'ಮೇಡಮ್​ ಟುಸ್ಸಾಡ್ಸ್'​​ನಲ್ಲಿ ದೀಪಿಕಾ : ಟ್ರೆಂಡ್​ ಆಗಿದ್ದು ಮಾತ್ರ ಪ್ಯಾಂಟ್

news18
Updated:July 26, 2018, 9:03 PM IST
'ಮೇಡಮ್​ ಟುಸ್ಸಾಡ್ಸ್'​​ನಲ್ಲಿ ದೀಪಿಕಾ : ಟ್ರೆಂಡ್​ ಆಗಿದ್ದು ಮಾತ್ರ ಪ್ಯಾಂಟ್
news18
Updated: July 26, 2018, 9:03 PM IST
-ನ್ಯೂಸ್ 18 ಕನ್ನಡ

ಬಾಲಿವುಡ್ ಚಿತ್ರರಂಗದ ಹಲವಾರು ಸೆಲೆಬ್ರಿಟಿಗಳ ಪ್ರತಿಮೆಗಳು ಲಂಡನ್​ ಮತ್ತು ದೆಹಲಿಯ ಮೇಡಮ್​ ಟುಸ್ಸಾಡ್ಸ್​​ನಲ್ಲಿ ಸ್ಥಾಪಿತವಾಗಿವೆ. ಈ ಪಟ್ಟಿಗೆ ಹೊಸ ಸೇರ್ಪಡೆ ಬಾಲಿವುಡ್​ನ ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ. ಇದರೊಂದಿಗೆ ಕನ್ನಡತಿಯೊಬ್ಬಳ ಮೇಣದ ಪ್ರತಿಮೆಯೊಂದು ವಿಶ್ವ ಪ್ರಸಿದ್ಧ ಮ್ಯೂಸಿಯಂನಲ್ಲಿ ಅನಾವರಣಗೊಳ್ಳಲಿದೆ.



ಇತೀಚೆಗೆ ಟುಸ್ಸಾಡ್ಸ್​ನ ಅಧಿಕಾರಿಗಳು ದೀಪಿಕಾಳ ದೇಹದ ಅಳತೆಗಳನ್ನು ತೆಗೆದುಕೊಂಡಿದ್ದು, ಈ ಖುಷಿ ಕ್ಷಣಗಳ ಫೋಟೋಗಳನ್ನು ಡಿಪ್ಸ್​ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದರು. ಈ ವೇಳೆ ಪದ್ಮಾವತ್ ನಟಿ ಧರಿಸಿದ್ದ ಉಡುಗೆಗಳು  ಹೊಸ ಟ್ರೆಂಡ್​ ಸೃಷ್ಟಿಸಿದೆ. ಗುಳಿಕೆನ್ನೆ ಬೆಡಗಿಯ ಫೋಟೋ ನೋಡುವ ಭರದಲ್ಲಿ ಫ್ಯಾಷನ್ ಪ್ರಿಯರ ಕಣ್ಣು ನೆಟ್ಟಿದ್ದು ಡಿಪ್ಸ್​ ಧರಿಸಿದ್ದ ಉಡುಗೆಗಳ ಮೇಲೆ ಎಂಬುದು ವಿಶೇಷ.ಬಿಳಿ ಬಣ್ಣದ ಶರ್ಟ್​ನೊಂದಿಗೆ ಕಪ್ಪು ಬಣ್ಣದ ಲೆದರ್ ಪ್ಯಾಂಟ್​ ದೀಪಿಕಾ ಧರಿಸಿದ್ದರು. ಅಂತರಾಷ್ಟ್ರೀಯ ಬ್ರಾಂಡ್ ಪ್ರೊನೆಜಾ ಸ್ಕೌಲರ್ ಕಂಪನಿಯ ಈ ಉಡುಗೆಯು ಫ್ಯಾಷನ್ ಪ್ರಿಯರ ಮನಗೆಲ್ಲುವಲ್ಲಿ ಯಶ್ವಸ್ವಿಯಾಗಿದೆ. ಶಲೀನಾ ನಥಾನಿ ವಿನ್ಯಾಸಗೊಳಿಸಿರುವ ಈ ವಸ್ತ್ರದೊಂದಿಗೆ ದೀಪಿಕಾ ಹಾಕಿದ್ದ ಕಿವಿಯೋಲೆ ಕೂಡ ಆಕರ್ಷಕವಾಗಿತ್ತು.

ದೀಪಿಕಾಳ ಹೊಸ ಲುಕ್​ಗೆ ಮಾರು ಹೋದ ಫ್ಯಾಷನ್ ಪ್ರಿಯರು ಆನ್​ಲೈನ್​ನಲ್ಲಿ ಅವರು ಧರಿಸಿದ್ದ ಪ್ಯಾಂಟ್​ನ್ನು ತಡಕಾಡಿದ್ದಾರೆ. 2,450 ಡಾಲರ್​ ಬೆಲೆಯ ಈ ಪ್ಯಾಂಟ್​ನ ಭಾರತದ ಮೌಲ್ಯ ಬರೋಬ್ಬರಿ ​1,68,000 ರೂಪಾಯಿಗಳು.ಅಬ್ಬಾಬ್ಬ, ಬಾಲಿವುಡ್ ಬೆಡಗಿ ಧರಿಸುವ ಒಂದು ಬಟ್ಟೆಯ ಬೆಲೆಗೆ ಇಡೀ ವರ್ಷಕ್ಕೆ ಬೇಕಾಗುವ ಉಡುಪುಗಳನ್ನು ಖರೀದಿಸಬಹುದು ಎಂಬುದು ಅಭಿಮಾನಿಗಳಿಗೆ ಅರ್ಥವಾಗಿದೆ. ಒಂದು ಲೆದರ್ ಪ್ಯಾಂಟ್​ಗೆ ಈ ಪಾಟಿ ಖರ್ಚು ಮಾಡುವ ದೀಪಿಕಾಳ ಸ್ಟೈಲ್ ಸಿಕ್ರೆಟ್ ಕೂಡ ಸಖತ್ ದುಬಾರಿ ಎಂದಾಯಿತು.

ಮೇಡಮ್​ ಟುಸ್ಸಾಡ್ಸ್ ಗೌರವಕ್ಕೆ ಪಾತ್ರರಾಗುತ್ತಿರುವ ಖುಷಿ ಹಂಚಿಕೊಳ್ಳಲು ಬಂದ ದೀಪಿಕಾಳ ವಸ್ತ್ರ ಟ್ರೆಂಡ್ ಆಗಿದ್ದನ್ನು ಅದೃಷ್ಟ ಎನ್ನಬೇಕೊ ಅಥವಾ ದುರಾದೃಷ್ಟ ಎಂದು ಕರೆಯಬೇಕೊ ಎಂಬುದು ನಿಮಗೆ ಬಿಟ್ಟಿದ್ದು.
First published:July 26, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ