• Home
  • »
  • News
  • »
  • lifestyle
  • »
  • Deepavali 2022 Sweets: ದೀಪಾವಳಿ ಹಬ್ಬಕ್ಕೆ ಸಿಹಿ ಸಿಹಿಯಾದ ಈ ಸ್ವೀಟ್ಸ್​ ಮಾಡಿ ಸವಿಯಿರಿ

Deepavali 2022 Sweets: ದೀಪಾವಳಿ ಹಬ್ಬಕ್ಕೆ ಸಿಹಿ ಸಿಹಿಯಾದ ಈ ಸ್ವೀಟ್ಸ್​ ಮಾಡಿ ಸವಿಯಿರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Diwali 2022: ನಿಮ್ಮ ಮನೆಯಲ್ಲಿ ಹಬ್ಬದ ಉತ್ಸಾಹವನ್ನು ಹೆಚ್ಚು ಮಾಡಲು ಹಬ್ಬಕ್ಕೆ ಸಿಹಿ ಇರಲೇಬೇಕು. ಅದರಲ್ಲೂ ಏನಾದರೂ ವಿಶೇಷವಾದ ಸ್ವೀಟ್​ (Sweet) ಮಾಡಿದರೆ ಮಕ್ಕಳಿಗೂ ಇಷ್ಟವಾಗುತ್ತದೆ.

  • Share this:

ದೀಪಾವಳಿ (Deepavali) ಭವ್ಯವಾದ ಹಿಂದೂ ಹಬ್ಬಗಳಲ್ಲಿ (Festival) ಒಂದಾಗಿದೆ, ಇದನ್ನು ಇಡೀ ದೇಶದಾದ್ಯಂತ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ (Celebration). ಈ ಶುಭ ಸಂದರ್ಭವು ಪ್ರತಿ ವರ್ಷದ ಕೊನೆಯಲ್ಲಿ ಅಂದರೆ ಅಕ್ಟೋಬರ್​ (October) ಸಮಯದಲ್ಲಿ ಬರುತ್ತದೆ. ಹಾಗೆಯೇ, ಆಹಾರ (Food) ಪ್ರತಿ ಭಾರತೀಯ ಹಬ್ಬದ (Indian Festival) ಆತ್ಮವಾಗಿದೆ ಎಂದರೆ ತಪ್ಪಲ್ಲ. ನಿಮ್ಮ ಮನೆಯಲ್ಲಿ ಹಬ್ಬದ ಉತ್ಸಾಹವನ್ನು ಹೆಚ್ಚು ಮಾಡಲು ಹಬ್ಬಕ್ಕೆ ಸಿಹಿ ಇರಲೇಬೇಕು. ಅದರಲ್ಲೂ ಏನಾದರೂ ವಿಶೇಷವಾದ ಸ್ವೀಟ್​ (Sweet) ಮಾಡಿದರೆ ಮಕ್ಕಳಿಗೂ ಇಷ್ಟವಾಗುತ್ತದೆ. ಈ ಹಬ್ಬಕ್ಕೆ ನೀವು ಮಾಡಬಹುದಾದ ಸ್ಪೆಷಲ್ ರೆಸಿಪಿಗಳು (Special Recipe) ಇಲ್ಲಿದ್ದು, ಒಮ್ಮೆ ಟ್ರೈ ಮಾಡಿ, ಸವಿಯಿರಿ.


ಮಾವಿನಕಾಯಿ ಮತ್ತು ತೆಂಗಿನಕಾಯಿ ಪುಡಿಂಗ್


ಬೇಕಾಗುವ ಪದಾರ್ಥಗಳು


2 ಕಪ್ ತೆಂಗಿನಕಾಯಿ, ತುರಿದುಕೊಂಡಿರಿ


1 ಕಪ್ ಮಾವು ಅಥವಾ ಅದರ ಸಾರ


2 ಟೇಬಲ್​ ಸ್ಟೂನ್​ ತುಪ್ಪ


1 ಕಪ್ ಸಕ್ಕರೆ


1 ಕಪ್ ಹಾಲು


ಕೇಸರಿ ಎಸಳು


¼ ಟೀಚಮಚ ಏಲಕ್ಕಿ ಪುಡಿ


1 ಕಪ್ ಡ್ರೈ ಫ್ರೂಟ್ಸ್​


ಮಾಡುವ ವಿಧಾನ


ಒಂದು ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿ. ತುಪ್ಪ ಕಾದ ನಂತರ ತೆಂಗಿನಕಾಯಿಯನ್ನು ಹಾಕಿ, ಸುಮಾರು 2-3 ನಿಮಿಷಗಳ ಕಾಲ  ಫ್ರೈ ಮಾಡಿ. ಈಗ ಅದಕ್ಕೆ ಸಕ್ಕರೆ ಮತ್ತು ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕಡಾಯಿಯನ್ನು ಮುಚ್ಚಿ ಅದನ್ನು ಬೇಯಿಲು ಬಿಡಿ.


deepavali sweets recipes for diwali 2022 festival


ನಂತರ ಅದಕ್ಕೆ ಏಲಕ್ಕಿ ಪುಡಿ, ಕೇಸರಿ ಮತ್ತು ಹಾಲು ಹಾಕಿ. ಸಕ್ಕರೆ ಕರಗುವ ತನಕ ಅದನ್ನು ಬೇಯಿಸಿ. ನಂತರ ಅದರ ಮೇಲೆ ಮಾವಿನ ಸಾರ ಹಾಕಿ, ಡ್ರೈ ಫ್ರೂಟ್ಸ್​ಗಳನ್ನು ಹಾಕಿದರೆ, ಮಾವಿನಕಾಯಿ ಮತ್ತು ತೆಂಗಿನಕಾಯಿ ಪುಡ್ಡಿಂಗ್ ರೆಡಿ.


ಬಾದಾಮಿ ಬರ್ಫಿ ಮಾಡುವ ವಿಧಾನ


ಬೇಕಾಗುವ ಪದಾರ್ಥಗಳು


1 ಕಪ್ ಬಾದಾಮಿ


1/2 ಕೆಜಿ ಖೋಯಾ


1 ಕಪ್ ಸಕ್ಕರೆ


½ ಟೀಚಮಚ ಏಲಕ್ಕಿ ಪುಡಿ


ತುಪ್ಪ




ಮಾಡುವ ವಿಧಾನ:


ಒಂದು ಪ್ಯಾನ್ ತೆಗೆದುಕೊಂಡು ಅದರಲ್ಲಿ ಖೋಯಾವನ್ನು ಹಾಕಿ 7-8 ನಿಮಿಷಗಳ ಕಾಲ ಕರಗಿಸಿ, ಅದಕ್ಕೆ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬ್ಲೆಂಡರ್ ತೆಗೆದುಕೊಂಡು ಬಾದಾಮಿಯ ಪುಡಿಯನ್ನು ಮಾಡಿಕೊಳ್ಳಿ.


ಇದನ್ನೂ ಓದಿ: ಪ್ರತಿದಿನ ಕೇಸರಿ ಸೇವಿಸುವುದರಿಂದ ಮುಟ್ಟಿನ ನೋವು ಸೇರಿ ಈ ಐದು ಆರೋಗ್ಯ ಸಮಸ್ಯೆಗಳಿಂದ ಸಿಗುತ್ತೆ ಮುಕ್ತಿ


ಈಗ ಖೋಯಾ ಮಿಶ್ರಣಕ್ಕೆ ಬಾದಾಮಿ ಪೇಸ್ಟ್ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಸ್ವಲ್ಪ ಬೇಯಲು ಬಿಡಿ. ನಂತರ ಒಂದು ತಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಎಣ್ಣೆಯನ್ನು ಹಚ್ಚಿ, ಈ ರೆಡಿಯಾಗಿರುವ ಮಿಶ್ರಣವನ್ನು ಹಾಕಿ, ಹರಡಿ. ನಂತರ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ, ಸವಿಯಿರಿ.


deepavali sweets recipes for diwali 2022 festival


ಗೋಧಿ ಹಿಟ್ಟಿನ ಲಡ್ಡೂ


ಬೇಕಾಗುವ ಪದಾರ್ಥಗಳು


400 ಗ್ರಾಂ ಗೋಧಿ ಹಿಟ್ಟು


1 ಕಪ್ ಡ್ರೈ ಫ್ರೂಟ್ಸ್​, ಕತ್ತರಿಸಿಕೊಂಡಿರಿ



ಪುಡಿ ಸಕ್ಕರೆ


1/2 ಕಪ್ ತುಪ್ಪ


1/2 ಟೀಚಮಚ ಏಲಕ್ಕಿ ಪುಡಿ




ಮಾಡುವ ವಿಧಾನ


ಒಂದು ಬಾಣಲೆ ತೆಗೆದುಕೊಂಡು ಅದರಲ್ಲಿ ಗೋಧಿ ಹಿಟ್ಟನ್ನು ಹುರಿದುಕೊಳ್ಳಿ. ಅದು ಹೆಚ್ಚು ಫ್ರೈ ಆಗದಂತೆ ನೋಡಿಕೊಳ್ಳಿ.ನಂತರ ಅದನ್ನು ತಣ್ಣಗಾಗಲು ಪಕ್ಕಕ್ಕೆ ಇರಿಸಿ.


ಇದನ್ನೂ ಓದಿ: ದೀಪಾವಳಿಗೆ ಈ ರೀತಿ ಗಿಫ್ಟ್ ಕೊಟ್ರೆ ನಿಮ್ಮ ಬಾಂಧವ್ಯ ಚೆನ್ನಾಗಿರುತ್ತಂತೆ


ಈಗ ತುಪ್ಪದೊಂದಿಗೆ ಸಕ್ಕರೆ, ಏಲಕ್ಕಿ ಪುಡಿ ಮತ್ತು ಡ್ರೈ ಫ್ರುಟ್ಸ್​ ಹಾಕಿ ಗೋಧಿ ಹಿಟ್ಟಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ನಿಮ್ಮ ಅಂಗೈಗಳಿಗೆ ಸ್ವಲ್ಪ ತುಪ್ಪವನ್ನು ತೆಗೆದುಕೊಂಡು ಚೆನ್ನಾಗಿ ಉಜ್ಜಿಕೊಳ್ಳಿ, ತಯಾರಾದ ಮಿಶ್ರಣದಿಂದ ರೌಂಡ್​ ಆಗಿ ಲಡ್ಡೂ ತಯಾರಿಸಿ.

Published by:Sandhya M
First published: