Teeth Care: ಈ ಟಿಪ್ಸ್ ಫಾಲೊ ಮಾಡಿದ್ರೆ ನಿಮ್ಮ ಹಲ್ಲುಗಳು ಹಾಳಾಗೋದಿಲ್ಲ, ಫಳ ಫಳ ಹೊಳೆಯುತ್ತೆ!

ಹಲ್ಲಿನ ಕೊಳೆತವು ಆರೋಗ್ಯ ಸಮಸ್ಯೆಯಾಗಿದೆ. ನೀವು ನಿಮ್ಮ ಹಲ್ಲುಗಳನ್ನು ಚೆನ್ನಾಗಿ ನೋಡಿಕೊಳ್ಳುವ ಮೂಲಕ ಹಲ್ಲು ಕೊಳೆಯುವಿಕೆ ಮತ್ತು ಇತರೆ ತೊಂದರೆಯನ್ನು ತಪ್ಪಿಸಬಹುದು. ಹಲ್ಲಿನ ಕೊಳೆಯುವಿಕೆ ತಡೆಗೆ ಆಹಾರದಲ್ಲಿ ಕೆಲವು ಬದಲಾವಣೆ ಮಾಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಹಲ್ಲು (Teeth) ನಮ್ಮ ದೇಹದ (Body) ಪ್ರಮುಖ ಅಂಗ (Part). ನಾವು ತಿನ್ನುವ (Eating) ಮತ್ತು ಕುಡಿಯುವ (Drinking) ವಸ್ತುಗಳನ್ನು ಅಗಿಯಲು ಸಹಾಯ ಮಾಡುವುದೇ ಹಲ್ಲು. ಇಂತಹ ಹಲ್ಲು ಬ್ಯಾಕ್ಟೀರಿಯಾಗೆ ತುತ್ತಾಗಿ, ಹುಳು ಹಿಡಿಯುವುದು, ಹಲ್ಲು ಹಾಳಾಗುವುದು, ಜುಮ್ಮೆನ್ನುವುದು ಉಂಟಾಗುತ್ತದೆ. ನಿಮ್ಮ ಬಾಯಿ ಬ್ಯಾಕ್ಟೀರಿಯಾದಿಂದ ತುಂಬಿಕೊಂಡರೆ ಅದು ಸಣ್ಣ ಆಹಾರ ಕಣಗಳು ಮತ್ತು ಲಾಲಾರಸದೊಂದಿಗೆ ಬೆರೆತು ಪ್ಲೇಕ್ ಎಂಬ ಜಿಗುಟಾದ ಫಿಲ್ಮ್ ರೂಪುಗೊಳ್ಳಲು ಕಾರಣವಾಗುತ್ತದೆ. ಇದು ಹಲ್ಲುಗಳ ಮೇಲೆ ರೂಪುಗೊಳ್ಳುತ್ತದೆ. ನೀವು ಕಾರ್ಬೋಹೈಡ್ರೇಟ್‌ ಆಹಾರ ಅದರಲ್ಲೂ ಸಕ್ಕರೆಗಳು ಅಥವಾ ಪಿಷ್ಟಗಳ ಸೇವನೆ ಮಾಡಿದಾಗ ಅಥವಾ ಕುಡಿದಾಗ ಪ್ಲೇಕ್‌ನಲ್ಲಿರುವ ಬ್ಯಾಕ್ಟೀರಿಯಾಗಳು ಕಾರ್ಬೋಹೈಡ್ರೇಟ್‌ಗಳನ್ನು ಅಗತ್ಯವಿರುವ ಶಕ್ತಿಯನ್ನಾಗಿ ಪರಿವರ್ತನೆ ಮಾಡುತ್ತವೆ.

    ಈ ವೇಳೆ ಆಮ್ಲ ಉತ್ಪತ್ತಿಯಾಗುತ್ತದೆ. ಕಾಲಾನಂತರದಲ್ಲಿ, ಪ್ಲೇಕ್ನಲ್ಲಿರುವ ಆಮ್ಲವು ಹಲ್ಲಿನ ಮೇಲ್ಮೈಗೆ ಹಾನಿ ಉಂಟು ಮಾಡುತ್ತದೆ. ಹಲ್ಲಿನ ಕೊಳೆತವು ಆರೋಗ್ಯ ಸಮಸ್ಯೆಯಾಗಿದೆ. ಇದನ್ನು ತಪ್ಪಿಸಬಹುದು. ನೀವು ನಿಮ್ಮ ಹಲ್ಲುಗಳನ್ನು ಚೆನ್ನಾಗಿ ನೋಡಿಕೊಳ್ಳುವ ಮೂಲಕ ಹಲ್ಲು ಕೊಳೆಯುವಿಕೆ ಮತ್ತು ಇತರೆ ತೊಂದರೆಯನ್ನು ತಪ್ಪಿಸಬಹುದು.

    ಹಲ್ಲಿನ ಕೊಳೆಯುವಿಕೆ ತಡೆಗೆ ಆಹಾರದಲ್ಲಿ ಕೆಲವು ಬದಲಾವಣೆ ಮಾಡಿ. ಊಟದ ನಡುವೆ ಅಥವಾ ಮಲಗುವ ಸಮಯಕ್ಕೆ ಒಂದು ಗಂಟೆ ಮೊದಲು ಸಕ್ಕರೆ ಆಹಾರ ಮತ್ತು ಪಾನೀಯಗಳ ಸೇವನೆ ತಪ್ಪಿಸಿ.

    ಇದನ್ನೂ ಓದಿ: ಆಯುರ್ವೇದ ಔಷಧಗಳ ದೀರ್ಘ ಬಳಕೆ ಎಷ್ಟು ಒಳ್ಳೆಯದು? ಇದರಿಂದ ಉಂಟಾಗುವ ಅಡ್ಡ ಪರಿಣಾಮಗಳು ಹೀಗಿವೆ!

    ಹಲ್ಲು ಕೊಳೆಯುವಿಕೆಯ ಲಕ್ಷಣಗಳು ಹೀಗಿವೆ

    - ಹಲ್ಲು ನೋವು

    - ಹಲ್ಲುಗಳು ಜುಮ್ಮೆನ್ನುವುದು ಅಂದರೆ ಬಿಸಿ, ಶೀತ ಅಥವಾ ಸಿಹಿ ಸೇವಿಸಿದಾಗ ಅಥವಾ ಕುಡಿದಾಗ ಮೃದುತ್ವ ಅಥವಾ ನೋವು ಅನುಭವ

    - ಹಲ್ಲುಗಳ ಮೇಲೆ ಗೋಚರಿಸುವ ಕಲೆಗಳು

    - ಕೆಟ್ಟ ಉಸಿರಾಟ

    - ಬಾಯಿಯಲ್ಲಿ ಅಹಿತಕರ ರುಚಿ

    ಹಲ್ಲುನೋವು ಬಂದರೆ ಸಾಧ್ಯವಾದಷ್ಟು ಬೇಗ ನಿಮ್ಮ ದಂತವೈ ದ್ಯರನ್ನು ಭೇಟಿ ಮಾಡಬೇಕು. ನೀವು ಸಮಸ್ಯೆಯನ್ನು ನಿರ್ಲಕ್ಷಿಸಿದರೆ ಅದು ಹೆಚ್ಚು ಗಂಭೀರವಾಗಬಹುದು.

    ಹಲ್ಲು ಹಳದಿಯಾಗುವುದು, ಒಸಡು ಊದಿಕೊಳ್ಳುವುದು ಅಥವಾ ರಕ್ತಸ್ರಾವ ಮತ್ತು ಬಾಯಿಯ ಚಿಕ್ಕದಾಗುವುದು ಒಂದು ಕಾಯಿಲೆ. ಈ ಸಮಸ್ಯೆಗಳನ್ನು ತೊಡೆದು ಹಾಕಲು ಈ ಕ್ರಮಗಳನ್ನು ನಿಮ್ಮ ದಿನಚರಿಯ ಭಾಗವಾಗಿ ಮಾಡಿ.

    ಉಪ್ಪು ಎಣ್ಣೆಯ ಪ್ರಯೋಜನ

    ಹಲ್ಲುಗಳಿಗೆ ತೊಂದರೆಯಾದರೆ ಉಪ್ಪು ಮತ್ತು ಸ್ವಲ್ಪ ಎಣ್ಣೆಯನ್ನು ಸೇರಿಸಿ, ಹಲ್ಲಿನ ಮತ್ತು ವಸಡುಗಳನ್ನು ಲಘುವಾಗಿ ಮಸಾಜ್ ಮಾಡಿ. ಸಮಸ್ಯೆ ಹೋಗುತ್ತದೆ. ಅದಕ್ಕೆ ಚಿಟಿಕೆ ಅರಿಶಿನ ಕೂಡ ಸೇರಿಸಬಹುದು. ವಾರಕ್ಕೊಮ್ಮೆ ಈ ಸ್ಕ್ರಬ್ ಮಾಡುವುದರಿಂದ ಹಲ್ಲುಗಳ ಹಳದಿ ನಿವಾರಣೆ ಆಗುತ್ತದೆ ಮತ್ತು ವಸಡುಗಳ ಊತ ಕಡಿಮೆಯಾಗುತ್ತದೆ.

    ಆಯಿಲ್ ಪುಲ್ಲಿಂಗ್

    ಬಾಯಿಯಿಂದ ವಾಸನೆ ತೆಗೆದು ಹಾಕಲು ಮತ್ತು ಬ್ಯಾಕ್ಟೀರಿಯಾ ಕೊಲ್ಲಲು ಆಯುರ್ವೇದ ವಿಧಾನವಾಗಿದೆ. 15-20 ದಿನಕ್ಕೊಮ್ಮೆ ಆಯಿಲ್ ಪುಲ್ಲಿಂಗ್ ಮಾಡುವುದು ಹಲ್ಲು ಮತ್ತು ವಸಡುಗಳಿಗೆ ಹೆಚ್ಚಿನ ಲಾಭ ಸಿಗುತ್ತದೆ. ತೆಂಗಿನಕಾಯಿ ಅಥವಾ ಆಲಿವ್ ಎಣ್ಣೆಯನ್ನು ಬಾಯಿಯಲ್ಲಿ ತುಂಬಿಸಿ. 2-3 ನಿಮಿಷಗಳ ಕಾಲ ಪುಲ್ಲಿಂಗ್ ಮಾಡಿ ನಂತರ ತೊಳೆಯಿರಿ.

    ಅಡಿಗೆ ಸೋಡಾ

    ಹಲ್ಲುಗಳ ಹಳದಿ ಬಣ್ಣ ತೆಗೆದು ಹಾಕಲು, ಒಂದು ವಾರ ಅಥವಾ 10 ದಿನಗಳಲ್ಲಿ ಅಡಿಗೆ ಸೋಡಾದಿಂದ ಬ್ರಷ್  ಮಾಡಿ.

    ಇದನ್ನೂ ಓದಿ: ಮೂನ್ ಚಾರ್ಜ್ಡ್ ವಾಟರ್ ಎಂದರೇನು? ಇದರಿಂದ ಆರೋಗ್ಯಕ್ಕೆ ಸಿಗುವ ಲಾಭಗಳೇನು?

    ಬಾಯಿಯ ಸ್ವಚ್ಛತೆ

    ಹಲ್ಲುಗಳನ್ನು ಪ್ರತಿದಿನ ಸ್ವಚ್ಛವಾಗಿಡಲು ಬಾಯಿಯ ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ. ಎರಡು ಬಾರಿ ಹಲ್ಲುಜ್ಜುವ ಮತ್ತು ಒಮ್ಮೆ ಫ್ಲೋಸ್ ಮಾಡುವ ಅಭ್ಯಾಸ ಮಾಡಿಕೊಳ್ಳಿ.
    Published by:renukadariyannavar
    First published: