ ನಿಂದ ಮಾಡಲಾಗಿದೆ.. ಆಹಾರ ಬ್ಲಾಗರ್ ಅಮರ್ ಸಿರೋಹಿ ಎಂಬುವವರು ಸೋಯಾಬೀನ್ ನಿಂದ ಮಾಡಿದ ವೆಜ್ ಫಿಶ್ ಫ್ರೈ ಅನ್ನು
  ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಈ ವೆಜ್‌ ಫಿಶ್‌ಗೆ ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.ಇನ್ನು ವಿಡಿಯೋದಲ್ಲಿ ಫುಡ್‌ ಬ್ಲಾಗರ್ ಈ ವೆಜ್ ಫಿಶ್‌ ಫ್ರೈ ಅನ್ನು ಹೇಗೆ ತಯಾರಿಸಲಾಗಿದೆ ಎಂಬುದನ್ನು ತೋರಿಸುವ ಜೊತೆ ಹೇಳುತ್ತಾರೆ. ಅಲ್ಲದೇ ಇದು ಕೂಡ ಮಾಮೂಲಿ ಮೀನಿನ ತರಹವೇ ರುಚಿಯನ್ನು ಹೊಂದಿದೆ ಎಂದು ಇದನ್ನು ತಯಾರಿಸುವವರು ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದು.
  ಇನ್ನು ಇದುವರೆಗೂ 3.8 ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಇದಕ್ಕೆ ಸಾಕಷ್ಟು ಲೈಕ್‌ ಹಾಗೂ ಕಾಮೆಂಟ್‌ಗಳು ಬಂದಿದ್ದು, ಇದು ಕುತೂಹಲಕಾರಿಯಾಗಿದೆ, ಬಾಯಲ್ಲಿ ನೀರೂರಿಸುವಂತಿದೆ ಎಂದೆಲ್ಲಾ ನೋಡುಗರು ಕಾಮೆಂಟ್ ಮಾಡಿದ್ದಾರೆ.

  ಇದನ್ನೂ ಓದಿ: ಟರ್ಕಿಯಲ್ಲಿ ನರಕದ ಹೆಬ್ಬಾಗಿಲು; ಈ ದೇವಾಲಯ ಪ್ರವೇಶಿಸಿದರೆ ನಿಮ್ಮ ಸಾವು ಖಚಿತವಂತೆ!

  ಒಟ್ಟಾರೆ ಇಷ್ಟು ದಿನ ಮಾಂಸಾಹಾರಿಗಳ ಪಾಲಿಗೆ ಮಾತ್ರ ಸೀಮಿತವಾಗಿದ್ದ ಮೀನಿನ ಫ್ರೈ, ಈಗ ಸೋಯಾಬೀನ್ ಮೀನಿನ ರೂಪದಲ್ಲಿ ಸಸ್ಯಾಹಾರಿಗಳಿಗೆ ಲಭ್ಯವಾಗಲಿದೆ.. ಹೀಗಾಗಿ ಇನ್ಮುಂದೆ ಸಸ್ಯಾಹಾರಿಗಳು ಸಹ ಮಾಂಸಹಾರಿಗಳ ರೀತಿ ನಾನು ಕೂಡ ವೆಜ್ ಫಿಶ್ ಫ್ರೈ ತಿಂದೆ ಎಂದು ಹೇಳಿಕೊಳ್ಳಬಹುದಾಗಿದೆ.
  Published by:ranjumbkgowda1 ranjumbkgowda1
  First published: