ವೇಟ್ ಲಾಸ್ (Weight Loss) ಮಾಡೋಕೆ ಜನರು (People) ಎಷ್ಟೆಲ್ಲಾ ಪ್ರಯತ್ನ ಮಾಡ್ತಾರೆ. ದೀರ್ಘಾವಧಿಯ ಯೋಗ (Yoga), ವ್ಯಾಯಾಮ, ಡಯಟ್ (Diet) ಹೀಗೆ ಬೊಜ್ಜು (Fat) ಕರಗಿಸೋಕೆ ಏನೆಲ್ಲಾ ಕ್ರಮಗಳನ್ನ ಫಾಲೋ ಮಾಡ್ಬೇಕೋ ಅದನ್ನೆಲ್ಲಾ ಮಾಡ್ತಾರೆ. ಅಧಿಕ ತೂಕ ಅಥವಾ ಸ್ಥೂಲಕಾಯವನ್ನು (Obesity) ಕರಗಿಸುವುದು, ಮತ್ತೆ ತೂಕ ಹೆಚ್ಚಾಗದಂತೆ ನಿಯಂತ್ರಣ ಮಾಡುವುದು ತುಂಬಾ ಕಷ್ಟ. ಹೀಗಾಗಿ ಜನರು ಯಾವಾಗಲೂ ಡಯಟ್ ಹಾಗೂ ದೈಹಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರ್ತಾರೆ. ಇತ್ತೀಚಿನ ದಿನಗಳಲ್ಲಿ ಬೀದಿ ಬದಿಯ ಆಹಾರ, ಪರಿಮಳ ಭರಿತ, ರುಚಿಕರ, ಜಂಕ್ ಫುಡ್, ಕರಿದ ಪದಾರ್ಥಗಳ ಸೇವನೆ ತೂಕ ಹೆಚ್ಚಳಕ್ಕೆ ಕಾರಣವಾಗ್ತಿದೆ.
ತೂಕ ಇಳಿಕೆಗೆ ಗಢದ್ದಾಗಿ ನಿದ್ದೆ ಮಾಡ್ಬೇಕಂತೆ!
ಇನ್ನು ಅನ್ ಹೆಲ್ದೀ ಆಹಾರ ಸೇವನೆ, ಲೈಫ್ ಸ್ಟೈಲ್ ಫಾಲೋ ಮಾಡುವುದು ಬೇಗ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ತೂಕ ನಷ್ಟಕ್ಕೆ ಜನರು ವ್ಯಾಯಾಮ ಮತ್ತು ಆಹಾರ ಕ್ರಮವನ್ನು ತುಂಬಾ ದಿನ ಫಾಲೋ ಮಾಡೋಕಾಗದೇ ಮಧ್ಯದಲ್ಲೇ ಬಿಟ್ಟು ಬಿಡ್ತಾರೆ. ಕೆಲವರು ವೇಟ್ ಲಾಸ್ ಪಾನೀಯ ಸೇವನೆ ಮಾಡ್ತಾರೆ.
ಹೀಗೆ ಹಲವರು ಹಲವು ರೀತಿಯ ವೇಟ್ ಲಾಸ್ ನಿಯಮ ಫಾಲೋ ಮಾಡ್ತಾರೆ. ಯಾವ ಕ್ರಮ ಅವರಿಗೆ ಬೇಗ ತೂಕ ಇಳಿಕೆಗೆ ಸಹಾಯ ಮಾಡುತ್ತೋ, ಅದನ್ನೇ ಯೋಜಿಸಿ, ಅನುಸರಿಸುತ್ತಾರೆ. ಕೆಲವರು ಬೆಳಗ್ಗೆ ಬೇಗ ಎದ್ದು, ವಾಕಿಂಗ್ ಹೋಗ್ತಾರೆ. ಯೋಗ ಮಾಡ್ತಾರೆ.
ಇನ್ನು ಕೆಲವರಿಗೆ ಬೇಗ ಏಳುವುದು ಅಂದ್ರೆ ಆಗದ ಮಾತು. ಎಷ್ಟೇ ಹೊತ್ತಾದ್ರೂ ಏಳೋಕೆ ಆಗ್ದೇ ರಗ್ಗು ಹೊದ್ದು ನಿದ್ದೆ ಮಾಡ್ತಾರೆ. ಅಂತವರು ಎಷ್ಟೇ ಪ್ರಯತ್ನ ಪಟ್ರೂ ಬೇಗ ತೂಕ ಇಳಿಸೋಕೆ ಆಗಲ್ಲ. ಇಂಥವರಿಗಾಗಿ ತಜ್ಞರು ಕೆಲವು ಸಲಹೆ ನೀಡಿದ್ದಾರೆ.
ಸರಿಯಾದ ಸಮಯಕ್ಕೆ ನಿದ್ದೆ ಮಾಡಿದ್ರೆ ಹೊಟ್ಟೆ ಕೊಬ್ಬು ಕರಗಿಸಬಹುದು!
ಡಾ.ರೀಮಾ ಅವರು ಕೊಬ್ಬನ್ನು ಕಡಿಮೆ ಮಾಡಲು ಸುಲಭ ಮಾರ್ಗಗಳ ಬಗ್ಗೆ ಹೇಳಿದ್ದಾರೆ. ತೂಕ ಇಳಿಸ್ಬೇಕು ಅಂದ್ರೆ ಸರಿಯಾದ ಸಮಯಕ್ಕೆ ಮಲಗಬೇಕು ಅಂತಾ ತಿಳಿಸಿದ್ದಾರೆ. ಸರಿಯಾದ ಸಮಯಕ್ಕೆ ನಿದ್ದೆ ಮಾಡುವುದು ಹೊಟ್ಟೆಯ ಕೊಬ್ಬು ಕರಗಲು ಸಹಾಯ ಮಾಡುತ್ತದೆ ಅಂತಾ ಹೇಳಿದ್ದಾರೆ.
ಗಢದ್ದಾಗಿ ನಿದ್ದೆ ಮಾಡಿದ್ರೆ ಬೊಜ್ಜು ಕರಗುತ್ತೆ!
ಆಳ ಮತ್ತು ಉತ್ತಮ ನಿದ್ದೆ ಹೊಂದುವುದು ತೂಕ ನಷ್ಟಕ್ಕೆ ಸಹಕಾರಿ. ಗಢದ್ದಾಗಿ ನಿದ್ದೆ ಮಾಡಿದ್ರೆ ಬೇಗ ತೂಕ ಇಳಿಸಬಹುದಂತೆ. ದೇಹದ ಪ್ರತಿಯೊಂದು ಜೀವಕೋಶ ಮತ್ತು ಕಾರ್ಯ ಸರಿಯಾಗಿ ಆಗಲು ಚೆನ್ನಾಗಿ ನಿದ್ದೆ ಮಾಡುವುದು ತುಂಬಾ ಮುಖ್ಯ.
ನಿದ್ರೆ ಕೊರತೆಯಿಂದ ದೇಹದ ಪ್ರತಿಯೊಂದು ಕೆಲಸ ನಿಧಾನವಾಗುತ್ತೆ. ಇದು ಆರೋಗ್ಯ ಹದಗೆಡಲು ಕಾರಣ. ಹೀಗಾಗಿ ಚೆನ್ನಾಗಿ ಮತ್ತು ಸರಿಯಾದ ಸಮಯಕ್ಕೆ ನಿದ್ದೆ ಮಾಡುವುದು ತೂಕ ಕಡಿಮೆಯಾಗಲು ಸಹಕಾರಿ ಎಂದಿದ್ದಾರೆ.
ತೂಕ ಇಳಿಕೆಗೆ ಯಾವ ಸಮಯದಲ್ಲಿ ಮಲಗಬೇಕು?
ನ್ಯಾಷನಲ್ ಸ್ಲೀಪ್ ಫೌಂಡೇಶನ್ ವರದಿಯನ್ನು ಉಲ್ಲೇಖಿಸಿರುವ ಡಾ.ರೀಮಾ ಅವರು, ವಯಸ್ಕರು ಪ್ರತಿದಿನ 7 ರಿಂದ 9 ಗಂಟೆ ನಿದ್ದೆ ಮಾಡ್ಬೇಕು. ಪ್ರತಿಯೊಬ್ಬರೂ ಮಧ್ಯರಾತ್ರಿ 12 ಗಂಟೆಗಿಂತ ಮೊದಲೇ ನಿದ್ದೆ ಮಾಡಬೇಕು. ಆಳ ಮತ್ತು ಉತ್ತಮ ನಿದ್ದೆ ಮಾಡಿದ್ರೆ ದೇಹ ಮತ್ತು ಮನಸ್ಸು ಫ್ರೆಶ್ ಆಗುತ್ತದೆ. ಹೆಚ್ಚುವರಿ ತೂಕ ಕಡಿಮೆ ಆಗುತ್ತದೆ ಎಂದಿದ್ದಾರೆ.
ತಡವಾಗಿ ಮಲಗಿದ್ರೆ ಬೊಜ್ಜು ಹೆಚ್ಚುತ್ತದೆ
ತಡವಾಗಿ ಮಲಗಿದ್ರೆ ರಾತ್ರಿ ಹಸಿವಾಗುತ್ತದೆ. ಇದು ಅನಾರೋಗ್ಯಕರ ಆಹಾರ ಸೇವನೆ, ಹೆಚ್ಚುವರಿ ಕ್ಯಾಲೊರಿ ಸೇವನೆಗೆ ಪ್ರಚೋದಿಸುತ್ತದೆ. ತೂಕ ಹೆಚ್ಚಿಸುತ್ತದೆ. ನಿದ್ರೆಯ ವೇಳಾಪಟ್ಟಿ ಏರುಪೇರಾದರೆ ದೇಹದ ಸಿರ್ಕಾಡಿಯನ್ ರಿದಮ್ ತೊಂದರೆಯಾಗಿ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಹೆಚ್ಚಾಗುತ್ತದೆ. ಇದು ಹೊಟ್ಟೆಯ ಕೊಬ್ಬು ಹೆಚ್ಚಿಸುತ್ತದೆ.
ಇದನ್ನೂ ಓದಿ: ಕೂದಲು ಹಾಗೂ ಚರ್ಮದ ಆರೋಗ್ಯಕ್ಕೆ ರಾಮಬಾಣ ಈ ಮೆಂತ್ಯೆ!
ತೂಕ ಇಳಿಸುವ ಪಾನೀಯ ಕುಡಿಯಿರಿ
ತೂಕ ನಷ್ಟಕ್ಕೆ ಒಂದು ಲೋಟ ನೀರಿಗೆ 2 ಟೀ ಚಮಚ ಜೀರಿಗೆ ಹಾಕಿ, ರಾತ್ರಿಯಿಡೀ ನೆನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದು ತೂಕ ಇಳಿಕೆಗೆ ಸಹಕಾರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ