ಮಂಗಳೂರು ಅರಬ್ಬಿ ಸಾಗರದಲ್ಲಿ ಮುಳುಗಿದ ಆಳಸಮುದ್ರ ಮೀನುಗಾರಿಕೆ ಬೋಟ್; ಐವರು ನಾಪತ್ತೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಭಾರತದ ಹವಾಮಾನ ಇಲಾಖೆ (ಐಎಂಡಿ) ಈ ಮೊದಲು ಮೀನುಗಾರರಿಗೆ ಡಿಸೆಂಬರ್ 3 ಮತ್ತು 4 ರಂದು ಆಳ ಸಮುದ್ರಕ್ಕೆ ಇಳಿಯದಂತೆ ಸಲಹೆ ನೀಡಿತ್ತು. ದೇಶದ ದಕ್ಷಿಣ ಕರಾವಳಿ ಭಾಗಗಳಲ್ಲಿ ಮತ್ತು ಲಕ್ಷದ್ವೀಪದ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ಮೀನುಗಾರರು ಆಳ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು.

ಮುಂದೆ ಓದಿ ...
  • Share this:

    ಮಂಗಳೂರು; ಆಳ ಸಮುದ್ರ ಮೀನುಗಾರಿಕೆ ಬೋಟ್ ಒಂದು ಮಂಗಳೂರು ಕರಾವಳಿ ಭಾಗದ ಅರಬ್ಬಿ ಸಮುದ್ರದಲ್ಲಿ ತಲೆಕೆಳಗಾಗಿ ಮುಳುಗುಲಾರಂಭಿಸಿದೆ. ಬೋಟ್​ನಲ್ಲಿದ್ದ 22 ಮಂದಿ ಮೀನುಗಾರರು ಇದ್ದರು. ಅವರಲ್ಲಿ 16 ಮಂದಿಯನ್ನು ರಕ್ಷಣೆ ಮಾಡಲಾಗಿದ್ದು, ಐವರು ನಾಪತ್ತೆಯಾಗಿದ್ದಾರೆ.

    22 ಜನ ಮೀನುಗಾರರರಿದ್ದ ಬೋಟ್ ಮಂಗಳವಾರ ಬೆಳಗ್ಗೆ ಸಮುದ್ರದಲ್ಲಿ ಮುಳುಗಲು ಆರಂಭಿಸಿದೆ. ಸ್ಥಳೀಯ ಮೀನುಗಾರರ ಸಹಾಯದೊಂದಿಗೆ ಕರಾವಳಿ ರಕ್ಷಣಾ ಪಡೆ ಬೆಳಗ್ಗೆಯಿಂದಲೂ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದೆ. ಈವರೆಗೆ 16 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.

    ಇದನ್ನು ಓದಿ: ಎಂಎಸ್​ಪಿ ಎಂದರೇನು? ಕೇಂದ್ರ ಕೃಷಿ ಕಾಯ್ದೆಯ ವಿರುದ್ಧ ರೈತರ ಭಯಕ್ಕೆ ಮತ್ತು ಹೋರಾಟಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ

    ಭಾರತದ ಹವಾಮಾನ ಇಲಾಖೆ (ಐಎಂಡಿ) ಈ ಮೊದಲು ಮೀನುಗಾರರಿಗೆ ಡಿಸೆಂಬರ್ 3 ಮತ್ತು 4 ರಂದು ಆಳ ಸಮುದ್ರಕ್ಕೆ ಇಳಿಯದಂತೆ ಸಲಹೆ ನೀಡಿತ್ತು. ದೇಶದ ದಕ್ಷಿಣ ಕರಾವಳಿ ಭಾಗಗಳಲ್ಲಿ ಮತ್ತು ಲಕ್ಷದ್ವೀಪದ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ಮೀನುಗಾರರು ಆಳ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು.

    Published by:HR Ramesh
    First published: