ದೀಪಿಕಾ ಪಡುಕೋಣೆಯ ಹೊಸ ಡ್ರೆಸ್​ಗೆ ಅಭಿಮಾನಿಗಳು ಫಿದಾ

news18
Updated:June 13, 2018, 1:30 PM IST
ದೀಪಿಕಾ ಪಡುಕೋಣೆಯ ಹೊಸ ಡ್ರೆಸ್​ಗೆ ಅಭಿಮಾನಿಗಳು ಫಿದಾ
news18
Updated: June 13, 2018, 1:30 PM IST
-ನ್ಯೂಸ್ 18 ಕನ್ನಡ

ಬಾಲಿವುಡ್ ಸ್ಟೈಲ್ ಐಕಾನ್ ದೀಪಿಕಾ ಪಡುಕೋಣೆ ಮುಟ್ಟಿದ್ದು ತೊಟ್ಟಿದ್ದು ಎಲ್ಲವೂ ಟ್ರೆಂಡ್ ಆಗುತ್ತಿದೆ. 'ಪದ್ಮಾವತಿ'ಯಂತಹ ಐತಿಹಾಸಿಕ ಚಿತ್ರದಲ್ಲಿ ಮಿರಮಿರ ಮಿಂಚುವ ಲೆಹೆಂಗಾದಲ್ಲಿ ದೀಪಿಕಾ ಮಿಂಚಿದ್ದರು. ಸೀರೆ ಅಥವಾ ಪಾಶ್ಚಿಮಾತ್ಯ ಉಡುಪಿನಲ್ಲೂ ಅದ್ಭುತವಾಗಿ ಕಾಣಿಸಿಕೊಳ್ಳುವ ಡಿಂಪಲ್ ಕ್ವೀನ್ ದೀಪಿಕಾರ ಇತ್ತೀಚಿನ ಸಾಮಾನ್ಯ​ ಲುಕ್ ವೈರಲ್ ಆಗಿದೆ.

ದೀಪಿಕಾ ಪಡುಕೋಣೆ ಸಿನಿಮಾಗಾಗಿ ಸೊಗಸಾದ ಉಡುಪನ್ನು ಆರಿಸಿಕೊಳ್ಳುವಲ್ಲಿ ಎತ್ತಿದ ಕೈ ಎಂಬುದು ಇಡೀ ಬಾಲಿವುಡ್​ಗೆ ಗೊತ್ತು. ಆದರೆ ಇತ್ತೀಚೆಗೆ ಟ್ರಾವೆಲ್ ಮಾಡುವ ವೇಳೆ ಡಿಪ್ಸ್​ ಧರಿಸಿದ ಡ್ರೆಸ್ ಹೊಸ ವಿನ್ಯಾಸದಿಂದ ಕೂಡಿತ್ತು. ಸುಂದರವಾಗಿ ಕಾಣುವ 'ಮಸಬಾ ಮಸ್ಲಿನ್ ಕೇಪ್​' ಶರ್ಟ್​ ಧರಿಸಿ ನಟಿ ದೀಪಿಕಾ ಕಾಣಿಸಿಕೊಂಡಿದ್ದರು. ಬಿಳಿ ಬಣ್ಣದ ಈ ಬಟ್ಟೆಯು ಬೇಸಿಗೆಯಲ್ಲಿ ಧರಿಸಲು ಉತ್ತಮ ಉಡುಪಾಗಿದೆ.  ಈ ಬಟ್ಟೆಯು ಮೃದುವಾಗಿದ್ದು, ಸೆಕೆಯ ಸಂದರ್ಭದಲ್ಲಿ ಅತ್ಯುತ್ತಮ ಫ್ಯಾಷನ್ ಧಿರಿಸಾಗಿ ಇದನ್ನು ಬಳಸಬಹುದು.
A post shared by Viral Bhayani (@viralbhayani) on


Loading...


ಏರ್​ಪೋರ್ಟ್​ನಿಂದ ಹೊರ ಬರುತ್ತಿರುವಾಗ ದೀಪಿಕಾ, ಆ್ಯಂಕಲ್ ಬೂಟ್​, ವ್ಯಾನಿಟಿ ಬ್ಯಾಗ್​ನೊಂದಿಗೆ ಕಪ್ಪು ಕನ್ನಡಕದಲ್ಲಿ ಮಿಂಚುತ್ತಿದ್ದರು. ಅವರ ಈ ಸ್ಟೈಲಿಷ್​ ಲುಕ್ 'ಕಾಕ್​ಟೈಲ್' ಸಿನಿಮಾವನ್ನು ನೆನಪಿಸುವಂತಿತ್ತು. 2016 ರಲ್ಲೂ ಕೂಡ ದೀಪಿಕಾ ಪಡುಕೋಣೆ ಇದೇ ರೀತಿಯ ಚೋಳ ಉಡುಪಿನಲ್ಲಿ ಕಂಗೊಳಿಸಿದ್ದರು.

ಹೊಸ ವಿನ್ಯಾಸದ ದೊಡ್ಡ ಅಳತೆಯ ಕುರ್ತಾದೊಂದಿಗೆ ದೀಪಿಕಾ ನೀಲಿ ಬಣ್ಣದ ಜೀನ್ಸ್ ಧರಿಸಿದ್ದರು. ಡಿಂಪಲ್ ಕ್ವೀನ್ ಧರಿಸಿದ ಈ ಉಡುಗೆಯು ಸದ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು, ಫ್ಯಾಷನ್ ಪ್ರಿಯರು ಡಿಪ್ಸ್​ ಲುಕ್​ಗೆ ಫಿದಾ ಆಗಿದ್ದಾರೆ. ಸೋನಮ್ ಕಪೂರ್ ಕೂಡ ಇದೇ ಬಗೆಯ ವಸ್ತ್ರಗಳನ್ನು ಇಷ್ಟಪಡುತ್ತಿದ್ದಾರೆ. ಮಸಬಾ ಮಸ್ಲಿನ್ ಕೇಪ್ ಧಿರಿಸು ಇನ್ನು ಕೆಲವೇ ದಿನಗಳಲ್ಲಿ ಜನಮನ ಗೆಲ್ಲಲಿದೆ ಎನ್ನಲಾಗುತ್ತಿದೆ.
First published:June 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...