• Home
  • »
  • News
  • »
  • lifestyle
  • »
  • Health Care: ಚಳಿಗಾಲದಲ್ಲಿ ಅನಾರೋಗ್ಯ ಪ್ರಕರಣಗಳಲ್ಲಿ ಇಳಿಕೆ, ಡಾಕ್ಟರ್​ ಹೇಳೋದೇನು?

Health Care: ಚಳಿಗಾಲದಲ್ಲಿ ಅನಾರೋಗ್ಯ ಪ್ರಕರಣಗಳಲ್ಲಿ ಇಳಿಕೆ, ಡಾಕ್ಟರ್​ ಹೇಳೋದೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Health Care: ಕೆಲವು ನಿರಂತರ ಕಾಯಿಲೆಗಳು ಇದ್ದರೂ, ಸಾಂಪ್ರದಾಯಿಕ ಚಳಿಗಾಲದ ಅಸ್ವಸ್ಥತೆಗಳಲ್ಲಿ ಇಳಿಕೆಯನ್ನು ಕಂಡಿರುವುದಾಗಿ ಬೆಂಗಳೂರಿನ ವೈದ್ಯರು ಹೇಳುತ್ತಾರೆ.

  • Trending Desk
  • 4-MIN READ
  • Last Updated :
  • Share this:

ಚಳಿಗಾಲದಲ್ಲಿ (Winter)  ಸಾಮಾನ್ಯವಾಗಿ ಅನಾರೋಗ್ಯ, ಕಾಯಿಲೆ, ರೋಗ ರುಜಿನ ಹೆಚ್ಚು. ಶೀತ (Cold), ನೆಗಡಿ, ಕೆಮ್ಮು, ಕಾಲು ನೋವು, ಮಂಡಿ ನೋವು, ಚರ್ಮದ ಸಮಸ್ಯೆ ಹೀಗೆ ಒಂದಲ್ಲ ಒಂದು ಅನಾರೋಗ್ಯ (Health Issue) ಚಳಿಗಾಲದಾದ್ಯಂತ ಕಾಡುತ್ತದೆ. ಅದರಲ್ಲೂ ಚಳಿಯ ವಾತಾವರಣವು ಚರ್ಮದ ತುರಿಕೆ(Skin Care), ಸೋರಿಯಾಸಿಸ್, ಎಸ್ಜಿಮಾ ಮತ್ತು ನ್ಯುಮೋನಿಯಾವನ್ನು ಉಲ್ಬಣಗೊಳಿಸುತ್ತದೆ. ಆದರೆ ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಇಂಥ ಹವಾಮಾನ ಸಂಬಂಧಿತ ಅನಾರೋಗ್ಯ ಪ್ರಕರಣಗಲ್ಲಿ ಇಳಿಕೆ ಕಂಡುಬಂದಿದೆ . ಕೆಲವು ನಿರಂತರ ಕಾಯಿಲೆಗಳು ಇದ್ದರೂ, ಸಾಂಪ್ರದಾಯಿಕ ಚಳಿಗಾಲದ ಅಸ್ವಸ್ಥತೆಗಳಲ್ಲಿ ಇಳಿಕೆಯನ್ನು ಕಂಡಿರುವುದಾಗಿ ಬೆಂಗಳೂರಿನ ವೈದ್ಯರು ಹೇಳುತ್ತಾರೆ.


ಈ ಬಾರಿ ಹೆಚ್ಚಿನ ನ್ಯುಮೋನಿಯಾ ಪ್ರಕರಣಗಳು ದಾಖಲಾಗಿಲ್ಲ!


ಆಸ್ಪತ್ರೆಯ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಹಿಂದಿನ ಚಳಿಗಾಲದಲ್ಲಿ ತಿಂಗಳಿಗೆ 30-40 ವಯಸ್ಕ ನ್ಯುಮೋನಿಯಾ ರೋಗಿಗಳನ್ನು ನೋಡುತ್ತಿದ್ದೆವು.


ಆದ್ರೆ ಈ ಬಾರಿ ಅಂಥವರ ಸಂಖ್ಯೆ ಶೇ. 20-30ರಷ್ಟು ಕಡಿಮೆಯಾಗಿದೆ. ಇನ್ನು ಚಳಿಗಾಲದಲ್ಲಿ ಮಕ್ಕಳಲ್ಲಿ ನ್ಯುಮೋನಿಯಾ ಸಾಮಾನ್ಯ ಸ್ಥಿತಿಯಾಗಿದ್ದರೂ, ಈ ಬಾರಿ ಅಂತಹ ಹೆಚ್ಚಿನ ಪ್ರಕರಣಗಳು ಆಸ್ಪತ್ರೆಗೆ ದಾಖಲಾಗುತ್ತಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.


ಬೆಲೆನಸ್ ಚಾಂಪಿಯನ್ ಆಸ್ಪತ್ರೆಯ ವೈದ್ಯರಾದ ಡಾ ಲಕ್ಷ್ಮಿ.ವಿ. ಅವರು, ಈ ಚಳಿಗಾಲದಲ್ಲಿ ನ್ಯುಮೋನಿಯಾ ಮತ್ತು ಬ್ರಾಂಕೈಟಿಸ್‌ನಂತಹ ಕೆಳ ಶ್ವಾಸೇಂದ್ರಿಯ ಪ್ರದೇಶದ ಸೋಂಕುಗಳ ಪ್ರಕರಣಗಳು ಹೆಚ್ಚಾಗಿಲ್ಲ.


ಇನ್ನು "URT ಸೋಂಕು, ಕೆಮ್ಮು, ನೋಯುತ್ತಿರುವ ಗಂಟಲು ಮತ್ತು ಶೀತಗಳಂತಹ ಅನಾರೋಗ್ಯದ ಚೇತರಿಕೆಗೆ ಹೆಚ್ಚು ಸಮಯ ಬೇಕಾಗುತ್ತದೆ ಎಂದು ಡಾ. ಲಕ್ಷ್ಮೀ ಹೇಳಿದ್ದಾರೆ.


ಚರ್ಮದ ಸಮಸ್ಯೆಗಳ ಪ್ರಕರಣದಲ್ಲೂ ಇಳಿಕೆ


ಈ ಬಾರಿ ಚಳಿಗಾಲದಲ್ಲಿ ಚರ್ಮದ ಸಮಸ್ಯೆಗಳಲ್ಲೂ ಇಳಿಕೆಯಾಗಿದೆ ಎನ್ನಬಹುದು. ಸದ್ಯ ಚರ್ಮರೋಗ ತಜ್ಞರು ಚರ್ಮದಲ್ಲಿ ತುರಿಕೆ ಮತ್ತು ಕಿರಿಕಿರಿಯ ಪ್ರಕರಣಗಳಲ್ಲಿ ಇಳಿಕೆಯನ್ನು ಕಂಡಿದ್ದಾರೆ.


ಇದನ್ನೂ ಓದಿ: ತಾಮ್ರದ ಪಾತ್ರೆಯಲ್ಲಿ ಇಟ್ಟ ನೀರು ಆರೋಗ್ಯಕ್ಕೆ ಒಳ್ಳೆಯದ್ದಾ? ಕೆಟ್ಟದ್ದಾ?


ಕೋವಿಡ್ ಸಾಂಕ್ರಾಮಿಕದ ನಂತರ ಜನರು ಹೆಚ್ಚು ಆಹಾರ ಪ್ರಜ್ಞೆಯನ್ನು ಹೊಂದಿರುವುದು, ಮನೆಯಿಂದಲೇ ಕೆಲಸ ಮಾಡುವುದರಿಂದ ಸರಿಯಾದ ಪ್ರಮಾಣದ ಪೋಷಕಾಂಶಗಳನ್ನು ತೆಗೆದುಕೊಳ್ಳುವುದು, ರಜೆಯ ಸಮಯದಲ್ಲಿ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿರುವುದು, ವ್ಯಾಯಾಮಗಳ ಬಗ್ಗೆ ಹೆಚ್ಚು ಜಾಗೃತರಾಗಿರುವುದು ಇದಕ್ಕೆ ಕಾರಣ ಎಂದು ಚರ್ಮರೋಗ ತಜ್ಞರಾದ ಡಾ.ಜಯಾ ಶರ್ಮಾ ಹೇಳಿದ್ದಾರೆ.
ಚಳಿಗಾಲದ ರಜೆ ಸಹಾಯಕಾರಿ!


ಇನ್ನು, ಚಳಿಗಾಲದ ರಜೆಯು ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡಿದೆ. ಅಲ್ಲದೇ ಹೋದರೆ ಅದಯ ಸೋರಿಯಾಸಿಸ್‌ನಂತಹ ಚರ್ಮದ ಪರಿಸ್ಥಿತಿಗಳನ್ನು ಉಲ್ಬಣಗೊಳಿಸುತ್ತಿತ್ತು ಎಂಬುದಾಗಿಯೂ ಡಾ.ಜಯಾ ಶರ್ಮಾ ಹೇಳಿದ್ದಾರೆ.


ಬೆಲನಸ್ ಚಾಂಪಿಯನ್ ಆಸ್ಪತ್ರೆಯ ಕನ್ಸಲ್ಟೆಂಟ್ ಡರ್ಮಟಾಲಜಿಸ್ಟ್ ಡಾ.ಉದಯ್ ಕುಮಾರ್ ಸೊನ್ನಪ್ಪ ಅವರು ಹೇಳುವ ಪ್ರಕಾರ, 2022ರಲ್ಲಿ ಮಕ್ಕಳಲ್ಲಿನ ಚರ್ಮದ ಸಮಸ್ಯೆಗಳೂ ಕಡಿಮೆಯಾಗಿವೆ.


ಈ ಬಾರಿ ಮಕ್ಕಳಲ್ಲಿ ಕೈ, ಕಾಲು ಮತ್ತು ಬಾಯಿ ರೋಗಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬಂದಿದೆ. ಇದಕ್ಕೆ ಚಳಿಗಾಲದ ರಜೆ ಕೂಡ ಪ್ರಮುಖ ಕಾರಣವಾಗಿದೆ. ರಜೆಯಿಂದದಾಗಿ ಶಾಲೆಗಳಲ್ಲಿ ರೋಗ ಹರಡುವ ಪ್ರಮಾಣ ಕಡಿಮೆಯಾಗಿದೆ ಎಂದು ಡಾ. ಉದಯ್‌ ಕುಮಾರ್‌ ಸೊನ್ನಪ್ಪ ಹೇಳುತ್ತಾರೆ.


ಒಟ್ಟಾರೆಯಾಗಿ, ಇತ್ತೀಚೆಗೆ ಆರೋಗ್ಯದ ಕುರಿತಾದ ಜಾಗೃತಿ ಹಾಗೂ ಆರೋಗ್ಯವಂತರಾಗಿ ಇರಲು ಏನನ್ನ ಮಾಡಬೇಕು... ಯಾವೆಲ್ಲ ಮುನ್ನಚ್ಚರಿಕೆ ವಹಿಸಬೇಕು... ಹೇಗೆ ಆರೈಕೆ ಮಾಡಿಕೊಳ್ಳಬೇಕು ಎಂಬಂಥ ಅಂಶಗಳ ಬಗ್ಗೆ ಜನರು ಹೆಚ್ಚು ಜಾಗೃತರಾಗಿದ್ದಾರೆ.


ಅದರಲ್ಲೂ ಕೋವಿಡ್‌ ಸಾಂಕ್ರಾಮಿಕದ ಬಳಿಕ ಜನರಲ್ಲಿ ಆರೋಗ್ಯ ಜಾಗೃತಿ ಹೆಚ್ಚಾಗಿದೆ ಅಂತಲೇ ಹೇಳಬಹುದು. ಆರೋಗ್ಯ ಸಮಸ್ಯೆ ಹೆಚ್ಚಾಗದಿರಲಿ ಎಂಬ ಕಾರಣಕ್ಕೆ ಹೆಚ್ಚಿನ ಜನರು ಜೀವನಶೈಲಿಯನ್ನು ಬದಲಿಸಿಕೊಂಡಿದ್ದಾರೆ.


ಇದನ್ನೂ ಓದಿ: ನೀವ್ ಮಾಡೋ ಈ ತಪ್ಪು ಚರ್ಮದ ಅಂದವನ್ನು ಹಾಳು ಮಾಡುತ್ತೆ


ಆಹಾರ, ವ್ಯಾಯಾಮಗಳಲ್ಲಿ ಕಟ್ಟುನಿಟ್ಟಾಗಿದ್ದಾರೆ. ಏನೇ ಆಗಲಿ... ಅನಾರೋಗ್ಯ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿರುವುದು ಸಮಾಧಾನಕರ ಸಂಗತಿಯಂತೂ ಹೌದು.

Published by:Sandhya M
First published: