• Home
  • »
  • News
  • »
  • lifestyle
  • »
  • Sleeping Habits: ನಿದ್ರೆ ಮಾಡುವಾಗ ಉಂಟಾಗುವ ಸಮಸ್ಯೆಗಳು ಆರೋಗ್ಯಕ್ಕೆ ಅಪಾಯಕಾರಿ

Sleeping Habits: ನಿದ್ರೆ ಮಾಡುವಾಗ ಉಂಟಾಗುವ ಸಮಸ್ಯೆಗಳು ಆರೋಗ್ಯಕ್ಕೆ ಅಪಾಯಕಾರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತುಂಬಾ ಕಡಿಮೆ ನಿದ್ರೆ ಮಾಡುವುದು ವ್ಯಕ್ತಿಯ ದೇಹದ ಮೇಲೆ ಒತ್ತಡ ಹೆಚ್ಚು ಮಾಡುತ್ತದೆ. ಇದರಿಂದ ಹಾರ್ಮೋನ್ ಕಾರ್ಟಿಸೋಲ್ ಉತ್ಪತ್ತಿ ಆಗುತ್ತದೆ. ಮತ್ತು ಇನ್ಸುಲಿನ್ ಪ್ರತಿರೋಧ ಹೆಚ್ಚಿಸುವ ಮೂಲಕ ರಕ್ತದ ಸಕ್ಕರೆ ಮಟ್ಟ ಹೆಚ್ಚಿಸುವ ಕಾರ್ಯ ನಿರ್ವಹಿಸುತ್ತದೆ. ಪ್ರತಿದಿನ ಏಳು ಗಂಟೆಗಿಂತ ಕಡಿಮೆ ನಿದ್ದೆ ಮಾಡುವುದು ಮಧುಮೇಹ ಅಪಾಯ ಹೆಚ್ಚಿಸುತ್ತದೆ.

ಮುಂದೆ ಓದಿ ...
  • Share this:

    ಪ್ರತಿಯೊಬ್ಬರೂ ಉತ್ತಮ ಆರೋಗ್ಯಕ್ಕೆ (Good Health) ಉತ್ತಮ ನಿದ್ರೆ (Good Sleep) ಹೊಂದುವುದು ತುಂಬಾ ಅವಶ್ಯಕ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಆಗಿದೆ. ಆದರೆ ಯಾವ ವ್ಯಕ್ತಿ ಟೈಪ್ 2 ಮಧುಮೇಹ ಕಾಯಿಲೆಯಿಂದ (Type 2 Diabetes Disease) ಬಳಲುತ್ತಿದ್ದಾನೆಯೋ ಆತ ಚೆನ್ನಾಗಿ ನಿದ್ದೆ ಮಾಡುವ ಅಗತ್ಯತೆ ಇನ್ನೂ ಮುಖ್ಯ ಆಗುತ್ತದೆ. ನಿದ್ರೆಯ ಪ್ರಾಮುಖ್ಯತೆ ಮಧುಮೇಹ ಕಾಯಿಲೆ ಇದ್ದವರಿಗೆ ಹೆಚ್ಚು ಪ್ರಮುಖ ಪಾತ್ರ ವಹಿಸುತ್ತದೆ. ಸಾಕಷ್ಟು ನಿದ್ದೆ ಮಾಡುವುದು ರಕ್ತದ ಸಕ್ಕರೆ ಮೇಲಿನ ನಕಾರಾತ್ಮಕ ಪರಿಣಾಮ ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ನಿಮ್ಮ ಆರೋಗ್ಯಕ್ಕೆ ಆಹಾರ ಮತ್ತು ವ್ಯಾಯಾಮ ಎಷ್ಟು ಮುಖ್ಯವೋ, ಅದರಲ್ಲಿ ನಿದ್ದೆಯೂ ಅಷ್ಟೇ ಮುಖ್ಯ ಆಗಿದೆ.


    ಕಡಿಮೆ ನಿದ್ರೆ ಮಾಡುವುದು ಒತ್ತಡ ಹೆಚ್ಚಿಸುತ್ತದೆ


    ತುಂಬಾ ಕಡಿಮೆ ನಿದ್ರೆ ಮಾಡುವುದು ವ್ಯಕ್ತಿಯ ದೇಹದ ಮೇಲೆ ಒತ್ತಡ ಹೆಚ್ಚು ಮಾಡುತ್ತದೆ. ಇದರಿಂದ ಹಾರ್ಮೋನ್ ಕಾರ್ಟಿಸೋಲ್ ಉತ್ಪತ್ತಿ ಆಗುತ್ತದೆ. ಮತ್ತು ಇನ್ಸುಲಿನ್ ಪ್ರತಿರೋಧ ಹೆಚ್ಚಿಸುವ ಮೂಲಕ ರಕ್ತದ ಸಕ್ಕರೆ ಮಟ್ಟ ಹೆಚ್ಚಿಸುವ ಕಾರ್ಯ ನಿರ್ವಹಿಸುತ್ತದೆ.


    2020 ರಲ್ಲಿ ಡಯಾಬಿಟೋಲೋಜಿಯಾದಲ್ಲಿ ಪ್ರಕಟವಾದ ಅಧ್ಯಯನ ಹೇಳುವ ಪ್ರಕಾರ, ಪ್ರತಿದಿನ ಏಳು ಗಂಟೆಗಿಂತ ಕಡಿಮೆ ನಿದ್ದೆ ಮಾಡುವುದು ಮಧುಮೇಹ ಅಪಾಯ ಹೆಚ್ಚಿಸುತ್ತದೆ. ಅಂತಹ ವೇಳೆ ಸಾಕಷ್ಟು ನಿದ್ರೆ ಪಡೆಯುವಾಗ ಉಂಟಾಗುವ ಕೆಲವು ಸಮಸ್ಯೆಗಳು ಹೇಗೆ ಅಪಾಯಕಾರಿ ಆಗುತ್ತವೆ ಎಂದು ನೋಡೋಣ.


    ಇದನ್ನೂ ಓದಿ: ಥೈರಾಯ್ಡ್​ನಿಂದ ಬಿಡುಗಡೆ ಹೊಂದಲು ಈ ಸೂಪರ್​ ಫುಡ್​​ಗಳು ಸಹಕಾರಿ


    ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಸಮಸ್ಯೆ


    ಅಮೇರಿಕನ್ ಅಕಾಡೆಮಿ ಆಫ್ ಸ್ಲೀಪ್ ಮೆಡಿಸಿನ್ ಪ್ರಕಾರ, ಟೈಪ್ 2 ಡಯಾಬಿಟಿಸ್ ಹೊಂದಿರುವ 10 ರೋಗಿಗಳಲ್ಲಿ 7 ಜನರು ಪ್ರತಿರೋಧಕ ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಸಮಸ್ಯೆ ಅನುಭವಿಸುತ್ತಾರೆ. ಕುತ್ತಿಗೆಯಲ್ಲಿ ಹೆಚ್ಚುವರಿ ಕೊಬ್ಬಿನ ಹೆಚ್ಚಳ ಈ ಸಮಸ್ಯೆ ಉಂಟಾಗುವಂತೆ ಮಾಡುತ್ತದೆ. ಇದು ನಿದ್ರೆಯಲ್ಲಿ ಮಧ್ಯಂತರ ಉಸಿರಾಟ ಉಂಟು ಮಾಡುತ್ತದೆ.


    ನಿದ್ರೆಯ ವೇಳೆ ಅಸಹಜ ಉಸಿರಾಟ ದೇಹದ ಆಮ್ಲಜನಕದ ಪೂರೈಕೆ ಮೇಲೆ ಪರಿಣಾಮ ಬೀರುತ್ತದೆ. ಮತ್ತು ಕಳಪೆ ಗುಣಮಟ್ಟದ ನಿದ್ರೆಗೆ ಕಾರಣ ಆಗುತ್ತದೆ. ಸ್ಲೀಪ್ ಅಪ್ನಿಯ ಲಕ್ಷಣಗಳು ಜೋರಾಗಿ ಗೊರಕೆ ಹೊಡೆಯುವುದು, ಅತಿಯಾದ ಹಗಲಿನ ನಿದ್ರೆ, ಕಿರಿಕಿರಿ ಮತ್ತು ಬೆಳಿಗ್ಗೆ ತಲೆನೋವು ಉಂಟು ಮಾಡುತ್ತದೆ.


    ರಕ್ತದ ಸಕ್ಕರೆ ನಿಯಂತ್ರಣ ಮಾಡುವುದು ಮುಖ್ಯ


    ರಕ್ತದ ಸಕ್ಕರೆ ತುಂಬಾ ಹೆಚ್ಚಾದಾಗ ಅಥವಾ ತುಂಬಾ ಕಡಿಮೆ ಆದಾಗ ಅದು ರಾತ್ರಿ ನಿದ್ರೆಗೆ ತೊಂದರೆ ಉಂಟು ಮಾಡುತ್ತದೆ. ಟೈಪ್ 2 ಡಯಾಬಿಟಿಸ್‌ ನಲ್ಲಿ ಉತ್ತಮ ನಿದ್ರೆ ಮಾಡಲು ನೀವು ಮಾಡಬಹುದಾದ ಅತ್ಯುತ್ತಮ ಕೆಲಸ ಅಂದ್ರೆ ನಿಮ್ಮ ರಕ್ತದ ಸಕ್ಕರೆ ಮಟ್ಟ ನಿಯಂತ್ರಣದಲ್ಲಿ ಇಟ್ಟುಕೊಂಡಾಗ ಉತ್ತಮ ನಿದ್ರೆಗೆ ಸಹಕಾರಿ.


    ಹಗಲಿನಲ್ಲಿ ನಿದ್ರೆ ಮಾಡುವುದು


    ಯಾವುದೇ ವ್ಯಕ್ತಿ ಹಗಲು ನಿದ್ದೆ ಮಾಡಿದರೆ, ರಾತ್ರಿ ನಿದ್ದೆ ಮಾಡದ ಸ್ಥಿತಿ ಉಂಟು ಮಾಡುತ್ತದೆ. ಆದರೆ ಮಧುಮೇಹ ಹೊಂದಿರುವ ಜನರು, ನಿದ್ರಾಹೀನತೆ ಹೆಚ್ಚು ಒಳಗಾಗುತ್ತಾರೆ. ಅಂತಹ ವೇಳೆ ರಾತ್ರಿ ಸಾಕಷ್ಟು ನಿದ್ರೆಗಾಗಿ ನೀವು ಹಗಲಿನಲ್ಲಿ ನಿದ್ರೆ ಮಾಡದೇ ಇರುವುದು ಮುಖ್ಯ.


    ಬೆಡ್ ಟೈಮ್ ಟೇಬಲ್ ರೆಡಿ ಮಾಡಿ


    ಟೈಪ್ 2 ಡಯಾಬಿಟಿಸ್‌ ನಲ್ಲಿ ಗುಣಮಟ್ಟದ ನಿದ್ರೆಗಾಗಿ ನಿಯಮಿತವಾಗಿ ಮಲಗುವ ಸಮಯ ಮತ್ತು ಎಚ್ಚರ ಆಗುವ ಸಮಸಯ ನಿಗದಿ ಪಡಿಸಿ. ವಾರದಲ್ಲಿ ಏಳು ದಿನವೂ ಇದನ್ನು ಅನುಸರಿಸಬೇಕು. ನಿಗದಿತ ಮಲಗುವ ಸಮಯದ ವೇಳಾಪಟ್ಟಿ ನಿಮ್ಮ ದೇಹದ ಆಂತರಿಕ ಆರೋಗ್ಯ ಚೆನ್ನಾಗಿರಲು ಸಹಕಾರಿ.


    ರಾತ್ರಿ ಮದ್ಯಪಾನ ಮಾಡಬೇಡಿ


    ರಾತ್ರಿ ಆಲ್ಕೋಹಾಲ್ ಸೇವನೆ ನಿದ್ರೆಯ ಗುಣಮಟ್ಟ ಕಡಿಮೆ ಮಾಡುತ್ತದೆ. ಆಲ್ಕೋಹಾಲ್ ಸೇವನೆ ಆಳವಾದ ನಿದ್ರೆಗೆ ಸಹಕಾರಿ. ಆಲ್ಕೋಹಾಲ್ ನಿಮ್ಮ ಮೆದುಳನ್ನು ಪ್ರಕ್ಷುಬ್ಧಗೊಳಿಸುತ್ತದೆ. ಇದು ರಕ್ತದ ಸಕ್ಕರೆ ಮಟ್ಟ ಹೆಚ್ಚಿಸಲು ಸಹಕಾರಿ.


    ಇದನ್ನೂ ಓದಿ: ಕರುಳು ಮತ್ತು ಹೊಟ್ಟೆಯನ್ನು ಸ್ವಚ್ಛಗೊಳಿಸಲು ತಜ್ಞರು ಹೇಳಿರುವ ಸುಲಭ ಪರಿಹಾರ ಹೀಗಿದೆ!


    ದಿನದಲ್ಲಿ ವ್ಯಾಯಾಮ ಮಾಡುವುದು


    ನೀವು ಹಗಲಿನಲ್ಲಿ ಕೆಲವು ದೈಹಿಕ ಚಟುವಟಿಕೆ ಮಾಡುವುದು ರಾತ್ರಿ ಉತ್ತಮ ನಿದ್ರೆ ಮಾಡಲು ಸಹಕಾರಿ. ಆರೋಗ್ಯಕರ ತೂಕ ಕಾಪಾಡಿಕೊಳ್ಳಲು, ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

    Published by:renukadariyannavar
    First published: